Friday, February 18, 2011

ಭಾವನೆಯ ಮೊಡದಲ್ಲಿ ಕೊನೆಯಿಲ್ಲದ ಕವನ..!


(ನಾ ಬರೆದು ಸೊರಗಿ ಕರಗಿ ಮತ್ತೆ ಬರೆದರೊ ಅದು ಅವಳ ನೆನಪಿನೊಳಗಿನ ಹೊಸ ನೆವನದ ಕವನ......................!)



ಅದು ಅವಳ ಮುಗುಳು ನಗೆ
ಬಾಚಿ ಗೋರುವ ತೆವಲೆನಗೆ.....
ಅಯ್ಯೊ ಅವಳು ನಡೆದರೆ ಸೊಂಟ ಬಳ್ಳಿಯಂತೆ
ಬೆಳ್ಳಿಯಂತೆ ಅವಳ ನಯವಾದ ಪಾದ....

ಮಿಟುಕಿ ಮಿಟುಕಿ ಮಿಂಚುವ ಮಿಂಚುಳ್ಳಿ ಅವಳ ಕಣ್ಣು
ಬೆನ್ನು ತಳುಕಿ ಬಳುಕಿ ಬಾಗಿದ ಬಾಳೆಯಂತೆ
ಮಲ್ಲಿಗೆ ಮುಡಿದರೆ ಸಾಕು ನನಗೆ ಕಿವಿಅಂಚು ಮೊಸುವ ಆಸೆ
ತೆಳ್ಳಗೆ ನಡೆದರೆ ಸಾಕು ಸೊಂಟಕ್ಕೆ ತಾಗಿ ತೊಗುವ ಕೇಶ....

ಪಾದದ ನೆರಳು ನೇರಳೆಯ ಮೈಯ್ಯಂತೆ ನೀಲಿ
ತೇಲಿ ತುಳುಕುವ ಮೈಯ್ಯೆಲ್ಲಾ ಚುಕ್ಕೆ ಇಟ್ಟ ರಂಗೋಲಿ
ಅಂದದೋಕುಳಿ ಕಾಲಿ ಕಾಲಿ ಕೆನ್ನೆಗೆ ಸ್ವಲ್ಪ ನಗುವಿನ ಗಾಳಿ
ಸೀಳಿ ಉಕ್ಕುವ ಅವಳ ಅಂದದ ಅಲೆಗಳ ದಾಳಿ...

ಅಯ್ಯೊ ನನ್ನವಳು ಕೋಗಿಲೆಯಾಗಿ ಹಾಡಿದಾಗ
ನಾನು ಆಸರೆಯಾಗಿ ಮಾಮರವಾಗಬಾರದಿತ್ತೆ..?
ಅಯ್ಯೊ ನನ್ನವಳು ಹೊವಾಗಿ ಅರಳುವಾಗ
ನಾನು ಮುಳ್ಳಾಗಿ ಬೇಲಿಯಾಗಬಾರದಿತ್ತೇ..?

ಅವಳು ಕುಣಿದರೆ ಸಾಕು ಆಗಸವೇ ರಂಗವಾದಂತ್ತಿತ್ತು
ಅವಳ ತೆವಳುವ ಕಂಗಳು ತೇಲುವ ಮೋಡದಂತ್ತಿತ್ತು
ತುಟಿ ಚಟಪಟವಾದಾಗ ಅಲೆಗಳೇ ತಬ್ಬಿದಂತ್ತಿತ್ತು..
ಬ್ರಂದಾವನದ ಸೊಬಗಿನೊಳು ಅವಳು ಸರ್ಗದಾ ಅಪ್ಸರೆ...

ಅಯ್ಯೊ ನನಗಿಲ್ಲವೇ ನನ್ನವಳ ಮನದ ಮಂದಿರದ ನೆರಳು..
ಕೇಶದಿಂದ ಹಿಡಿದು.... ಅವಳ ಲಿಪ್ ಸ್ಟಿಕ್ ಕೊಡಾ ಗೋಡೌನ್ನಲ್ಲಿ ಭದ್ರವಾಗಿದೆ..
ಎಲ್ಲವೊ ಸುಭದ್ರವಾಗಿದ್ದರೊ...ಮನದಲ್ಲಿ ನನ್ನವಲು ಕಳವಾದಂತಿದೆ..
ನಾನು ಕಟ್ಟಿದ ಪ್ರೇಮದ ಉಸಿರು ನಿಂತಂತಿದೆ..ಕನಸು ಕೊಲೆಯಾದಂತಿದೆ..

ಸೌಂದರ್ಯಕ್ಕೆ ಮರುಳಾಗಿದ್ದು ಮೊರ್ಖತನವೇ...?
ಕಾಣುವ ಅಂದ ವರ್ಣಿಸಿದ್ದು ಹುಚ್ಚುತನವೇ..?
ನಿನಗೆ ಕರುಳಿಲ್ಲವೇ ..ನನಗೆ ನೀ ಎಂದು ಸಿಗುವೆ..?
ತಳ್ಳದಿರು...ಇಲ್ಲವೆನ್ನದಿರು...ನಿನಗಾಗಿ ಶತ ಸಂವತ್ಸರ ಕಾಯುವೆ..!
ಹೇ ನನ್ನ ಕನಸಿನ ರಾಣಿ ನಿನಗೆ ನನ್ನಲ್ಲಿ ಮುನಿಸು ತರವೇ...?????







Tuesday, February 15, 2011

ನೀನು ಬೆಚ್ಚಗಿದ್ದೆ,ನಾನು ಬೆಚ್ಚಗಿರಿಸಿ ಹುಚ್ಚನಾದೆ....!

ಎಲ್ಲೋ ಇತ್ತು ಬಣ್ಣಗಳ ಚಿತ್ತಾರ, ಹೇಗೋ ಇತ್ತು ಚಿತ್ತಾರದ ಅವತಾರ, ಕವನ ಒಂದೇ ಎರಡೇ? ಎಲ್ಲದರಲ್ಲೊ ನಿನ್ನ ನೆನಪುಗಳ ಸಾಲು, ನಿನ್ನ ಹೊಳೆಯುವ ಕಣ್ಣು, ನಿನ್ನ ಬಣ್ಣದ ದೇಹ, ವರ್ಣಿಸಿದಷ್ಟೊ ಸಾಲದು, ಹೇಗಿತ್ತು ಮೊದಲ ದಿನದ ಬೇಟಿ? ಒಮ್ಮೆ ನೆನಪಿಸಿಕೋ ನೀನು ಕೊಡೆ ಇದ್ದರೊ ಅದರ ತೊತುಗಳಿಂದ ತೊಟ್ಟಿಕ್ಕುವ ಹನಿಗೆ ಒದ್ದೆಯಾದಾಗ ನಾನು ನನ್ನ ರೈನ್ ಕೋಟ್ ಕೊಟ್ಟಿದ್ದು, ನೀನು ನೀರ ಹನಿಗಳ ನೋಡು ನೋಡುತ್ತಲೇ ಆನಂದಿಸಿದೆ, ನಾನು ಹನಿಗಳಿಂದ ನೆನೆ ನೆನೆದು ಆನಂದಿಸಿದೆ, ನಿನಗೆ ಆನಂದದ ಬೆಸುಗೆ ನನಗೆ ಸ್ವಲ್ಪ ಜ್ವರ ಬಂದಿತ್ತು ಅಷ್ಟೆ, ನೋವಿನಲ್ಲೊ ನಿನ್ನ ನಗು ನೆನಪಿಸಿದಾಗ ಮೈ ಜುಮ್ಮೆಂದಿತ್ತು, ಸುಕ ತುಳುಕುತ್ತಿತ್ತು ಎಲ್ಲಾ ಆ ನೆನಪುಗಳ ಕನಸಿನಿಂದಷ್ಟೆ! ಬಾಲ್ಯದಿಂದಲೊ ಜೊತೆಗಿದ್ದೆ, ಆ ಆಟ, ಆ ತುಂಟತನ ನನ್ನಲ್ಲೊ ಗೀಜಗನ ಗೊಡಾಗಿತ್ತು. ನೀನು ನವಿಲು ಗರಿ ಬೇಕು ಎಂದು ಹಟಮಾಡಿದ ಆ ವಯಸ್ಸು , ಆ ಸಮಯ ಮಲ್ಲಿಗೆಯ ತೋಟದಲ್ಲಿ ಮೈ ಮರೆತು ಕುಣಿದು ಕುಪ್ಪಳಿಸಿದಂತಿತ್ತು, ನಿನಗೊ ಸ್ವಲ್ಪ ವಯಸ್ಸಾದಾಗ , ಮಾತಿನ ವರಸೆಗಳೇ ಬದಲಾಗಿತ್ತು, ಯಾರೋ ನಿನ್ನನ್ನು ಮುಟ್ಟಿದಾಗ ಅದರ ಭಾವನೆಯನ್ನು ನಾನು ಅರ್ಥೈಸಲೇ ಇಲ್ಲ, ಅದೇನೊ ನನ್ನ ದೇಹಗಳೇ ಕಂಪಿಸಿತ್ತು , ಕಿಚ್ಚೋ, ಮತ್ಸರವೋ ಗೊತ್ತಿಲ್ಲ ನೀನು ನನ್ನ ಆಸ್ತಿ ಅನ್ನುವುದಷ್ಟೆ ಆ ಕಂಪನದ ಸಾರಾಂಶ. ಅಡಿಕೆಯ ಗರಿಯಲ್ಲಿ ನಿನ್ನ ಎಳೆದುಕೊಂಡು ಹೋದಾಗ ನಾನು ಬಿದ್ದರೊ ನಿನಗೆ ನಗು ತಡೆಯಲಾಗಲಿಲ್ಲ, ನನ್ನ ಕೈ ಅಂಚಿನಲ್ಲಿ ಸ್ವಲ್ಪ ರಕ್ತ ಸೋರಿದಾಗ ನೀ ಅತ್ತಿದ್ದು ನಾ ಮರೆತಿಲ್ಲ, ಎಟುಕದ ನೆಲ್ಲಿಕಾಯಿಗೆ ಹೆಗಲ ಮೇಲೆ ಕೊರಿಸಿ ಎಟುಕಿಸಿದ್ದೆ ಅಲ್ಲಿ ನೆಲ್ಲಿಕಾಯಿಯ ಯಜಮಾನಿ ಅಟ್ಟಿಸಿಕೊಂಡು ಬಂದಿದ್ದು ಎಲ್ಲವೊ ಈಗ ಕವನದ ಸಾಲುಗಳಿಗಷ್ಟೇ ಸೀಮಿತ, ನೀನು ವೇದಿಕೆಯಲ್ಲಿ ಹಾಡಿದ ಮೊದಲು ನನ್ನಲ್ಲೇ ಬಂದು ಹೇಗೆ ಹಾಡಿದೆ ಎಂದಾಗ ಉಸಿರಾಟವೇ ನಿಂತ ಹಾಗಿತ್ತು, ಆದರೊ ತಮಾಷೆಗೆ ಪ್ರೀತಿಯೇ ಚನ್ನಾಗಿ ಹಾಡಿದ್ಲು ಅಂದಾಗ ನೀನು ಇಡೀ ರಾತ್ರಿ ಅತ್ತಿದ್ದೆ ಅನ್ನೊದು ಮೊರು ದಿನಗಳ ನಂತರದ ಬೇಟಿಯಲ್ಲಿ ಅರ್ಥವಾಗಿತ್ತು. ಎಲ್ಲರೊ ಸ್ನೇಹದಲ್ಲಿ ಇರಬಹುದು ಆದರೆ ನಮ್ಮ ಸ್ನೇಹದ ಬದುಕು ನನಗೇನೋ ವರ್ಣಿಸಲಾಗದು ಅನ್ನುವಷ್ಟಿತ್ತು, ನಾನು ನಿನ್ನಲ್ಲಿ ಯಾವ ಕನಸನ್ನು ಮೊಡಿಸಿದೆನೋ, ನನ್ನ ಯಾವ ನೆರಳು ನಿನಗೆ ಇಷ್ಟವಾಯಿತೋ ನನಗಂತೊ ಗೊತ್ತಿಲ್ಲ, ಆದರೆ ನಿನ್ನ ನಗು, ನಡಿಗೆ , ಮನಸ್ಸು, ಪ್ರತಿ ನೆರಳೊ ನನಗಿಷ್ಟ, ನೀನು ಸ್ವಲ್ಪ ಎತ್ತರವಾದಾಗ ನನ್ನ ಕನಸುಗಳ ಮನೆಯ ಬಾಗಿಲುಗಳೊ ಎತ್ತರವಾಗಿದ್ದು ನನಗೆ ತಿಳಿಯಲೇ ಇಲ್ಲ, ನೀನು ಮತ್ತೊ ಎತ್ತರವಾದಾಗ ನಿನ್ನ ನಡತೆಯ ತಂತಿ ಮತ್ತೊಬ್ಬರಿಂದ ಮೀಟಲ್ಪಡುತ್ತದೆ ಅನ್ನೋದು ನಾನು ಕಣ್ಣಿಂದ ನಂಬಲಾಗದ ಸತ್ಯ, ಅಂಗಾಗಗಳೊ ಅದು ನೀನಲ್ಲ ಅನ್ನೋದನ್ನ ಸಾರಿ ಸಾರಿ ಹೇಳಿತ್ತು, ಆದರೆ ಮನಸ್ಸು ಮಾತ್ರ ನಿನ್ನ ನಗುವನ್ನು ಕಂಡುಹಿಡಿಯುವಲ್ಲಿ ಸೋಲಲಿಲ್ಲ, ನಾನು ನನ್ನದು ಎಂದಿದ್ದ ನಿನ್ನ ಕೈ ಪರರನ್ನು ಎಳೆದುಕೊಂಡು ಬರುವಾಗಲೇ ತಿಳಿದಿತ್ತು ನೀನು ನನ್ನವಳಲ್ಲ ಅನ್ನೋದು, ನಿಂತಲ್ಲೇ ನಿಮ್ಮಿಬ್ಬರನ್ನು ಹಾರೈಸಿದೆ ಸುಖವಾಗಿರಿ ಎಂದು. ನನ್ನ ಮನದಲ್ಲಿ ಬತ್ತಿದ ಬಾವಿಯ ಕಥೆಯನ್ನು ನನ್ನ ಸಹೋದರಿಯಲ್ಲಿ ಬಿತ್ತುತ್ತಿದ್ದೆ, ನನ್ನವಳಾದ ನೀನು ವಿವಾಹವಾಗಿ ಸುಖವಾಗಿದ್ದಿ ಅನ್ನೊ ಪದಕ್ಕೆ ಸಹೋದರಿಯ ಕಣ್ಣುಗಳಲ್ಲಿ ವಿಶೇಷವಾದ ಉದ್ವೇಗ ವ್ಯಕ್ತವಾಗಿತ್ತು, ಇಲ್ಲ ಆಕೆಗೆ ಮದುವೆಯಾಗಿಲ್ಲ ಅಂದಾಗ ನಾನು ನೋಡಿದ್ದು ಕನಸು ಎಂದು ಸುಮ್ಮನಾದೆ,
ಆದರೆ ನಿನ್ನ ನನ್ನ ಮತ್ತೊಂದು ಬೇಟಿ ಕಾಲದೊಳಗಿನ ಬದುಕು ಹೊವನ್ನೊ ಮುಳ್ಳಾಗಿಸುತ್ತದೆ ಅನ್ನುವುದನ್ನು ನನಗೆ ನಿನ್ನ ಮೊಲಕ ತೋರಿಸಿಕೊಟ್ಟಿದೆ. ಹೇಗಿರುವುದೆಲ್ಲ ಹೇಗಾಗುತ್ತದೆ, ಬಾಳಿನಲ್ಲಿ ಬೆತ್ತಲೆಯಿದ್ದಾಗ ಅದು ಬಾಲ್ಯ, ಬಾಲ್ಯದ ನಂತರವೊ ಬೆತ್ತಲೆಯಾದರೆ......?

Thursday, January 13, 2011

ಮೌನ ಮನಸ್ಸು........

ಬಾಲ್ಯದ ಬಾಳು....ಕುಡ್ಲನ ಗೋಳು...
ಮೊರು ನಿಮಿಷಗಳ ಕವನ...........ಎರ್ರಾ ಬಿರ್ರಿ ಮೌನ ಮನಸ್ಸಿನ ಚುಂಬನ..

ಕನಸ್ಸೆಂಬ ಹಳ್ಳದಲ್ಲಿ...ಹೊಲಸ್ಸೆಂಬ ಕೆಸರಿನಲಿ..
ಕುಸುರಿ ಕುಮಿರಿದ್ದ ಬಾಲ್ಯದ ಬುಗ್ಗೆಯಲಿ..
ನಾರಿ ನಾರುತ್ತಿತ್ತು... ಮನದ ಬುಗರಿ ಗರಗರಿದಿತ್ತು..
ಅದಾಗ ವಯಸ್ಸಿಗೆ ತಕ್ಕ ಕನಸ್ಸು... ಅರ್ಥವಿಲ್ಲ ಪರ್ಥವಿಲ್ಲ
ಸಿಂಬಳ ಜಾರುತ್ತಿತ್ತು... ನಾಲಗೆ ನೇವರಿಸಿತ್ತು..
ಗಾದೆಯಲ್ಲ,,,ಬಾದೆಯಿಲ್ಲ..ಬಾಲ್ಯವೊಂದು ಮೌನಮನಸ್ಸು...

ಮುಂಜಾನೆ ಕಾಟಾಚಾರಕ್ಕೆ ಹಲ್ಲುಜ್ಜಿ ಅರೇಬರೆ ಸ್ನಾನ..
ಬೆತ್ತಲೆ ಇದ್ದರೊ ಹೆದರಲಿಲ್ಲ..
ನೋಡಿ ನಗುವರೆಂಬ ಬಯವಿಲ್ಲ..
ಒತ್ತಾಯಕ್ಕೆ ಎರಡು ದೋಸೆ,,,
ಹಸಿವಿಲ್ಲದಿದ್ದರೊ ಹಟಕ್ಕೆ ಇನ್ನೊಂದು ಬೇಕಿತ್ತು..
ಗೆದ್ದು ತಿನ್ನುವ ಬದಲು ಕದ್ದು ತಿಂದರೆ ಹೊಟ್ಟೆ ತುಂಬಿದ ಅನುಭವ..

ಅಂಗನವಾಡಿಗೆ ಹರಿದ ಜೋಳಿಗೆ ಒಡೆದ ಸ್ಲೇಟು...
ಚಡ್ಡಿಯಲ್ಲಿ ಮುರಿದು ನೊರಾಗಿದ್ದ ಕಡ್ಡಿ....
ಬೆಲ್ಲದ ಮುಚ್ಚಳದಲ್ಲಿ ಈಚಲ ಗರಿಯಿಂದ
ಕಿರಕಿರನೆ ತಿರುಗುವ ಗಾಡಿಯಲ್ಲೇ
ಅಂಗನವಾಡಿಗೆ ಮೌನ ಮನಸ್ಸಿನ ಪಯಣ

ಅದು ಬರೆಯಲೂ ತೋಚದ ಅಶ್ವತ್ಥಪುರದ ಅಂಗನವಾಡಿ..
ಸುತ್ತಲೂ ಕಮಿನಿಸ್ಟ್ ಪೊದೆ..
ಗಂಟೆ ಹತ್ತಾದರೆ ಪೊದೆಗೆದೆ ಕೊಟ್ಟು ಸಾರ್ವಜನಿಕ ಸೂ...ಸೂ
ಎತ್ತಿ ಏರಿಸಿದರೆ .... ನೆತ್ತಿ ಬೇರುತ್ತಿತ್ತು...
ಮೌನ ಮನಸ್ಸಿನ ಜೋಳಿಗೆಯಲ್ಲಿ ಮರಿಯಾದೆಯ ಬಣ್ಣವೇ ಇರಲಿಲ್ಲ..

ಬೆತ್ತಕ್ಕೆ ಹೆದರಿ.... ೧..೨..೩...೪... ಅ ಆ ಇ ಈ ಗೆ ಗಂಟೆ ಹನ್ನೆರಡಾಗಿತ್ತು..
ಸಜ್ಜಿಗೆ ಉಂಡೆಗೆ ಕಾದರೊ ಸುಮ್ಮನೆ ತಿಂದರೆ ಸಾಕಿಲ್ಲ..
ಮೊತಿಗೆ ಮೆತ್ತಿ ಪೋಸುಕೊಡಬೇಕಿತ್ತು...
ಒಂದೇ ಅಂಗಿ.... ನೋರೆಂಟು ಹೊಲಿಗೆ...
ಹುಕ್ಕಿಲ್ಲದ ಚಡ್ಡಿ ಸದಾ ಕೈಯ್ಯ ದಾಸತನದಲ್ಲಿತ್ತು...

ಗಂಟಲು ಒಣಗಿದರೆ ಸುಮ್ಮನೆ ನೀರು ಕುಡಿಯಲಿಲ್ಲ
ಬಟ್ಟೆ ಒದ್ದೆಯಾಗದಿದ್ದರೆ ಮನಸ್ಸಿಗೆ ಸಮ್ಮತಿ ಇಲ್ಲ...
ಉರಿವ ಬಿಸಿಲಿನಲ್ಲೇ ಕುಣಿದಾಡುತ್ತಿದ್ದೆ...
ಬೆವರು ಕಿತ್ತು ಘಂದವಾಗಿತ್ತು..!
ಮಧ್ಯೆ ಹೆಬ್ಬೆರಳಲ್ಲಿ ಎಳೆಯೊದರಲ್ಲೂ ಒಂದು ಗತ್ತು..!

ವಯಸ್ಸು ಐದಾದಾಗ ದೊಡ್ಡ ಶಾಲೆಗೆ ಹೋಗೊ ಹುಮ್ಮಸ್ಸು...
ಅದು ಶ್ರೀ ವಾಣಿ ವಿಲಾಸ ಹಿರಿಯ ಪ್ರಾಥಮಿಕ ಶಾಲೆ ಅಶ್ವತ್ಥಪುರ...
ಗೇಟಿನ ಎರಡೊ ಇಕ್ಕೆಲದಲ್ಲಿ ಗಾಳೀ ಮರ..
ಪಕ್ಕದಲ್ಲಿ ಬಾವಿ.... ಈಚಲ ತೋಪು...

ಕಾಣುವಂತೆ ಕಾಣದಂತೆ ಒಂದು ಜೋಪಡಿ
ಅದು ಅಣ್ಣಿ ಶೆಟ್ಟರ ಗೂಡಂಗಡಿ...
ಗ್ಲಾಸಿನ ತುಂಬ ಅನ್ನಾರಕಲ್ಲಿ... ನೀರೊರಿಸುವ ಪೆಪ್ಪರ ಮಿಠಾಯಿ..
ಬಾಳೇ ಗೊನೆಯಂತೆ ಹಳದಿ ಬೋಟಿ
ಕೈಯಲ್ಲಿ ಸಿಕ್ಕಿಸಿದರೆ ಅದರ ರುಚಿಗಿಲ್ಲ ಸಾಟಿ....

ಗಂಟೆ ಬಡಿಯಲು ಒಂದು ತುಂಡು ರೈಲು ಕಂಬಿ
ನಾನು ಬಡಿಯುತ್ತೇನೆಂದು ಹಟ ಹಿಡಿದಿದ್ದೆ..
ಎಟುಕಿಸಿದರೆ ಬಡಿ ಎಂದು ಟೀಚರ್ ನಕ್ಕಿದ್ದರು
ನಗು ನೋಡಿ ಸ್ನೇಹಿತನ ಹೆಗಲು ಹತ್ತಿ ಹೊಡೆದೆ
ಗಂಟೆ ತಂತಿ ಸಡಿಲಾಗಿ ತಲೆಗೆ ಉರುಳಿತ್ತು.....

ಪಿಜಿನ ಎಂಬವನು ನಮ್ಮ ಊರಿನ ಬುಟ್ಟಿ ನೇಯುವಾತ
ಶಾಲಾ ಅಂಗಳದಲ್ಲೇ ಅವನ ಬಹುದಿನಗಳ ವಾಸ
ವಿದಿಗೆ ಶರಣಾಗಿ ಅಂಗಳದಲ್ಲೇ ಪ್ರಾಣ ಬಿಟ್ಟಿದ್ದ..
ದೆವ್ವವಾಗಿದ್ದಾನೆಂದು ಭಯದ ಆಯುದ ಹಿಡಿದೆ
ನಂತರ ಹುಡುಗಿಯರ ಬುತ್ತಿಯೊ ನನ್ನದೆ...!

ಮೊದಲ ತರಗತಿ ಕನ್ನಡವಾಗಿತ್ತು...
ಮೌನಮನಸ್ಸು ಮೌನವಾಗಿತ್ತು..ತುಂಟಾಟಿಕೆ ಮೊಕವಾಗಿತ್ತು..
ನಗು ನಗುತ್ತಾ ಬಂದರು ಪ್ರಮಿಳಾ ಟೀಚರ್...
ಅಂಗಿ ಗುಂಡಿ ಮೇಲೆ ಕೆಳಗಿದ್ದರೊ......
ದೇಹ ಮಣ್ಣು ಮೆತ್ತಿದ್ದರೊ... ಅಲ್ಲಿಲ್ಲಿ ಗಾಯದ ಅಚ್ಚಿದ್ದರೊ..
ಎತ್ತಿ ಮುದ್ದಾಡಿದ್ದು...ಮರೆಯಲಾಗದ ಕ್ಷಣ...
ಅಂದು ಹಾಡಿಸಿದ್ದು..
ನನ್ನ ನವಿಲೆ ನನ್ನ ನವಿಲೆ ಬಾರೆ ಇಲ್ಲಿಗೆ...
ಅಂಕು ಡೊಂಕು ಹೆಜ್ಜೆ ಹಾಕಿ ಹೊರಟೆ ಎಲ್ಲಿಗೆ..

ಗಡಿಯಾರದಲ್ಲಿ ಎರಡೇ ಸಮಯ ಇಷ್ಟವಾಗಿದ್ದು
ಮದ್ಯಾಹ್ನ ಒಂದು...ಸಂಜೆ ನಾಲ್ಕು..
ಒಂದು ಊಟ... ನಾಲ್ಕು ಆಟ...
ಹೊಸ ನೀಳಿ ಬಿಳಿ ಬಟ್ಟೆ ತೆಗಿಸಿದ್ದರು...
ಜಾರು ಬಂಡಿ ಜಾರಿದೆ... ಮೊದಲ ದಿನವೇ ಹಳೆಯದಾಯಿತು
ಚಡ್ಡಿಯಲ್ಲಿ ತೂತಿಲ್ಲದಿದ್ದರೆ ಕನ್ ಫರ್ ಟೇಬಲೇ ಇಲ್ಲ...

ನಾಲ್ಕನೇ ತರಗತಿಯಲ್ಲೊಮ್ಮೆ
ಇನ್ಸ್ ಪೆಕ್ಟರ್ ಬಂದಿದ್ರು...
ಬಡ್ದಿಮಗ ನಾಕ ನಾಕ ಎಷ್ಟು ಅಂತ ಕೇಳಿದ್ದ
ಕನಕ ಇವತ್ತು ರಜಾ ಅಂದಿದ್ದೆ....
ಟೀಚರ್ ಕ್ಲಾಸ್ ತೊಕೊಂಡಾಗ್ಲೆ ಗೊತ್ತಾಗಿದ್ದು ಅವ್ನು ಮಗ್ಗಿ ಕೇಳಿದ್ದು ಅಂತ..

ಐದನೇ ತರಗತಿಯಲ್ಲಿ ಇಂಗ್ಲಿಷ್ ಶುರುವಾಯ್ತು
ಸಂಜೆ ಅಜ್ಜಿಹತ್ರ ಟಸ್ಕ್ ಪುಸ್ಕ್ ಅಂದಾಗ ಮಂಕಾಗಿದ್ದರು..
ಮತ್ತೆ ಆರನೇ ತರಗತಿಯಲ್ಲಿ ಶುಚಿತ್ವ ಮಂತ್ರಿಯಾಗಿದ್ದೆ,,,
ತರಗತಿಯೊಳಗೇ ಉಗಿದಾಗ ಕಂತ್ರಿಯಾಗೋದೆ...

ಬಂತು ಮೊದಲ ಸಾರಿ ಸ್ಕೂಲ್ ಡೇ..
ಹೇಗೊ ಕಾಡಿ ಬೇಡಿ ಅವಕಾಶ ಗಿಟ್ಟಿಸಿಕೊಂಡಿದ್ದೆ
ಅಂದು ಸಡಗರವೋ ಸಡಗರ
ನನ್ನ ಕಾಕ ಪೂಕ ನ್ರತ್ಯಕ್ಕೆ ಟೀಚರ್ ಶಬಾಶ್ ಅಂದಿದ್ರು
ಅಂದು ರಾತ್ರಿ ಟೀಚರ್ ಏನೋ ಒಂತರಾ.. ಕನಸಲ್ಲೇ ಕಾಡಿದ್ರು..

ಏಳನೇ ತರಗತಿ ದೊಡ್ಡ ಶಾಲೆಯ ಅಂತ್ಯ ಘಟ್ಟವಾಗಿತ್ತು..
ಪ್ರೇಮ ಪತ್ರ ಬರೆಯುವ ಧೈರ್ಯ ಮಾಡಿದೆ...
ಆದರೆ ಬರೆದ ಪತ್ರಗಳೀಗೆ ಕಸ್ಟಮರೇ ಇರಲಿಲ್ಲ
ಅಂತಹ ಬಾಗ್ಯ ಯಾರೊ ಪಡೆದು ಬಂದಿಲ್ಲ ಎಂದು ಗೊಣಗುತ್ತಾ
ಸ್ವ ಸಮಾದಾನದೊಡನೆ ಸುಮ್ಮನಾದೆ..

ಅದು ಕೊನೇಯ ದಿನ
ನನ್ನ ಕನಸಿನ ರಾಣಿ ಕೆನ್ನೆ ಮುಟ್ಟಿದ್ದಳು
ರಾಣಿ ಜೊತೆಗೆ ಶಾಲೆ ಬಿಟ್ಟು ಹೋಗಲು ಅಳು ಬಂದಿತ್ತು..
ಅಳು ನೋಡಲಾಗದೆ ನನ್ನವಳು ಅಣ್ಣಾ ಅಂದಳು...!
ಮತ್ತೆ ಶಾಲೆ ಬಿಡಲು ಬೇಸರವಾಗಲಿಲ್ಲ..

ಪೊಟೋ ತೆಗೆಯಲು ಕರೆದಿದ್ದರು
ಈ ವರೆಗೆ ತಲೆ ಬಾಚದಿದ್ದರೊ ಆಗ ಮನಸ್ಸು ಮಾಡಿದ್ದೆ..
ಒಂದರ ಮೇಲೊಂದು ಬೆಂಚು ಪೇರಿಸಿ
ಮೊರು ನಾಲ್ಕು ಬಾರಿ ಕ್ಲಿಕ್ಕಿಸಿದರು..
ಚಿತ್ರದಲ್ಲಿ ನನ್ನ ಕೈ ಟೀಚರ್ ಹೆಗಲಲ್ಲಿತ್ತು..
ಮಾಸ್ಟರ್ ಬೆತ್ತದೊಡನೆ ಬಂದಾಗ...
ಟೇಚರ್ ಕಾಲು ಹಿಡಿದು ಅಮ್ಮಾ ಆಶೀರ್ವದಿಸಿ ಎಂದು ಅಂತ್ಯ ನೀಡಿದೆ..!

ಬೀಳ್ಕೊಡುಗೆಯ ನಂತರ ಗೇಟು ದಾಟುತ್ತಾ
ಒಮ್ಮೆ ಹಿಂತಿರುಗಿದಾಗ ಎಲ್ಲಾ ನೆನಪುಗಳು ಎದೆಗೆ ಚುಚ್ಚಿತ್ತು..
ಮೊಕವಾಗಿತ್ತು ಕನಸ್ಸಿನೊಡಗಿನ ಮೌನ ಮನಸ್ಸಿನ ಗೋಳು
ಮುಗಿದು ಹೋಗಿತ್ತು ನೆನಪಿನೊಳಗಿನ ಬಾಲ್ಯದ ಬಾಳು.....

Friday, November 26, 2010

ಮುಂಜಾನೆಯ ಬೆಳಕಿನಲ್ಲೊಂದು...ಪ್ರೀತಿಯ ಸತ್ಯ ಕಥೆ..!


ಅವನು ಕೇವಲ ೨೦ ರೊಪಾಯಿ ಹಿಡ್ಕೊಂಡು ಬೆಂಗಳೊರಿಗೆ ಬಂದನಂತೆ ಅದರಲ್ಲೊ ೧೦ ರೊ ಮಂಗಳ ಮುಖಿಯರ ಪಾಲಾಯಿತು... ಎತ್ತ ನೋಡಿದರೂ ದಿಕ್ಕೇತೋಚುತ್ತಿಲ್ಲ... ಏನೂ ಕಾಣದ ಮುಂಜಾನೆಯ ತುಸು ಕತ್ತಲಲ್ಲಿ ಹಾಗೇ ಕತ್ತು ಎತ್ತಿದಾಗ ಇದು ಮೆಜೆಸ್ಟಿಕ್ ಬಸ್ಸು ನಿಲ್ದಾಣ ಎಂಬ ಅರಿವಾಗಿತ್ತು ... ಯಾರೂ ಗೊತ್ತಿಲ್ಲ ಅಪ್ಪ ಅಮ್ಮ ಇಲ್ಲ ಬಂದು ಬಳಗವಿಲ್ಲ... ಸ್ನೇಹಿತರಿಲ್ಲ.... ಮುಂದೇನು ಎಂದು ಮುಂದೆ ನೋಡಿದಾಗ.... ತನ್ನ ದಾವಣಿಯನ್ನು ಮತ್ತೆ ಮತ್ತೆ ನೆಲಕ್ಕೆ ತಾಗೋದನ್ನುತಡೆಯುತ್ತಿದ್ದಳು... ಹರಿದಾಡುತ್ತಿದ್ದ ಕೂದಲನ್ನು ಕೈಯಿಂದ ಬಾಚುತ್ತಿದ್ದಳು ಬಿಂದು..! ಇಬ್ಬರ ನೋಟವೊ ಒಂದೇ ತರಂಗದೊಡನೆಬೆರೆತಾಗ ಪರಸ್ಪರ ಮಾತುಕತೆಗಳ ಮಿಲನವಾಯಿತು. ಆಕೆಗೂ ಸ್ವಲ್ಪ ಏನೋ ಹೊಸದಾಗಿತ್ತು... ಯಾರು ಏನು ಎಂಬುದರ ವಿಚಾರಣೆ ಮಾಡಿದಾಗ ತಿಳಿದಿತ್ತು ಆತನ ಬಡತನದ ಹಸಿವಿನ ಬೇಗೆ.... ಓದುವುದು ಕನಸಾದರೂ... ಕನಸಾಗಿಯೇ ಉಳಿದಿತ್ತು .... ಅವನ ಮನದಾಳದ ಮಾತು ಕೇಳಿದ ಬಿಂದು ಒಬ್ಬ ಗಂಡು ಎಂಬುದನ್ನೊ ಉತ್ತಮ ಮನದ ಬಾವನೆಗಳ ಜೊತೆಗೆ ಅಳಿಸಿ... ಅವಳ ಮನೆಗೆ ಕರೆದೊಯ್ದಳು.... ಅವರ ಮನೆಯಲ್ಲೊ ಇಬ್ಬರೇ ಇದ್ದರೂ! ಸೋದರನ ಪ್ರಶ್ನೆಗೆ.... ಗೆಳೆಯನ ಗೆಳೇಯ ಎಂಬ ಉತ್ತರವಿಟ್ಟಳು.... ಹಾಗೇ ದಿನಗಳು ಉರುಳುತ್ತಾ...ಬಾವನೆಗಳು ಬೆಳೆಯುತ್ತ....ಆತನ ಬಾಳಿನ ದೀಪವಾದಳು ಬಿಂದು....ಅವನ ಕನಸಿಗೆ ಸುಂದರ ಚಂದಿರನ ಬೆಳಕನ್ನು ಕೊಟ್ಟಳು.... ಅವಳ ಪ್ರೇರಣೆ ಬಾಡಿದ ಹೂವಿಗೆ ನೀರುಣಿಸಿದಂತಿತ್ತು...ಹಸಿದು ಅಳುವ ಕಂದನಿಗೆ ಅಮ್ಮ ಹಾಲುಣಿಸಿದಂತಿತ್ತು........... ಅವರಿಬ್ಬರ ಒಂಟಿ ತನದ ಬೇಟಿ... ಜೀವನದ ಕನಸು ತುಂಬುವ ನಗುವಾಗಿತ್ತು... ಅವಳು ಚಿಕ್ಕ ವಿಷಯವನಿತ್ತು ತರ್ಕಿಸುವಾಗ...ತನಗೇನೂ ಸಂಬಂದವಿಲ್ಲವೆಂಬಂತೆ...ಗೆಲುವು ನಿನ್ನದೇ ಎನ್ನುತ್ತಿದ್ದ... ಅವನ ಒಂದು ಸಾರಿ ಮುದುಡಿದ ಗಲ್ಲ ಬಿಂದುವಿಗೆ ಅವನ ಸುಂದರ ಮನೆತನದ ಮನಸ್ಸನ್ನು ಅರ್ಥೈಸಿತ್ತು... ಮಧ್ಯೆ ದಾರಿಯಲ್ಲಿ ಆಕೆಯಚಪ್ಪಲಿ ಹರಿದಾಗ... ಅವಳ ಚಪ್ಪಲಿಯೇ ಪಾದವೆಂಬಂತೆ ಎರಡೊ ಕೈಗಳಿಂದ ಎತ್ತಿ ಪೌಣಿಸುತ್ತಿದ್ದ.... ಪದೇ ಪದೇ ಬಿಂದುವಿನ ಪಾದವನ್ನೇ ನೋಡಿದ...ಒಮ್ಮೆ ಮುಟ್ಟಿ ನಮಸ್ಕರಿಸಲೆಂಬ ಆಸೆ.... ಹಾಗೇನಾದರೂ ಮುಟ್ಟಿದರೆ ಚಪ್ಪಲಿ ಮತ್ತೆ ಹರಿಯುವುದೇನೊ ಎಂಬ ಭಯ.. ಆದರೂ ಕೆಲವೊಮ್ಮೆ ಅಂತೆ ಕಂತೆಗಳೊಂದಿಗೆ ಮುಟ್ಟಿ ನಮಸ್ಕರಿಸಿದ್ದೊ ಇದೆ...ಆದರೆ ಅದು ಬಿಂದುವಿಗೆ ಗೊತ್ತಾಗದಿರಲಿಲ್ಲ.... ಇಬ್ಬರೊ ನಗು ನಗುತ್ತಾ... ದಿನ ಕಳೆದದ್ದು ಗೊತ್ತಾಗಲೇ ಇಲ್ಲ... ಅಲ್ಲಿಯವರೆಗೆ ಸ್ನೇಹವಿತ್ತು....ಸ್ನೇಹ ನಗುವಿಗೆ ಕಾರಣವಾಗಿತ್ತು.... ಏನೂ ತಿಳಿಯದೇ ಬಿಂದುವಿನ ಮನದೊಳಗೆ ಪ್ರೀತಿಯ ಬಿಂದುವಿನ ಹಳ್ಳವಾಗಿತ್ತು..... ಹಾರುವ ಕೂದಲುಗಳು ದಿಕ್ಕು ಬದಲಾಯಿಸಿತ್ತು... ಆಲೋಚನೆಗಳ ಕಂತು ಕುಮಿರಿತ್ತು... ಹುರುಪು ಬಾಡಿತ್ತು.... ಚಲನ ವಲನ ಮೆಲ್ಲಗೆ ಮೆಲ್ಲವಾಯಿತು... ಮಾತು ಮೆಲ್ಲುತ್ತಿರಲಿಲ್ಲ.... ಹೇಗೋ ನನ್ನ ಪ್ರೀತಿಯನ್ನು ಮುಚ್ಚಿಡದೇ ಅವನಲ್ಲಿ ಹೇಳುವ ಬಯಕೆಯಾಯಿತು...ಬಿಂದುವಿನ ಪ್ರೇರಣೆಯಿಂದ ಅದಾಗಲೇ ಅವನು ಇಂಜಿನೀಯರಿಂಗ್ ಇನ್ನಿತರ ಕೋರ್ಸುಗಳಿಂದ ಹೊರಬಂದಿದ್ದ.... ಅವನ ಮೊದಲ .೩೦ ಸಾವಿರ ಸಂಬಳ ೩೦೦೦೦ಕ್ಕೆ ಏರಿತ್ತು... ಅದೀಗ ೫೦ ಸಾವಿರಕ್ಕಿಂತಲೂ ಮೇಲಿದೆ.....
ಬಿಂದುವಿನ ಪ್ರೀತಿ.. ಮನದಲ್ಲಿ ಬೀಸುವ ಗಾಳಿಯಾಗಿತ್ತು...ಗಾಳಿ ಹೊರ ಬಂದರೂ ಪ್ರೀತಿ ಹೊರ ಬರಲಿಲ್ಲ.... ಅದಾಗಲೇ ಎಲ್ಲವೂ ಮುಗಿದು ಉತ್ತಮ ಇಂಜಿನೀಯರಿಂಗ್ ವಿಧ್ಯಾಬ್ಯಾಸದಿಂದ ಕೆಲಸದ ನಿಮಿತ್ತಾಗಿ ಆತನಿಗೆ ಬೇರೆಡೆಗೆ ಟ್ರಾನ್ಸ್ ಫರ್ ಆಗಿತ್ತು....
ಆತನ ಮನದಲ್ಲಿ ಪ್ರೀತಿ ಇತ್ತೊ..ಅಥವ ಇದ್ದೊ ಕುರುಡಾಗಿತ್ತೊ ಗೊತ್ತಿಲ್ಲ... ಇದ್ದ ಪ್ರೀತಿ ಯಾವ ಭಾವನೆಯನ್ನು ಹೋಲುತ್ತಿತ್ತು ಅನ್ನುವುದನ್ನು ತಿಳಿಯೋ ಪ್ರಯತ್ನದ ಗೋಜಿಗೆ ಬಿಂದು ಹೊಗಲಿಲ್ಲ...
ಪೊಣೆಯಲ್ಲಿ ನೆಟ್ವರ್ಕ್ ಇಂಜಿನೀರಿಂಗ್ ಕೆಲಸದಲ್ಲಿ ತೊಡಗಿದ್ದ ಆತ ಶಿಲ್ಪ ಎಂಬ ಹುಡುಗಿಯೊಂದಿಗೆ ಪ್ರೀತಿಯ ದೋಣಿಯಲ್ಲಿಮುಳುಗಿದ್ದ... ಇಬ್ಬರೂ ಪರಸ್ಪರ ಪ್ರೇಮಿಗಳಾದರು...... ಅವರಿಬ್ಬರ ಮೊರು ಕನಸು ... ನೂರರ ಅಂಚಿನಲ್ಲಿತ್ತು...
ವಿಷಯವನ್ನು ಮೊದಲು ಬಿಂದುವಿಗೆ ಹೇಳುವ ಬಯಕೆ ಅವನದಾಗಿತ್ತು.. ಮುಂದಿರುವ ಹೊವು ನನ್ನದೇ ಅನ್ನೋದು... ಬಿಂದುವಿನ ಕನಸಿನ ಕಲ್ಪನೆಯಷ್ಟೇ... ಅದು ತನ್ನ ಬೇರನ್ನೇ ಬದಲಾಹಿಸಬಹುದು ಎಂಬೋದನ್ನು ಊಹಿಸುವುದೂ ಅವಳ ಅನುಭವಕ್ಕೆಬಂದಿರಲಿಲ್ಲ...
ಇದೀಗ ಬಿಂದುವಿನ ಪ್ರೀತಿಯನ್ನು ಅರಿಯದ ಆತ ಆಕೆಯಲ್ಲಿ ತನ್ನ ಪ್ರೀತಿಯನ್ನು ಮೊದಲು ಹೇಳುವ ಆಸೆಯಲ್ಲಿ ನುಲಿಯುತ್ತಿದ್ದ..... ಆಕೆಯ ಬಗ್ಗೆ ಮೊದಲೇ ತಿಳಿದಿದ್ದರೂ ಇಂತಹ ವಿಷಯವನ್ನು ಹಿಂದೆ ಹಂಚಿಕೊಳ್ಳಲಿಲ್ಲವಾದ್ದರಿಂದ ಎಲ್ಲೋ ಓಂದು ಕಡೆ ಬುಡದಲ್ಲಿ ಅವಳ ಪ್ರತಿಕ್ರಿಯೆಯ ಬಗ್ಗೆ ತುಮುಲವಿತ್ತು...
ಇತ್ತ ಬಿಂದು ಆತನ ಪ್ರೀತಿಯ ಬಗ್ಗೆ ತಿಳಿಯದೆ ತಾನೇ ಕಟ್ಟಿಕೊಂಡ ಪ್ರೀತಿಯೆಂಬ ಕನಸಿನ ಕವನವನ್ನು ಅವನಲ್ಲಿ ಬಿತ್ತರಿಸುವಲ್ಲಿ ಹಾತೊರೆಯುತ್ತಿದ್ದಳು.. ಆತನ ನಯವಾದ ನೇರ ಮನಸ್ಸು ಬಿಂದುವಿಗೆ ಮೊದಲೇ ಗೊತ್ತಿದ್ದರಿಂದ....! ಆದರೂ ಎಲ್ಲೊ ಒಂದು ಕಡೆ ಕುತೂಹಲ...
ಮೊದಲ ಬೇಟಿಯಂತೆ ಇಬ್ಬರೂ ಒಂದೇ ಕಡೆ ಮುಂಜಾನೆಯ ಚಳಿಗೆ
ಕಪ್ಪು ಬಿಳುಪು ಹೊದಿಕೆಯಲ್ಲಿ ಮೈಯನ್ನು ಆವರಿಸಿಕೊಳ್ಳುತ್ತಾ... ಒಬ್ಬರಿಗೊಬ್ಬರು ಪ್ರೀತಿಯ ಸುಧೆಯ ಆಲಿಂಗನದಲ್ಲಿ ತೊಡಗಿದ್ದರು.... ಈಗ ಇಬ್ಬರ ಮನಸ್ಸು... ಒಂದು ರುಣವಾಗಿದ್ದರೆ ಇನ್ನೊಂದು ಧನವಾಗಿತ್ತು......... ಇಬ್ಬರ ಪ್ರೀತಿಯ ಅಪ್ಪುಗೆಯಲ್ಲೂ ಇಬ್ಬರ ಪ್ರೀತಿಯ ಅರ್ಥಗಳಿಗೂ ಎರಡು ಕವಲುಗಳಿತ್ತು.... ಬಿಂದು ಮತ್ತೆ ಮತ್ತೆ ಅಪ್ಪುಗೆಯನ್ನು ಬಿಗಿ ಮಾಡಿದಾಗ... ಅವನೂ ಬಿಗಿ ಮಾಡಿದ.. ಅಪ್ಪುಗೆಯ ಬಿಗಿಯಿಂದ ಮೈ ಬಿಸಿಏರಿದಾಗ ಆತನಿಗೆ ಬಿಂದುವಿನ ಜೊತೆ ಎಂದೊ ಆಗದ ಒಂದು ಕ್ಷಣದ ಅನುಭವವಾಯಿತು... ಬಿಂದು ಅಪ್ಪುಗೆಯ ಬಿಗಿಯನ್ನು ಮತ್ತೊ ಬಿಗಿದಾಗ....ಅವಳ ಬಾಯಿಯಿಂದ ... ಪ್ರೀತಿಯ ಮಾತು ಹೊರ ಬರಲಾರಂಭಿಸಿತು.... ಆಗ ಆತನೀಗೆ ತನ್ನ ತಪ್ಪಿನ ಅರಿವಾಗಿತ್ತು.... ದಿಡೀರನೆಬಿಂದುವನ್ನು ತನ್ನ ಅಪ್ಪುಗೆಯಿಂದ ಬೇರ್ಪಡಿಸಿ ... ದೂರ ನಿಂತು ನಡುಗಲಾರಂಭಿಸಿದ.. ಕಣ್ಣು ಕೆಂಪೇರಿತ್ತು... ಒಣಗಿದ ಭಾವನೆಗಳ ಕಣ್ಣೀರು ಉಕ್ಕುತ್ತಿತ್ತು.... ತುಟಿಗಳು ಕಂಪಿಸುತ್ತಿತ್ತು... ಆಗ ಅವನಿಗೆ ಬದಿಯಲ್ಲಿದ್ದ ಕಂಬವೇ ಆಸರೆ... ಆಸರೆಗೆ ಒರಗಿ ಮೆಲ್ಲಗೆ ಜಾರಿದ.... ಆತನ ಅಂಗಾಂಗಗಳ ಪ್ರತಿಕ್ರಿಯೆಯೇ ಬಿಂದುವಿಗೆ... ಅವನ ಮನದ ಮಾತುಗಳ ಸನ್ನೆಯನ್ನು ಮಾಡಿತ್ತು...
ಸ್ನೇಹವೂ
ಮುರಿಯಿತು... ಪ್ರೀತಿಯೊ ಮುರಿಯಿತು ಎಂದು ಆತ.............!
ಅವನ್ನಿಲ್ಲದ ಬದುಕನ್ನು ನೆನೆಯುತ್ತಾ ಬಿಂದು.....................................!
ಮೊರು ದಿನಗಳ ಬಾಳು ಮೂಕ ಬಾಳು...
ಇಲ್ಲಿ ಇವರಿಬ್ಬರೀಗೆ...ನಿಮ್ಮ ಕಿವಿಮಾತು ಏನು???????
....

Saturday, October 30, 2010

ಅಪ್ಪನಾಗಿ ಕನಸು ಕಂಡೆ 22 ರ ಹರೆಯದಲ್ಲಿ.......

ಪೀ ಪೀ................... ಡುಂ ಡುಂ.......................
ಪೀ ಪೀ................... ಡುಂ ಡುಂ.......................
ಮಾಂಗಲ್ಯಂ ತಂತು ನಾನೇನ.........................
ಕಾಡುತಿದೆ ಕನಸುಗಳ ಸುಖ ಜೀವನ..................
ನಾಳೆಯಾಯ್ತು ಶೊಬಾನ ಮುಗೀತು.................
ಆಪೀಸಿಗೆ ಹೊಗಲು ಮನಸಿಲ್ಲ..........................
ಅಂದು ಅದು ಅವಳ ತುಂಟ ನಗೆ......................
ಸುಂದರ ಸಂಸಾರ ಜೀವನದ ಕನಸೆನಗೆ............
ಅವಳೀಗೆ ರೇಷ್ಮೆ ಸೀರೆ! ಅಮ್ಮನಿಗೆ ಮಗ್ಗದ ಸೀರೆ
ಅಪ್ಪನಿಗೆ ಒಂದಿಷ್ಟು ೯೦ ಯಷ್ಟೆ..........................
ಅದೇನೊ ಅವಳ ವ್ರುತ ಪೂಜೆಗಳು ನನ್ನ ನಿದ್ದೆ ಕೆಡಿಸಿತ್ತು
ದೇವರ ಹೆಸರಲ್ಲಿ ನನ್ನ ಜೇಬು ಹರಿದಿತ್ತು................
ಹೊರಟಾಗ ಚೀಟಿಯ ಕಂತೆ !ಸಂಜೆ ಮಲ್ಲಿಗೆ ಬೇಕಂತೆ......
ರಾತ್ರಿ ನನಗೆ ಒಣಗಿದ..................... ಮುತ್ತಷ್ಟೆ!
ಮತ್ತೆ ಕೇಳಲು ನನಗೆ ನಾಳಿನ ಚಿಂತೆ......
ದಿನ ಉರುಳಿದಾಗ ಅವಳೀಗೆ...೩ ತಿಂಗಳಾಗಿತ್ತು
ನನಗಂತು ಉರುಳಿದ ದಿನಗಳೇ ಸಾಕೆನಿಸಿತ್ತು...
ಕರ್ಮಓ ..ಪುಣ್ಯವೋ ಅವಳಿ ಜವಳಿ ನನಗೆ.....
ಅವಳಿ ಜವಳಿಯ ಜೊತೆ ಜೀವನ ಗಲಿ ಬಿಲಿಯಾಗಿತ್ತು..
ಒಂದು. ಒಂದು ಮಾಡಿದಾಗ... ಇನ್ನೊಂದು ಎರಡು ಮಾಡಿತ್ತು..
ಒಂದು ಎರಡರ ಮದ್ಯೆ....... ಮೊದಲ ದಿನ ನೆನಪಾಯಿತು..
ಒಂದು ತಿಂಗಳ ಸಂಬಳ...ಆಟದ ಸಾಮಾನಿಗೆ ಸಾಲದು
ಅಪೀಸಿಗೆ ಎಂದೂ ಲೇಟಾಗಿ ಹೊಗುತ್ತಿದ್ದೆ
ಪ್ರತಿ ತಿಂಗಳ ೩೦ ತ್ತರಂದು ... ಕಿರು ಮುಂಜಾನೆ ಹಾಜಾರ್
ಹಾಲು ಪೆಪರಿನವರದೇ ಬೇಜಾರ್.........................
ಅಂದು ಮನೆಗೆ ಹೋಗೋವಾಗ ನನ್ನವಳ ನಗು ತುಂಬಿದ ಸ್ವಾಗತ
ಇಂದು ಮೊದಲು ಅವಳ ಕೈಯ್ಯಲ್ಲಿ ಪರಕೆ ಇದೆಯಾ ಎಂದು ನೋಡುತ್ತೇನೆ!
ಅಂದು ತವರು ಮನೆಗೆ ಹೋಗಿ ಬರಲೇ ಎಂದು ಕೇಳಿದಲು
ಬೇಡ ಎಂದು ಪ್ರೀತಿಯಿಂದ ಸೊಲ್ಲುತ್ತಿದ್ದೆ............................
ಇಂದು ತವರಿಗೆ ಹೋಗುತ್ತೇನೆ ಅನ್ನುತ್ತಾಳೆ......................
ತುಟಿ ಬಿಚ್ಚಲು ಭಯವಾಗುತ್ತಿದೆ.......................................
ಅಂದು ಒಮ್ಮೆ ಕೋಪ ಬಂದಾಗ ಕೆನ್ನೆಗೆರಡು ಬಾರಿಸಿದ್ದೆ...
ಇಂದು ಸಾಲ ತೀರಿಸುತ್ತಾಳೋ ಅನಿಸುತ್ತಿದೆ...................
ಅಂದು ಪೀ ಪೀ. ಡುಂ ಡುಂ ಶಬ್ದಕ್ಕೆ .... ಕುಣಿದು ಕುಪ್ಪಳಿಸಿದ್ದೆ...
ಇಂದು ನನ್ನ ಮುಂದೆ ಯಾರು ಕುಣಿಯುತ್ತಾರೋ ಎಂಬ ಭಯ!
ಅಂದಿಗೂ ಇಂದಿಗೂ ಎತ್ತಣ ಸಂಬಂದವಯ್ಯ........................
ಒಮ್ಮೆ ಎದ್ದು ಕಣ್ಣು ಒರೆಸಿದಾಗ..........................................
ಮಂಚದ ಕೆಳಗಿದ್ದೆ..............................................................
ಮೈ ಬೆವರಿತ್ತು.....ತುಟಿ ಒಣಗಿತ್ತು..
ಕಂಡಿದ್ದು ಕನಸು ಎಂದರಿತಾಗ.... ತಡೆಯಲಾಗದ ನಗು..........
ದೆವ್ವದ ಕನಸು ಕಂಡಾಗಲೋ ಇಷ್ಟು ಬೆವರಿಲ್ಲ....................
ಅಪ್ಪನ ಕನಸಿನಲ್ಲಿ..... ಬೆವರಲು ಇನ್ನೇನು ಉಳಿದಿಲ್ಲ............
ನನ್ನ ಅಪ್ಪನ ಬಗ್ಗೆ ಹೆಮ್ಮೆ ಎನಿಸಿತು........
ಮದುವೆ ಮಾಡು ಎಂದಿದ್ದೆ................
ಕನಸಿನ ನಂತರ..... ಮಾತು ಹಿಂತೆಗೆದೆ........

ಈಗ ಕನಸು ಕಾಣದ ರೀತಿ ತಾಯತ ಕಟ್ಟಿಕೊಂಡಿದ್ದೇನೆ.....
ಅಪ್ಪನಾಗಿ ೨೨ ರ ಹರೆಯದಲ್ಲಿ ಕಂಡ ಕನಸು ೭೨ ರ ವರೆಗೋ ಮರೆಯಲಾಗದು...




.

Friday, October 22, 2010

ತುಳುನಾಡ ವೈಭವ..............

ತುಳು ಅಪ್ಪೆನ ಮೂಕೆದ ಚಾವಡಿಗ್ ಅಲೆ ಜೋಕುಲೆನ ಪೆರ್ಮೆದ ಸಿಂಗಾರ '''''''''
ಅಂದ್! ಉಂದೆ ಮೇ ತಿಂಗೋಲುದ 29,30 ಗು ನಡತಿನ ತುಳು ಸಾಹಿತ್ಯ ಅಕಾಡಮಿದ ಪೊರ್ಲು ತೂಯರ ???
ಸನ್ಮಾನ್ಯ ಉದಯ್ ಧರ್ಮಸ್ಥಳ ಮೆರೆನ ಮುಂಚೂನಿಡ್ ನಡತಿನ ತುಳುವ ವೈಭವ ಪನ್ಪಿನ ಸಮ್ಮೇಳನ ತುಳುನಾಡ ಬಾಕ್ಯರ್ ಕಂಡೋದು ಬೆನ್ನಿದ ನಲಿಕೆದ ಲಕ್ಕ ಬೆಂಗಳೂರುದ ರವೀಂದ್ರ ಕಲಾಕ್ಷೇತ್ರೋಡು ನಡತಂಡ್ ..
ಜಿಂಜಿ ಉಡಲಡ್ ಪನೊಂದುಲ್ಲೇ ನಡತಿನ ಸಮಾರಂಭ ಸಮಯೂಚಿತವಾದ್ ಸುಶ್ರೂವ್ಯವಾದ್ ತುಳು ಅಪ್ಪೆನ ಪಾದೊಗು ಮಲ್ಲಿಗೆದ ಅಲಂಕಾರ ಅಂಡ್ ,,,,,,
ಸಮಾರಂಭದ ಮಿತ್ತ್ ರಡ್ಡ್ ಪಾತೆರ ಇಜ್ಜಿ
ಶನಿವಾರದ ಪೆರ್ಮೆದ ಮುಗಲ್ ಜಿಂಜಿ ಬಯ್ಯಡ್ ಪೇರ್ ಜೋಕುಲೆನ ನಲಿಕೆದ ಜುಗಲ್ಬಂದಿ ಕುಲ್ಲಿನ ನರಮಾನಿ ಲಕ್ಕರೆ ಮನಸಾವಂದಿನ ಲೋಕೊಗು ಎತ್ತಾಂಡ್......
ಬೆದ್ರ ಕಲಾವಿದೆರ್ನ ಬುದ್ದಿ ಬುಡಯೆ ಹಾಸ್ಯಮಯ ನಾಟಕ ತುಳುವೆರೆಗ್ ತೆಲಿಕೆದ ತೊಡರ್ ತೂಪಂಡ್...
ಐತಾರದ ಪುಲ್ಯಕಾಂಡೆದ ಹಿರಿಯಕ್ಲೆನ ಬಾಷಣ ತುಳು ಸಂಕುಲೋಗು ಮಾಜಂಡಿ ಪುದರ್ ಕನಥಂಡ್..
ಬಾಷಣದ ವಿಷಯ..
೧) ತುಳುವಪ್ಪೆನ ಏಳಿಗೆಗ್ ನಮ್ಮ ಜವಾಬ್ದಾರಿ!
೨) ಕುಡ್ಲಡೆ ಒಂಜಿ ತುಳು ಸಂಸ್ಥೆ !
೩) ೮ ನೇ ಪರಿಚ್ಚೆದೋಡು ತುಳು
೪) ೬ ನೆ ತರಗತಿಡ್ ಬೊಕ್ಕ ತುಳು ಅದ್ಯಯನ
ಇಂಚಿನ ವಿಶೇಷ ರೀತಿದ ವಿಷಯದ ಮಿತ್ತ್ ಆಸಕ್ತಿ ಪೆರ್ಮೆದ ಹಿರಿಯಕ್ಲೆನ ಬಾಷಣವಾಂಡ್....
ಪುಲಿಮುಂಚಿ ಮೊನೆದ ಪೊನ್ನು ಜೋಕುಲೆನ ಕೃಷ್ಣ ಲೀಲೆ ನೃತ್ಯ ...
ಅಂಚೆನೆ ಕಂಸ ವಧೆ ಯಕ್ಷಗಾನ...ಮನ ರಂಜಿಸಾಯಿನ ಕೃಷ್ಣ ಪಾತ್ರ ...
ಏಪೊಗುಲ ಮಾಜಂದಿ www. atildakone.com ದಕ್ಲೆನ ಎಕ್ಕ ಸಕ್ಕ ...
ಸೇರಂಗ್ ದ ಮಹಿಮೆ ...ಜನಪದ ಕುಣಿತ ....ತಾಕತ್ ಪ್ರದರ್ಶನ ...ಕರಿಯಜ್ಜೆರ್ನ ಕಥೆ ..
ಅಬ್ಬಬ್ಬಾ.... ದೇವೆರೇ ನಂಬರ ಆವೊಂದಿಜ್ಜಿ ....
ಕಲಾವಿದೆರ್ ಅಕ್ಲೆನ ಕಲೆಟ್ ಎಂಕ್ಲೆನ್ ಮರ್ಲ್ ಮಂತೆರ್ ಆ ಮರ್ಲ್ ಡು ಎಂಕುಲು ಕುಲ್ಲುದಿನವುಲೇ ಲಾಗೆರೆ ಶುರು ಮಂತ ....ಹೆಚ್ಚಿನಂಶ ರವೀಂದ್ರ ಕಲಾಕ್ಷೇತ್ರದ ಚಯರ್ ಕದೆಲ್೦ಡ ದಾನ್ನ ....
ಅಬ್ಬಬ್ಬಾ ತುಳು ಅಪ್ಪೆಗ್ ಜೋಕುಲೆನ್ ಮರಪ್ಪಂದಿ ಪೆರ್ಮೆ ....
ಇಂಚಿತ್ತಿ ಅಬ್ಬರದ ತುಳು ಸಮ್ಮೆಲೋನೋಗು ಎನ್ನ ಭಾವಪೂರ್ವಕ ಸೊಲ್ಮೆಲು ...
ಪ್ರತೀ ತುಳುವ ಕಡಲ ಜೂಕುಲುಲಾ ದುಂಬುಗು ಇಂಚಿನ ತುಳು ಅಪ್ಪೆನ ಸಮಾರಂಬೊಗು ಭಾಗಿಯಾವೋಡು ಪಂದ್ ನಟ್ಟುನ....

ನಿಕ್ಲೇನ ವಿಶ್ವಾಸಿ ,
ಲೋಕು ಕುಡ್ಲ.......

Friday, September 3, 2010

ಕನಸಿನಲೊಮ್ಮೆ ನೆನಪಿನ ಗೋಪುರ ಕಟ್ಟಿದಾಗ..

ಕನಸಿನಲೊಮ್ಮೆ ನೆನಪಿನ ಗೋಪುರ ಕಟ್ಟಿದಾಗ ಪ್ರೀತಿಯ ಭಾವನೆಗಳು ಕವನದೊಡನೆ ಬೆರೆತು ಹೀಗಾಯಿತು!

ಒಮ್ಮೆ ನೋಡಿದಳು ಮತ್ತೊಮ್ಮೆ ನೊಡಿದಳು
ಮಗದೊಮ್ಮೆ ನನ್ನಿಂದ ತಡೆಯಲಾಗಲಿಲ್ಲ
ಮನಸು ಮಾಡಿದೆ ಹತ್ತಿರ ಹೋಗಲು
ಮುಜುಗರದ ಮನಸು ಧೈರ್ಯಕಿಳಿಯಲಿಲ್ಲ

ಕಮಲಾ ಟೀಚರ್ ಮಗ್ಗಿ ಬೋಧಿಸಿದೊಡನೆ
ಹತ್ತರ ವರೆಗೆ ಉಸಿರು ಕಟ್ಟಿ ಹೇಳಿದೆ
ನನ್ನ ಕನಸಿನ ಗೆಳತಿ ಇಪ್ಪತ್ತರವರೆಗೆ ಹೇಳಿದಾಗ
ನನ್ನ ಹತ್ತೊ ಮರೆತು ಹೋಯಿತು

ಪದೇ ಪದೇ ಕಣ್ಣು ಮುಚ್ಚಿ ತೆರೆದಾಗ
ತೆರೆದ ಅಂಕಣದೊಳು ಸ್ವಲ್ಪ ಪ್ರಿಯವಾಯಿತು
ಪ್ರಿಯ ಹೋಗಿ ಹುಚ್ಚು ಪ್ರೀತಿಯಾದಾಗ
ನನ್ನ ಕನಸಿನ ಕವಲುಗಳು ಇಮ್ಮಡಿಯಾಯಿತು

ಹೆಜ್ಜೆಯ ಗಳಿಗೆಯಲೊಮ್ಮೆ ಗೆಜ್ಜೆ ಮುಟ್ಟಲೆಂದು ಬಗ್ಗಿದಳು
ಗೆಜ್ಜೆಯ ನೆಪದಲ್ಲಿ ನುನುಪಾದ ಪಾದ ನೋಡಿದೆ
ದಾವಣಿಯಲೊಮ್ಮೆ ಸೊಳ್ಳೆ ಕುಂತಾಗ
ಹತ್ತಿಕ್ಕಲೆಂದು ಸೊಳ್ಳೆಯ ಹಿಂದೆ ಓಡಿದೆ

ಪುಟ್ಟ ಕವನ ಬರೆದೆ ನಿನ್ನಲ್ಲಿ ಪ್ರೀತಿಯಿದೆ ಎಂದು
ಕನ್ನಡಿಯಲ್ಲಿ ಮುಖ ನೋಡಿಕೋ ಎಂದಳು
ನೇರವಾಗಿ ಹೇಳಿದೆ ನೀನಿಲ್ಲದೆ ನಾನಿಲ್ಲ ಎಂದು
ಕೆನ್ನೆಯ ಮೇಲೆ ಕೈ ಇರಿಸಿ ಹೆಳಿದಳು ಮತ್ತೊಮ್ಮೆ ಚಪ್ಪಲಿ ಇರುವುದೆಂದು

ಅಂದೊಂದು ದಿನ ಶಾರದೆಯ ಪೂಜೆಯಂದು ಅಭಿನಯ ಮಾಡಿದೆ
ನನ್ನ ಅಭಿನಯಕ್ಕಿಂತ ಅವಳ ಭರತ ನಾಟ್ಯ ಹುಬ್ಬೇರಿಸಿತು
ಅಭಿನಯ ನಾಟ್ಯಗಳ ಸ್ಪರ್ದೆಯ ಮಧ್ಯೆ ಕೂಚುಪುಡಿ ಮಿಗಿಲಾದಾಗ
ನನ್ನ ಅವಳ ಮಿಲನಕ್ಕೊಂದು ಕಾರಣ ಒಕ್ಕರಿಸಿತು

ನಾನು ನಿನ್ನ ಗೆಳತಿಯಷ್ಟೆ ಪ್ರೇಯಸಿಯಲ್ಲ ಅನ್ನೊದು ಅವಳ ಮಾತು
ನಾನು ನಿನ್ನ ಗೆಳೆಯನಲ್ಲ ಪ್ರಿಯಕರ ಅನ್ನೋದು ನನ್ನ ಮಾತು
ಸ್ನೆಹಿತರ 1 ಕಡೆ ಲವ್ ವಾ 2 ಕಡೆ ಲವ್ ವಾ ಅನ್ನೋ ಪ್ರಶ್ನೆಗೆ 2 ಡೂ ಕಡೆ ಎಂದು ಉತ್ತರಿಸಿದೆ
ಒಂದು ಅವಳ ಕಡೆ ಇನ್ನೊಂದು ಅವಳ ಭಾವನೆಗಳ ಕಡೆ ಅಂದಾಗ ಬಾಯಿ ಮುಚ್ಹಿ ಕುಳಿತರು

ಅವಳು ಮುಂದೆ ಓಡುವಾಗ ಹಿಂದೆ ಓಡಿದೆ
ಅವಳು ಹಿಂದೆ ಬಂದಾಗ ಬಚ್ಹಿ ಕುಳಿತೆ
ಗ್ರಂತಾಲಯಕ್ಕೆ ಹೋದಾಗ ಏನೋ ಹುಡುಕುವ ನೆಪ ಮಾಡಿದೆ
ನೆಪದಲ್ಲಿ ನನ್ನೊಳಗೆ ನನ್ನವಳ ಕನಸಾದೆ

ಎಲ್ಲರ ಮಧ್ಯೆ ಓಟದಲೊಮ್ಮೆ ಕಾಲು ಎಡವಿ ಬಿದ್ದಳು
ಬಿದ್ದ ಕಾರಣವೇ ಸ್ನೆಹಿತರಿಗೆ ನಗುವಾಯಿತು
ಯಾವುದನ್ನೊ ಲೆಕ್ಕಿಸದೆ ರಕ್ತ ಸುರಿಯುವ ಕಾಲನ್ನು ಎತ್ತಿ ಬಿಳಿ ಬಟ್ಟೆ ಕಟ್ಟಿದಾಗ
ಅವಳ ಕಣ್ಣುಗಳಲ್ಲಿ ನನ್ನ ಮೊದಲ ಕಾದಲ್ ಕಾಣಿಸಿತು

ಆಟದ ಸಮಯದಲ್ಲಿ ಓದುತ್ತಾ ಕುಳಿತಿದ್ದೆ
ಆಡಲು ಹೋಗೋದಿಲ್ವೊ ಎಂದಳು
ಆಡಲು ಸ್ನೆಹಿತರಿಲ್ಲ ನೀನು ಬರುವೆಯಾ ಎಂದಾಗ
ಟೀಚರ್ ಬರುವರಂತೆ ಕರೆದುಕೊಂಡು ಹೋಗು ಎಂದಳು

ಮೆಲ್ಲನೆ ಗಲ್ಲದ ಮೇಲೆ ನಗು ಪುಟಿಯುತ್ತಾ ಬಂತು
ಹೆಜ್ಜೆಯ ವೆಗದ ಗತಿಯಲ್ಲಿ ಯೇನೋ ವಿರಳತೆ
ನೋಟದ ನೇರಿಯಲ್ಲಿ ತುಮುಲಗಳ ಕಂತು
ನಡತೆಯಲ್ಲಿ ಬಿಗುವಾಗಿ ಹೆಚ್ಚಿತ್ತು ಸರಳತೆ

ಲೇಡೀಸ್ ಸೀಟಿನಲ್ಲಿ ನಾನು ಕುಳಿತಿದ್ದೆ
ಆಕೆ ಕೂರುವಳೆಂದು ಎದ್ದು ನಿಂತೆ
ಯಾವಳೊ ಬೊಜ್ಜು ಮೊದೇವಿ ಒಕ್ಕರಿಸಿ ಹಾರಿದಳು
ನನ್ನವಳೂ ಗೊಳ್ ಎಂದು ನಕ್ಕಾಗ ರೋಮ ಲಂಬವಾಯಿತು

ಆಕೆ ಬಹುಮಾನ ಗೆದ್ದಾಗ ಕೈ ಕುಲುಕಿ ಶ್ಲಾಘಿಸಿದೆ
ಮತ್ತೊ ಕುಲುಕಿದೆ ಕೈ ಮತ್ತೊಮ್ಮೆ ಕುಲುಕಿದೆ
ಸಂತಸದ ಪರಮ ಹಂತಗಳನ್ನು ಮಾತೊಡನೆ ಚೆಲ್ಲಿದೆ
ಕೈ ಬಿಟ್ಟರೆ ಮುಂದುವರಿಯುತ್ತೇನೆ ಎಂದಳು

ಗಟ್ಟಿ ಮನಸನ್ನು ಅರಿಯಲಾಗಲಿಲ್ಲ ನನ್ನಿಂದ
ಏನು ಎಲ್ಲಿ ಹೇಗೆ ಮಾಡಿದರೂ ಮನದೊಳಗಿದನು ಬಿಚ್ಹಲಿಲ್ಲ ನನ್ನವಳು
ಕಾಯುತ್ತಿರುವುದು ಬೇಸರವಾದಾಗ ಭಯವೇಕೆ ಎಂದೆ
ನನ್ನ ಅಪ್ಪ ಪೋಲೀಸ್ ಎಂದಳು

ಒಂದು ದಿನದ ಆಶಾಡದಂದು ಮನೆಯೊಳಗೆ ನುಗ್ಗಿದೆ
ಮಾವನ ಮನಒಲಿಸಲು ನೊಡಿದೆ
ನಿಮ್ಮ ಮಗಳ ಮೇಲೆ ಲವ್ ಇದೆ ಎಂದಾಗ
ನನ್ನ ಕೈಯಲ್ಲಿ ಲಾಟಿ ಎಂದರು

ಫೊನ್ ನಂಬರ್ ಕೇಳಿದೆ ಒಲ್ಲದ ಮನಸ್ಸಿಂದ ಕೊಟ್ಟಳು
ಪ್ರಯತ್ನಿಸಿದಾಗ ಚಂದಾದಾರರು ಬೇರೆ ಕರೆಯಲ್ಲಿದ್ದಾರೆ ಎಂದು ಯಾರೋ ಅಂದಳು
ಮನೆಯಲ್ಲಿ ಎಲ್ಲರೂ ಒಂದೇ ದೂರವಾಣಿ ಉಪಯೋಗಿಸೋದು ಅಂದಾಗ
ಮುಂಜಾನೆ ಹೊಟ್ಟೆ ತುಂಬಾ ಊಟ ಮಾಡಿದೆ

ಸ್ಕೂಲಿನಲೊಮ್ಮೆ ಪ್ರವಾಸ ಹೊರಡಲು ನಿರಾಕರಿಸಿದೆ
ಅವಳೊ ಬರುವುದು ಕಚಿತವಾದಾಗ ಮೊದಲ ಹೆಸರು ನನ್ನದೆ
ಅವಳಿಗಾಗಿ ಸ್ಥಳ ನಿಗದಿಸಿದ್ದೆ ಯಾರನ್ನೊ ಕೂರಲು ಬಿಡಲಿಲ್ಲ
ಕಮಲಾ ಟೀಚರ್ ಬಂದು ಕೂತಾಗ ಹೊಂ ಎನ್ನುವ ಧೈರ್ಯ ನನಗಿಲ್ಲ

ಅಂತೂ ಇಂತೂ ಪರೀಕ್ಷೆ ಬರೆದೆ ಅವಳೂ ಎಡದಲ್ಲಿ ಇದ್ದಳು
ತಲೆ ತುರಿಸುತ್ತಿರುವಾಗ ನನ್ನ ಉತ್ತರ ಪತ್ರಿಕೆ ತೊರಿಸಿದೆ
ಕಣ್ಣು ಮಿಟುಕಿಸುತ್ತಾ ಗಬ ಗಬನೆ ಅಚ್ಚು ಹಾಕಿದಳು
ನಾನೂ ಪೇಲಾದೆ ಅವಳೊ ಪೇಲಾದಳು

ಅಂದಿಗೆ ಮುಗಿಯಿತು ಶೈಕ್ಷಣಿಕ ಜೀವನ
ನಾನೊಂದು ಕಡೆ ಅವಳೊಂದು ಕಡೆ
ಎಲ್ಲೋ ಸಿಕ್ಕಿದಳು ಮುಂದೊಂದು ದಿನ
ಎಲ್ಲವನ್ನೊ ಉರುಳಿಸಿತ್ತು ಕಾಲವೆಂಬ ಕವಡೆ

ನನ್ನವಳಲ್ಲವಾದರೂ ಚಿಂತಿಸಲಿಲ್ಲ
ದೇವರಂತ ಪತಿ ನನ್ನವನು ಅಂದಳು
ಪರರ ಪಾಲಾದರೂ ಪಾರವಾಗಿಲ್ಲ
ಸುಕವಾಗಿ ನನ್ನ ಆತ್ಮದಲ್ಲಿ ಸದಾ ಸತಿ ಅವಳು

ಮನವೆಂಬ ಮಂದಿರದಲ್ಲಿ ಮಂದಾರವಾಗಿದ್ದಳು
ಕ್ಷಣ ಕಾಲ ಸುಖದಲ್ಲಿ ಸುಂದರಿಯಾಗಿದ್ದಳು
ಈಗ ಎರಡು ಮಕ್ಕಳ ತಾಯಿ
ಅವಳೇ ನನ್ನವಳು,


ಪ್ರೀತಿಯಲ್ಲಿ ಕೊಂಚ ನೊಂದ......ಲೋಕು ಕುಡ್ಲ