Tuesday, February 15, 2011

ನೀನು ಬೆಚ್ಚಗಿದ್ದೆ,ನಾನು ಬೆಚ್ಚಗಿರಿಸಿ ಹುಚ್ಚನಾದೆ....!

ಎಲ್ಲೋ ಇತ್ತು ಬಣ್ಣಗಳ ಚಿತ್ತಾರ, ಹೇಗೋ ಇತ್ತು ಚಿತ್ತಾರದ ಅವತಾರ, ಕವನ ಒಂದೇ ಎರಡೇ? ಎಲ್ಲದರಲ್ಲೊ ನಿನ್ನ ನೆನಪುಗಳ ಸಾಲು, ನಿನ್ನ ಹೊಳೆಯುವ ಕಣ್ಣು, ನಿನ್ನ ಬಣ್ಣದ ದೇಹ, ವರ್ಣಿಸಿದಷ್ಟೊ ಸಾಲದು, ಹೇಗಿತ್ತು ಮೊದಲ ದಿನದ ಬೇಟಿ? ಒಮ್ಮೆ ನೆನಪಿಸಿಕೋ ನೀನು ಕೊಡೆ ಇದ್ದರೊ ಅದರ ತೊತುಗಳಿಂದ ತೊಟ್ಟಿಕ್ಕುವ ಹನಿಗೆ ಒದ್ದೆಯಾದಾಗ ನಾನು ನನ್ನ ರೈನ್ ಕೋಟ್ ಕೊಟ್ಟಿದ್ದು, ನೀನು ನೀರ ಹನಿಗಳ ನೋಡು ನೋಡುತ್ತಲೇ ಆನಂದಿಸಿದೆ, ನಾನು ಹನಿಗಳಿಂದ ನೆನೆ ನೆನೆದು ಆನಂದಿಸಿದೆ, ನಿನಗೆ ಆನಂದದ ಬೆಸುಗೆ ನನಗೆ ಸ್ವಲ್ಪ ಜ್ವರ ಬಂದಿತ್ತು ಅಷ್ಟೆ, ನೋವಿನಲ್ಲೊ ನಿನ್ನ ನಗು ನೆನಪಿಸಿದಾಗ ಮೈ ಜುಮ್ಮೆಂದಿತ್ತು, ಸುಕ ತುಳುಕುತ್ತಿತ್ತು ಎಲ್ಲಾ ಆ ನೆನಪುಗಳ ಕನಸಿನಿಂದಷ್ಟೆ! ಬಾಲ್ಯದಿಂದಲೊ ಜೊತೆಗಿದ್ದೆ, ಆ ಆಟ, ಆ ತುಂಟತನ ನನ್ನಲ್ಲೊ ಗೀಜಗನ ಗೊಡಾಗಿತ್ತು. ನೀನು ನವಿಲು ಗರಿ ಬೇಕು ಎಂದು ಹಟಮಾಡಿದ ಆ ವಯಸ್ಸು , ಆ ಸಮಯ ಮಲ್ಲಿಗೆಯ ತೋಟದಲ್ಲಿ ಮೈ ಮರೆತು ಕುಣಿದು ಕುಪ್ಪಳಿಸಿದಂತಿತ್ತು, ನಿನಗೊ ಸ್ವಲ್ಪ ವಯಸ್ಸಾದಾಗ , ಮಾತಿನ ವರಸೆಗಳೇ ಬದಲಾಗಿತ್ತು, ಯಾರೋ ನಿನ್ನನ್ನು ಮುಟ್ಟಿದಾಗ ಅದರ ಭಾವನೆಯನ್ನು ನಾನು ಅರ್ಥೈಸಲೇ ಇಲ್ಲ, ಅದೇನೊ ನನ್ನ ದೇಹಗಳೇ ಕಂಪಿಸಿತ್ತು , ಕಿಚ್ಚೋ, ಮತ್ಸರವೋ ಗೊತ್ತಿಲ್ಲ ನೀನು ನನ್ನ ಆಸ್ತಿ ಅನ್ನುವುದಷ್ಟೆ ಆ ಕಂಪನದ ಸಾರಾಂಶ. ಅಡಿಕೆಯ ಗರಿಯಲ್ಲಿ ನಿನ್ನ ಎಳೆದುಕೊಂಡು ಹೋದಾಗ ನಾನು ಬಿದ್ದರೊ ನಿನಗೆ ನಗು ತಡೆಯಲಾಗಲಿಲ್ಲ, ನನ್ನ ಕೈ ಅಂಚಿನಲ್ಲಿ ಸ್ವಲ್ಪ ರಕ್ತ ಸೋರಿದಾಗ ನೀ ಅತ್ತಿದ್ದು ನಾ ಮರೆತಿಲ್ಲ, ಎಟುಕದ ನೆಲ್ಲಿಕಾಯಿಗೆ ಹೆಗಲ ಮೇಲೆ ಕೊರಿಸಿ ಎಟುಕಿಸಿದ್ದೆ ಅಲ್ಲಿ ನೆಲ್ಲಿಕಾಯಿಯ ಯಜಮಾನಿ ಅಟ್ಟಿಸಿಕೊಂಡು ಬಂದಿದ್ದು ಎಲ್ಲವೊ ಈಗ ಕವನದ ಸಾಲುಗಳಿಗಷ್ಟೇ ಸೀಮಿತ, ನೀನು ವೇದಿಕೆಯಲ್ಲಿ ಹಾಡಿದ ಮೊದಲು ನನ್ನಲ್ಲೇ ಬಂದು ಹೇಗೆ ಹಾಡಿದೆ ಎಂದಾಗ ಉಸಿರಾಟವೇ ನಿಂತ ಹಾಗಿತ್ತು, ಆದರೊ ತಮಾಷೆಗೆ ಪ್ರೀತಿಯೇ ಚನ್ನಾಗಿ ಹಾಡಿದ್ಲು ಅಂದಾಗ ನೀನು ಇಡೀ ರಾತ್ರಿ ಅತ್ತಿದ್ದೆ ಅನ್ನೊದು ಮೊರು ದಿನಗಳ ನಂತರದ ಬೇಟಿಯಲ್ಲಿ ಅರ್ಥವಾಗಿತ್ತು. ಎಲ್ಲರೊ ಸ್ನೇಹದಲ್ಲಿ ಇರಬಹುದು ಆದರೆ ನಮ್ಮ ಸ್ನೇಹದ ಬದುಕು ನನಗೇನೋ ವರ್ಣಿಸಲಾಗದು ಅನ್ನುವಷ್ಟಿತ್ತು, ನಾನು ನಿನ್ನಲ್ಲಿ ಯಾವ ಕನಸನ್ನು ಮೊಡಿಸಿದೆನೋ, ನನ್ನ ಯಾವ ನೆರಳು ನಿನಗೆ ಇಷ್ಟವಾಯಿತೋ ನನಗಂತೊ ಗೊತ್ತಿಲ್ಲ, ಆದರೆ ನಿನ್ನ ನಗು, ನಡಿಗೆ , ಮನಸ್ಸು, ಪ್ರತಿ ನೆರಳೊ ನನಗಿಷ್ಟ, ನೀನು ಸ್ವಲ್ಪ ಎತ್ತರವಾದಾಗ ನನ್ನ ಕನಸುಗಳ ಮನೆಯ ಬಾಗಿಲುಗಳೊ ಎತ್ತರವಾಗಿದ್ದು ನನಗೆ ತಿಳಿಯಲೇ ಇಲ್ಲ, ನೀನು ಮತ್ತೊ ಎತ್ತರವಾದಾಗ ನಿನ್ನ ನಡತೆಯ ತಂತಿ ಮತ್ತೊಬ್ಬರಿಂದ ಮೀಟಲ್ಪಡುತ್ತದೆ ಅನ್ನೋದು ನಾನು ಕಣ್ಣಿಂದ ನಂಬಲಾಗದ ಸತ್ಯ, ಅಂಗಾಗಗಳೊ ಅದು ನೀನಲ್ಲ ಅನ್ನೋದನ್ನ ಸಾರಿ ಸಾರಿ ಹೇಳಿತ್ತು, ಆದರೆ ಮನಸ್ಸು ಮಾತ್ರ ನಿನ್ನ ನಗುವನ್ನು ಕಂಡುಹಿಡಿಯುವಲ್ಲಿ ಸೋಲಲಿಲ್ಲ, ನಾನು ನನ್ನದು ಎಂದಿದ್ದ ನಿನ್ನ ಕೈ ಪರರನ್ನು ಎಳೆದುಕೊಂಡು ಬರುವಾಗಲೇ ತಿಳಿದಿತ್ತು ನೀನು ನನ್ನವಳಲ್ಲ ಅನ್ನೋದು, ನಿಂತಲ್ಲೇ ನಿಮ್ಮಿಬ್ಬರನ್ನು ಹಾರೈಸಿದೆ ಸುಖವಾಗಿರಿ ಎಂದು. ನನ್ನ ಮನದಲ್ಲಿ ಬತ್ತಿದ ಬಾವಿಯ ಕಥೆಯನ್ನು ನನ್ನ ಸಹೋದರಿಯಲ್ಲಿ ಬಿತ್ತುತ್ತಿದ್ದೆ, ನನ್ನವಳಾದ ನೀನು ವಿವಾಹವಾಗಿ ಸುಖವಾಗಿದ್ದಿ ಅನ್ನೊ ಪದಕ್ಕೆ ಸಹೋದರಿಯ ಕಣ್ಣುಗಳಲ್ಲಿ ವಿಶೇಷವಾದ ಉದ್ವೇಗ ವ್ಯಕ್ತವಾಗಿತ್ತು, ಇಲ್ಲ ಆಕೆಗೆ ಮದುವೆಯಾಗಿಲ್ಲ ಅಂದಾಗ ನಾನು ನೋಡಿದ್ದು ಕನಸು ಎಂದು ಸುಮ್ಮನಾದೆ,
ಆದರೆ ನಿನ್ನ ನನ್ನ ಮತ್ತೊಂದು ಬೇಟಿ ಕಾಲದೊಳಗಿನ ಬದುಕು ಹೊವನ್ನೊ ಮುಳ್ಳಾಗಿಸುತ್ತದೆ ಅನ್ನುವುದನ್ನು ನನಗೆ ನಿನ್ನ ಮೊಲಕ ತೋರಿಸಿಕೊಟ್ಟಿದೆ. ಹೇಗಿರುವುದೆಲ್ಲ ಹೇಗಾಗುತ್ತದೆ, ಬಾಳಿನಲ್ಲಿ ಬೆತ್ತಲೆಯಿದ್ದಾಗ ಅದು ಬಾಲ್ಯ, ಬಾಲ್ಯದ ನಂತರವೊ ಬೆತ್ತಲೆಯಾದರೆ......?

5 comments: