Friday, May 20, 2011

ಕಣ್ಣೀರೇ ಕನಸಾಯಿತು.......
















ಅಂದಕೆ ಕರಗಲಿಲ್ಲ ಚಂದಕೆ ಮಣಿಯಲಿಲ್ಲ ಏನೊ ಬಯಸದೆ ಅದು ಹೇಗೆ ಬಂತೋ ಪ್ರೀತಿ

ನೆಟ್ಟ ತೋರಣದ ಮಡಿಲಲ್ಲಿ ದಿಟ್ಟ ಹಸಿರಿನ ಸೊಬಗು ಮರುಳು ಮಾಡಿತೇ ಮನವನು

ಪ್ರೀತಿ ವರ್ಣಿಸಲಾಗದು ಅವಳಂದ ಬಣ್ಣಿಸಲಾಗದು ಕನಸಿನ ಕಣ್ಣಿನ ರೆಪ್ಪೆ ಮುಚ್ಚುವುದೆಂತು

ಮುಂದವಳ ವರ್ಣಿಸಲು ಹೋಲಿಕೆಗಳೇ ಇರಲಿಲ್ಲ ಎಲ್ಲವೂ ಮುಗಿದಿತ್ತು ಪುಟದೊಳಗಿನ ಕವನದೊಳು

ಯಾರದೊ ಪ್ರೀತಿ ಕಂಡು ಹುಚ್ಚೆಂದ ಈ ಮನವು ಎನ್ನುದರದ ಪ್ರೀತಿಗೆ ಶರಣಾಯಿತು

ಆಕೆ ನಗುವಿನ ಗಾಳಿ ಎಸೆದಾಗ ಮೊದಲು ಸ್ನೇಹದೊಳಿದ್ದ ನಂಟು ಎಂಟಾಯಿತು

ನಾನೇನೂ ಮೊದಲಿಗನಲ್ಲ ಅವಳೇ ಮೊದಲಿಗಳು ನೀರ ಹಾರಿ ಹೊವೆತ್ತಿದಷ್ಟಕ್ಕೆ ಪೆಚ್ಚಾದಳು

ಹೆಸರೇನು ಸೌಖ್ಯವೇನು ಕೊನೆಗೆ ಖಾಲಿ ಇದೆಯೇ ಪ್ರೀತಿಯ ಮನೆ ಅಂದಾಗ ನಾ ಪೆಚ್ಚಾದೆ

ಇರುಳೆಲ್ಲಾ ರೆಪ್ಪೆ ಮುಚ್ಚಿ ಕಾಣುವ ಕನಸು ನಿದ್ದೆ ಬಾರದೆ ಕಾಡ ತೊಡಗಿತು

ಮುಂಜಾನೆ ದೇವರ ನೋಡುವ ಹೊರತು ಎನ್ನೀ ನಯನ ಎನ್ನವಳ ಬಿಂಬವನು ತುಂಬಿಸಿತ್ತು

ಬಡತನವ ಹೇಳಿದ್ದೆ ಮನದ ಸಿರಿತನವ ವರ್ಣಿಸಿದ್ದೆ ಗಳ್ಳನೆ ಸುರಿದ ಕಣ್ಣೀರಲ್ಲೇ ಉತ್ತರದ ಚಾಪಿತ್ತು

ಎದೆಗೆ ಮುಡಿ ಇಟ್ಟು ರೆಪ್ಪೆ ಮುಚ್ಚಿದಳು ಉಸಿರು ನಿಂತರೊ ಭಯವಿಲ್ಲ ಸುಂದರ ಸಾವ ಗೊಣಗಿದಳು

ಮುಳ್ಳ ಲೆಕ್ಕಿಸದೆ ಒಡೆಯ ಹೂವ ಕೀಳುವ ಕನವು! ಕಣ್ಣ ತುಂಬಿಸಿ ಎನ್ನವಳ ಬಿಗಿದು ಬಾಚಿತ್ತು

ಬಡತನಕೆ ಹೆದರಿದರೊ ಪ್ರೀತಿ ದೂಕಿತ್ತು ಇತ್ತಿಂದತ್ತ ಅತ್ತೆ ಮಾವನ ಮನೆಗೆ ಹೆಣ್ಣು ಕೇಳಲು

ಕುಳ್ಳಿರಿಸಿದರು ಪಾನೀಯ ಉಪಚರಿಸಿದರು ಪ್ರೀತಿ ವಿವರಿಸಲು ಎದೆ ಬಡಿತ ಉಸಿರ ಹಿಡಿದಿತ್ತು

ಎನ್ನವಳನೊ ಮುಂದಿರಿಸಿ ಬಗೆ ಬಗೆಯಾಗಿ ಮಗಳ ಮೇಲಿರುವ ಸಂಮ್ಮಂದದ ಸ್ವಚ್ಚತೆಯನು ಬಿಡಿಸಿದೆ

ಎನ್ನ ಬದುಕ ಹಿಂದೆಗಳೀಗೆ ಸಮ್ಮತಿ ಇಲ್ಲವಾದರೊ ಮಗಳ ಸುಖವೇ ನಮ್ಮ ಸುಖ ಎಂಬ ಮಾತು ಎನ್ನುಸಿರ ಸ್ಠಿರವಾಗಿಸಿತ್ತು

ಹರೆಯದಲ್ಲೇ ಪ್ರೇಮದ ಕನಸು ನನಸಾಯಿತು ಎನ್ನ ಹೆಜ್ಜೆಯಲಿ ಅವಳ ಹೆಜ್ಜೆ ಬೆರೆತಾಯಿತು

ಮಧುಮಂಚಕೆ ಬೀರಿತು ಬಿಡಿ ಕುಸುಮದ ಇಂಚರ ಗಿರಿ ಗಗನವೇ ಹಾಡಿದು ನಾದ ಸಪ್ತಸ್ವರ

ಮಲೆನಾಡಿಗೆ ಬಂದೆ ಸೌಂದರ್ಯ ಸವೆಯಲು ಪ್ರೇಮದ ಕವಿತೆಗೆ ನಾದವನು ಬೆರೆಸಲು

ದಿನ ಕಳೆದಂತೆ ಎನ್ನವಳ ಹಠ ಕಂಡು ಸುಕಿಸಿದ್ದೆ ನಗು ಕಂಡು ಸೋತಿದ್ದೆ

ವರ್ಷಗಳು ಮೊರಾಯಿತು, ಅತ್ತೆ ಮಾವ ಮಗಳ ಕಾಣಲು ತುಂಬಿದ ಗಾಡಿಯಿಂದಿಳಿದಾಯಿತು

ಆಸೆಯೇ ಇಲ್ಲದ ಅತ್ತೆಗೆ ಮೊಮ್ಮಗನ ತೊಗಿ ಮುದ್ದಾಡುವ ಹಂಬಲವಂತೆ

ಕನಸುಗಳೇ ಇರದ ಮಾವನಿಗೆ ಮೊಮ್ಮಗಳ ಕೊಂಡಾಡುವ ಬಯಕೆಯಂತೆ

ಒಂದಿರುಳ ಮಂದ ಬೆಳಕಿನೊಳು ಸೊಜಿಯು ಎನ್ನವಳ ಬೆರಳ ರಕ್ತವನು ಹೊರ ಕರೆದಿತ್ತು

ಕೈಯ್ಯ ಗಾಜನು ಬಿಟ್ಟು ಎನ್ನವಳ ಬೆರಳ ಬಾಯಲಿಟ್ಟು ಚುಂಬಿಸಿದೆ

ಜೋಡಿ ಪ್ರೀತಿಗೆ ಕರಗಿ ಅತ್ತೆ ಮಾವರ ಕಣ್ಣೀರು ನೆಲವ ಸೋಕಿ ಆಶೀರ್ವದಿಸಿತ್ತು

ಮಗಳ ನೊವನು ಅರಿತು ಎನ್ನೊಳು ಮಾತಿಗಿಳಿದ ಅತ್ತೆ ಮೊಮ್ಮಗನ ಅಳುವಿಗೆ ದಿನ ಕೇಳಿದಳು

ಎಳೆದೇ ಹೋದರು ದವಾಖಾನೆಗೆ ಕಣ್ಣೀರೊಳು ಅವಿತಿಟ್ಟೆ ಕೆಲವೊಂದು ಸತ್ಯಗಳ ಎನ್ನ ಉದರದೊಳಗೆ

ಮನೆಯವರೆಲ್ಲ ಸೇರಿ ಬಗೆಬಗೆಯಾಗಿ ನೋಯಿಸಿದರು ಛಲಕೆ ಶರಣಾಗಿ ಎನ್ನುದರ ಬಿಚ್ಚಿದೆ

ನಾವಿಬ್ಬರೊ ಪ್ರೇಮಿಗಳಷ್ಟೆ ಪ್ರೀತಿ ಹಂಚಿದೆವು ದೇಹ ಹಂಚಲಿಲ್ಲ

ಮುತ್ತಿ ಮುದ್ದಾಡಿದ್ದರೊ ಪ್ರೀತಿ ಕಂಪಿಸಿತ್ತು ದೇಹ ಕಂಪಿಸಲಿಲ್ಲ

ಮಗು ಬೇಕೆಂಬ ಹಂಬಲ ನಮಗೆ ನಿಮಗಿದ್ದರೊ ಆ ವಿದಿಗೆ ಇರಬೇಕಲ್ಲ

ನಾ ಮುಚ್ಚಿಟ್ಟ ಸತ್ಯವಿಷ್ಟೆ ಎನ್ನವಳು ಇನ್ನಿರುವುದು ಎರಡು ಮಾಸಗಳ ಕಾಲ

ಈ ಎರಡು ಮಾಸಗಳು ಎನಗೆ ನೊರು ವರ್ಷಗಳು ನಾ ಇನ್ನೊ ಪ್ರೀತಿಸಬೆಕು ಕಾಲ ಬೆರಗಾಗುವಷ್ಟು

ಎನ್ನವಳ ಕೊನೆಯು ಅವಳ ಮನಕೆ ತಿಳಿದಿಲ್ಲ ಬಿತ್ತದಿರಿ ಆಸೆಗಳ ಬಿಳಿ ಮಂಜನು

ಇನ್ನೊ ಮುಂದೆ ಎನಗೆ ವಿವರಿಸಲು ನಾಲಗೆ ತೆವಳುತಿಲ್ಲ ತುಟಿಗಳು ತೇವವಿಲ್ಲ

ನಾ ನತದ್ರುಷ್ಟನೊ ಬದುಕು ಬಣ್ಣದ ಖಡ್ಗವೋ ಅದರ ಹರಿತಕೆ ನಾ ಚೊರು ಚೊರಾದೆ

ನೆನಪುಗಳ ಕಹಿಯಲಿ ದೇಹ ಕಲ್ಲಾದಾಗ ಅತ್ತೆ ಮಾವರ ಹಣೆಯು ಎನ್ನ ಪಾದವ ಮುದ್ದಿಸಿತ್ತು

ಹುಚ್ಚುತನಕೆ ಆಡಿ ಅವರಿಬ್ಬರ ದೇಹವ ಎನ್ನ ಕರಗಳು ಅಪ್ಪಿ ಬೆಚ್ಚಗೆ ಬಂದಿಸಿತ್ತು

ಅದು ಕೊನೆಯ ದಿನ ಎನ್ನವಳೀಗೆ ಎನ್ನ ಬಾಚಿ ಮುದ್ದಾಡುವ ತುಮುಲವಂತೆ

ಮತ್ತೆ ಮುಡಿಯ ಎನ್ನೆದೆಗೆ ಒರಗಿಸಿ ರೆಪ್ಪೆ ಮುಚ್ಚಿದಳು

ಕಾದೇ ಕುಳಿತೆ ಮತ್ತೆ ರೆಪ್ಪೆ ಕಂಪಿಸುವುದೆ ಪ್ರೀತಿ ಎನ್ನರಸುವುದೇ................................................









































Thursday, April 21, 2011








ಗೊಂದಲದೊಳಗೊಂದು ಹಂಬಲ

ಬರೆಯಲೇಬೇಕೆಂದು ಹೊರಟೆ
ಏನು ಬರೆಯಲಿ ಯಾರ ಬರೆಯಲಿ?
ಸ್ವಲ್ಪ ಹೊಸದು ಬೇಕಿತ್ತು,ಕಾಣುವುದೆಲ್ಲಾ ಹಳೆಯದಾಗಿತ್ತು
ಹೆಣ್ಣು,ಹೊಣ್ಣು,ಮಣ್ಣು ಮನ ಗೊಂದಲದಲ್ಲಿತ್ತು..


ಮೊದಲ ಕವನ ಚಿಗುರಿದಾಗ
ಕಾಲ ಬುಡದಲ್ಲಿ ಗೀಚಿ ಹರಿದು ಎಸೆದ ಕಸವಿತ್ತು
ಚಿಗುರಿದ ಕವನ ಅರಳುವ ಹೊತ್ತು
ಮನ ಸುಂದರ ಪದಗಳ ಹೊಂದಿಸುವ ಗೊಂದಲದಲ್ಲಿತ್ತು


ಚುಕ್ಕೆ ಚಿತ್ತಾರಗಳ ವರ್ಣಿಸಲೇ
ಹಕ್ಕಿ ಆಗಸವನೊ ಬೆರೆಸಲೇ
ಸುತ್ತ ಮುತ್ತ ಕಾಡು ಕಡಲು ಕೇವಲ ಚಿತ್ರವೇ?
ವಿಚಿತ್ರ ನಾಡಿನ ಹಗಲು - ಇರುಳಿನಲಿ
ಕಪ್ಪು ಬಿಳುಪಿನ ಬಾಳೊಂದು ಬಣ್ಣವೇ?


ಜೀವಿಗಳಿಗಿರುವ ಕಿಚ್ಚು ಮತ್ಸರ?
ಗಾಳಿ-ನೀರಿಗೇಕಿಲ್ಲ?
ಜೀವಿಗಳನು ಚುಚ್ಚುವ ಕುಸುಮದ ಮುಳ್ಳು
ದುಂಬಿಯನೇಕೆ ಚುಚ್ಚಲಿಲ್ಲ?
ನಿನ್ನೆಯ ಪುಠಗಳು ತುಂಬಿತ್ತು
ನಾಳೆಯದೇಕೆ ಖಾಲಿ ಖಾಲಿ.............?







Thursday, March 10, 2011

ಸಾಗರದ ಅಲೆಯಲ್ಲಿ ನನ್ನವಳ ಕಂಡ ಕನಸು....!

ಕಲ್ಪನೆಯ ಮೋಡದಲ್ಲಿ

ಸುಂದರ ಬಾಲ ಬಾಲ್ಯದಲ್ಲಿ ಈಸಿದ್ದೇನು? ಈಸಿ ಜಯಿಸಿದ್ದೇನು? ಬರೀ ನಾಟಕೀಯ ತುಣುಕುಗಳ ನೆನಪಷ್ಟೆ! ಪ್ರೀತಿಯಿಂದ ಹಡೆದಳು ನಮ್ಮವ್ವ, ಜೋಗುಳ, ಕಂದಮ್ಮ, ಇಂತೆಲ್ಲ ಕವನ ಕಾದಂಬರಿಗಳಿಂದ ಬಾಲ್ಯವನ್ನು ಮುದ್ದಿಸಿದ್ದೆಷ್ಟೋ ಅರಿಯೆ! ಮಗು ನಕ್ಕಾಗ,ಕೆನ್ನೆ ಕೆಂಪಿದ್ದಾಗ, ಮೆಲ್ಲನೆ ಅಮ್ಮಾ ಎಂದು ಮೆಲ್ಲಿದಾಗ ಅಮ್ಮನ ಆನಂದವೆಷ್ಟೋ ವರ್ಣಿಸಲಾಗದು, ಸ್ವಲ್ಪ ತುಂಟಾಟಿಕೆ ಮಿತಿ ಮೀರಿದಾಗ ಆಕೆ ಪ್ರೀತಿಯಿಂದ ಅಬ್ಬರಿಸುವುದರಲ್ಲಿ ತಪ್ಪೇನಿದೆ ಅಲ್ವೇ..? ಆದರೊ ಆ ಪ್ರೀತಿಯ ಹೊಡೆತವನ್ನು ಪ್ರೀತಿಯಿಂದಲೇ ಸಹಿಸುವವರಾರು? ಮೀಸೆ ಬಂದಾಗ ಲೋಕ ಕಾಣುವುದಿಲ್ಲ ಅನ್ನೋದು ಸುಳ್ಳಲ್ಲ ಅಲ್ಲವೇ? ಅಮ್ಮ ಮುದ್ದಿಸಿದ್ದು, ಅಮ್ಮನ ಮುತ್ತನ್ನು ಮರೆತಿದ್ದು ಇದೆಲ್ಲಾ ಮಾನವ ಹೆಚ್ಚು ಸುಖವನ್ನು ಪಡೆಯಲು ಹೊರಟಾಗ ಅವನ ಮನದಲ್ಲಿ ಮೊಡುವ ಕನಸಿನ ಕಾದಂಬರಿ. ಅಮ್ಮನಿಂದ ಕೈ ತುತ್ತು ತಿನ್ನುವ ಹೊತ್ತು ಕಳೆದರೆ ಸಾಕು ದೇಶ ಸುತ್ತಿ ಕೋಶ ಓದುವ ಬಯಕೆ, ಕಣ್ಣು ಮನಸ್ಸು ಇಷ್ಟ ಪಟ್ಟಿದ್ದನ್ನು ಕೊಂಡುಕೊಳ್ಳುವ ಆಸೆ, ನನ್ನವಳ ಬಗ್ಗೆ ನೆನೆದಾಗ ಹೆಣ್ಣು ತಪ್ಪಿಲ್ಲ, ತಪ್ಪು ಎನ್ನುವ ದಾರವನ್ನು ಗಂಡು ಹೆಣೆದಿಲ್ಲ, ಎಲ್ಲವನ್ನೊ ಕಾಲ ಸಂದರ್ಭಗಳೆಂಬ ಸಹಜತೆ ಅಲ್ಲೋಲ ಕಲ್ಲೋಲವಾಗಿಸಿದ್ದು ಅನಿಸುತ್ತಿದೆ!

ನನ್ನವಳು ಅಂತಹ ಹಾಲು ವಯಸ್ಸಿನಲ್ಲೂ ಮುಂಜಾನೆ ಎದ್ದು, ಸಂಧ್ಯಾವಂದನೆ ಮುಗಿಸಿ,ನಮಿಸಿ, ಸುಂದರ ಕನಸುಗಳ ತಂತಿಯನ್ನು ಮೀಟಿ ಆನಂದಿಸುತ್ತಿದ್ದಳು, ಮುಂಜಾನೆಯ ಸವಿ ತಂಗಾಳಿ ಮೈಗೆ ಸೋಕುವುದನ್ನು ಅನುಭವಿಸುತ್ತಾ ಆನುಭವವನ್ನು ಅಮ್ಮನಲ್ಲಿ ಹಂಚುತ್ತಾ, ಕಮಲದಿಂದ ದುಂಬಿ ಮಕರಂದವನ್ನು ಹೀರುವ ಸೊಬಗನ್ನು ಮನದಲ್ಲೇ ಹಾಡುತ್ತಿದ್ದಳು. ಅವಳಿಗೊ ದುಂಬಿಯಾಗುವ ಬಯಕೆಯಂತೆ, ಸಂಜೆಯ ಕೆಂಪುಬಣ್ಣದ ಆಗಸದ ತೇರಿನಲ್ಲಿ ಸಾಲು ಸಾಲಾಗಿ ಹಾರುವ ಹಕ್ಕಿಗಳ ದಿಂಡನ್ನು ನೋಡು ನೋಡುತ್ತಾ, ನನಗೊ ಹಕ್ಕಿಯಾಗಬಾರದಿತ್ತೇ?, ನಾನು ಅವುಗಳ ಜೊತೆ ಹಾರಬಾರದಿತ್ತೆ ಅನ್ನೋ ಕನಸುಗಳನ್ನು ಬಿತ್ತುತ್ತಿದ್ದಳು. ಹೀಗಿದ್ದ ನನ್ನಾಕೆ ಮೊದಲು ಮರೆತಿದ್ದು ಅಮ್ಮನನ್ನು! ನಂತರ ಮರೆತಿದ್ದು ನನ್ನನ್ನು!

ಪ್ರೀತಿಯ ಮಹಲ್ ಕಟ್ಟಲು ಎಷ್ಟೋ ವರ್ಷಗಳು ಬೇಕು,ಅದೇ ಮಹಲ್ ಒಡೆದು ಹೋಗಲು ಒಂದು ನಿಮಿಷ ಸಾಕು! ಪ್ರೀತಿ ಹುಟ್ಟು ಹಾಕಲು ಕೆಲವೇ ಕವಲುಗಳಿದ್ದರೆ, ಒಡೆದು ಹೋಗಲು ನೊರಾರು ಕವಲುಗಳು ! ಹಾಗೆಂದು ನಾ ಕಟ್ಟಿದ ಪ್ರೀತಿಯ ಸೌಧ ಯಾರೋ,ಹೇಗೋ ಎಂಬ ಒತ್ತಾಯಕ್ಕೆ ರಚನೆಯಾಗಿಲ್ಲ, ಅಲ್ಲಿ ಸುಂದರ ಭಾವನೆಗಳಿತ್ತು,ಸುಂದರ ಕನಸುಗಳಿತ್ತು,ಬಾಲ್ಯದ ಬದುಕಿನ ನೆನಪುಗಳಿತ್ತು,ಪುಟ್ಟ ಪುಟ್ಟ ಹೆಜ್ಜೆಯ ಗುರುತುಗಳಿತ್ತು! ನನ್ನವಳು ನೆಲ ಸೋಕುವ ದಾವಣಿಯ ಅಂಚನ್ನು ಎತ್ತಿ ಹಿಡಿದು ಕುಂಟೆ ಬಿಲ್ಲೆ ಆಡುವಾಗ ಎಡವಿ ಬಿದ್ದಳು, ನಾನು ಅಡಿಕೆ ಗರಿಯಲ್ಲಿ ಎಳೆದಾಗ ಜಾರಿ ಬಿದ್ದಳು, ನೆಲ್ಲಿ ಕಾಯಿ ಕೀಳುವಾಗ ಕೆಳಬಿದ್ದಳು, ಎಲ್ಲಿ, ಹೇಗೆ ಬಿದ್ದರೊ ಸಹಿಸಲಾಗದ ನೋವಾಗಿತ್ತು! ಇನ್ನು ನನ್ನಾಕೆ ತನ್ನ ಹರೆಯದ ಬದುಕಲ್ಲೇ ಎಡವಿದಾಗ, ಬಾಲ್ಯದ ನಂತರವೊ ಪರರೊಡನೆ ಬೆತ್ತಲಾದಾಗ ನಾನೇಕೆ ಮೌನವಾದೆ? ನನ್ನ ನಯನಗಳೇಕೆ ಕಣ್ಣೀರನ್ನು ಹರಿಯ ಬಿಡಲಿಲ್ಲ,ದೇಹವೇಕೆ ಕಲ್ಲಾಯಿತು? ಆಕೆ ಆ ರೀತಿ ವರ್ತಿಸುವ ಕಾರಣವಾದರೊ ಏನು? ನಾನು ನನ್ನ ಕನಸುಗಳು ಸುಳ್ಳೆ? ಭಾವನೆಗಳು ಸುಳ್ಳೆ? ನನ್ನವಳು ನನಗಾಗಿ ಸುರಿದ ಪ್ರೀತಿ ತುಂಬಿದ ಕಣ್ಣೀರು ಸುಳ್ಳೆ?

ಬಾಳ ಮೊದಲ ಬೇಟಿಯಲ್ಲಿ ನನ್ನವಳನ್ನು ಪ್ರೀತಿಯ ಮಂದಿರದಲ್ಲಿ ಕಂಡೆ, ಬಾಳ ಮಗದೊಂದು ಭೇಟಿಯಲ್ಲಿ ನನ್ನವಳನ್ನು ಕಂಡಾಗ ಆಕೆಯ ಕಣ್ಣುಗಳು ಬಾಡಿತ್ತು,ತುಟಿ ಒಣಗಿತ್ತು, ಗಲ್ಲ ನಗುವಿನ ಗಾಳಿ ಸೋಕದೆ ಕುಂದಿತ್ತು ಅಂದರೆ ಅದಾಗಲೇ ಆಕೆಯ ದೇಹವೆಂಬ ಆಸ್ತಿಯ ಪತ್ರ ಮತ್ತೊಬ್ಬರದ್ದಾಗಿತ್ತು, ಮತ್ತೆ ನನ್ನವಳ ಭೇಟಿ ಎಲ್ಲಿ ಹೇಗಾಗುತ್ತೋ ತಿಳಿದಿರಲಿಲ್ಲ.ಆದರೊ ಎದೆಯೊಳಗಿನ ಪ್ರೀತಿ ಕುಂದಲೇ ಇಲ್ಲ,
ಮುಂದೇನಾಯಿತು? ಪ್ರೀತಿ ಬೇಡವೆನಿಸಿತೇ? ಬದುಕು ಸಾಕೆನಿಸಿತೇ? ನಾನು ಎಲ್ಲವನ್ನೊ ಸಹಿಸಲು ಉಸಿರುಹಿಡಿಯುವ ಪ್ರಯತ್ನದಲ್ಲಿದ್ದಾಗ ಎಲ್ಲಾ ನೋವು,ದುಗುಡ,ದುಮ್ಮಾನಗಳನ್ನು ಕಾಲವೆಂಬ ಕವಡೆ ಮಗುಚಿ ಹಾಕಿತ್ತು, ಕೆಲವೊಂದು ಆಕಸ್ಮಿಕ ಅನುಭವಗಳಿಂದ ಸಮುದ್ರದ ಅಲೆಗಳು ಪ್ರತೀ ನಿಮಿಷಕ್ಕೊ ದಡವನ್ನು ತಟ್ಟುವ ಕಾರಣದ ಅನುಭವವಾಯಿತು. ದಿನಗಳು ಉರುಳಿತ್ತು, ಕತ್ತಲೆಯ ಕಾವಿನಲ್ಲಿ ಒಂದೊಮ್ಮೆ ಮೈ ಬೆವರಿತ್ತು, ನೆನಪುಗಳು ಚುಚ್ಚುವಾಗ ಮತ್ತೆ ಮತ್ತೆಗೆ ಅದೇನೊ ಹೊಸತೆನಿಸಲಿಲ್ಲ ಎಲ್ಲವೊ ಅಭ್ಯಾಸ ಅನ್ನುವ ತಾಳಕ್ಕೆ ಕುಣಿಯುವ ಗೊಂಬೆಯಾಯಿತು.ಸಹೋದರಿಯೊ ನನ್ನ ಮುರುಕಲು ಮನಕ್ಕೆ ಬುದ್ದಿಮಾತುಗಳನ್ನು ಚಡಪಡಿಸುತ್ತಾ ಕೆಂಪಾಗಿದ್ದಳು,

ಅದೊಂದು ದಿನ ಸಾಗರದ ಅಂಚಿನಲ್ಲಿ ಕೂತಾಗ ಬಾನಂಚಿನಲ್ಲಿ ಸುಂದರ ಸಂಜೆಯ ಕಂಪನ್ನು ಸವಿಯುತ್ತಾ, ಮೋಡಗಳು ಬಾನನ್ನು ತಬ್ಬಿ ಆಲಂಗಿಸಿದಾಗ, ಅಲೆಗಳು ನನ್ನ ಪಾದದ ವರೆಗೊ ಬಂದು ಹಿಂದೆ ಸರಿದಾಗ ನನ್ನವಳ ನೆನಪಾಗದಿರಲಿಲ್ಲ ಬಾಳಿನಲ್ಲಿ ಎರಡು ಬೇಟಿಗಳನ್ನೊ ಮುಗಿಸಿ ಮೊರನೆಯದೆಂತೋ ಎಂದು ದಡಕ್ಕೆ ಬಾಗಿದಾಗ, ಅಲ್ಲಿದ್ದ ಕೆಲವೊಬ್ಬರು ಸಾಗರ ತೀರದಲ್ಲಿ ಗುಂಪಾಗಿದ್ದರು, ಸಹೋದರಿಯೊ ಕೊಡಾ ಯಾರೋ ನಮಗೇಕೆ? ಶುದ್ದ ಮನಸ್ಸುಗಳ ಪ್ರೀತಿಗೆ ಅಂತ್ಯ ಈ ರೀತಿಯೇ ಕಹಿಯಾಗಿರುತ್ತದೆ! ಯಾವುದೋ ಹುಡುಗಿ ಕನಸುಗಳೆಂಬ ನೀರಿನ ಹಾಸಿಗೆಯಲ್ಲಿ ತೇಲುತ್ತಿದ್ದಾಳೆ ಅಂದಳು, ಎಲ್ಲರ ಕೈಗಳೊ ಕೂಡಾ ಕೊಳೆತ ಗಂಧಕ್ಕೆ ನಾಸಿಕವನ್ನು ಮುಚ್ಚಿಸಿತ್ತು,,! ನಾ ಮೆಲ್ಲನೆ ನಡೆದು ತಲೆಯೆತ್ತಿದಾಗ.......
ಸಹೋದರಿಯ ಅದು ನಿನ್ನವಳಲ್ಲ ಅನ್ನೊ ಮಾತಿಗೆ ಎನ್ನ ಮನದ ಪ್ರೀತಿಯ ಮಂದಿರ ಅದು ಎನ್ನವಳೇ ಎಂದು ಸಾರಿ ಸಾರಿ ಹೇಳಿತ್ತು, ಕಾಲ ಉರುಳಿತ್ತು,ಬಾಳು ಮುಗಿದಿತ್ತು, ಅಂದಲ್ಲಿ ಬಾಳು ಬೆತ್ತಲೆ ನಡಿಗೆ, ಸಂಜೆ ಕತ್ತಲೆಡೆಗೆ....

ಲೋಕು ಕುಡ್ಲ..

(lokukudla@gmail.com)
* * * *















Friday, February 18, 2011

ಭಾವನೆಯ ಮೊಡದಲ್ಲಿ ಕೊನೆಯಿಲ್ಲದ ಕವನ..!


(ನಾ ಬರೆದು ಸೊರಗಿ ಕರಗಿ ಮತ್ತೆ ಬರೆದರೊ ಅದು ಅವಳ ನೆನಪಿನೊಳಗಿನ ಹೊಸ ನೆವನದ ಕವನ......................!)



ಅದು ಅವಳ ಮುಗುಳು ನಗೆ
ಬಾಚಿ ಗೋರುವ ತೆವಲೆನಗೆ.....
ಅಯ್ಯೊ ಅವಳು ನಡೆದರೆ ಸೊಂಟ ಬಳ್ಳಿಯಂತೆ
ಬೆಳ್ಳಿಯಂತೆ ಅವಳ ನಯವಾದ ಪಾದ....

ಮಿಟುಕಿ ಮಿಟುಕಿ ಮಿಂಚುವ ಮಿಂಚುಳ್ಳಿ ಅವಳ ಕಣ್ಣು
ಬೆನ್ನು ತಳುಕಿ ಬಳುಕಿ ಬಾಗಿದ ಬಾಳೆಯಂತೆ
ಮಲ್ಲಿಗೆ ಮುಡಿದರೆ ಸಾಕು ನನಗೆ ಕಿವಿಅಂಚು ಮೊಸುವ ಆಸೆ
ತೆಳ್ಳಗೆ ನಡೆದರೆ ಸಾಕು ಸೊಂಟಕ್ಕೆ ತಾಗಿ ತೊಗುವ ಕೇಶ....

ಪಾದದ ನೆರಳು ನೇರಳೆಯ ಮೈಯ್ಯಂತೆ ನೀಲಿ
ತೇಲಿ ತುಳುಕುವ ಮೈಯ್ಯೆಲ್ಲಾ ಚುಕ್ಕೆ ಇಟ್ಟ ರಂಗೋಲಿ
ಅಂದದೋಕುಳಿ ಕಾಲಿ ಕಾಲಿ ಕೆನ್ನೆಗೆ ಸ್ವಲ್ಪ ನಗುವಿನ ಗಾಳಿ
ಸೀಳಿ ಉಕ್ಕುವ ಅವಳ ಅಂದದ ಅಲೆಗಳ ದಾಳಿ...

ಅಯ್ಯೊ ನನ್ನವಳು ಕೋಗಿಲೆಯಾಗಿ ಹಾಡಿದಾಗ
ನಾನು ಆಸರೆಯಾಗಿ ಮಾಮರವಾಗಬಾರದಿತ್ತೆ..?
ಅಯ್ಯೊ ನನ್ನವಳು ಹೊವಾಗಿ ಅರಳುವಾಗ
ನಾನು ಮುಳ್ಳಾಗಿ ಬೇಲಿಯಾಗಬಾರದಿತ್ತೇ..?

ಅವಳು ಕುಣಿದರೆ ಸಾಕು ಆಗಸವೇ ರಂಗವಾದಂತ್ತಿತ್ತು
ಅವಳ ತೆವಳುವ ಕಂಗಳು ತೇಲುವ ಮೋಡದಂತ್ತಿತ್ತು
ತುಟಿ ಚಟಪಟವಾದಾಗ ಅಲೆಗಳೇ ತಬ್ಬಿದಂತ್ತಿತ್ತು..
ಬ್ರಂದಾವನದ ಸೊಬಗಿನೊಳು ಅವಳು ಸರ್ಗದಾ ಅಪ್ಸರೆ...

ಅಯ್ಯೊ ನನಗಿಲ್ಲವೇ ನನ್ನವಳ ಮನದ ಮಂದಿರದ ನೆರಳು..
ಕೇಶದಿಂದ ಹಿಡಿದು.... ಅವಳ ಲಿಪ್ ಸ್ಟಿಕ್ ಕೊಡಾ ಗೋಡೌನ್ನಲ್ಲಿ ಭದ್ರವಾಗಿದೆ..
ಎಲ್ಲವೊ ಸುಭದ್ರವಾಗಿದ್ದರೊ...ಮನದಲ್ಲಿ ನನ್ನವಲು ಕಳವಾದಂತಿದೆ..
ನಾನು ಕಟ್ಟಿದ ಪ್ರೇಮದ ಉಸಿರು ನಿಂತಂತಿದೆ..ಕನಸು ಕೊಲೆಯಾದಂತಿದೆ..

ಸೌಂದರ್ಯಕ್ಕೆ ಮರುಳಾಗಿದ್ದು ಮೊರ್ಖತನವೇ...?
ಕಾಣುವ ಅಂದ ವರ್ಣಿಸಿದ್ದು ಹುಚ್ಚುತನವೇ..?
ನಿನಗೆ ಕರುಳಿಲ್ಲವೇ ..ನನಗೆ ನೀ ಎಂದು ಸಿಗುವೆ..?
ತಳ್ಳದಿರು...ಇಲ್ಲವೆನ್ನದಿರು...ನಿನಗಾಗಿ ಶತ ಸಂವತ್ಸರ ಕಾಯುವೆ..!
ಹೇ ನನ್ನ ಕನಸಿನ ರಾಣಿ ನಿನಗೆ ನನ್ನಲ್ಲಿ ಮುನಿಸು ತರವೇ...?????







Tuesday, February 15, 2011

ನೀನು ಬೆಚ್ಚಗಿದ್ದೆ,ನಾನು ಬೆಚ್ಚಗಿರಿಸಿ ಹುಚ್ಚನಾದೆ....!

ಎಲ್ಲೋ ಇತ್ತು ಬಣ್ಣಗಳ ಚಿತ್ತಾರ, ಹೇಗೋ ಇತ್ತು ಚಿತ್ತಾರದ ಅವತಾರ, ಕವನ ಒಂದೇ ಎರಡೇ? ಎಲ್ಲದರಲ್ಲೊ ನಿನ್ನ ನೆನಪುಗಳ ಸಾಲು, ನಿನ್ನ ಹೊಳೆಯುವ ಕಣ್ಣು, ನಿನ್ನ ಬಣ್ಣದ ದೇಹ, ವರ್ಣಿಸಿದಷ್ಟೊ ಸಾಲದು, ಹೇಗಿತ್ತು ಮೊದಲ ದಿನದ ಬೇಟಿ? ಒಮ್ಮೆ ನೆನಪಿಸಿಕೋ ನೀನು ಕೊಡೆ ಇದ್ದರೊ ಅದರ ತೊತುಗಳಿಂದ ತೊಟ್ಟಿಕ್ಕುವ ಹನಿಗೆ ಒದ್ದೆಯಾದಾಗ ನಾನು ನನ್ನ ರೈನ್ ಕೋಟ್ ಕೊಟ್ಟಿದ್ದು, ನೀನು ನೀರ ಹನಿಗಳ ನೋಡು ನೋಡುತ್ತಲೇ ಆನಂದಿಸಿದೆ, ನಾನು ಹನಿಗಳಿಂದ ನೆನೆ ನೆನೆದು ಆನಂದಿಸಿದೆ, ನಿನಗೆ ಆನಂದದ ಬೆಸುಗೆ ನನಗೆ ಸ್ವಲ್ಪ ಜ್ವರ ಬಂದಿತ್ತು ಅಷ್ಟೆ, ನೋವಿನಲ್ಲೊ ನಿನ್ನ ನಗು ನೆನಪಿಸಿದಾಗ ಮೈ ಜುಮ್ಮೆಂದಿತ್ತು, ಸುಕ ತುಳುಕುತ್ತಿತ್ತು ಎಲ್ಲಾ ಆ ನೆನಪುಗಳ ಕನಸಿನಿಂದಷ್ಟೆ! ಬಾಲ್ಯದಿಂದಲೊ ಜೊತೆಗಿದ್ದೆ, ಆ ಆಟ, ಆ ತುಂಟತನ ನನ್ನಲ್ಲೊ ಗೀಜಗನ ಗೊಡಾಗಿತ್ತು. ನೀನು ನವಿಲು ಗರಿ ಬೇಕು ಎಂದು ಹಟಮಾಡಿದ ಆ ವಯಸ್ಸು , ಆ ಸಮಯ ಮಲ್ಲಿಗೆಯ ತೋಟದಲ್ಲಿ ಮೈ ಮರೆತು ಕುಣಿದು ಕುಪ್ಪಳಿಸಿದಂತಿತ್ತು, ನಿನಗೊ ಸ್ವಲ್ಪ ವಯಸ್ಸಾದಾಗ , ಮಾತಿನ ವರಸೆಗಳೇ ಬದಲಾಗಿತ್ತು, ಯಾರೋ ನಿನ್ನನ್ನು ಮುಟ್ಟಿದಾಗ ಅದರ ಭಾವನೆಯನ್ನು ನಾನು ಅರ್ಥೈಸಲೇ ಇಲ್ಲ, ಅದೇನೊ ನನ್ನ ದೇಹಗಳೇ ಕಂಪಿಸಿತ್ತು , ಕಿಚ್ಚೋ, ಮತ್ಸರವೋ ಗೊತ್ತಿಲ್ಲ ನೀನು ನನ್ನ ಆಸ್ತಿ ಅನ್ನುವುದಷ್ಟೆ ಆ ಕಂಪನದ ಸಾರಾಂಶ. ಅಡಿಕೆಯ ಗರಿಯಲ್ಲಿ ನಿನ್ನ ಎಳೆದುಕೊಂಡು ಹೋದಾಗ ನಾನು ಬಿದ್ದರೊ ನಿನಗೆ ನಗು ತಡೆಯಲಾಗಲಿಲ್ಲ, ನನ್ನ ಕೈ ಅಂಚಿನಲ್ಲಿ ಸ್ವಲ್ಪ ರಕ್ತ ಸೋರಿದಾಗ ನೀ ಅತ್ತಿದ್ದು ನಾ ಮರೆತಿಲ್ಲ, ಎಟುಕದ ನೆಲ್ಲಿಕಾಯಿಗೆ ಹೆಗಲ ಮೇಲೆ ಕೊರಿಸಿ ಎಟುಕಿಸಿದ್ದೆ ಅಲ್ಲಿ ನೆಲ್ಲಿಕಾಯಿಯ ಯಜಮಾನಿ ಅಟ್ಟಿಸಿಕೊಂಡು ಬಂದಿದ್ದು ಎಲ್ಲವೊ ಈಗ ಕವನದ ಸಾಲುಗಳಿಗಷ್ಟೇ ಸೀಮಿತ, ನೀನು ವೇದಿಕೆಯಲ್ಲಿ ಹಾಡಿದ ಮೊದಲು ನನ್ನಲ್ಲೇ ಬಂದು ಹೇಗೆ ಹಾಡಿದೆ ಎಂದಾಗ ಉಸಿರಾಟವೇ ನಿಂತ ಹಾಗಿತ್ತು, ಆದರೊ ತಮಾಷೆಗೆ ಪ್ರೀತಿಯೇ ಚನ್ನಾಗಿ ಹಾಡಿದ್ಲು ಅಂದಾಗ ನೀನು ಇಡೀ ರಾತ್ರಿ ಅತ್ತಿದ್ದೆ ಅನ್ನೊದು ಮೊರು ದಿನಗಳ ನಂತರದ ಬೇಟಿಯಲ್ಲಿ ಅರ್ಥವಾಗಿತ್ತು. ಎಲ್ಲರೊ ಸ್ನೇಹದಲ್ಲಿ ಇರಬಹುದು ಆದರೆ ನಮ್ಮ ಸ್ನೇಹದ ಬದುಕು ನನಗೇನೋ ವರ್ಣಿಸಲಾಗದು ಅನ್ನುವಷ್ಟಿತ್ತು, ನಾನು ನಿನ್ನಲ್ಲಿ ಯಾವ ಕನಸನ್ನು ಮೊಡಿಸಿದೆನೋ, ನನ್ನ ಯಾವ ನೆರಳು ನಿನಗೆ ಇಷ್ಟವಾಯಿತೋ ನನಗಂತೊ ಗೊತ್ತಿಲ್ಲ, ಆದರೆ ನಿನ್ನ ನಗು, ನಡಿಗೆ , ಮನಸ್ಸು, ಪ್ರತಿ ನೆರಳೊ ನನಗಿಷ್ಟ, ನೀನು ಸ್ವಲ್ಪ ಎತ್ತರವಾದಾಗ ನನ್ನ ಕನಸುಗಳ ಮನೆಯ ಬಾಗಿಲುಗಳೊ ಎತ್ತರವಾಗಿದ್ದು ನನಗೆ ತಿಳಿಯಲೇ ಇಲ್ಲ, ನೀನು ಮತ್ತೊ ಎತ್ತರವಾದಾಗ ನಿನ್ನ ನಡತೆಯ ತಂತಿ ಮತ್ತೊಬ್ಬರಿಂದ ಮೀಟಲ್ಪಡುತ್ತದೆ ಅನ್ನೋದು ನಾನು ಕಣ್ಣಿಂದ ನಂಬಲಾಗದ ಸತ್ಯ, ಅಂಗಾಗಗಳೊ ಅದು ನೀನಲ್ಲ ಅನ್ನೋದನ್ನ ಸಾರಿ ಸಾರಿ ಹೇಳಿತ್ತು, ಆದರೆ ಮನಸ್ಸು ಮಾತ್ರ ನಿನ್ನ ನಗುವನ್ನು ಕಂಡುಹಿಡಿಯುವಲ್ಲಿ ಸೋಲಲಿಲ್ಲ, ನಾನು ನನ್ನದು ಎಂದಿದ್ದ ನಿನ್ನ ಕೈ ಪರರನ್ನು ಎಳೆದುಕೊಂಡು ಬರುವಾಗಲೇ ತಿಳಿದಿತ್ತು ನೀನು ನನ್ನವಳಲ್ಲ ಅನ್ನೋದು, ನಿಂತಲ್ಲೇ ನಿಮ್ಮಿಬ್ಬರನ್ನು ಹಾರೈಸಿದೆ ಸುಖವಾಗಿರಿ ಎಂದು. ನನ್ನ ಮನದಲ್ಲಿ ಬತ್ತಿದ ಬಾವಿಯ ಕಥೆಯನ್ನು ನನ್ನ ಸಹೋದರಿಯಲ್ಲಿ ಬಿತ್ತುತ್ತಿದ್ದೆ, ನನ್ನವಳಾದ ನೀನು ವಿವಾಹವಾಗಿ ಸುಖವಾಗಿದ್ದಿ ಅನ್ನೊ ಪದಕ್ಕೆ ಸಹೋದರಿಯ ಕಣ್ಣುಗಳಲ್ಲಿ ವಿಶೇಷವಾದ ಉದ್ವೇಗ ವ್ಯಕ್ತವಾಗಿತ್ತು, ಇಲ್ಲ ಆಕೆಗೆ ಮದುವೆಯಾಗಿಲ್ಲ ಅಂದಾಗ ನಾನು ನೋಡಿದ್ದು ಕನಸು ಎಂದು ಸುಮ್ಮನಾದೆ,
ಆದರೆ ನಿನ್ನ ನನ್ನ ಮತ್ತೊಂದು ಬೇಟಿ ಕಾಲದೊಳಗಿನ ಬದುಕು ಹೊವನ್ನೊ ಮುಳ್ಳಾಗಿಸುತ್ತದೆ ಅನ್ನುವುದನ್ನು ನನಗೆ ನಿನ್ನ ಮೊಲಕ ತೋರಿಸಿಕೊಟ್ಟಿದೆ. ಹೇಗಿರುವುದೆಲ್ಲ ಹೇಗಾಗುತ್ತದೆ, ಬಾಳಿನಲ್ಲಿ ಬೆತ್ತಲೆಯಿದ್ದಾಗ ಅದು ಬಾಲ್ಯ, ಬಾಲ್ಯದ ನಂತರವೊ ಬೆತ್ತಲೆಯಾದರೆ......?

Thursday, January 13, 2011

ಮೌನ ಮನಸ್ಸು........

ಬಾಲ್ಯದ ಬಾಳು....ಕುಡ್ಲನ ಗೋಳು...
ಮೊರು ನಿಮಿಷಗಳ ಕವನ...........ಎರ್ರಾ ಬಿರ್ರಿ ಮೌನ ಮನಸ್ಸಿನ ಚುಂಬನ..

ಕನಸ್ಸೆಂಬ ಹಳ್ಳದಲ್ಲಿ...ಹೊಲಸ್ಸೆಂಬ ಕೆಸರಿನಲಿ..
ಕುಸುರಿ ಕುಮಿರಿದ್ದ ಬಾಲ್ಯದ ಬುಗ್ಗೆಯಲಿ..
ನಾರಿ ನಾರುತ್ತಿತ್ತು... ಮನದ ಬುಗರಿ ಗರಗರಿದಿತ್ತು..
ಅದಾಗ ವಯಸ್ಸಿಗೆ ತಕ್ಕ ಕನಸ್ಸು... ಅರ್ಥವಿಲ್ಲ ಪರ್ಥವಿಲ್ಲ
ಸಿಂಬಳ ಜಾರುತ್ತಿತ್ತು... ನಾಲಗೆ ನೇವರಿಸಿತ್ತು..
ಗಾದೆಯಲ್ಲ,,,ಬಾದೆಯಿಲ್ಲ..ಬಾಲ್ಯವೊಂದು ಮೌನಮನಸ್ಸು...

ಮುಂಜಾನೆ ಕಾಟಾಚಾರಕ್ಕೆ ಹಲ್ಲುಜ್ಜಿ ಅರೇಬರೆ ಸ್ನಾನ..
ಬೆತ್ತಲೆ ಇದ್ದರೊ ಹೆದರಲಿಲ್ಲ..
ನೋಡಿ ನಗುವರೆಂಬ ಬಯವಿಲ್ಲ..
ಒತ್ತಾಯಕ್ಕೆ ಎರಡು ದೋಸೆ,,,
ಹಸಿವಿಲ್ಲದಿದ್ದರೊ ಹಟಕ್ಕೆ ಇನ್ನೊಂದು ಬೇಕಿತ್ತು..
ಗೆದ್ದು ತಿನ್ನುವ ಬದಲು ಕದ್ದು ತಿಂದರೆ ಹೊಟ್ಟೆ ತುಂಬಿದ ಅನುಭವ..

ಅಂಗನವಾಡಿಗೆ ಹರಿದ ಜೋಳಿಗೆ ಒಡೆದ ಸ್ಲೇಟು...
ಚಡ್ಡಿಯಲ್ಲಿ ಮುರಿದು ನೊರಾಗಿದ್ದ ಕಡ್ಡಿ....
ಬೆಲ್ಲದ ಮುಚ್ಚಳದಲ್ಲಿ ಈಚಲ ಗರಿಯಿಂದ
ಕಿರಕಿರನೆ ತಿರುಗುವ ಗಾಡಿಯಲ್ಲೇ
ಅಂಗನವಾಡಿಗೆ ಮೌನ ಮನಸ್ಸಿನ ಪಯಣ

ಅದು ಬರೆಯಲೂ ತೋಚದ ಅಶ್ವತ್ಥಪುರದ ಅಂಗನವಾಡಿ..
ಸುತ್ತಲೂ ಕಮಿನಿಸ್ಟ್ ಪೊದೆ..
ಗಂಟೆ ಹತ್ತಾದರೆ ಪೊದೆಗೆದೆ ಕೊಟ್ಟು ಸಾರ್ವಜನಿಕ ಸೂ...ಸೂ
ಎತ್ತಿ ಏರಿಸಿದರೆ .... ನೆತ್ತಿ ಬೇರುತ್ತಿತ್ತು...
ಮೌನ ಮನಸ್ಸಿನ ಜೋಳಿಗೆಯಲ್ಲಿ ಮರಿಯಾದೆಯ ಬಣ್ಣವೇ ಇರಲಿಲ್ಲ..

ಬೆತ್ತಕ್ಕೆ ಹೆದರಿ.... ೧..೨..೩...೪... ಅ ಆ ಇ ಈ ಗೆ ಗಂಟೆ ಹನ್ನೆರಡಾಗಿತ್ತು..
ಸಜ್ಜಿಗೆ ಉಂಡೆಗೆ ಕಾದರೊ ಸುಮ್ಮನೆ ತಿಂದರೆ ಸಾಕಿಲ್ಲ..
ಮೊತಿಗೆ ಮೆತ್ತಿ ಪೋಸುಕೊಡಬೇಕಿತ್ತು...
ಒಂದೇ ಅಂಗಿ.... ನೋರೆಂಟು ಹೊಲಿಗೆ...
ಹುಕ್ಕಿಲ್ಲದ ಚಡ್ಡಿ ಸದಾ ಕೈಯ್ಯ ದಾಸತನದಲ್ಲಿತ್ತು...

ಗಂಟಲು ಒಣಗಿದರೆ ಸುಮ್ಮನೆ ನೀರು ಕುಡಿಯಲಿಲ್ಲ
ಬಟ್ಟೆ ಒದ್ದೆಯಾಗದಿದ್ದರೆ ಮನಸ್ಸಿಗೆ ಸಮ್ಮತಿ ಇಲ್ಲ...
ಉರಿವ ಬಿಸಿಲಿನಲ್ಲೇ ಕುಣಿದಾಡುತ್ತಿದ್ದೆ...
ಬೆವರು ಕಿತ್ತು ಘಂದವಾಗಿತ್ತು..!
ಮಧ್ಯೆ ಹೆಬ್ಬೆರಳಲ್ಲಿ ಎಳೆಯೊದರಲ್ಲೂ ಒಂದು ಗತ್ತು..!

ವಯಸ್ಸು ಐದಾದಾಗ ದೊಡ್ಡ ಶಾಲೆಗೆ ಹೋಗೊ ಹುಮ್ಮಸ್ಸು...
ಅದು ಶ್ರೀ ವಾಣಿ ವಿಲಾಸ ಹಿರಿಯ ಪ್ರಾಥಮಿಕ ಶಾಲೆ ಅಶ್ವತ್ಥಪುರ...
ಗೇಟಿನ ಎರಡೊ ಇಕ್ಕೆಲದಲ್ಲಿ ಗಾಳೀ ಮರ..
ಪಕ್ಕದಲ್ಲಿ ಬಾವಿ.... ಈಚಲ ತೋಪು...

ಕಾಣುವಂತೆ ಕಾಣದಂತೆ ಒಂದು ಜೋಪಡಿ
ಅದು ಅಣ್ಣಿ ಶೆಟ್ಟರ ಗೂಡಂಗಡಿ...
ಗ್ಲಾಸಿನ ತುಂಬ ಅನ್ನಾರಕಲ್ಲಿ... ನೀರೊರಿಸುವ ಪೆಪ್ಪರ ಮಿಠಾಯಿ..
ಬಾಳೇ ಗೊನೆಯಂತೆ ಹಳದಿ ಬೋಟಿ
ಕೈಯಲ್ಲಿ ಸಿಕ್ಕಿಸಿದರೆ ಅದರ ರುಚಿಗಿಲ್ಲ ಸಾಟಿ....

ಗಂಟೆ ಬಡಿಯಲು ಒಂದು ತುಂಡು ರೈಲು ಕಂಬಿ
ನಾನು ಬಡಿಯುತ್ತೇನೆಂದು ಹಟ ಹಿಡಿದಿದ್ದೆ..
ಎಟುಕಿಸಿದರೆ ಬಡಿ ಎಂದು ಟೀಚರ್ ನಕ್ಕಿದ್ದರು
ನಗು ನೋಡಿ ಸ್ನೇಹಿತನ ಹೆಗಲು ಹತ್ತಿ ಹೊಡೆದೆ
ಗಂಟೆ ತಂತಿ ಸಡಿಲಾಗಿ ತಲೆಗೆ ಉರುಳಿತ್ತು.....

ಪಿಜಿನ ಎಂಬವನು ನಮ್ಮ ಊರಿನ ಬುಟ್ಟಿ ನೇಯುವಾತ
ಶಾಲಾ ಅಂಗಳದಲ್ಲೇ ಅವನ ಬಹುದಿನಗಳ ವಾಸ
ವಿದಿಗೆ ಶರಣಾಗಿ ಅಂಗಳದಲ್ಲೇ ಪ್ರಾಣ ಬಿಟ್ಟಿದ್ದ..
ದೆವ್ವವಾಗಿದ್ದಾನೆಂದು ಭಯದ ಆಯುದ ಹಿಡಿದೆ
ನಂತರ ಹುಡುಗಿಯರ ಬುತ್ತಿಯೊ ನನ್ನದೆ...!

ಮೊದಲ ತರಗತಿ ಕನ್ನಡವಾಗಿತ್ತು...
ಮೌನಮನಸ್ಸು ಮೌನವಾಗಿತ್ತು..ತುಂಟಾಟಿಕೆ ಮೊಕವಾಗಿತ್ತು..
ನಗು ನಗುತ್ತಾ ಬಂದರು ಪ್ರಮಿಳಾ ಟೀಚರ್...
ಅಂಗಿ ಗುಂಡಿ ಮೇಲೆ ಕೆಳಗಿದ್ದರೊ......
ದೇಹ ಮಣ್ಣು ಮೆತ್ತಿದ್ದರೊ... ಅಲ್ಲಿಲ್ಲಿ ಗಾಯದ ಅಚ್ಚಿದ್ದರೊ..
ಎತ್ತಿ ಮುದ್ದಾಡಿದ್ದು...ಮರೆಯಲಾಗದ ಕ್ಷಣ...
ಅಂದು ಹಾಡಿಸಿದ್ದು..
ನನ್ನ ನವಿಲೆ ನನ್ನ ನವಿಲೆ ಬಾರೆ ಇಲ್ಲಿಗೆ...
ಅಂಕು ಡೊಂಕು ಹೆಜ್ಜೆ ಹಾಕಿ ಹೊರಟೆ ಎಲ್ಲಿಗೆ..

ಗಡಿಯಾರದಲ್ಲಿ ಎರಡೇ ಸಮಯ ಇಷ್ಟವಾಗಿದ್ದು
ಮದ್ಯಾಹ್ನ ಒಂದು...ಸಂಜೆ ನಾಲ್ಕು..
ಒಂದು ಊಟ... ನಾಲ್ಕು ಆಟ...
ಹೊಸ ನೀಳಿ ಬಿಳಿ ಬಟ್ಟೆ ತೆಗಿಸಿದ್ದರು...
ಜಾರು ಬಂಡಿ ಜಾರಿದೆ... ಮೊದಲ ದಿನವೇ ಹಳೆಯದಾಯಿತು
ಚಡ್ಡಿಯಲ್ಲಿ ತೂತಿಲ್ಲದಿದ್ದರೆ ಕನ್ ಫರ್ ಟೇಬಲೇ ಇಲ್ಲ...

ನಾಲ್ಕನೇ ತರಗತಿಯಲ್ಲೊಮ್ಮೆ
ಇನ್ಸ್ ಪೆಕ್ಟರ್ ಬಂದಿದ್ರು...
ಬಡ್ದಿಮಗ ನಾಕ ನಾಕ ಎಷ್ಟು ಅಂತ ಕೇಳಿದ್ದ
ಕನಕ ಇವತ್ತು ರಜಾ ಅಂದಿದ್ದೆ....
ಟೀಚರ್ ಕ್ಲಾಸ್ ತೊಕೊಂಡಾಗ್ಲೆ ಗೊತ್ತಾಗಿದ್ದು ಅವ್ನು ಮಗ್ಗಿ ಕೇಳಿದ್ದು ಅಂತ..

ಐದನೇ ತರಗತಿಯಲ್ಲಿ ಇಂಗ್ಲಿಷ್ ಶುರುವಾಯ್ತು
ಸಂಜೆ ಅಜ್ಜಿಹತ್ರ ಟಸ್ಕ್ ಪುಸ್ಕ್ ಅಂದಾಗ ಮಂಕಾಗಿದ್ದರು..
ಮತ್ತೆ ಆರನೇ ತರಗತಿಯಲ್ಲಿ ಶುಚಿತ್ವ ಮಂತ್ರಿಯಾಗಿದ್ದೆ,,,
ತರಗತಿಯೊಳಗೇ ಉಗಿದಾಗ ಕಂತ್ರಿಯಾಗೋದೆ...

ಬಂತು ಮೊದಲ ಸಾರಿ ಸ್ಕೂಲ್ ಡೇ..
ಹೇಗೊ ಕಾಡಿ ಬೇಡಿ ಅವಕಾಶ ಗಿಟ್ಟಿಸಿಕೊಂಡಿದ್ದೆ
ಅಂದು ಸಡಗರವೋ ಸಡಗರ
ನನ್ನ ಕಾಕ ಪೂಕ ನ್ರತ್ಯಕ್ಕೆ ಟೀಚರ್ ಶಬಾಶ್ ಅಂದಿದ್ರು
ಅಂದು ರಾತ್ರಿ ಟೀಚರ್ ಏನೋ ಒಂತರಾ.. ಕನಸಲ್ಲೇ ಕಾಡಿದ್ರು..

ಏಳನೇ ತರಗತಿ ದೊಡ್ಡ ಶಾಲೆಯ ಅಂತ್ಯ ಘಟ್ಟವಾಗಿತ್ತು..
ಪ್ರೇಮ ಪತ್ರ ಬರೆಯುವ ಧೈರ್ಯ ಮಾಡಿದೆ...
ಆದರೆ ಬರೆದ ಪತ್ರಗಳೀಗೆ ಕಸ್ಟಮರೇ ಇರಲಿಲ್ಲ
ಅಂತಹ ಬಾಗ್ಯ ಯಾರೊ ಪಡೆದು ಬಂದಿಲ್ಲ ಎಂದು ಗೊಣಗುತ್ತಾ
ಸ್ವ ಸಮಾದಾನದೊಡನೆ ಸುಮ್ಮನಾದೆ..

ಅದು ಕೊನೇಯ ದಿನ
ನನ್ನ ಕನಸಿನ ರಾಣಿ ಕೆನ್ನೆ ಮುಟ್ಟಿದ್ದಳು
ರಾಣಿ ಜೊತೆಗೆ ಶಾಲೆ ಬಿಟ್ಟು ಹೋಗಲು ಅಳು ಬಂದಿತ್ತು..
ಅಳು ನೋಡಲಾಗದೆ ನನ್ನವಳು ಅಣ್ಣಾ ಅಂದಳು...!
ಮತ್ತೆ ಶಾಲೆ ಬಿಡಲು ಬೇಸರವಾಗಲಿಲ್ಲ..

ಪೊಟೋ ತೆಗೆಯಲು ಕರೆದಿದ್ದರು
ಈ ವರೆಗೆ ತಲೆ ಬಾಚದಿದ್ದರೊ ಆಗ ಮನಸ್ಸು ಮಾಡಿದ್ದೆ..
ಒಂದರ ಮೇಲೊಂದು ಬೆಂಚು ಪೇರಿಸಿ
ಮೊರು ನಾಲ್ಕು ಬಾರಿ ಕ್ಲಿಕ್ಕಿಸಿದರು..
ಚಿತ್ರದಲ್ಲಿ ನನ್ನ ಕೈ ಟೀಚರ್ ಹೆಗಲಲ್ಲಿತ್ತು..
ಮಾಸ್ಟರ್ ಬೆತ್ತದೊಡನೆ ಬಂದಾಗ...
ಟೇಚರ್ ಕಾಲು ಹಿಡಿದು ಅಮ್ಮಾ ಆಶೀರ್ವದಿಸಿ ಎಂದು ಅಂತ್ಯ ನೀಡಿದೆ..!

ಬೀಳ್ಕೊಡುಗೆಯ ನಂತರ ಗೇಟು ದಾಟುತ್ತಾ
ಒಮ್ಮೆ ಹಿಂತಿರುಗಿದಾಗ ಎಲ್ಲಾ ನೆನಪುಗಳು ಎದೆಗೆ ಚುಚ್ಚಿತ್ತು..
ಮೊಕವಾಗಿತ್ತು ಕನಸ್ಸಿನೊಡಗಿನ ಮೌನ ಮನಸ್ಸಿನ ಗೋಳು
ಮುಗಿದು ಹೋಗಿತ್ತು ನೆನಪಿನೊಳಗಿನ ಬಾಲ್ಯದ ಬಾಳು.....

Friday, November 26, 2010

ಮುಂಜಾನೆಯ ಬೆಳಕಿನಲ್ಲೊಂದು...ಪ್ರೀತಿಯ ಸತ್ಯ ಕಥೆ..!


ಅವನು ಕೇವಲ ೨೦ ರೊಪಾಯಿ ಹಿಡ್ಕೊಂಡು ಬೆಂಗಳೊರಿಗೆ ಬಂದನಂತೆ ಅದರಲ್ಲೊ ೧೦ ರೊ ಮಂಗಳ ಮುಖಿಯರ ಪಾಲಾಯಿತು... ಎತ್ತ ನೋಡಿದರೂ ದಿಕ್ಕೇತೋಚುತ್ತಿಲ್ಲ... ಏನೂ ಕಾಣದ ಮುಂಜಾನೆಯ ತುಸು ಕತ್ತಲಲ್ಲಿ ಹಾಗೇ ಕತ್ತು ಎತ್ತಿದಾಗ ಇದು ಮೆಜೆಸ್ಟಿಕ್ ಬಸ್ಸು ನಿಲ್ದಾಣ ಎಂಬ ಅರಿವಾಗಿತ್ತು ... ಯಾರೂ ಗೊತ್ತಿಲ್ಲ ಅಪ್ಪ ಅಮ್ಮ ಇಲ್ಲ ಬಂದು ಬಳಗವಿಲ್ಲ... ಸ್ನೇಹಿತರಿಲ್ಲ.... ಮುಂದೇನು ಎಂದು ಮುಂದೆ ನೋಡಿದಾಗ.... ತನ್ನ ದಾವಣಿಯನ್ನು ಮತ್ತೆ ಮತ್ತೆ ನೆಲಕ್ಕೆ ತಾಗೋದನ್ನುತಡೆಯುತ್ತಿದ್ದಳು... ಹರಿದಾಡುತ್ತಿದ್ದ ಕೂದಲನ್ನು ಕೈಯಿಂದ ಬಾಚುತ್ತಿದ್ದಳು ಬಿಂದು..! ಇಬ್ಬರ ನೋಟವೊ ಒಂದೇ ತರಂಗದೊಡನೆಬೆರೆತಾಗ ಪರಸ್ಪರ ಮಾತುಕತೆಗಳ ಮಿಲನವಾಯಿತು. ಆಕೆಗೂ ಸ್ವಲ್ಪ ಏನೋ ಹೊಸದಾಗಿತ್ತು... ಯಾರು ಏನು ಎಂಬುದರ ವಿಚಾರಣೆ ಮಾಡಿದಾಗ ತಿಳಿದಿತ್ತು ಆತನ ಬಡತನದ ಹಸಿವಿನ ಬೇಗೆ.... ಓದುವುದು ಕನಸಾದರೂ... ಕನಸಾಗಿಯೇ ಉಳಿದಿತ್ತು .... ಅವನ ಮನದಾಳದ ಮಾತು ಕೇಳಿದ ಬಿಂದು ಒಬ್ಬ ಗಂಡು ಎಂಬುದನ್ನೊ ಉತ್ತಮ ಮನದ ಬಾವನೆಗಳ ಜೊತೆಗೆ ಅಳಿಸಿ... ಅವಳ ಮನೆಗೆ ಕರೆದೊಯ್ದಳು.... ಅವರ ಮನೆಯಲ್ಲೊ ಇಬ್ಬರೇ ಇದ್ದರೂ! ಸೋದರನ ಪ್ರಶ್ನೆಗೆ.... ಗೆಳೆಯನ ಗೆಳೇಯ ಎಂಬ ಉತ್ತರವಿಟ್ಟಳು.... ಹಾಗೇ ದಿನಗಳು ಉರುಳುತ್ತಾ...ಬಾವನೆಗಳು ಬೆಳೆಯುತ್ತ....ಆತನ ಬಾಳಿನ ದೀಪವಾದಳು ಬಿಂದು....ಅವನ ಕನಸಿಗೆ ಸುಂದರ ಚಂದಿರನ ಬೆಳಕನ್ನು ಕೊಟ್ಟಳು.... ಅವಳ ಪ್ರೇರಣೆ ಬಾಡಿದ ಹೂವಿಗೆ ನೀರುಣಿಸಿದಂತಿತ್ತು...ಹಸಿದು ಅಳುವ ಕಂದನಿಗೆ ಅಮ್ಮ ಹಾಲುಣಿಸಿದಂತಿತ್ತು........... ಅವರಿಬ್ಬರ ಒಂಟಿ ತನದ ಬೇಟಿ... ಜೀವನದ ಕನಸು ತುಂಬುವ ನಗುವಾಗಿತ್ತು... ಅವಳು ಚಿಕ್ಕ ವಿಷಯವನಿತ್ತು ತರ್ಕಿಸುವಾಗ...ತನಗೇನೂ ಸಂಬಂದವಿಲ್ಲವೆಂಬಂತೆ...ಗೆಲುವು ನಿನ್ನದೇ ಎನ್ನುತ್ತಿದ್ದ... ಅವನ ಆ ಒಂದು ಸಾರಿ ಮುದುಡಿದ ಗಲ್ಲ ಬಿಂದುವಿಗೆ ಅವನ ಸುಂದರ ಮನೆತನದ ಮನಸ್ಸನ್ನು ಅರ್ಥೈಸಿತ್ತು... ಮಧ್ಯೆ ದಾರಿಯಲ್ಲಿ ಆಕೆಯಚಪ್ಪಲಿ ಹರಿದಾಗ... ಅವಳ ಚಪ್ಪಲಿಯೇ ಪಾದವೆಂಬಂತೆ ಎರಡೊ ಕೈಗಳಿಂದ ಎತ್ತಿ ಪೌಣಿಸುತ್ತಿದ್ದ.... ಪದೇ ಪದೇ ಬಿಂದುವಿನ ಪಾದವನ್ನೇ ನೋಡಿದ...ಒಮ್ಮೆ ಮುಟ್ಟಿ ನಮಸ್ಕರಿಸಲೆಂಬ ಆಸೆ.... ಹಾಗೇನಾದರೂ ಮುಟ್ಟಿದರೆ ಚಪ್ಪಲಿ ಮತ್ತೆ ಹರಿಯುವುದೇನೊ ಎಂಬ ಭಯ.. ಆದರೂ ಕೆಲವೊಮ್ಮೆ ಅಂತೆ ಕಂತೆಗಳೊಂದಿಗೆ ಮುಟ್ಟಿ ನಮಸ್ಕರಿಸಿದ್ದೊ ಇದೆ...ಆದರೆ ಅದು ಬಿಂದುವಿಗೆ ಗೊತ್ತಾಗದಿರಲಿಲ್ಲ.... ಇಬ್ಬರೊ ನಗು ನಗುತ್ತಾ... ದಿನ ಕಳೆದದ್ದು ಗೊತ್ತಾಗಲೇ ಇಲ್ಲ... ಅಲ್ಲಿಯವರೆಗೆ ಸ್ನೇಹವಿತ್ತು....ಸ್ನೇಹ ನಗುವಿಗೆ ಕಾರಣವಾಗಿತ್ತು.... ಏನೂ ತಿಳಿಯದೇ ಬಿಂದುವಿನ ಮನದೊಳಗೆ ಪ್ರೀತಿಯ ಬಿಂದುವಿನ ಹಳ್ಳವಾಗಿತ್ತು..... ಹಾರುವ ಕೂದಲುಗಳು ದಿಕ್ಕು ಬದಲಾಯಿಸಿತ್ತು... ಆಲೋಚನೆಗಳ ಕಂತು ಕುಮಿರಿತ್ತು... ಹುರುಪು ಬಾಡಿತ್ತು.... ಚಲನ ವಲನ ಮೆಲ್ಲಗೆ ಮೆಲ್ಲವಾಯಿತು... ಮಾತು ಮೆಲ್ಲುತ್ತಿರಲಿಲ್ಲ.... ಹೇಗೋ ನನ್ನ ಪ್ರೀತಿಯನ್ನು ಮುಚ್ಚಿಡದೇ ಅವನಲ್ಲಿ ಹೇಳುವ ಬಯಕೆಯಾಯಿತು...ಬಿಂದುವಿನ ಪ್ರೇರಣೆಯಿಂದ ಅದಾಗಲೇ ಅವನು ಇಂಜಿನೀಯರಿಂಗ್ ಇನ್ನಿತರ ಕೋರ್ಸುಗಳಿಂದ ಹೊರಬಂದಿದ್ದ.... ಅವನ ಮೊದಲ ೨.೩೦ ಸಾವಿರ ಸಂಬಳ ೩೦೦೦೦ಕ್ಕೆ ಏರಿತ್ತು... ಅದೀಗ ೫೦ ಸಾವಿರಕ್ಕಿಂತಲೂ ಮೇಲಿದೆ.....
ಬಿಂದುವಿನ ಪ್ರೀತಿ.. ಮನದಲ್ಲಿ ಬೀಸುವ ಗಾಳಿಯಾಗಿತ್ತು...ಗಾಳಿ ಹೊರ ಬಂದರೂ ಪ್ರೀತಿ ಹೊರ ಬರಲಿಲ್ಲ.... ಅದಾಗಲೇ ಎಲ್ಲವೂ ಮುಗಿದು ಉತ್ತಮ ಇಂಜಿನೀಯರಿಂಗ್ ವಿಧ್ಯಾಬ್ಯಾಸದಿಂದ ಕೆಲಸದ ನಿಮಿತ್ತಾಗಿ ಆತನಿಗೆ ಬೇರೆಡೆಗೆ ಟ್ರಾನ್ಸ್ ಫರ್ ಆಗಿತ್ತು....
ಆತನ ಮನದಲ್ಲಿ ಪ್ರೀತಿ ಇತ್ತೊ..ಅಥವ ಇದ್ದೊ ಕುರುಡಾಗಿತ್ತೊ ಗೊತ್ತಿಲ್ಲ... ಇದ್ದ ಪ್ರೀತಿ ಯಾವ ಭಾವನೆಯನ್ನು ಹೋಲುತ್ತಿತ್ತು ಅನ್ನುವುದನ್ನು ತಿಳಿಯೋ ಪ್ರಯತ್ನದ ಗೋಜಿಗೆ ಬಿಂದು ಹೊಗಲಿಲ್ಲ...
ಪೊಣೆಯಲ್ಲಿ ನೆಟ್ವರ್ಕ್ ಇಂಜಿನೀರಿಂಗ್ ಕೆಲಸದಲ್ಲಿ ತೊಡಗಿದ್ದ ಆತ ಶಿಲ್ಪ ಎಂಬ ಹುಡುಗಿಯೊಂದಿಗೆ ಪ್ರೀತಿಯ ದೋಣಿಯಲ್ಲಿಮುಳುಗಿದ್ದ... ಇಬ್ಬರೂ ಪರಸ್ಪರ ಪ್ರೇಮಿಗಳಾದರು...... ಅವರಿಬ್ಬರ ಮೊರು ಕನಸು ... ನೂರರ ಅಂಚಿನಲ್ಲಿತ್ತು...
ಈ ವಿಷಯವನ್ನು ಮೊದಲು ಬಿಂದುವಿಗೆ ಹೇಳುವ ಬಯಕೆ ಅವನದಾಗಿತ್ತು.. ಮುಂದಿರುವ ಹೊವು ನನ್ನದೇ ಅನ್ನೋದು... ಬಿಂದುವಿನ ಕನಸಿನ ಕಲ್ಪನೆಯಷ್ಟೇ... ಅದು ತನ್ನ ಬೇರನ್ನೇ ಬದಲಾಹಿಸಬಹುದು ಎಂಬೋದನ್ನು ಊಹಿಸುವುದೂ ಅವಳ ಅನುಭವಕ್ಕೆಬಂದಿರಲಿಲ್ಲ...
ಇದೀಗ ಬಿಂದುವಿನ ಪ್ರೀತಿಯನ್ನು ಅರಿಯದ ಆತ ಆಕೆಯಲ್ಲಿ ತನ್ನ ಪ್ರೀತಿಯನ್ನು ಮೊದಲು ಹೇಳುವ ಆಸೆಯಲ್ಲಿ ನುಲಿಯುತ್ತಿದ್ದ..... ಆಕೆಯ ಬಗ್ಗೆ ಮೊದಲೇ ತಿಳಿದಿದ್ದರೂ ಇಂತಹ ವಿಷಯವನ್ನು ಈ ಹಿಂದೆ ಹಂಚಿಕೊಳ್ಳಲಿಲ್ಲವಾದ್ದರಿಂದ ಎಲ್ಲೋ ಓಂದು ಕಡೆ ಬುಡದಲ್ಲಿ ಅವಳ ಪ್ರತಿಕ್ರಿಯೆಯ ಬಗ್ಗೆ ತುಮುಲವಿತ್ತು...
ಇತ್ತ ಬಿಂದು ಆತನ ಪ್ರೀತಿಯ ಬಗ್ಗೆ ತಿಳಿಯದೆ ತಾನೇ ಕಟ್ಟಿಕೊಂಡ ಪ್ರೀತಿಯೆಂಬ ಕನಸಿನ ಕವನವನ್ನು ಅವನಲ್ಲಿ ಬಿತ್ತರಿಸುವಲ್ಲಿ ಹಾತೊರೆಯುತ್ತಿದ್ದಳು.. ಆತನ ನಯವಾದ ನೇರ ಮನಸ್ಸು ಬಿಂದುವಿಗೆ ಮೊದಲೇ ಗೊತ್ತಿದ್ದರಿಂದ....! ಆದರೂ ಎಲ್ಲೊ ಒಂದು ಕಡೆ ಕುತೂಹಲ...
ಮೊದಲ ಬೇಟಿಯಂತೆ ಇಬ್ಬರೂ ಒಂದೇ ಕಡೆ ಮುಂಜಾನೆಯ ಚಳಿಗೆ
ಕಪ್ಪು ಬಿಳುಪು ಹೊದಿಕೆಯಲ್ಲಿ ಮೈಯನ್ನು ಆವರಿಸಿಕೊಳ್ಳುತ್ತಾ... ಒಬ್ಬರಿಗೊಬ್ಬರು ಪ್ರೀತಿಯ ಸುಧೆಯ ಆಲಿಂಗನದಲ್ಲಿ ತೊಡಗಿದ್ದರು.... ಈಗ ಇಬ್ಬರ ಮನಸ್ಸು... ಒಂದು ರುಣವಾಗಿದ್ದರೆ ಇನ್ನೊಂದು ಧನವಾಗಿತ್ತು......... ಇಬ್ಬರ ಪ್ರೀತಿಯ ಅಪ್ಪುಗೆಯಲ್ಲೂ ಇಬ್ಬರ ಪ್ರೀತಿಯ ಅರ್ಥಗಳಿಗೂ ಎರಡು ಕವಲುಗಳಿತ್ತು.... ಬಿಂದು ಮತ್ತೆ ಮತ್ತೆ ಅಪ್ಪುಗೆಯನ್ನು ಬಿಗಿ ಮಾಡಿದಾಗ... ಅವನೂ ಬಿಗಿ ಮಾಡಿದ.. ಅಪ್ಪುಗೆಯ ಬಿಗಿಯಿಂದ ಮೈ ಬಿಸಿಏರಿದಾಗ ಆತನಿಗೆ ಬಿಂದುವಿನ ಜೊತೆ ಎಂದೊ ಆಗದ ಒಂದು ಕ್ಷಣದ ಅನುಭವವಾಯಿತು... ಬಿಂದು ಅಪ್ಪುಗೆಯ ಬಿಗಿಯನ್ನು ಮತ್ತೊ ಬಿಗಿದಾಗ....ಅವಳ ಬಾಯಿಯಿಂದ ... ಪ್ರೀತಿಯ ಮಾತು ಹೊರ ಬರಲಾರಂಭಿಸಿತು.... ಆಗ ಆತನೀಗೆ ತನ್ನ ತಪ್ಪಿನ ಅರಿವಾಗಿತ್ತು.... ದಿಡೀರನೆಬಿಂದುವನ್ನು ತನ್ನ ಅಪ್ಪುಗೆಯಿಂದ ಬೇರ್ಪಡಿಸಿ ... ದೂರ ನಿಂತು ನಡುಗಲಾರಂಭಿಸಿದ.. ಕಣ್ಣು ಕೆಂಪೇರಿತ್ತು... ಒಣಗಿದ ಭಾವನೆಗಳ ಕಣ್ಣೀರು ಉಕ್ಕುತ್ತಿತ್ತು.... ತುಟಿಗಳು ಕಂಪಿಸುತ್ತಿತ್ತು... ಆಗ ಅವನಿಗೆ ಬದಿಯಲ್ಲಿದ್ದ ಕಂಬವೇ ಆಸರೆ... ಆ ಆಸರೆಗೆ ಒರಗಿ ಮೆಲ್ಲಗೆ ಜಾರಿದ.... ಆತನ ಅಂಗಾಂಗಗಳ ಪ್ರತಿಕ್ರಿಯೆಯೇ ಬಿಂದುವಿಗೆ... ಅವನ ಮನದ ಮಾತುಗಳ ಸನ್ನೆಯನ್ನು ಮಾಡಿತ್ತು...
ಸ್ನೇಹವೂ
ಮುರಿಯಿತು... ಪ್ರೀತಿಯೊ ಮುರಿಯಿತು ಎಂದು ಆತ.............!
ಅವನ್ನಿಲ್ಲದ ಬದುಕನ್ನು ನೆನೆಯುತ್ತಾ ಬಿಂದು.....................................!
ಮೊರು ದಿನಗಳ ಬಾಳು ಮೂಕ ಬಾಳು...
ಇಲ್ಲಿ ಇವರಿಬ್ಬರೀಗೆ...ನಿಮ್ಮ ಕಿವಿಮಾತು ಏನು???????
....