Tuesday, July 27, 2010

ನೆನಪಿನ ಕನಸಲ್ಲಿ ನನ್ನವಳ ಮೊದಲ ಭೇಟಿ..

ಕನಸಿನಲ್ಲಿ ನನ್ನವಳ ಮೊದಲ ಭೇಟಿ ಹೇಗಿತ್ತು ಅಂತೀರಾ? ಅಬ್ಭಾ ಹೇಗೆ ಮರೆಯಲಿ ಹೇಳಿ! ಅಂದ ಹಾಗೆ ಎಲ್ರೂ ಅವರಪ್ರೇಯಸಿಯನ್ನು ಫಿಲಂ ಟಾಕೀಸ್ನಲ್ಲೋ ,ಪಾರ್ಕಿನಲ್ಲೋ ,ಬಸ್ ಸ್ಟಾಪ್ ನಲ್ಲೋ ನೋಡಿರ್ಬೋದು ! ಆದ್ರಾ ನನ್ ಕತೆ ಹಂಗಲ್ಲನೋಡ್ರಿ ! ನಾನು ಆಕೆನಾ ನೋಡಿದ್ದು ಯಾವುದೋ ಒಂದು ಪ್ರಪಾತದಾಗ..ನಾನು ಸನ್ನೊನಿರೋವಾಗ ಒಂದ್ಸಲ ನನ್ ಅಜ್ಜಿ ಮನೆಗೆಹೋಗಿದ್ದೆ .. ಊರು ಭಯಂಕರ ಕಾಡು,ರಸ್ತೆ ಬದಿಗೆ ಎರಡೂ ಕಡೆ ಪ್ರಪಾತ ಐತಿ.. ನಾನೂ ಹಾಲು ತೊಕೊಂಡು ರಸ್ತೆ ಮದ್ಯಾನಡೀತಾ ಬರ್ತಾ ಇದ್ದೀನಿ...ಅಬ್ಭಾ ಒಂದೇ ಸಲ ನಂಗೆ ಎದೆ ನಡುಗೋ ತರ ಶಬ್ದ ಬಂತು ..ನೋಡಿದ್ರ ಒಂದು ಸ್ಕೂಟಿ ಪೆಪ್ ನಾಗಒಂದು ಸನ್ನ್ ಹಡುಗಿ.. ಗಾಳಿನಾಗ ಬರ್ತಾ ಅವ್ಳೇ...ಅಬ್ಬ ನಂಗೆ ಅವ್ಳು ಬಾರೋ ಸ್ಪೀಡ್ ನೋಡಿನೇ ಗೊತಾಗ್ ಬಿಡ್ತು ..ಇವತು ನಮ್ಪ್ರಪಾತ ಏನು ಅದೃಷ್ಟ ಮಾಡೈತೆ ಅಂತಾ..ನಾನ್ ಅನ್ಕೊಂಡಿದ್ದೆ ತಡಾ..ಬಿದ್ದೋಯ್ತು ಕಣ್ರೀ ಅವ್ಳ ಸ್ಪೀಡು ಪ್ರಪಾತದೊಳಗ.. ನಾನೂಮನ್ಸ ಅಲ್ವೇನ್ರಿ ..ಪಾಪ ಕಾಣಿಸ್ತು ಹೋಗಿ ಬಗ್ಗಿ ನೋಡ್ದೆ .. ಅಯ್ಯೋ ಮೈ ಎಲ್ಲ ನಡುಗಕ್ಕ ಶುರುವಾಯ್ತು.. ಮೊದ್ಲು ಅವ್ಳ ಮೈ ಕೈನೋಡ್ದೆ ..ಚರ್ಮ ಎಲ್ಲ ಎದ್ದ್ ಬಂದಿತ್ತು..ಅದೆಲ್ಲ ರಕ್ತದಾಗ ತುಂಬಿತ್ತು..ರಕ್ತಾನು ತರಾ ಇರ್ತೈತೆ ಅಂತ ನಂಗೆ ಅವತ್ತೇ ಮೊದ್ಲುಗೊತ್ತಾಗಿದ್ದು ..ಆಗ್ಲೇ ನನ್ನ ಕಣ್ಣು ಆಕೆ ಮುಖ ನೋಡ್ತು ..ಅದೇನೋ ಗೊತಾಗಿಲ್ಲ ಅಳ್ತಾ ಇದ್ಲು ..ಅವ್ಳ ಗಲ್ಲ ನೋಡ್ದಾಗ ನಂಗೆಏನೋ ಅನ್ನಿಸ್ತು ಆದ್ರ ಸ್ತಿತಿನಾಗ ಏನಂತಾನೆ ಗೊತ್ತಾಗಿಲ್ಲ ..ಆಕೆ ತುಟಿ ಒಣಗಿತ್ತು ..ಅದೇನೋ ಇಂಗಿಶ್ನಾಗ ಹೆಲ್ಪ್ ಹೆಲ್ಪ್ ಅಂತಾಅಂದ್ಲು ..ಅವ್ಳ ಕೈ ನಾನ್ ಹಿಡ್ಕೋಬೇಕು ಅನ್ನೋತರ ಅವ್ಳ ಮನದ ಭಾವನೆ ನಂಗೆ ಅರ್ತ ಆಯ್ತು ...ಹಂಗೆ ಕೈ ಕೊಟ್ಟೆ ನೋಡ್ರಿಇವತ್ತು ಅಡುಗೆ ಮನೆಯಾಗ ನಂಗೇ ಅಡುಗೆ ಕಲಿಸ್ತಾವ್ಲೆ....
ಇನ್ನೂ ಶಾನೆ ಕತೆ ಐತೆ ..ಮುಂದಿನ ಸಂಚಿಕೆಯಾಗ ಮಾತಾಡೋಣ ..ಏನಂತೀರ ?..ನನ್ ಸ್ಟೋರಿ ಕೇಳಿ ನಗ್ ಬೇಡ್ರಿ..ಸ್ವಲ್ಪ ಕರುಣೆಇರ್ಲಿ ...
ಇಂತಿ ನಿಮ್ಮ
ಲೋಕು ಕುಡ್ಲ ...

No comments:

Post a Comment