ಕುಂದಿತೇಕೆ ಛಲವೆನ್ನ ಎದೆಯಾಳದಿಂದ
ಹಸಿದ ಹಂಬಲ ಉಕ್ಕಿ ಹರಿದು ಹೋಯಿತೇ
ಯಶಸ್ಸಿನ ಏಣಿ ಕಾಲ ಬುಡದಲಿರುವಾಗ
ಭಾವುಕತೆ ಏಕೆ? ನಿರಾಳ ಮನ ಮುದುಡಿತೇಕೆ.!
ಒಂದರಂತಿಲ್ಲ ಮತ್ತೊಂದು ಕೈ ಬೆರಳು
ಮುಷ್ಟಿಯಲೇ ಸಾಧಿಪ ಸಂಪತ್ತು ಇಹುದು
ಇಂದಿನಂತಿಲ್ಲ ನಾಳೆಯ ದಿನ ಕ್ಷಣಗಳು
ನಂಬಿಕೆಯೇ ನಾಳೆಯ ಯಶಸ್ಸಿನ ನೆರಳು.!
ಅಂತರಾಳದಿ ಇಹುದಲ್ಲ ಜ್ನಾನ ಪುಸ್ತಕ
ಮಸ್ತಕಕೆ ಏಕೆ ಛಲದ ಮತ್ತು ಹತ್ತೇರುತಿಲ್ಲ
ದೇಹವೇ ದೇಗುಲ ಅಂಗಾಗಗಳೇ ದೈವ
ಮತ್ತೇಕೆ ಗುರಿಯ ಸೇರಲು ಹೊತ್ತಾಗುತಿಲ್ಲ.!
ಬೆಳಕಿಹುದು ಅಂತರಂಗದಿ ಕತ್ತಲ ಸುತ್ತಲು
ಹೊರ ಜಗವ ಬೆಳಗಲೇಕೆ ಬೆಳಕು ಸಾಲುತಿಲ್ಲ
ಹಣೆಬರಹ ವಿಧಿ ನಿಯಮಗಳೆಂಬ ಜಗಕೆ
ಆಸೆ ಜೊತೆ ನಿರುತ್ಸಾಹದ ಸಮ್ಮಂದ ಹೋಲುತಿಲ್ಲ.!
ಭೂಮಿ ಕಡಲು ಬೆಳಕು ಗಾಳಿ ಸುತ್ತಲೆಲ್ಲ
ಖಾಲಿ ಹಾಳೆಯಲಿ ಮಿಂಚುವ ಕವನವಾಯಿತೀಗ
ಮೌನ ಮನದ ದಂಡೆಯಲಿ ಕುಳಿತು
ಬದುಕ ಸಿಹಿ ಕಹಿ ಭಾವನೆಗಳನು ಬರೆಯುವಾಗ.!
ಚೆನ್ನಾಗಿದೆ ಕವಿತೆ.
ReplyDeleteಧನ್ಯವಾದ ರವಿ ಸರ್... ಸದಾ ನಿಮ್ಮ ಪ್ರೋತ್ಸಾಹ ಪ್ರಚೊಧನೆಯ ಮಾತುಗಳು ಈ ಬರಹಕ್ಕೆ ಪ್ರೇರಣೆ....
DeleteNo you are improving... keep going :)
ReplyDeleteThank you Raghu Sir...
Deleteಅತ್ಯುತ್ತಮ ಮನೋ ವಿಕಸನ ಕವನ.
ReplyDeleteಆಶಯಗಳೆಲ್ಲವೂ ವಾಸ್ತವವಾಗಿವೆ.
ಶಾಲಾ ಮಕ್ಕಳಿಗೆ ಪ್ರಾರ್ಥನೆಯಂತೆಯೂ ಕಲಿಸ ಬಹುದಾದ ಕವನ.
ನನ್ನ ಬ್ಲಾಗಿಗೂ ಸ್ವಾಗತ.
www.badari-poems.blogspot.com
ಧನ್ಯವಾದ ಬದ್ರಿನಾಥ್ ಅವರೇ... ನಿಮ್ಮ ಬ್ಲಾಗ್ ಕಡೆಯೊ ಭೇಟಿ ನೀಡುತ್ತೇನೆ...
DeleteThis comment has been removed by the author.
ReplyDelete