ಈ ಚಿತ್ರದಲ್ಲಿ ಇರುವವರು ಯಾರು ಗೊತ್ತೇ..?? ಮತ್ತಾರೂ ಅಲ್ಲ ಮೊತ್ತ ಮೊದಲು ದುಬೈನಲ್ಲಿ ನಿರ್ಮಾಣವಾಗಿರುವ "ನಿರೆಲ್" ತುಳು ಚಿತ್ರದ ಮುಖ್ಯ ಹಾಸ್ಯ ಕಲಾವಿದರು ದೀಪಕ್ ಪಾಲಡ್ಕ ಮತ್ತು ಶುಭಾಶ್ ಬಂಗೇರ.. ಹೀಗೇ ದೀಪಕ್ ಕರೆ ಮಾಡಿ ನಾನೂ ಬೆಂಗಳೂರಿನಲ್ಲಿ ಇರುವೆ ಭೇಟಿ ಮಾಡಿ ಮಾರ್ರೆ ಸಿಗೋಣ ಅಂದಾಗ ಖುಷಿ ಆಯಿತು, ಆದರೂ ಮೈಸೂರಿನಲ್ಲಿದ್ದ ನಾನೂ ಓಡೋಡಿ ಬಂದೆ, ಅದ್ಯಾವುದೋ ವಿಜಯನಗರದ ಸ್ಕೂಲ್ ಅಂತೆ ಅದರ ಹತ್ತಿರ ಬಂದು ಫೋನ್ ಮಾಡಿ ಸಿಗುವೆ ಅಂದರು. ನಾನೂ ಬಸ್ ಹತ್ತಿಕೊಂಡು ವಿಜಯನಗರ ಕಡೆ ಹೊರಟೆ, ದೀಪಕ್ ಅಣ್ಣಾ.. ನಾ ಕ್ಯಾಮ್ ಬ್ರಿಡ್ಜ್ ಹೈ ಸ್ಕೂಲ್ ಹತ್ತಿರ ಇರುವೆ ಬನ್ನಿ ಎಂದಾಗ. ಅವರು ಪಕ್ಕದವರಲ್ಲಿ ಹೆಲ್ಲೊ ಎಕ್ಸ್ ಕ್ಯೂಸ್ ಮೀ.. ವೇರ್ ಇಸ್ ಕ್ಯಾಮ್ ಬ್ರಿಡ್ಜ್ ಹೈ ಸ್ಕೂಲ್ ಹಿಯರ್ ಅಂದ್ರು. ಯಾಕ್ರೀ ದೀಪಕಣ್ಣ ಬೆಂಗ್ಳೂರ್ ನಲ್ಲೂ ಇಂಗ್ಲೀಷ್ ನಲ್ಲಿ ಮಾತಾಡ್ತಾ ಇದ್ದೀರಿ ಅಂದಾಗ ಅವರು.. ಮಕ್ಳು ಎಲ್ರೂ ಇಲ್ಲಿ ಇಂಗ್ಲಿಷ್ ನಲ್ಲೇ ಮಾತಾಡ್ತಾ ಅವ್ರೆ, ನಾವೇನಾದ್ರೂ ತುಳು ಕನ್ನಡದಾಗ ಮಾತಾಡಿದ್ರೆ.. ಅಷ್ಟೇ.. ಅಂದ್ಬಿಟ್ರು... ಏನೋ ಸ್ಕೂಲ್ ಹತ್ರ ಸಿಕ್ಕಿದ್ರು, ನಗುಮೊಗದ ಇಬ್ಬರು ಹಾಸ್ಯ ಕಲಾವಿದರ ಚಂದ ನೋಟದ ಆ ಹಾಸ್ಯ ಚಹರೆ ನಿರೆಲ್ ಸಿನೆಮಾದ್ದೇ ಅಂತನ್ನಿಸ್ತು.. ಅಪ್ಪಿಕೊಳ್ಳುತ್ತಾ..ಲೋಕು ನಾವು ಇಲ್ಲೇ ಸ್ವಲ್ಪ ತಿರ್ಗಾಡೋಣ, ಹಾಗೇ ಕಾಫಿ ಕುಡಿಯೋಣ ಅಂದ್ರು, ಹಾಗೇ ಕಾಫಿ ಶಾಪ್ ಹುಡುಕ್ತಾ ಹೊರಟ್ವಿ.. ದೀಪಕ್ ಬೇಕ್ರಿಗಳಲ್ಲೂ.. ಅಣ್ಣಾ.. ಇಲ್ಲಿ ಕೂತು ಕುಡಿವಂತಾ ಒಳ್ಳೆ ಕಾಫಿ ಶಾಫ್ ಎಲ್ಲಿದೆ ಅಂದಾಗ ಪಾಪ ಅವ್ನೂ ಕಾಫಿ ಮಾರೋನು ಇಲ್ಲೆಲ್ಲ್ಲೂ ಇಲ್ಲ ತುಂಬಾ ದೂರ ಹೋಗ್ಬೇಕು ಅಂದಾಗ... ಒಂದು ಒಳ್ಳೆ ಕಾಫಿ ಶಾಪ್ ಗೆ ಕರ್ಕೊಂಡು ಹೋಗಿ ಅಂತ ಆಟೋ ಹತ್ತಿ ಕೂತ್ವಿ, ದೀಪಕ್.. ಅಯ್ಯೋ ಇವ್ನೆಲ್ಲಿ ನಮ್ಮ ಮಂಗ್ಳೂರ್ ಗೇ ಕರ್ಕೊಂಡ್ ಹೋಗ್ತಾವ್ನಾ ಅಂತಿದ್ರು, ಎಲ್ಲೋ ಏನೋ ಕಾಫಿ ಶಾಪ್ ಸಿಕ್ತು.. ಮೇಲೆ ಹತ್ತೋವಾಗ.. ಸರ್ ಸಾರಿ ಟೈಮ್ ಆಯ್ತು.. ಕೆಳಗೇ ಕೂತ್ಕೊಳ್ಳಿ ಅಂದ್ರು.. ಅಣ್ಣ ಐದು ನಿಮಿಷ ಅಷ್ಟೆ ಸುಮ್ನೆ ಕಾಫಿ ಕುಡಿಯೋಣ ಅಂತ ಬಂದ್ವಿ.. ಅಂತ ದೀಪಕ್ ಅವ್ರ ಹತ್ರ ಪ್ರೀತಿಯಿಂದ ಅವಕಾಶ ಗಿಟ್ಟಿಸ್ಕೊಂಡ್ರು.. ಮೂರೂ ಜನ ಕಾಫಿ ಸವಿಯುವ ಸಿಹಿ ಸಂಭಾಷಣೆಯ ಸಂಧರ್ಬ ಕಾಫಿ ಕೊಟ್ಟವನ ಕೈಗೆ ಕ್ಯಾಮರಾ ಕೊಟ್ಟು ಒಂದು ಫೋಟೋ ತೆಗಿಸ್ಕೊಂಡ್ರು .. ಮತ್ತೆ ನಾನೂ ದೀಪಕ್ ಸುಭಾಶ್ ಅವರನ್ನು ಬೀಳ್ಕೊಟ್ಟಾಗಲೇ ಶುರುವಾಗಿದ್ದು ಮಜಾ... ವಿಜಯನಗರಕ್ಕೆ ಮತ್ತೆ ನಡೆದುಕೊಂಡೇ ಹೋದ ನಾವು.. ಆಟೋ ಹತ್ತಿದೆವು..ದೀಪಕ್....... ಅಣ್ಣಾ.. ಯಶವಂತಪುರಕ್ಕೆ ಬರ್ತೀರ ಅಂತ ಕೇಳಿದಾಗ. ಒನ್ ಆಂಡ್ ಆಫ್ ಆಗತ್ತೆ ಅಂದ ಆಟೋದವ್ನೊ... ದೀಪಕ್ ಕೇಳಿದ್ರು ಹಂಗಂದ್ರೆ..????? ಅಯ್ಯೋ ಸ್ವಾಮೀ ನಾನು ಕರ್ಕೊಂಡು ಹೋಗ್ತೀನಿ ಆದ್ರೆ ಮೀಟರ್ ಚಾರ್ಜ್ ನಲ್ಲಿ ಅರ್ದ ಎಕ್ಸ್ಟಾ ಕೊಡ್ಬೇಕು ಅಂದ.. ಅಷ್ಟ್ರಲ್ಲೇ ದೀಪಕ್ ಅವ್ರ ಫ್ರೆಂಡ್ ಗೆ ಕಾಲ್ ಮಾಡಿ..... ಸಂಗ್ ಸಂಗ್ ಸಂಗ್ ಕತ್ಲೆರೆ ಕುತ್ಲೆರೇ ಅಂತ ಕೊಂಕಣಿಯಲ್ಲಿ ಮಾತಾಡಿದ್ರು... ಅವ್ನು ಜಾಲಹಳ್ಳಿ ದೇವಸ್ಥಾನದ ಹತ್ರ ಬಾ ಅಂದ ಅಷ್ಟಕ್ಕೆ ಆಟೋದವ್ನು ..ಆಗ ಯಶವಂತಪುರ ಅಂದ್ರಿ ಈಗ ಜಾಲಹಳ್ಳಿ ಅಂತಿರಾ... ಆದ್ರೂ.. ನೀವು ಮೀಟರ್ ಚಾರ್ಜ್ ಒನ್ ಟು ಡಬಲ್ ಕೊಡ್ಬೇಕು ಅಂದಾಗ ದೀಪಕ್ ಮತ್ತೆ ಫ್ರೆಂಡ್ ಗೆ ಕಾಲ್ ಮಾಡಿ.... ನೋಡಿ ಅಷ್ಟು ಕೊಡುದಿಲ್ಲ.. ನೀವು ಬರ್ತೀರ ಇಲ್ವಾ..?? (ಲೋಕು ಯಾನ್ ದುಬೈರ್ದ್ ಬೆಂಗ್ಳೂರುಗು ಬೈದೆ ಇಂಬೆ ಎನಡ ಡಬಲ್ ರೇಟ್ ಕೇನುವೆ) ಎಂತ ಮಾರಾಯ್ರೆ ನಿಮ್ಮದು... ! ನೀವು ನಮ್ಮ ಮಂಗಳೂರಿಗೆ ಬನ್ನಿ.. ನಿಮ್ಮನ್ನು ನಾನು ಕಂಪ್ಲೀಟ್ ಮಂಗಳೂರು ತಿರುಗಿಸುತ್ತೇನೆ.. ನೀವು ಹತ್ತು ಪೈಸ ಕೊಡುವುದು ಬೇಡ ಬೇಕಾದ್ರೆ ನನ್ನ ನಂಬರನ್ನು ಈಗಲೇ ತೊಗೊಳ್ಳಿ ಅಂತ ನಮ್ಮ ದೀಪಕಣ್ಣ ಆಟೋದವನ ಹತ್ತಿರ.. ಎರ್ರಾ ಬಿರ್ರಿ ಹಿತ ಮಿತ ಸಹಿತ ಮಾತಾಡೋಕೆ ಶುರು ಹಚ್ಚಿದ್ರು.. ಇವರ ಮಾತುಗಳಲ್ಲಿ ಹಾಸ್ಯ ಲೇಪನಕ್ಕೆ ಸ್ನೇಹ ಮೂಡಿ ಆಟೋದವನು ಎಲ್ಲೂ ಅಡ್ಡಾಡಿಸದೇ ನೇರವಾಗಿ ಕ್ಷೇಮವಾಗಿ ತಲುಪಿಸಿದ.. ನಮ್ಮ ಬೆಂಗಳೂರಿನ ಆಟೋ ಚಾಲಕನ ಮನಸ್ಸಲ್ಲೂ ಹಾಸ್ಯ ತುಂಬಿಸಿ ಸ್ನೇಹ ಗಿಟ್ಟಿಸಿಕೊಂಡ ಕಲಾವಿದ ದೀಪಕ್ ಪಾಲಡ್ಕ.. ಬನ್ನಿ ಮತ್ತೆ ನೋಡೋಣ ಅವರನ್ನು ನಿರೆಲ್ ತುಳು ಚಿತ್ರದಲ್ಲಿ ಹಾಸ್ಯ ಕಲಾವಿದನಾಗಿ...
Tuesday, December 17, 2013
The First International Tulu Movie "NIREL"
ಈ ಚಿತ್ರದಲ್ಲಿ ಇರುವವರು ಯಾರು ಗೊತ್ತೇ..?? ಮತ್ತಾರೂ ಅಲ್ಲ ಮೊತ್ತ ಮೊದಲು ದುಬೈನಲ್ಲಿ ನಿರ್ಮಾಣವಾಗಿರುವ "ನಿರೆಲ್" ತುಳು ಚಿತ್ರದ ಮುಖ್ಯ ಹಾಸ್ಯ ಕಲಾವಿದರು ದೀಪಕ್ ಪಾಲಡ್ಕ ಮತ್ತು ಶುಭಾಶ್ ಬಂಗೇರ.. ಹೀಗೇ ದೀಪಕ್ ಕರೆ ಮಾಡಿ ನಾನೂ ಬೆಂಗಳೂರಿನಲ್ಲಿ ಇರುವೆ ಭೇಟಿ ಮಾಡಿ ಮಾರ್ರೆ ಸಿಗೋಣ ಅಂದಾಗ ಖುಷಿ ಆಯಿತು, ಆದರೂ ಮೈಸೂರಿನಲ್ಲಿದ್ದ ನಾನೂ ಓಡೋಡಿ ಬಂದೆ, ಅದ್ಯಾವುದೋ ವಿಜಯನಗರದ ಸ್ಕೂಲ್ ಅಂತೆ ಅದರ ಹತ್ತಿರ ಬಂದು ಫೋನ್ ಮಾಡಿ ಸಿಗುವೆ ಅಂದರು. ನಾನೂ ಬಸ್ ಹತ್ತಿಕೊಂಡು ವಿಜಯನಗರ ಕಡೆ ಹೊರಟೆ, ದೀಪಕ್ ಅಣ್ಣಾ.. ನಾ ಕ್ಯಾಮ್ ಬ್ರಿಡ್ಜ್ ಹೈ ಸ್ಕೂಲ್ ಹತ್ತಿರ ಇರುವೆ ಬನ್ನಿ ಎಂದಾಗ. ಅವರು ಪಕ್ಕದವರಲ್ಲಿ ಹೆಲ್ಲೊ ಎಕ್ಸ್ ಕ್ಯೂಸ್ ಮೀ.. ವೇರ್ ಇಸ್ ಕ್ಯಾಮ್ ಬ್ರಿಡ್ಜ್ ಹೈ ಸ್ಕೂಲ್ ಹಿಯರ್ ಅಂದ್ರು. ಯಾಕ್ರೀ ದೀಪಕಣ್ಣ ಬೆಂಗ್ಳೂರ್ ನಲ್ಲೂ ಇಂಗ್ಲೀಷ್ ನಲ್ಲಿ ಮಾತಾಡ್ತಾ ಇದ್ದೀರಿ ಅಂದಾಗ ಅವರು.. ಮಕ್ಳು ಎಲ್ರೂ ಇಲ್ಲಿ ಇಂಗ್ಲಿಷ್ ನಲ್ಲೇ ಮಾತಾಡ್ತಾ ಅವ್ರೆ, ನಾವೇನಾದ್ರೂ ತುಳು ಕನ್ನಡದಾಗ ಮಾತಾಡಿದ್ರೆ.. ಅಷ್ಟೇ.. ಅಂದ್ಬಿಟ್ರು... ಏನೋ ಸ್ಕೂಲ್ ಹತ್ರ ಸಿಕ್ಕಿದ್ರು, ನಗುಮೊಗದ ಇಬ್ಬರು ಹಾಸ್ಯ ಕಲಾವಿದರ ಚಂದ ನೋಟದ ಆ ಹಾಸ್ಯ ಚಹರೆ ನಿರೆಲ್ ಸಿನೆಮಾದ್ದೇ ಅಂತನ್ನಿಸ್ತು.. ಅಪ್ಪಿಕೊಳ್ಳುತ್ತಾ..ಲೋಕು ನಾವು ಇಲ್ಲೇ ಸ್ವಲ್ಪ ತಿರ್ಗಾಡೋಣ, ಹಾಗೇ ಕಾಫಿ ಕುಡಿಯೋಣ ಅಂದ್ರು, ಹಾಗೇ ಕಾಫಿ ಶಾಪ್ ಹುಡುಕ್ತಾ ಹೊರಟ್ವಿ.. ದೀಪಕ್ ಬೇಕ್ರಿಗಳಲ್ಲೂ.. ಅಣ್ಣಾ.. ಇಲ್ಲಿ ಕೂತು ಕುಡಿವಂತಾ ಒಳ್ಳೆ ಕಾಫಿ ಶಾಫ್ ಎಲ್ಲಿದೆ ಅಂದಾಗ ಪಾಪ ಅವ್ನೂ ಕಾಫಿ ಮಾರೋನು ಇಲ್ಲೆಲ್ಲ್ಲೂ ಇಲ್ಲ ತುಂಬಾ ದೂರ ಹೋಗ್ಬೇಕು ಅಂದಾಗ... ಒಂದು ಒಳ್ಳೆ ಕಾಫಿ ಶಾಪ್ ಗೆ ಕರ್ಕೊಂಡು ಹೋಗಿ ಅಂತ ಆಟೋ ಹತ್ತಿ ಕೂತ್ವಿ, ದೀಪಕ್.. ಅಯ್ಯೋ ಇವ್ನೆಲ್ಲಿ ನಮ್ಮ ಮಂಗ್ಳೂರ್ ಗೇ ಕರ್ಕೊಂಡ್ ಹೋಗ್ತಾವ್ನಾ ಅಂತಿದ್ರು, ಎಲ್ಲೋ ಏನೋ ಕಾಫಿ ಶಾಪ್ ಸಿಕ್ತು.. ಮೇಲೆ ಹತ್ತೋವಾಗ.. ಸರ್ ಸಾರಿ ಟೈಮ್ ಆಯ್ತು.. ಕೆಳಗೇ ಕೂತ್ಕೊಳ್ಳಿ ಅಂದ್ರು.. ಅಣ್ಣ ಐದು ನಿಮಿಷ ಅಷ್ಟೆ ಸುಮ್ನೆ ಕಾಫಿ ಕುಡಿಯೋಣ ಅಂತ ಬಂದ್ವಿ.. ಅಂತ ದೀಪಕ್ ಅವ್ರ ಹತ್ರ ಪ್ರೀತಿಯಿಂದ ಅವಕಾಶ ಗಿಟ್ಟಿಸ್ಕೊಂಡ್ರು.. ಮೂರೂ ಜನ ಕಾಫಿ ಸವಿಯುವ ಸಿಹಿ ಸಂಭಾಷಣೆಯ ಸಂಧರ್ಬ ಕಾಫಿ ಕೊಟ್ಟವನ ಕೈಗೆ ಕ್ಯಾಮರಾ ಕೊಟ್ಟು ಒಂದು ಫೋಟೋ ತೆಗಿಸ್ಕೊಂಡ್ರು .. ಮತ್ತೆ ನಾನೂ ದೀಪಕ್ ಸುಭಾಶ್ ಅವರನ್ನು ಬೀಳ್ಕೊಟ್ಟಾಗಲೇ ಶುರುವಾಗಿದ್ದು ಮಜಾ... ವಿಜಯನಗರಕ್ಕೆ ಮತ್ತೆ ನಡೆದುಕೊಂಡೇ ಹೋದ ನಾವು.. ಆಟೋ ಹತ್ತಿದೆವು..ದೀಪಕ್....... ಅಣ್ಣಾ.. ಯಶವಂತಪುರಕ್ಕೆ ಬರ್ತೀರ ಅಂತ ಕೇಳಿದಾಗ. ಒನ್ ಆಂಡ್ ಆಫ್ ಆಗತ್ತೆ ಅಂದ ಆಟೋದವ್ನೊ... ದೀಪಕ್ ಕೇಳಿದ್ರು ಹಂಗಂದ್ರೆ..????? ಅಯ್ಯೋ ಸ್ವಾಮೀ ನಾನು ಕರ್ಕೊಂಡು ಹೋಗ್ತೀನಿ ಆದ್ರೆ ಮೀಟರ್ ಚಾರ್ಜ್ ನಲ್ಲಿ ಅರ್ದ ಎಕ್ಸ್ಟಾ ಕೊಡ್ಬೇಕು ಅಂದ.. ಅಷ್ಟ್ರಲ್ಲೇ ದೀಪಕ್ ಅವ್ರ ಫ್ರೆಂಡ್ ಗೆ ಕಾಲ್ ಮಾಡಿ..... ಸಂಗ್ ಸಂಗ್ ಸಂಗ್ ಕತ್ಲೆರೆ ಕುತ್ಲೆರೇ ಅಂತ ಕೊಂಕಣಿಯಲ್ಲಿ ಮಾತಾಡಿದ್ರು... ಅವ್ನು ಜಾಲಹಳ್ಳಿ ದೇವಸ್ಥಾನದ ಹತ್ರ ಬಾ ಅಂದ ಅಷ್ಟಕ್ಕೆ ಆಟೋದವ್ನು ..ಆಗ ಯಶವಂತಪುರ ಅಂದ್ರಿ ಈಗ ಜಾಲಹಳ್ಳಿ ಅಂತಿರಾ... ಆದ್ರೂ.. ನೀವು ಮೀಟರ್ ಚಾರ್ಜ್ ಒನ್ ಟು ಡಬಲ್ ಕೊಡ್ಬೇಕು ಅಂದಾಗ ದೀಪಕ್ ಮತ್ತೆ ಫ್ರೆಂಡ್ ಗೆ ಕಾಲ್ ಮಾಡಿ.... ನೋಡಿ ಅಷ್ಟು ಕೊಡುದಿಲ್ಲ.. ನೀವು ಬರ್ತೀರ ಇಲ್ವಾ..?? (ಲೋಕು ಯಾನ್ ದುಬೈರ್ದ್ ಬೆಂಗ್ಳೂರುಗು ಬೈದೆ ಇಂಬೆ ಎನಡ ಡಬಲ್ ರೇಟ್ ಕೇನುವೆ) ಎಂತ ಮಾರಾಯ್ರೆ ನಿಮ್ಮದು... ! ನೀವು ನಮ್ಮ ಮಂಗಳೂರಿಗೆ ಬನ್ನಿ.. ನಿಮ್ಮನ್ನು ನಾನು ಕಂಪ್ಲೀಟ್ ಮಂಗಳೂರು ತಿರುಗಿಸುತ್ತೇನೆ.. ನೀವು ಹತ್ತು ಪೈಸ ಕೊಡುವುದು ಬೇಡ ಬೇಕಾದ್ರೆ ನನ್ನ ನಂಬರನ್ನು ಈಗಲೇ ತೊಗೊಳ್ಳಿ ಅಂತ ನಮ್ಮ ದೀಪಕಣ್ಣ ಆಟೋದವನ ಹತ್ತಿರ.. ಎರ್ರಾ ಬಿರ್ರಿ ಹಿತ ಮಿತ ಸಹಿತ ಮಾತಾಡೋಕೆ ಶುರು ಹಚ್ಚಿದ್ರು.. ಇವರ ಮಾತುಗಳಲ್ಲಿ ಹಾಸ್ಯ ಲೇಪನಕ್ಕೆ ಸ್ನೇಹ ಮೂಡಿ ಆಟೋದವನು ಎಲ್ಲೂ ಅಡ್ಡಾಡಿಸದೇ ನೇರವಾಗಿ ಕ್ಷೇಮವಾಗಿ ತಲುಪಿಸಿದ.. ನಮ್ಮ ಬೆಂಗಳೂರಿನ ಆಟೋ ಚಾಲಕನ ಮನಸ್ಸಲ್ಲೂ ಹಾಸ್ಯ ತುಂಬಿಸಿ ಸ್ನೇಹ ಗಿಟ್ಟಿಸಿಕೊಂಡ ಕಲಾವಿದ ದೀಪಕ್ ಪಾಲಡ್ಕ.. ಬನ್ನಿ ಮತ್ತೆ ನೋಡೋಣ ಅವರನ್ನು ನಿರೆಲ್ ತುಳು ಚಿತ್ರದಲ್ಲಿ ಹಾಸ್ಯ ಕಲಾವಿದನಾಗಿ...
Monday, April 8, 2013
ಪ್ರೇಮ ಪತ್ರ
ಹುಟ್ಟುತ್ತಾ ಅದು ಪ್ರೀತಿ ಸಾಯುತ್ತಾ ಅದು ಭೀತಿ ಎಲ್ಲವೊ ಕ್ಷಣದ ಅನುಭವ ಕೊನೆಗೆ ಮನದೊಳಗೆ ಉಳಿವ ನೆನಪು.
ಕಡು ಕತ್ತಲೆಯಲ್ಲಿ ಜಡಿಮಳೆಯಲ್ಲಿ ನೆನೆಯುತ್ತಾ ಕೈಯ್ಯಲ್ಲಿದ್ದ ವೆನೆಟಿ ಬ್ಯಾಗ್ ಅನ್ನು ಬೆಚ್ಚಗಿರುತ್ತೋ ಏನೋ ಎಂದು ತಬ್ಬಿಕೊಂಡು ಚಳಿಗೆ ನಡುಗುತ್ತಿದ್ದಳಾಕೆ. ಕಲ್ಪನೆಯ ಕಥೆಯಲ್ಲದಿದ್ದರೂ ನನ್ನ ಬೈಕ್ ಆವಳ ಹತಿರದಲ್ಲೇ ಕೈ ಕೊಡಬೇಕೆ. ಮತ್ತೆ ಮತ್ತೆ ಕಿಕ್ಕ್ ಹೊಡೆದರೂ ಬೈಕ್ ಸ್ಟಾರ್ಟ್ ಆಗಲೊಲ್ಲದು. ಅತ್ತಿತ್ತ ಕಣ್ಣಾಡಿಸಿದರೆ ಒಂದು ನರಪಿಳ್ಳೆಯೊ ಇಲ್ಲ, ಗಮನಿಸುತ್ತಾ ನನ್ನ ಗಮನ ಒಬ್ಬಾಕೆ ನಿಂತಿರುವಳಿಲ್ಲಿ ಅನ್ನುವುದನ್ನು ತಿಳಿಯದೇ ಇರಲಿಲ್ಲ. ಆಕೆಯೊ ನನ್ನನ್ನು ಗಮನಿಸುತ್ತಿರುವುದು ಅರ್ಥವಾಯಿತು ಆಕೆಯ ಕಣ್ಣ ನೋಟ ನೆರವನ್ನು ಬಯಸಿತ್ತು. ವಿಧಿಯಿಲ್ಲದೇ ನನ್ನ ಮೊಬೈಲ್ ಕೈಗೆತ್ತಿಕೊಂಡರೆ ಅದೂ ನೀರಲ್ಲಿ ನೆನೆದು ಜ್ವರಬಂದು ಮಲಗಿತ್ತು. ಆ ಹೊತ್ತಿಗೆ ವೃದ್ದರೊಬ್ಬರು ತನ್ನ ಸ್ಕೂಟರ್ ನಲ್ಲಿ ಬರುತ್ತಿರುವಾಗ ಕೈ ಮುಗಿದು ಸಹಾಯ ಮಾಡಿ ಎಂದು ಕೇಳಿದೆ. ವೃದ್ದರು ನನ್ನ ಬೈಕ್ ಕೆಟ್ಟು ನಿಂತಿರುವುದನ್ನು ನೋಡಿ ಟ್ಯಾಂಕ್ ಚೆಕ್ ಮಾಡಿದಾಗ ಪೆಟ್ರೋಲ್ ಖಾಲಿಯಾಗಿರುವುದು ಗಮನಕ್ಕೆ ಬಂದು ಅದೇನೋ ಸಾಹಸ ಮಾಡಿ ಅವರ ಸ್ಕೂಟರ್ ನಿಂದ ನನ್ನ ಬೈಕ್ ಗೆ ಸ್ವಲ್ಪ ಪೆಟ್ರೋಲ್ ಸುರಿದರು. ನನ್ನ ಬೈಕ್ ಕೂಡಾ ಬಾಯಾರಿತ್ತೋ ಏನೋ ಹೊಟ್ಟೆ ತುಂಬಿದ ಕೂಡಲೇ ಸ್ಟಾರ್ಟ್ ಆಗೇ ಬಿಡ್ತು. ವೃದ್ದರಿಗೆ ಆಭಿನಂದನೆಗಳನ್ನು ತಿಳಿಸಿ ಇನ್ನೇನು ಹೊರಡುತ್ತೇನೆ ಎಂದಾಗ ಯಾಕಪ್ಪಾ ನಿನ್ನನ್ನೇ ನಂಬಿ ನಿನ್ನ ಜೊತೆ ಬಂದವಳನ್ನ ಇಲ್ಲೇ ಬಿಟ್ಟು ಹೋಗುತ್ತೀಯಾ? ಅದಿಕ್ಕೇ ಹುಡುಗ್ರು ಅನ್ನೋದು ಅಂದು ಬಿಟ್ರು, ನಾನೂ ಒಂದುಬಾರಿ ದಿಬ್ಬೆರಗಾಗಿ ಆಕೆಯನ್ನು ನೋಡಿದೊಡೆ ಕರುಣಾ ಭಾವ ವ್ಯಕ್ತವಾಯಿತು! ಆದರೂ ದಯವಿಟ್ಟು ಕ್ಷಮಿಸಿ ಸರ್ ಆಕೆ ಯಾರು ಎಂದು ನನಗೂ ಗೊತ್ತಿಲ್ಲ, ನನಗೆ ಪರಿಚಯವೂ ಇಲ್ಲ ಅಂದು ಬಿಟ್ಟೆ.
ವೃದ್ದರು ಕ್ಷಮೆಯಾಚಿಸಿ ಆಕೆಯ ಬಳಿ ಮಾತನಾಡಿ ಈ ದಾರಿಯಲ್ಲಿ ಇಷ್ಟು ರಾತ್ರಿಗೆ ವಾಹನಗಳು ಬರುವುದು ಅನುಮಾನ ನಿನಗೆ ಅಭ್ಯಂತರವಿಲ್ಲವಾದರೆ ನೀನು ನಿನ್ನ ಮನೆಗೆ ಈತನಿಂದ ಡ್ರಾಪ್ ತೆಗೆದುಕೋ,ನನ್ನ ಮನೆ ಇಲ್ಲೇ ಇದೆ ಇಲ್ಲವಾದರೆ ನಾನೆ ಬಿಡುತ್ತಿದ್ದೆ ಎಂದಾಗ ಆಕೆ ಒಪ್ಪಿ ನನ್ನ ಬೈಕ್ ಏರಿ ಕುಳಿತಳು. ನಾನೂ ಸ್ವಲ್ಪ ಮುಂದೆ ನಡೆಯುತ್ತಾ ಆಕೆಯಲ್ಲಿ ನಿಮ್ಮ ಮನೆ ಎಲ್ಲಿ ಎಂದು ಕೇಳುವಷ್ಟರ ಹೊತ್ತಿಗೆ ಆಕೆ ನನ್ನ ಭುಜದ ಮೇಲೆ ತಲೆ ಇಟ್ಟು ನಿದ್ರಾದೇವಿಗೆ ಶರಣಾಗಿದ್ದಳು. ನಾನು ನನ್ನ ಮನೆ ಬಂದೊಡನೆ ಬೈಕ್ ನಿಲ್ಲಿಸಿ ಆಕೆಯನ್ನು ಮೆಲ್ಲನೆ ಹಿಡಿದಾಗ ಆಕೆಯ ಮೈ ಸುಡುತ್ತಿತ್ತು. ನನ್ನ ರೂಂನಲ್ಲಿ ನಾನು ಒಬ್ಬಂಟಿಗ ಒಂದು ಹೆಣ್ಣನ್ನು ನನ್ನ ಮನೆಯಲ್ಲಿರಿಸಿ ಅದು ಹೇಗೆ ಸಾಧ್ಯ? ಮೈ ಎಲ್ಲಾ ನಡುಗುತ್ತಿತ್ತು ಮನಸ್ಸು ಅದೆಷ್ಟೋ ದೂರ ಆಲೋಚಿಸುತ್ತಿತ್ತು. ಸಧ್ಯ ಏನೂ ಮಾಡುವಂತಿಲ್ಲ ಏನಾದರಾಗಲಿ ಎಂದು ಅವಳ ಕೈಯ್ಯನ್ನು ನನ್ನ ಭುಜದ ಮೇಲಿರಿಸಿ ನನ್ನ ಪುಟ್ಟ ರೂಂ ಒಳಗೆ ಕರೆದುಕೊಂಡು ಹೋದೆ. ಹೊಸವರ್ಷದ ಪಾರ್ಟಿ ಎಂದು ಕುಡಿದ ಬೀರ್ ಬಾಟಲ್ ಗಳು, ಸಿಗರೇಟ್ ಕಡ್ಡಿಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದರೂ ಅವೆಲ್ಲವನ್ನೂ ಪಕ್ಕಕ್ಕೆ ಸರಿಸಿ ಆಕೆಯನ್ನು ಹಾಸಿಗೆ ಮೇಲೆ ಮಲಗಿಸಿದೆ. ಎಷ್ಟೇ ಆಕೆಯನ್ನು ಎಬ್ಬಿಸಲು ಪ್ರಯತ್ನಿಸಿದರೂ ಆಕೆ ಮತ್ತು ಬಂದಂತೆ ವರ್ತಿಸಿದ್ದಳು ಇನ್ನೇನು ಜ್ವರ ಹೆಚ್ಚಾಗಿ ಬಿಟ್ಟರೆ ಎಂದು ಭಯವಾಗಿ ಬಿಸಿ ನೀರು ಮಾಡಿ ಅದರಲ್ಲಿ ಬಟ್ಟೆ ಅದ್ದಿ ಅವಳ ಹಣೆಯ ಮೇಲೆ ಇಟ್ಟೆ. ಡ್ರಾವರ್ ಎಲ್ಲವನ್ನೂ ತಡಕಾಡಿದಾಗ ಸಿಕ್ಕಿದ ಕ್ರೋಸಿನ್ ಮಾತ್ರೆಯನ್ನೂ ಅವಳ ಬಾಯಿಗಿಟ್ಟು ನೀರುಕುಡಿಸಿದೆ. ಇದೇನಪ್ಪಾ ನನ್ನ ಕರ್ಮ ಎಂದು ಬದಿಯ ಕ್ಯಾಲೆಂಡರ್ ನಲ್ಲಿ ನೇತಾಡುತ್ತಿದ್ದ ಗಣಪತಿಪಪ್ಪನನ್ನು ಗುರಾಯಿಸುತ್ತಿದ್ದೆ. ಏನಾದರೇನು ನಾನು ಒಳ್ಳೆಯವನೆಂದು ನನ್ನ ಮೇಲೆ ನನಗೆ ನಂಬಿಕೆ ಇರುವುದರಿಂದ ಕಣ್ಣುಮುಚ್ಚಿಕೊಂಡು ಹೆದರುತ್ತಾ ಒದ್ದೆಯಾಗಿದ್ದ ಆಕೆಯ ವಸ್ತ್ರಗಳನ್ನು ಕಳಚಿ ಮೈ ಒರಸಿ ನನ್ನ ಪ್ಯಾಂಟ್ ಶರ್ಟ್ ತೊಡಿಸಿದೆ ನಾನೂ ಮಲಗಿದೆ.
ಮುಂಜಾನೆ ಆಕೆ ನನಗಿಂತ ಮೊದಲೇ ಎದ್ದು ಸ್ನಾನ ಮಾಡಿ ಟೀ.... ಎಂದಾಗ ದೆವ್ವ ಹಿಡಿದವನಂತೆ ದಿಬ್ಬೆರಗಾದೆ. ಕುಳಿತು ಮಾತಾಡಿದೆ. ಯಾರಮ್ಮಾ ನೀನು? ಆಕೆ ನನಗಾರೂ ಇಲ್ಲ ನಾನೊಬ್ಬ ಒಂಟಿ ನತದ್ರುಷ್ಟ ಹೆಣ್ಣು. ಇದೀಗ ಯಾವುದೋ ಒಂದು ಪಬ್ ನಲ್ಲಿ ಡ್ಯಾನ್ಸ್ ಮಾಡುತ್ತಾ ಕೆಲಸ ನಿರ್ವಹಿಸುವುದಾಗಿ ತಿಳಿಸಿದಳು ಜೊತೆಗೆ ನನಗೂ ಅಭಿನಂದನೆಗಳನ್ನು ಅರ್ಪಿಸಿದಳು. ಯಾವುದೋ ಹಾಸ್ಟೆಲ್ ನಲ್ಲಿ ಇದ್ದ ಆಕೆಯ ಜೊತೆ ನನ್ನ ಒಡನಾಟ ಹೆಚ್ಚಿದಾಗ ಅದು ಪ್ರೀತಿಯಾಗಿ ಬದಲಾಯಿತು. ಸದಾ ಆಕೆಯನ್ನು ನಾನೇ ಪಬ್ ನಿಂದ ಹಾಸ್ಟೆಲ್ ಗೆ ಬಿಡಲು ಶುರುಮಾಡಿದೆ. ಹಬ್ಬಹರಿದಿನಗಳಲ್ಲಿ ನನ್ನ ಜೊತೆಯೇ ಇದ್ದು ಜೊತೆಜೊತೆಯಲ್ಲೇ ಆಚರಣೆಗಳಲ್ಲಿ ತೊಡಗಿ ಖುಷಿಪಡುತ್ತಿದ್ದೆವು. ಕಾಲ ಉರುಳುತ್ತ ಎರಡು ವರ್ಷಗಳು ಕಳೆದರೂ ನಾವಿಬ್ಬರು ಗತವರ್ಷಗಳ ಪರಿಚಿತರೆಂಬಂತೆ ವರ್ತಿಸುತ್ತಿದ್ದೆವು. ಆಕೆ ಪಬ್ ವೃತ್ತಿಯನ್ನು ನನ್ನ ಒತ್ತಾಯದಿಂದ ತ್ಯಜಿಸಿ ನನ್ನ ಪರಿಚಿತರ ಶಾಪಿಂಗ್ ಮಾಲ್ ನಲ್ಲಿ ಮ್ಯಾನೇಜರ್ ಆಗಿ ಪೋಸ್ಟ್ ಪಡೆದು ನನ್ನ ಸಂತೋಷವನ್ನು ಹೆಚ್ಚಿಸಿದಳು. ಅಷ್ಟೇ ಅಲ್ಲದೆ ಆಕೆ ಪಕ್ಕದ ಸುತ್ತಮುತ್ತ ಮನೆಯವರಿಗೂ ಹಿಡಿಸಿದ್ದಳು. ನನ್ನನ್ನು ಕೆಲವೊಮ್ಮೆ ಆಕೆ ನಿನಗೆ ಹೇಳಿಮಾಡಿಸಿದವಳು ಮದುವೆಮಾಡಿಕೋ ಎಂದಾಗ ನನ್ನ ಮನಸ್ಸೂ ಕೆಲವೊಮ್ಮೆ ಪ್ರೀತಿಯ ಮತ್ತಿನಲ್ಲಿ ತೇಲಾಡುತ್ತಿತ್ತು. ನಾನಂತೂ ಆಕೆಯೇ ನನ್ನ ಜೀವನವೆಂದು ನನ್ನ ಹೃದಯದಂಗಳದಲ್ಲಿ ಪ್ರೇಮ ಸೌಧ ಕಟ್ಟಿದ್ದೆ. ನನ್ನ ಜೊತೆ ಆಕೆಯ ಗುಣ ನಡತೆ ನನಗೆ ಅವಳಲ್ಲಿ ಮೊತ್ತಮೊದಲು ಇಷ್ಟವಾದ ವಿಷಯ
ಒಂದು ಸಂಕ್ರಾಂತಿಯ ದಿನ ಅಕೆ ನನ್ನ ಮನೆಯಲ್ಲೇ ತಂಗಿದ್ದರಿಂದ ಅತಿ ಬೇಗ ಎದ್ದು ರಂಗೋಲಿ ಬಿಡಿಸಿ ನನಗೂ ಬಿಸಿನೀರಿಟ್ಟು ಮೈ ಮೇಲೆ ತಣ್ಣೀರೆರೆಚಿ ಎಬ್ಬಿಸಿಬಿಟ್ಟಳು. ನಾನೂ ಅದನ್ನೇ ಕಾಯುತ್ತಿದ್ದೆ. ಯಾಕೆಂದರೆ ಆಕೆ ನನ್ನನ್ನು ಮುಂಜಾನೆ ಎಬ್ಬಿಸಲು ಹರಸಾಹಸ ಪಟ್ಟು ಕೊನೆಗೆ ಮೈಮೇಲೆ ತಣ್ಣೀರೆರೆಚುವ ಆ ಸೊಗಸು ಜೀವನದ ಕೊನೆವರೆಗೂ ಮರೆಯಲಾಗದಂತಹದು. ನನಗೂ ಹೊಸಬಟ್ಟೆ ತೊಡಿಸುವಂತೆ ಪ್ರೇರೇಪಿಸಿ, ನಾನು ಆಕೆಯ ಹುಟ್ಟು ಹಬ್ಬಕ್ಕೆ ಕೊಟ್ಟಿದ್ದ ಸೀರೆಯನ್ನು ಉಟ್ಟು ನನ್ನ ಮುಂದೆ ನಿಂತು ಹೇಗೆ ಕಾಣ್ತಾ ಇದ್ದೀನಿ ಎಂದಾಗ ನಾನೇನೋ ಛೆ ಆ ಸಂದರ್ಭವನ್ನು ವರ್ಣಿಸಲು ಪದಗಳೇ ಇಲ್ಲ. ನನ್ನ ಬಾಯಿಯಿಂದ ಹೊರಟ ಆಕೆಯ ಅಂದ ಉತ್ತೇಜನದ ಮಾತುಗಳೀಗೆ ಸಾಕು ಸಾಕು ಸಾಕು ಹೊರಡೋಣ ಅಂದುಬಿಟ್ಟಳು ದೇವಸ್ಥಾನಕ್ಕೆ.
ಅದೊಂದು ಸುಂದರ ಮುಂಜಾನೆ ಬೆಟ್ಟದಮೇಲಿರುವ ದೇವಸ್ಥಾನ ಆ ದಿನ,ಆ ಕ್ಷಣ, ಪರಿಸರದ ಜೊತೆಗೆ ನಾವಿಬ್ಬರೂ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುತ್ತಾ ಆಲದ ಮರ ಸುತ್ತುತ್ತಾ ಒಂದೆಡೆ ಕುಳಿತು ಕಾಯಿ ಒಡೆದು ಹಂಚಿಕೊಳ್ಳುತ್ತಾ ಮಾತು ಶುರುಮಾಡಿದಾಗ ಆಕೆ ನಾನು ನಿನ್ನ ತೊಡೆಯ ಮೇಲೊಮ್ಮೆ ತಲೆಯಿಟ್ಟು ಮಲಗಲೇ ಎಂದಾಗ ಹೃದಯವೇ ಕುಣಿದು ಕುಪ್ಪಳಿಸಿದಷ್ಟು ಸಂತೋಷವಾಯಿತು. ಅವಳ ಮುಡಿಯನ್ನು ನೇವರಿಸಿ ನನ್ನ ಎರಡೂ ಕೈಗಳಿಂದ ಹತ್ತಿರ ಸೆಳೆದು ಹಣೆಯ ಮೇಲೆ ಮುತ್ತಿಟ್ಟು ನೀನು ನನಗೆ ತುಂಬಾ ಇಷ್ಟ ನನ್ನ ಜೀವನದ ಕೊನೆಯವರೆಗೂ ಜೊತೆಗಿರುತ್ತೀಯಾ ಎಂದಾಗ ಏನೂ ಮಾತನಾಡದೆ ನನ್ನ ಕೈ ಮೇಲೆ ಎರಡು ಪತ್ರಗಳನ್ನಿಟ್ಟಾಗ ಅವಳ ಬಾಯಿಯಿಂದ ರಕ್ತ ಸೋರುತ್ತಿತ್ತು ಕುಡಿದ ವಿಷದ ಸಶೆ ಅವಳ ದೇಹವನ್ನಾವರಿಸಿತ್ತು.
ಎರಡು ಪತ್ರಗಳಲ್ಲಿ ಒಂದು ನಾನವಳಿಗಾಗಿ ಎರಡು ವರ್ಷಗಳಲ್ಲಿ ಬರೆದ ಪ್ರೇಮಪತ್ರಗಳಲ್ಲಿ ಒಂದು. ಮತ್ತೊಂದು ಅವಳು ನನಗಾಗಿ ಬರೆದ ಅಂತಿಮ ಪ್ರೇಮ ಪತ್ರ. ಕೊನೆಗೆ ನನಗೆ ಅರ್ಥವಾಗಿದ್ದು ನಾನು ಪ್ರತಿ ದಿನ ಅವಳಿಗಾಗಿ ಬರೆದ ಪತ್ರ ವಿಚಾರ ಅವಳ ಗಮನಕ್ಕೆ ಬರುತ್ತಿತ್ತು. ಆಕೆಯೂ ನನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಳು. ದಳದಳನೆ ಹರಿವ ಕಣ್ಣೀರ ಒರೆಸಿಕೊಂಡು ಮಬ್ಬಾದ ದೃಷ್ಟಿಯಿಂದ ಅವಳು ನನಗೆ ಬರೆದ ಪತ್ರವನ್ನು ಓದಿದಾಗ....
ಮೊತ್ತ ಮೊದಲ ಭೇಟಿಯಲ್ಲಿ ಪಬ್ ಕೆಲಸ ಮುಗಿದೊಡನೇ ಕಾಮುಕನೊಬ್ಬನ ಕಾಮದ ಅಟ್ಟಹಾಸಕ್ಕೆ ಬಲಿಯಾಗಿ ಜೀವನವೇ ಬೇಡವೆಂದು ಮಳೆಯಲ್ಲಿ ನೆನೆಯುತ್ತಾ ನಿಂತಿದ್ದ ಆಕೆಯನ್ನು ಕರೆದುಕೊಂಡು ಹೋಗಿ ಆಲೈಸಿದ ನನ್ನ ಮೇಲೆ ಆಕೆಗೂ ಪ್ರೀತಿ ಹುಟ್ಟಿತ್ತಾದರೂ ಮತ್ತೊಬ್ಬನಿಂದ ಎಂಜಿಲಾದ ದೇಹವನ್ನು ನನಗರ್ಪಿಸುವುದು ಹೂವು ಕಾಯುವ ಮುಳ್ಳು ಹೂವನ್ನೇ ಚುಚ್ಚುವಂತೆಂದಿತ್ತು ಅವಳ ಜೀವನದ ಪತ್ರ.
-ಲೋಕು ಕುಡ್ಲ
(ಕಾಲ್ಪನಿಕವಷ್ಟೆ)
Friday, July 20, 2012
Friday, June 29, 2012
ಮದಿಮಾಲೆ ಸುರು ಕತ್ತಲೆ.......!
ಎನ್ನ ಮೋನೆಡ್
ಇರೆ ಬಿರೆಲ್ ಪರಪುನಗಾ
ಕಣ್ಣುಲು ಕಲಡೊಂದು
ಕುರುಬುಲು ಅರಲೊಂದು
ಮನಸ್ ತೆಲಿಂಡ್ ಯೇ........
ಎನ್ನ ಬಿಮ್ಮೊಡು
ಇರೆ ಬಿಮ್ಮ ಸೇರ್ನಗ
ಮೋಕೆ ಕೊಡಿ ಕೊಡ್ಯೊಂದು
ಆಸೆದ ಪಜೆ ಪರಡೊಂದು
ಕನಸ್ ಕಡಲಾಂಡ್ ಯೇ........
ಎನ್ನ ಕಿತಿಕ್ಕಿಲ್
ಇರೆ ತಿಗಲೆ ಅಪ್ಪುನಗ
ಮೈ ಮಜಲ್ ಬೆಚ್ಚಾದ್
ತರೆ ಕುಜಲ್ ಪೆರ್ಚಾದ್
ಉಡಲ್ ಡ್ ಕುರಲಾಂಡ್ ಯೇ........
ಇರೆ ಮುತ್ತುಲು
ಎನ್ನರಳಿ ಪೂವೊಲು
ಸಖ-ಸಖಿ-ಸುಖ ಪಗತೊಂದು
ಕನ-ಮನ-ಮೌನ ಪೊರೆಲೊಂದು
ಬದ್ ಕ್ ಡ್ ಬೊಲ್ಪಾಂಡ್ ಯೆ........
Wednesday, June 27, 2012
ಮೋಕೆ ರಾಗ....
ಕಣ್ಣ್ ದ ನೋಟೊಗಾತೆ
ಮಂಜಾದ್ ಕರಗಿಯೇ
ಪಿಳಿ ಪಿಳಿ ರೆಪ್ಪೆ ಅಲ್ ಗಿ
ಚಟಪಟೊಗು ಮಾಜಿಯೆ..!!೧!!
ಕೆಂಪುದ ಬಿಮ್ಮೊಗಾತೆ
ಕೆಂಪಾದ್ ಬೆರಗಿಯೇ
ಪಳ ಪಳ ಕೂಲಿ ದಕ್ಕಿ
ಮಿಂಚಿಡೇ ಮಿಂಚಿಯೆ..!!೨!!
ತೆಲಿಪುನ ಕೆಪ್ಪೆಗಾತೆ
ಬಾಡ್ ದ್ ಮುದುಡಿಯೇ
ರಾಪಿನ ಕುಜಲ್ ಕುಸಲ್
ಎಸಳಾದ್ ಅರಳಿಯೆ..!!೩!!
ನೇಲುನ ಜಡೆಕಾತೆ
ಜಡವಾದ್ ಉಂತಿಯೇ
ಮಾಲುನ ಸೊಂಟ ಸೊಬಗ್
ದಂಗಾದ್ ದಂಗಿಯೆ.!!೪!!
ತೆವಳುನ ನಡೆಕಾತೆ
ತೆಳುವಾದ್ ತಮೆಲಿಯೆ
ಮುದವಾಯಿ ಹೆಜ್ಜೆ ಗೆಜ್ಜೆ
ಗಾನೊಗು ಗಿದಿರಿಯೆ..!!೫!!
ದೇವತೆ ನಿಕ್ಕಾತೆ
ತಿಗಲೆಡ್ ದೇವಸ್ಥಾನ ಕಟ್ಟಿಯೆ(ಎದೆಟ್ಟ್)
ಗುಣ ತೆರಿಯೆ ಮನ ಬರೆಯೆ
ಮೋಕೆಗ್ ಬೂರಿಯೆ..!!೬!!
ಸೊಲ್ಮೆ
Wednesday, June 20, 2012
ಶ್ರೀ ತುಳಸಿ....!
![]() |
ದೈವ ನಿಧಿ ಶ್ರೀ ತುಳಸಿ
ಇರೆನಿರೆ ಕಮ್ಮೆನೊಡು
ಎನ್ನುಡಲ್ ಕುಷಿ.!
ತೆಂಕಾಯಿ ದಿಕ್ಕ್ ಡ್
ಪಡ್ಡಾಯಿ ಮೋನೆದಾರ್
ಪುಣ್ಯ ಮಣ್ಣ್ ಕಟ್ಟೆಡ್
ದೈವವಾದ್ ನೆಲೆಯರ್.!
ಕ್ಷೇತ್ರ ಸುತ್ತ ಗಾಳಿಡ್
ರೋಗ ರುಜಿನ ಕಳೆಯರ್
ಬೆನ್ಪಿ ಮಾನಿ ಬದ್ ಕ್ ಡ್
ನಿರೆಲ್ ಕುರಲ್ ಎರೆಯರ್.!
ದಿವ್ಯ ವಿಧಿ ಶ್ರೀ ತುಳಸಿ
ಭೂಮಿ ತಿಗಲೆಡ್ ನೆಲೆದ್
ಇರೆ ಆರೋಗ್ಯ ಕ್ರಷಿ.!
ತುಳಸಿ ಪರ್ಬ ಕಾರ್ನಿಕಡ್
ದೀಪೊಡು ಪಾಪ ಕಳೆಯರ್
ಪೊಣ್ಣು ಒಯ್ತ್ ಮಯ್ತಿ ನೀರ್ ಡ್
ಕುಟುಮ ಕಲಹ ನಿಂಗಿಯರ್.!
ದೈವ ನಿಧಿ ಶ್ರೀ ತುಳಸಿ
ಇರೆನಿರೆ ಕಮ್ಮೆನೊಡು
ಎನ್ನುಡಲ್ ಕುಷಿ.!
ಸೊಲ್ಮೆ..
ದೇವಾಡಿಗ ಯುನೈಟೆಡ್ ಚಾರಿಟಿ ಶೋ...
ಪೊರ್ಲು ಬೈಯ್ಯದ ಮುಗಲ್ ಕತ್ತಲೆಡ್ ಕುಡ್ಲದ ಟೌನ್ ಹಾಲ್ ವೇದಿಕೆಡ್ ಉಂದೇ ಶನಿವಾರದಾನಿ 26-5-2012 ನೇ ತಾರೀಖ್ ಗ್ ನಡತ್ತಿನ ದೇವಾಡಿಗ ಚಾರಿಟಿ ಶೋ ಕಾರ್ಯಕ್ರಮದ ಪೊರ್ಲು ವರ್ಣನೆಗ್ ಮೀರ್ದಿನ. ಯುವ ಸೈನ್ಯ ಎಡ್ಡೆ ಬೇಲೆಗ್ ಜತ್ತ್೦ಡ್ ಪಂದಾಂಡ ಆ ಬೇಲೆ ಪೊರ್ಲುಡು ನೆರವೇರುನೆಟ್ಟ್ ವಾ ಸಂಶಯಲಾ ಇಜ್ಜಿ ಪನ್ಪಿನೆನ್ ದೇವಾಡಿಗ ಯುನೈಟೆಡ್ ಯುವ ಸಂಘಟನೆ ತೋಜಾದ್ ಕೊರ್ತೆರ್, ಜತ್ತಿ ಬೆಗರ್ ಪನಿನ್ ಲೆಕ್ಕ ದೀವಂದೆ ದೇವಾಡಿಗ ಯುನೈಟೆಡ್ ಸಂಘಟನೆ ಮಂತಿ ಬೇಲೆ ಶ್ಲಾಘನೀಯ, ದಾನೊಡ್ದು ಮಲ್ಲ ದಾನ ವಿಧ್ಯಾದಾನ ಆ ಮಲ್ಲ ದಾನೊನು ಮಂತಿ ಪುಣ್ಯ ಮಾತ ದೇವಾಡಿಗ ಯುವ ಬಂಧುಲೆಗ್ ಸಂದುಂಡು,
ವಿದ್ಯೆದ ಬಡವುಡು ಪೊರೆಲೊಂದಿತ್ತಿ ಪಾಪದ ಜೋಕ್ಲೆನ್ ಕೈ ಪತ್ತ್ ದ್ ಲಕ್ಕಾಯೆರ್ ದೇವಾಡಿಗೆರ್, ಆ ಜೋಕುಲು ಅಕ್ಲೆ ವಿದ್ಯೆದ ಬಡವುನು, ಆ ಬಡವುಗು ಆರ್ಥಿಕತೆದ ಅಂಗಲಪ್ಪುನು ಅಕ್ಲೆ ಬಾಯಾರ ಪಂಡಿನ ಪಾತೆರೊನು ಕೇನ್ನಗ ಎಂಚಿನಾಯಗ್ಲಾ ಒರ ಬಂಜಿ ನುಂಗುದು ಪೋವು, ಅಂದ್ ಆ ಜೋಕ್ಲೆ ವಿದ್ಯೆ ಅಂಗಲಪುದ ಪಾತೆರೊನು ಪ್ರತೀ ಜೋಕ್ಲೆನ ಇಲ್ಲಡೆಗ್ ಪೊದು ಅಕ್ಲೆ ಬಂಗ ಬದ್ಕ್ ದ ವಿಚಾರೊಲೆನ್ ತೆರಿಯೊ೦ದು ವೀಡಿಯೋ ಸಮೇತ ಯುನೈಟೆಡ್ ಬಂಧುಲು ಟೌನ್ ಹಾಲ್ ಡ್ ನಡತ್ತಿನ ಕಾರ್ಯಕ್ರಮೊಡು ಜನಕ್ಲೆಗ್ ತೊಜಪಾಯೆರ್ ಅಂಚೆನೆ ಕೆಲ ದೇವಾಡಿಗೆರ್ ದೇವಾಡಿಗ ವಿಧ್ಯಾದಾನದ ಎಡ್ಡೆ ಬೇಲೆಗ್ ಶುಭ ಹಾರೈಸಿಯೆರ್.
ದೇವದಾಸ್ ಕಾಪಿಕಾಡ್ ಮೆರೆ ತಂಡದ "ಬದುಕುನ ಸಾದಿ" ತುಳು ಹಾಸ್ಯಮಯ ನಾಟಕೊನು ಪ್ರದರ್ಶನೊ ಮಂತ್ ದ್ ಆ ಪ್ರದರ್ಶೊನೊಡು ಬತ್ತಿನ ದುಡ್ಡುನು ಪಾಪದ ವಿಧ್ಯಾವಂತ ಜೋಕ್ಲೆಗ್ ಪಟ್ಟುನ ಎಡ್ಡೆ ಬೇಲೆ ನಡತಿನಿ ಕುಡ್ಲದ ಟೌನ್ ಹಾಲ್ ಡ್, ಅಂಚೆನೆ ನಾಟಕ ಪ್ರದರ್ಶನದ ಒಂಜಿ ಘಂಟೆ ದುಂಬು ನಡತಿನ ಸಭಾ ಕಾರ್ಯಕ್ರಮ ಮರಪ್ಪೆರಾವಂದಿನ, ವೊವ್ವೇ ರೀತಿದ ಸ್ವಾರ್ಥ ದಾಂತೆ ಸಹಾಯ ಪಡೆವು ಜೋಕ್ಲೆನ ವೀಡಿಯೋ ಕ್ಲಿಪ್ ನು ನೆರೆದಿನಕ್ಲೆಗ್ ತೂಪಾದ್ ಬತ್ತಿ ಒಟ್ಟು ಸಹಾಯಧನೊನು ಸಭಾಕಾರ್ಯಕಮೊಡು ಪ್ರತ್ಯಕ್ಷವಾದ್ ಜೋಕ್ಲೆಗ್ ಪಟ್ಟಿಯೆರ್,
ಬೂತೊಗು ಬಲಸ್ ನಗ ಮಾತಲಾ ಆತ್೦ಡ್ ನನ ಒಂಜಿ ಪುಚ್ಚೆ ಕಟ್ಟ್೦ಡ ಮುಗಿಂಡ್ ಪನ್ಪಿನ ಮೊಡನಂಬಿಕೆದ ವಿಚಾರೊನು ಶ್ರೀ ಗಣೇಶ್ ಸಂಜೀವ್ ಮೇರ್ ಪಾತೆರೊಗು ಒಯಿತ್ತ್ ದ್ ಆ ಮೊಢ ನಂಬಿಕೆಗ್ ಮೊಲ ಕಾರಣ ವಿಧ್ಯೆದ ಗುಣಮಟ್ಟ, ಆ ವಿಧ್ಯೆನ್ ದಾನ ಮನ್ಪುನ ಕಾರ್ಯಕ್ರಮೊಗು ಪೊರ್ಲುಡು ಸೊಲ್ಮೆ ಸಂದಾಯ ಮಂತಿನ ವಿಚಾರ ಗಮನಾರ್ಹ. ಅಂಚೆನೇ ಪ್ರಕಾಶ್ ಸೇರಿಗಾರ್ ಇನಿ ಮುಟ್ಟ ವೇದಿಕೆ ಮಿತ್ತರ್ದಿನಾಯೆ ಯಾನತ್ತ್ ಆಂಡ ವಿಧ್ಯಾದಾನೊಗು ಸದಾ ಬೆಂಬಲ ಕೊರ್ಪಿನಾಯೆ ಯಾನ್ ಆ ವಿಧ್ಯಾದಾನದ ಕಾರ್ಯಕ್ರಮೊಡೆ ಎಂಕ್ ರಡ್ಡ್ ಪಾತೆರ ಪಾತೆರ್ರೆ ತಿಕ್ಕಿನ ಸಂತೋಷದ ಕ್ಷಣ, ಯಾನ್ಲಾ ಬಂಗದ ಸಾದಿಡೇ ಕಲ್ತ್ ದ್ ದುಂಬು ಬೈದಿನಾಯೆ ಪಂಡ್ ದ್ ಅರೆ ಬಾಲ್ಯದ ದಿನೊತ್ತ ಭಾವನಾತ್ಮಕವಾಯಿನ ರಡ್ಡ್ ಪಾತೆರ ನೆರೆಯಿ ಜನಕ್ಲೆನ್ ಒಂಜಿ ಕ್ಷಣ ಮೌನೊಗು ನೂಂಕುಂಡು, ಪ್ರಕಾಶ್ ಎಸ್ ದೇವಾಡಿಗ ಮೇರ್ ಕಾರ್ಯಕ್ರಮದ ಉದ್ದೇಶ ಬೊಕ್ಕ ಜವನೆರೆ ಕಾಳಜಿನ್ ಪುಗರೊಂದು ಇಂಚಿನ ಕಾರ್ಯಕಮೊಗು ಎನ್ನ ಇಲ್ಲಬಾಕಿಲ್ ಏಪಲಾ ತೆರೆದುಂಡು ನಿಕ್ಲೆನೊಟ್ಟುಗು ಯಾನುಲ್ಲೆ ಪನ್ಪಿನ ಪಾತೆರ ದೇವಾಡಿಗ ಯುನೈಟೆಡ್ ಜವನೆರ್ ನನಲಾತ್ ಎಡ್ಡೆ ಬೇಲೆ ಮನ್ಪರೆ ಪ್ರೇರಣೆ ಕೊರುಂಡು. ಸಂಪೂರ್ಣ ಕಾರ್ಯಕ್ರಮೊಗು ಬೆರಿಎಲುವಾಯಿನ ಕರುಣಾಕರ್ ದೇವಾಡಿಗ ಮೆರನ ಸದಾ ಒಟ್ಟಿಗೆ ಉಪ್ಪುಗ ನನಲಾತ್ ಎಡ್ಡೆ ಬೇಲೆನ್ ಮನ್ಪುಗ ಮನ್ಪಿನ ಆಶಾವಾದದ ಪಾತೆರ, ಅಂಚೆನೆ ಚಾವಡಿಡ್ ಇತ್ತಿ ರತ್ನಾಕರ್ ಎಮ್ ದೇವಾಡಿಗ, ಚಿತ್ತರಂಜನ್, ರೊಹನ್ ಆರ್ ಮೋ೦ಟೆರೋ, ಪ್ರಕಾಶ್ ಎಸ್ ದೇವಾಡಿಗ, ಬಿ.ಜಿ ಲಕ್ಷ್ಮೀಕಾಂತ್ , ವಿನಿತ್ ಆರ್ ದೇವಾಡಿಗ ಮಾತ ಗಣ್ಯೆರೆನ ಪ್ರೋತ್ಸಾಹ ಪಾತೆರ ದೇವಾಡಿಗ ಚಾರಿಟಿ ಶೋ ಕಾರ್ಯಕ್ರಮೊನು ಗೆಲ್ಮೆಗೆತ್ತಾಂಡ್.
ದೇವಾಡಿಗ ಯುವ ಪ್ರತಿಭೆ ಪ್ರವೀಣ್ ಕುಮಾರ್ ಮೆರೆನ ಪೊರ್ಲುದ, ಜನ ಮೆಚ್ಚುನ ನಿರೂಪಣೆ, ಶ್ವೇತ ಗುಡ್ಡೆಮನೆ ಮೇರ್ ಧನಸಹಾಯ ಪಡೆವು ಜೋಕ್ಲೆನ್ ಚಾವಡಿಡ್ ಪರಿಚಯಿಸಾಯಿನ ಪರಿ, ರಾಘವೇಂದ್ರ ಮಣಿಪಾಲ್ ಮೆರೆನ ದೇವಾಡಿಗ ಬೆನ್ನಿದೊಟ್ಟುಗು ರಡ್ಡ್ ಪಾತೆರ, ಪ್ರಶಾಂತ್ ಚಂದ್ರ ಮೆರೆನ ಸೊಲ್ಮೆ ನುಡಿ, ಪವನೇಶ್ ದೇವಾಡಿಗ ಮೇರ್ ಪಾತೆರೊನು ಬಂಡವಾಳ ಮನ್ಪಂದೆ ತೆರೆಮರೆಟ್ಟ್ ಬೆಂದಿ ಸೌಜನ್ಯತೆ, ಪ್ರದೀಪ್ ಎಸ್ ದೇವಾಡಿಗೆರ್ ಬೇನೆ ತೆರಿಪಾವಂದೆ ಬೇಲೆ ಬಲಸಿ ಎಡ್ಡೆಪು, ಅಮಿತ್ ದೇವಾಡಿಗ ಮೆರೆನ ಕಲಾಕೌಶಲ್ಯೊಡು ವೀಡಿಯೋ ಕ್ಲಿಪ್ಪಿಂಗ್, ಜಗದೀಶ್ ಕವತ್ತರ್ ಮೆರೆನ ಭಯ ದಾಂತಿ ಬೆನ್ಪು, ರಕ್ಷಿತ್ ದೇವಾಡಿಗ ಪಡಿಲ್ ಮೇರ್ ಕಾರ್ಯಕ್ರಮದ ಎಡ್ಡೆಪುಗು ಸದಾ ದೇವೆರೆನ್ ಎದ್ಕೊನಿನ ಎಡ್ಡೆತನ, ಅಂಚೆನೆ ತ್ರಪ್ತಿ ಪ್ರಕಾಶ್, ಪ್ರಶಾಂತ್ ಶೇರಿಗಾರ್, ಕೀರ್ತಿರಾಜ್ ದೇವಾಡಿಗ, ಹರಿ ಪ್ರಸಾದ್, ಬಾಲು ಉಡುಪಿ,ಧನ್ ರಾಜ್ ದೇವಾಡಿಗ, ಮನಸ್ವಿತ ದೇವಾಡಿಗ, ಅಂಚೆನೆ ಊರು ಪರವೂರುದ ದೇವಾಡಿಗ ಯುನೈಟೆಡ್ ಬಂಧುಲೆನ ಹಾರೈಕೆದೊಟ್ಟುಗು ಗೆಲ್ಮೆದ ಅಂಗಲ್ಪುಡು ನಡತಿ ದೇವಾಡಿಗ ಚಾರಿಟಿ ಶೋ ಯುವ ದೇವಾಡಿಗ ಕಾರ್ನಿಕ ಆದ್ ಒರಿಯರೆ ಕಾರಣವಾಂಡ್.
ತೆರೆಟ್ಟ್ ಬೆಂದಿ ಮರೆಟ್ಟ್ ಹರಸಿ ಮಾತೆರೆಗ್ಲಾ ಸೊಲ್ಮೆ ಎದ್ಕೊಂದು,
ನಿಕ್ಲೆ...
-ಲೋಕು ಕುಡ್ಲ
ಇಹ-ಪರ-ಅಂತರ
ಯಾರ ಬೇಡಿದರೇನು
ಯಾರ ಕಾಡಿದರೇನು
ಆಯುಷ್ಯ ಅಂಕುಷಕೆ ಬಗ್ಗುವುದೇ,
ತುದಿಯು ಬುಡದೆಡೆ ಬಾಗುವವೇ?
ಮಣ್ಣ ತುಳಿದರೇನು
ಹೊನ್ನ ತೊಡಿದರೇನು
ಇಹದಿ ಪರಕೆ ಸುಖ ಸಾಗುವುದೇ,
ನಗದು ನಾಣ್ಯಕೆ ಪಾಪ ಕರಗುವದೇ?
ನೀರ ಎರೆದರೇನು
ಹಾಲು ಕುಡಿದರೇನು
ಅಂತರಂಗವು ಮಡಿ ಆಪುವುದೇ,
ಮಾಡಿದ ಪಾಪ ಬೆವರಲಿ ಜಾರುವದೇ?
ತಾಯಿ ತನ ತಿಳಿಯಾದರೇನು
ಸ್ತನ ಹಾಲು ಬಿಳಿಯಾದರೇನು
ಯೋನಿಲಿಳಿದ ಮಗು ಅಳದಿಹುದೇ,
ಬುದ್ದಿ ತಾಯ್ತನದಂತೆ ಬರೆದಿಹುದೇ.?
ದೈವ ಭಕ್ತನಾದರೇನು
ದೇಹದಿ ಶಕ್ತನಾದರೇನು
ಅಗ್ನಿ ಸೋಕಿದೊಡೆ ಸುಡದಿಹುದೇ,
ಕಪಟದ ಮಂತ್ರವು ಮುಕ್ತಿ ಈವುದೇ.?
ಪುಲ್ಯದ ಸುಪ್ರಭಾತ....
ಕೋರಿ ಕೆಲೆತಾಂಡ್
ಬೊಲ್ಪಾಂಡ್ ಭೂಮಿಗ್
ಇಲ್ಲ ಪೊಂಜೊವು ಜಾಲಡಿತ್
ತರೆ ಮೀದ್ ಮಡಿಯಾದ್
ತುಳಸಿ ಸುತ್ತುದು ಪುಲ್ಯದ ಸುಪ್ರಭಾತ.!
ನೀರೊಯ್ತಾಂಡ್ ಗುವೆಲ್ ಡ್
ರಂಗೋಲಿ ದೀಂಡ್ ತಡ್ಡೆದೆದುರು
ಪೂ ಸುರಿದಾಂಡ್ ದೇವೆರೆ ಅಲಂಕಾರೊಗು
ಪೇರ್ ಬೊರಿದಾಂಡ್ ಜಿಂಜಿ ಸಂಸಾರೊಗು
ದೈವ ಸುಗಿತೊಂದು ಭಕ್ತಿ ಬಿರ್ಕೊಂದು ಪುಲ್ಯದ ಸುಪ್ರಭಾತ.!
ಚಂದ್ರೆ ಮುರ್ಕುದಾಂಡ್
ಸೂರ್ಯೆ ಎರ್ಕ್ ದಾಂಡ್
ಪೂ ಪನಿ ರಾದ್ ಪಕ್ಕಿ ಬುಲ್ಪು ಕೈದಾಂಡ್
ಇಲ್ಲ ಪೊಂಜೊವು ದೀಪ ದೀದಾಂಡ್
ಇಲ್ಲ್ ಊದ್ಬತ್ತಿ ಕಮ್ಮೆನೊಡು ಪುಲ್ಯದ ಸುಪ್ರಭಾತ.!
ಅರ್ಲ್೦ಡ್ ಅಡ್ಪಿಲ್ಲ್ ಡ್
ನಡು ದಿಕ್ಕೆಲ್ ಡ್ ನುಂಗಿ ಪುದೆ
ಕೊದ್ಯೊಂದುಂಡು ಕರಟ್ಟ್ ಉರ್ಪೆಲರಿ ಗಂಜಿ
ಉರ್ಕೊ೦ದುಂಡು ಪೇರ್ ನುರೆ ಕೊದ್ದಿದ್
ಅಪ್ಪೆ ಜೈದಿ ಜೋಕ್ಲೆನ್ ಲಕ್ಕಾದ್ ಪುಲ್ಯದ ಸುಪ್ರಭಾತ.!
ಸೊಲ್ಮೆಲು
ಕಾವ್ಯ ಕಾಲಮಾನ... !
ಅರಳಿದಂತೊಮ್ಮೆ
ಮುದುಡಿದಂತೊಮ್ಮೆ
ಹಗಲು ಇರುಳ ಜಗಳದಲಿ
ಬಯಸಿ ಹಳಸಿ ಹಸಿ ಎನ್ನ ಭಾವ ಬಯಲು.!
ಏರುತಿಹುದೊಮ್ಮೆ
ಇಳಿಯುತಿಹುದೊಮ್ಮೆ
ಉಸಿರು ಎನ್ನೆದೆ ಅಂಗಳದಲಿ
ಗುರಿ ಸಾಹಸ ಹರುಷಕೆ ಈ ಹ್ರದಯ ಹೊನಲು.!
ಸೋಲುತಿಹುದೊಮ್ಮೆ
ಪುಟಿದೇಳುತಿಹುದೊಮ್ಮೆ
ಪಾದ ನಡೆದ ದೂರವ ಮರೆತು
ಹಂಬಲ ಹಿಗ್ಗಿ ಸುಗ್ಗಿಯಂತಿಂದೆನ್ನ ಬಾಳ ಮುಗಿಲು.!
ಬರಿದಾದಂತೊಮ್ಮೆ
ತುಂಬಿ ತುಳುಕಿದಂತೊಮ್ಮೆ
ಸಾಹಿತ್ಯ ಸಂಮ್ಮಂದದ ಬಿಂದಿಗೆ
ನೆರಳವಿತು ದೀಪದ ಬೆಳಕಲಿ ಈಗ ಕಾವ್ಯ ಕಡಲು.!
Saturday, May 5, 2012
ನಾ ಬರೆಯುವಾಗ .......
ಕುಂದಿತೇಕೆ ಛಲವೆನ್ನ ಎದೆಯಾಳದಿಂದ
ಹಸಿದ ಹಂಬಲ ಉಕ್ಕಿ ಹರಿದು ಹೋಯಿತೇ
ಯಶಸ್ಸಿನ ಏಣಿ ಕಾಲ ಬುಡದಲಿರುವಾಗ
ಭಾವುಕತೆ ಏಕೆ? ನಿರಾಳ ಮನ ಮುದುಡಿತೇಕೆ.!
ಒಂದರಂತಿಲ್ಲ ಮತ್ತೊಂದು ಕೈ ಬೆರಳು
ಮುಷ್ಟಿಯಲೇ ಸಾಧಿಪ ಸಂಪತ್ತು ಇಹುದು
ಇಂದಿನಂತಿಲ್ಲ ನಾಳೆಯ ದಿನ ಕ್ಷಣಗಳು
ನಂಬಿಕೆಯೇ ನಾಳೆಯ ಯಶಸ್ಸಿನ ನೆರಳು.!
ಅಂತರಾಳದಿ ಇಹುದಲ್ಲ ಜ್ನಾನ ಪುಸ್ತಕ
ಮಸ್ತಕಕೆ ಏಕೆ ಛಲದ ಮತ್ತು ಹತ್ತೇರುತಿಲ್ಲ
ದೇಹವೇ ದೇಗುಲ ಅಂಗಾಗಗಳೇ ದೈವ
ಮತ್ತೇಕೆ ಗುರಿಯ ಸೇರಲು ಹೊತ್ತಾಗುತಿಲ್ಲ.!
ಬೆಳಕಿಹುದು ಅಂತರಂಗದಿ ಕತ್ತಲ ಸುತ್ತಲು
ಹೊರ ಜಗವ ಬೆಳಗಲೇಕೆ ಬೆಳಕು ಸಾಲುತಿಲ್ಲ
ಹಣೆಬರಹ ವಿಧಿ ನಿಯಮಗಳೆಂಬ ಜಗಕೆ
ಆಸೆ ಜೊತೆ ನಿರುತ್ಸಾಹದ ಸಮ್ಮಂದ ಹೋಲುತಿಲ್ಲ.!
ಭೂಮಿ ಕಡಲು ಬೆಳಕು ಗಾಳಿ ಸುತ್ತಲೆಲ್ಲ
ಖಾಲಿ ಹಾಳೆಯಲಿ ಮಿಂಚುವ ಕವನವಾಯಿತೀಗ
ಮೌನ ಮನದ ದಂಡೆಯಲಿ ಕುಳಿತು
ಬದುಕ ಸಿಹಿ ಕಹಿ ಭಾವನೆಗಳನು ಬರೆಯುವಾಗ.!
Wednesday, November 23, 2011
ಪರಮಾತ್ಮ



ನಾದಸ್ವರವನ್ನು ಅಪಮಾನಿಸಿದ ಮೊತ್ತ ಮೊದಲ ಚಿತ್ರ ಪರಮಾತ್ಮ
ಕಲೆ ಏಕೆ ಕಾಲ ಕಸವಾಯಿತು ಯೋಗರಾಜ್ ಭಟ್ಟರಿಗೆ.? ಸುಂದರವಾದ ಚಿತ್ರ ನಿರ್ಮಿಸುವ ಮತ್ತು ವಿವಾದಗಳ ಮುಡಿ ಏರದ ಸಾಧಕ ಯೋಗರಾಜ್ ಭಟ್ ಎಂದರೆ ತಪ್ಪಾಗಲಾರದು. ಮುಂಗಾರು ಮಳೆ ಅಥವಾ ಪಂಚರಂಗಿ ಚಿತ್ರಗಳು ಯಾವುದೇ ವಿವಾದಗಳೀಗೆ ಮಣೆ ಇಡದೇ ಅಭಿಮಾನಿಗಳಲ್ಲಿ ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು, ಭಟ್ಟರ ಚಿತ್ರ ಎಂದರೆ ವಿಚಿತ್ರ ಡೈಲಾಗ್ ಸುರಿಮಳೆಗೇನೂ ಬರವಿಲ್ಲ, ಅಷ್ಟಲ್ಲದೆ ಅವರಿತ್ತ ಚಿತ್ರಗಳಲ್ಲಿ ಪ್ರತಿಬಂದಿಸುವಂತಹ ಅಪಚಾರಗಳೇನೂ ನಡೆದಿಲ್ಲ, ಯೋಗರಾಜ್ ಭಟ್ ಎಂದರೆ ನಯ ಸ್ವಭಾವದ ಸಾತ್ವಿ ಅವರ ಕಲಾಭಿರುಚಿಯನ್ನು ಯಾವ ಚಿತ್ರ ರಸಿಕರೂ, ನಟರೂ ತಳ್ಳಿಕಾಕಿಲ್ಲ. ಈಗ ಯೋಗರಾಜ್ ಭಟ್ ಚಿತ್ರವೆಂದರೆ ಜನ ಚಿತ್ರಮಂದಿರದಲ್ಲಿ ಟಿಕೇಟ್ ಗಾಗಿ ಮುಗಿಬೀಳುವುದು ಸುಳ್ಳಲ್ಲ, ಅದಕ್ಕೆಲ್ಲ ಅವರ ಚಿತ್ರದಲ್ಲಿನ ಶ್ರದ್ದೆಯ ಕೆಲಸ, ಡೈಲಾಗ್ ಝಲಕ್ ಕಾರಣವಾಗಿದೆ. ಆದರೂ ಕಲಾವಸ್ತುಗಳೀಗೆ ಪ್ರೋತ್ಸಾಹಿಸಬೇಕಾದ ಜವಾಬ್ದಾರಿ ಉಳ್ಳವರು ಅದನ್ನು ಕಡೆಗಣಿಸಿರುವುದು ವಿಷಾದನೀಯ.
ನಾದಸ್ವರವನ್ನು ಪರಮಾತ್ಮ ಚಿತ್ರ ಕಡಾಖಂಡಿತವಾಗಿ ಅವಮಾನಿಸಿದೆ, ನಾಯಕಿ ವೇದಿಕೆಯಲ್ಲಿ ನಾದಸ್ವರವನ್ನು ನುಡಿಸುವಾಗ ಆ ಸ್ವರದ ಬಗ್ಗೆ ನಾಯಕ ಅತ್ಯಂತ ಕಠೀಣವಾಗಿ ಅವಹೇಳನ ಮಾಡುತ್ತಾನೆ, ನಾಯಕಿ ನಾದಸ್ವರವನ್ನು ಹಿಡಿದುಕೊಂಡು ನಾಯಕನ ಬೆನ್ನಮೇಲೆ ಹತ್ತಿ ಕೂರುತ್ತಾಳೆ. ಇನ್ನೊಂದು ಕಡೆ ನಾಯಕ ನಾಯಕಿಯನ್ನು ತೆಪ್ಪದಲ್ಲಿ ಕರೆದೊಯ್ಯುವಾಗ ನಾಯಕ ಕಡೆಗೋಲಾಗಿಸಿ ನಾದಸ್ವರದಿಂದಲೆ ನೀರನ್ನು ಹಿಂದಕ್ಕೆ ತಳ್ಳುತ್ತಾನೆ. ಇಲ್ಲಿ ನಿರ್ದೇಶಕರ ದಾರಿತಪ್ಪಿದ ಮುತುವರ್ಜಿಯ ಕೆಲಸ ಎದ್ದು ಕಾಣುತ್ತಿದೆ. ಕಲಾವಿದನ ಕೈಯ್ಯಲ್ಲಿ ಇರುವ ವಸ್ತು ಆತನ ಕಲೆಗೆ ಒಂದು ಸ್ಪೂರ್ತಿ, ಆತ ಅದನ್ನು ಪೂಜಿಸುತ್ತಾನೆ, ಆದರೆ ಯೋಗರಾಜ್ ಭಟ್ ತಮ್ಮ ಚಿತ್ರದಲ್ಲಿ ನಾದಸ್ವರಕ್ಕೆ ಇರುವ ಮೌಲ್ಯವನ್ನು ಮರೆತು ನಿಂದಿಸಿದ್ದಾರೆ, ಚಿತ್ರದಲ್ಲಿ ನಾದಸ್ವರ ನಾಯಕ ನಾಯಕಿಯ ಕೈಯ್ಯಲ್ಲಿ ಅಡ್ಡಾದಿಡ್ಡಿಯಾಗಿ ಉಪಯೋಗಿಸಲ್ಪಡುತ್ತದೆ,
ಕಲಾ ವಸ್ತುಗಳನ್ನು ಕಲಾವಿದರೇ ನಿಂದಿಸಿದರೆ ಹೇಗೆ.! ದಿನದಿಂದ ದಿನಕ್ಕೆ ನಮ್ಮ ಸಂಸ್ಕ್ರತಿ,ಮೌಲ್ಯಗಳು ಬರಿದಾಗುತ್ತಿವೆ, ಇತ್ತೀಚೆಗೆ ಕನಿಷ್ಟ ಚಿತ್ರಗಳಲ್ಲಾದರೂ ಯಕ್ಷಗಾನ ಪಾತ್ರಧಾರಿಗಳು ಚಲನಚಿತ್ರದ ಹಾಡುಗಳಲ್ಲಿ ಮನಬಂದಂತೆ ನರ್ತಿಸುತ್ತಿದ್ದಾರೆ, ಇಲ್ಲಿ ಯಕ್ಷಗಾನದ ಬಗ್ಗೆ ಪಬ್ಲಿಸಿಟಿ ಸಿಗುತ್ತದೆ ಅನ್ನುವುದೊಂದು ಹುಚ್ಚು ಕಲ್ಪನೆಯಷ್ಟೆ.! ಒಂದು ಕಲೆಯನ್ನು ಪ್ರದರ್ಶಿಸಲು ಅದರದ್ದೇ ಆದಂತಹ ವೇದಿಕೆಗಳಿವೆ ಆ ವೇದಿಕೆಯಲ್ಲೇ ಅದನ್ನು ಪ್ರದರ್ಶಿಸಬೇಕು, ಸಂಸ್ಕ್ರತಿ ಅದಕ್ಕಿರುವ ವೇದಿಕೆಯಿಂದ ಕೆಳಗಿಳಿದರೆ ಮತ್ತೆ ಅದರ ಮೌಲ್ಯವನ್ನು ಗಳಿಸುವುದು ಸಾಧ್ಯವಿಲ್ಲದ ಮಾತು, ಹೆಚ್ಚಾಗಿ ದಕ್ಷಿಣ ಕನ್ನಡದ ಭಾಗಗಳಲ್ಲಿ ಭೂತಾರಾಧನೆ ಒಂದು ಶ್ರೇಷ್ಟವಾದ ಪರಂಪರೆ, ಆಚರಣೆ, ಅಲ್ಲಿ ಭೂತ,ದೈವಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ ಆದರೆ ಈಗ ಆ ಭೂತ ದೈವಗಳ ವೇಷಭೊಷಣಗಳನ್ನು ತೊಟ್ಟು ಬೀದಿಗಳಲ್ಲಿ ಮೆರವಣಿಗೆ ಹೊರಡುವ ಕಾಲ ಬಂದಿದೆ, ನಂಬಿಕೆಯಲ್ಲಿನ ಸಾಂಸ್ಕ್ರತಿಕತೆ ಕೇವಲ ಮನರಂಜನೆಯಾಗಿ ಬೀದಿಗಿಳಿಯುವ ಕಾಲ ದೂರವಿಲ್ಲ.
ಯೋಗರಾಜ್ ಭಟ್ ಅವರು ಚಿತ್ರದಲ್ಲಿ ನಾದಸ್ವರವನ್ನು ಈ ರೀತಿಯಾಗಿ ಕಡೆಗಾಣಿಸಿರುವುದು ಮುಗಿದುಹೋದ ಕಥೆ, ಆದರೆ ಇನ್ನು ಮುಂಬರುವ ಚಿತ್ರಗಳು ಆ ವಿಷಯವನ್ನು ಅನುಕರಿಸುತ್ತವೆ, ಮುತ್ತು ಒಡೆದರೆ ಮತ್ತೆ ಸರಿಪಡಿಸಲಾಗುವುದಿಲ್ಲ ,ಸಂಗೀತ ವಾದ್ಯಗಳಲ್ಲಿ ನಾದಸ್ವರ ಎಂಬುವುದು ಒಂದು ಮೇಲ್ಮಟ್ಟದ ವಾದ್ಯ, ಅದರ ಮೌಲ್ಯವನ್ನು ಹಿರಿಯರಿಂದ ಅಥವಾ ತಿಳಿದವರಿಂದ ಅರಿತರೆ ಮತ್ತೆ ಈ ತಪ್ಪುಗಳು ಮುಂದುವರಿಯುವುದು ಅಸಾಧ್ಯ, ಕಲೆಯನ್ನು ಪ್ರೀತಿಸಿ ನೋಡಿ, ಗೌರವ ಭಾವನೆ ತಾನಾಗಿಯೇ ಹುಟ್ಟುತ್ತದೆ. ನಾದವನ್ನು ನುಡಿಸಿದ ಮಾನವ ಕಲಾಕಾರ ನಿಜ ಆದರೆ ಆತ ನುಡಿಸಿದ ವಾದ್ಯವನ್ನೇ ಮರೆತರೆ ಹೇಗೆ....?
ಧನ್ಯವಾದಗಳೊಂದಿಗೆ..
ಲೋಕು ಕುಡ್ಲ,,,
Saturday, June 25, 2011
ಈ ಭುವಿಗೆ ಧನ್ಯವಾದ...

ಹಬ್ಬಿದ ಹುಬ್ಬು ನಯನಕೆ ಸೌಂದರ್ಯದ ಬೇಲಿ
ಮಾಧುರ್ಯದ ಚೈತನ್ಯ ಮನಕೆ ಪುಷ್ಪದ ಗಾಳಿ
ಪಚ್ಚೆ ಪಸಿರು ನಿಸರ್ಗ ಮಾನವ ಮನಕೆ ಸಾಂತ್ವನ
ಎತ್ತಣಿಂದೆತ್ತವೋ ಹಸಿರು-ಉಸಿರಿನ ಈ ಬಂದನ
ಕನಕಾಂಬರದಲಿ ಇಬ್ಬನಿಯ ಸೊಬಗು
ಅತ್ತಿಂದಿತ್ತ ತರಗೆಲೆಯ ನರ್ತನ
ತಿರುಗು ದಾರಿಗಳ ಸ್ನೇಹ ಅವಲಂಬನ
ಸೌಂದರ್ಯ ಚಿಲುಮೆಯೊಳಗಿನ ಈ ಚಂದನ ವನ
ಗಿರಿ ಶಿಖರಗಳ ಕಂಪು ತಂಪಿನ ಚುಂಬನದಲಿ
ಹಸಿರು ಚಟ ಪಟ ಸದ್ದಿಗೆ
ಹಕ್ಕಿ ಚಿಲಿ ಪಿಲಿ ಗಾನ ಸೇರಿದರೆ
ಮತ್ತೇರದೆ ಮತ್ತೇನು ಮನ ಬೇರಗಾಗುವಷ್ಟಿದೆ
ಪರಿ-ಸರದ ಸ್ವರ ಮಾಧುರ್ಯದ ಸೊಬಗು
ಪಚ್ಚೆ ಪರ್ವತ ಸ್ವಚ್ಚೆ ಭೂ ತಾಯಿ
ನಲ್ಮೆಯ ನಾವಿಕನಂತೆ ಈ ನಂದನ ವನ
ಕರವ ಜೋಡಿಸಿ ಬಂಧಿಸುವ ತವಕ
ಒಮ್ಮೆ ಮುತ್ತಿಸುವ ಪುಳಕ
ನಂದನದ ಧರೆಯನು ಚಂದನದ ಗಿರಿಯನು
ಹಾವು ಹೂವು ಹುಳು ಹುಪ್ಪಟೆಯ ರಂಗು
ಚೆಲ್ಲಿ ಚೆದುರಿದ ಚದುರಂಗದ ಬದುಕು
ಮನಬಂದೆಡೆಗೆ ಹರಿಯುವ ಹಳಿ ನೀರು
ಸರ್ವ ಪರ್ವಗಳ ಚಿತ್ತಾರದ ಮೆಲುಕು
ಬುವಿಯ ಆಂತರ್ಯಕೆ ಭಾರವಲ್ಲ
ಕತ್ತು ಕುಯ್ಯುವರೆಂಬ ಭಯವಿಲ್ಲ
ಮದ ಮಚ್ಚರವಿಲ್ಲದೆ ಹಸಿದ ನಾಲಗೆಗೆ ಸಿಹಿಯು
ಒಂದು ಮರದ ಕೊಂಬೆಯಷ್ಟೆ ಸಾಕೆಂಬ ಜೇನು ಗೋಡು
ಆಗಸ ಪ್ರಥ್ವಿಗೆ ಸಮ್ಮಂದವೆಲ್ಲಿಂದ
ತಣ್ಣನೆಯ ತಂಪಿಗೆ ವರ ಮೋಡ ಬಾನಿಗೆ
ಕಾಮನ ಬಿಲ್ಲಿನ ಕಾಮನೆಯ ಸೋಗಿಗೆ
ಭುವಿಯ ಪಚ್ಚೆ ಸೊಬಗಿಗೆ ಕರಗಿ
ಆ ಝರಿ ಮಳೆಯೇ ಬಾನಿಂದ
ಈ ಭುವಿಗೆ ಧನ್ಯವಾದ....
ಆ ಝರಿ ಮಳೆಯೇ ಬಾನಿಂದ
ಈ ಭುವಿಗೆ ಧನ್ಯವಾದ....
Wednesday, June 22, 2011
ತರಕಾರಿ ತಾರೆ.......

ಎನ್ನವಳು ಹಣ್ಣು ಹಂಪಲಿಗಿಂತ ಮಿಗಿಲಾದವಳು
ದುಂಡು ಮೊಗದ ತುಂಡು ಬದನೇ ಕಾಯಿ
ಬಾಳೇ ಹಣ್ಣಿನಂತೆ ಮಿಳ ಮಿಳಗಿನ ಮಿಂಚುಳ್ಳಿ
ನೇರಳೆಗೂ ನೆಂಟ ಸೌತೇ ಕಾಯಿ ಸೊಂಟ
ಹೀರೇ ಬಣ್ಣದ ಸೀರೆಯುಟ್ಟರೆ
ಮಂಡಕ್ಕಿ ಪಾಯಸವೂ ಬಿಸಿ ಆರುವುದು
ಕಪ್ಪು ದ್ರಾಕ್ಷಿಯ ಕಣ್ಣವಳು
ಬೆಂಡೇ ಕಾಯಿ ಕಾಲವಳು
ಜಿಲೇಬಿ ಸಿಹಿಯಂತ ತುಟಿಯವಳು
ಅವಳೇ ಎನ್ನ ಕಂಗಳು ಬಾಳ ಬೆಳದಿಂಗಳು
ನವಿಲು ಕೋಸಿನಂತೆ ನಲ್ಮೆಯ ಗೆಳತಿ
ಕೊತ್ತಂಬರಿ ಸೊಪ್ಪಿನಂತೆ ಸ್ವಾದದ ಸುಂದರಿ
ತರ ತರದ ತರಕಾರಿ ಎನ್ನವಳ ಉಸಬಾರಿ
ಕರಿಬೇವಿನಂತೆ ರುಚಿಗೆ ರಂಬೆಯೊ ಸಾಟಿಯಿಲ್ಲ
ಬೆಳ್ಳುಳ್ಳಿಯಂತೆ ಬೆಳ್ಳಗಿನ ಮನಸವಳು
ಸಾಸಿವೆಯಂತೆ ಪಟ ಪಟನೆ ಪುಟಿಯುವಳು
ಸಕ್ಕರೆಯ ಸಿಹಿಯವಳು ಅಕ್ಕರೆಯ ಗೆಳತಿ,
Thursday, June 9, 2011
ಹೆಣ್ಣು ಮನೆತನಕೆ ಹೊನ್ನು... ಹೆಣ್ಣು ಸಂಸಾರದ ಕಣ್ಣು,..

ಇದು ಸಂಸಾರದ ಗುಟ್ಟು.... ಯಾರಿಗೂ ಹೇಳ್ಬೇಡಿ...:-)
ಮಗನನ್ನು ಹೆತ್ತು ಹೊತ್ತು ಸಾಕಿ ಸಲಹಿ ವಿದ್ಯಾವಂತನನ್ನಾಗಿಸಿ ಅವನೂ ಮತ್ತೊಬ್ಬರಂತೆ ತನ್ನ ಕಾಲಲ್ಲಿ ತಾನು ನಿಲ್ಲಲು ಮೊದಲ ಪ್ರೇರಣೆಯೇ ತಾಯಿ, ಮಗನ ಪ್ರಗತಿಗಾಗಿ ಎಂತೆಂತ ನೋವು ಚುಚ್ಚು ಮಾತುಗಳನ್ನೂ ಸಹಿಸಿ ಹೊರಬಂದಿರುತ್ತಾಳೆ, ಆದರೆ ಅವೆಲ್ಲವೂ ನನ್ನ ಮಗ ಎಂಬ ಪ್ರೀತಿಯ ಗುಚ್ಚದಲ್ಲಿ ಮಾಸಿ ಹೋಗಿರುತ್ತದೆ ವಿನಹ ಎಂದಿಗೂ ಆ ನೋವು ಆಕೆಗೆ ಭಾರವೆನಿಸಿರುವುದಿಲ್ಲ, ಇದು ಆಕೆಯ ಜೀವನದ ಹಾದಿಯಲ್ಲಿ ಎಲ್ಲವನ್ನೂ ಸ್ವತಹ ಅನುಭವಿಸಿ ತಾಯಿ ಎಂಬ ಅಮೊಲ್ಯವಾದ ಪೀಠವನ್ನು ನಯವಾಗಿ ಪ್ರೀತಿಯಿಂದ ಸ್ವೀಕರಿಸಿ ಎಲ್ಲ ಕಷ್ಟವನ್ನೂ ಸಹಿಸಿ ಅದೆಷ್ಟೋ ಕನಸಿನ ಭಂಡಾರವನ್ನು ಹೊತ್ತು ಮಗನು ಒಂದು ಕೆಲಸ ಸಂಪಾದಿಸಿದಾಗ ಅದೇನೋ ಜೀವನದ ಒಂದು ಮೆಟ್ಟಿಲನ್ನು ಹತ್ತಿದ ತ್ರಪ್ತಿಯಿಂದ ಸಂತೋಷಪಡುತ್ತಾಳೆ. ಮಗನಿಗೆ ವ್ರತ್ತಿ ಅನ್ನೋದು ಏನೂ ದೊರೆತಾಯಿತು ಆದರೆ ಇನ್ನು ಒಂದು ಮದುವೆ ಅನ್ನೋದು ಆಗಿ ಹೋದರೆ ನನ್ನ ಕನಸಿನ ಜೀವನದ ಎಲ್ಲಾ ಹೆಜ್ಜೆಗಳನ್ನು ದಾಟಿದಂತೆ ಎಂದು ಹಾತೊರೆಯುತ್ತಾಳೆ, ಅಲ್ಲೂ ಹೆಣ್ಣು ನೋಡೋದು, ಹೆಣ್ಣಿನ ಆಯ್ಕೆ ಮಗನೀಗೆ ಇಷ್ಟವಾಗಿದೆಯೋ ಇಲ್ಲವೋ ಎಂಬ ಭೀತಿ, ಎಲ್ಲದರ ಜವಾಬ್ದಾರಿ ಹೊತ್ತು ಮುಂದುವರಿದಾಗ ಹೂವಿನಂತೆ ಸಾಕಿದ ಮಗನ ಬದುಕು ಮಡದಿ ಅನ್ನೋಳು ಬಂದ ಮೇಲೆ ಹೇಗಿರುತ್ತೋ ಅನ್ನೋ ದುಗುಡ ಎಲ್ಲವನನ್ನೂ ಸಹಿಸುವವಳು ತಾಯಿ. ಆದರೆ ತಾಯಿ ಆ ಸ್ಥಾನದಲ್ಲಿ ಇದ್ದು ಆಕೆಯ ಕೆಲಸಗಳನ್ನು ಸಂಪೂರ್ಣವಾಗಿ ಪ್ರೀತಿಯಿಂದ ಮುಗಿಸಿರುತ್ತಾಳೆ ಇನ್ನು ಆ ತಾಯಿಯ ಮನೆ ಎಂಬ ಅರಮನೆಯ ಸಂಪೂರ್ಣ ಜವಾಬ್ದಾರಿ ಸೊಸೆಗೆ.
ಮಗನ ಮದುವೆ ಮುಗಿದಾಯಿತು ನಗು ನಗುತ್ತಾ ಬಲಗಾಲಿಟ್ಟು ಸೊಸೆ ಒಳಗೆ ಬಂದಾಯಿತು ಇನ್ನು ದರ್ಬಾರೆಲ್ಲಾ ಸೊಸೇದೇ ನೋಡಿ.ಸೊಸೆ ಮನೆ ಬೆಳಗಿಸಬಹುದು ಮನೆ ಮುಳುಗಿಸಬಹುದು.
ನಿಜವಾಗಿಯು ಸೊಸೆ ಗಂಡನ ಮನೆಯಲ್ಲಿ ಸುಖವಾಗಿರಬೇಕು ಅಂದರೆ ಆಕೆಯಲ್ಲಿ ಜಾಣತನವಿರಬೇಕು. ಮೊದಲ ಕೆಲಸ ಗಂಡ ಹೇಗೆ ಅನ್ನೋದನ್ನ ತಿಳಿದುಕೊಳ್ಳುವುದು, ತಿಳಿಯಲು ಪ್ರಯತ್ನಿಸದಿದ್ದರೂ ಸರ್ವೇಸಾಮಾನ್ಯವಾಗಿ ತಿಳಿದೇ ತಿಳಿಯುತ್ತದೆ, ಹೆಂಡತಿಯ ಮುಂದೆ ಮನ ಬಿಚ್ಚದ ಗಂಡನಾರು ಅಲ್ಲವೇ. . ಗಂಡ ಅನ್ನುವವನಲ್ಲಿ ಎಷ್ಟೇ ಒಳ್ಳೆ ಗುಣ ಇದ್ದರೂ ಕೆಟ್ಟ ಗುಣಗಳನ್ನು ತಾಯಿ ತಿಳಿಯಲಿಲ್ಲವಾದರೂ ಮೊದಲು ರಿಸರ್ಚ್ ಮಾಡುವ ಪವರ್ ಮತ್ತು ಆಸಕ್ತಿ ಇರುವುದು ಹೆಂಡತಿಗೆ.
ಎಲ್ಲದರಲ್ಲೂ ಸ್ಟಾರ್ಟಿಂಗ್ ಟ್ರಬಲ್ ಅನ್ನೋದು ಇದ್ದೇ ಇರುತ್ತದೆ ಕ್ರಿಕೇಟ್ ಮ್ಯಾಚ್ ಆಗಿದ್ದರೆ ಮತ್ತೆ ಸರಿಪಡಿಸಿಕೊಳ್ಳಬಹುದು, ಆದರೆ ಇದು ಜೀವನ ಇಲ್ಲಿ ನಾಳೆ ಅನ್ನೋದು ಅನುಭವಿಸುವುದಕ್ಕೆ ಮಾತ್ರ ಇಂದು ಅನ್ನುವುದು ಸರಿಯಾಗಿ ರೂಪಿಸಿಕೊಳ್ಳುವುದಕ್ಕೆ. ಅತ್ತೆ ಸೊಸೆಯಿಂದ ಮೊದಲು ನಿರೀಕ್ಷಿಸುವುದು ನಯವಾದ ಮಾತು, ಉತ್ತಮ ನಡತೆ,ಗುಣ, ಆಕೆಯ ಆಡಂಭರವಿಲ್ಲದ ಸೌದರ್ಯ ಪ್ರಜ್ನೆ, ಮನೆಯವರೆಲ್ಲರನ್ನೂ ಪ್ರೀತಿಯಿಂದ ಓಲೈಸುವ ಮನೋಭಾವ.
ಮಗ ಪ್ರತೀ ದಿನದಂತೆ ಈ ದಿನವೂ ಆಫೀಸ್ ಗೆ ಹೋಗುವುದು ದಿನಚರಿ, ಹಾಗೆಯೇ ಅವನ ಅಮ್ಮ ಮಗ ಹೊರಡೋವಾಗ ಟಿಫನ್ ರೆಡಿ ಮಾಡೋದು ಹೊಸತೇನಲ್ಲ, ಆದರೆ ಸೊಸೆ ಬಂದಮೇಲೆ ಇದು ಬದಲಾಗಬೇಕು "ಅತ್ತೆ ನಾನಿದೀನಲ್ಲ ಇನ್ನೂ ನೀವ್ಯಾಕೆ ಇದನ್ನೆಲ್ಲ ಮಾಡ್ಬೇಕು" ಅನ್ನುವ ಸೊಸೆಯ ಪ್ರೀತಿ ತುಂಬಿದ ಒಂದು ಮಾತು ಬದುಕೆಂಬ ಕ್ರಿಕೆಟ್ ಜಗತ್ತಿನಲ್ಲಿ ರನ್ನಿನ ಕಾತೆ ತೆರೆದಂತೆ. ಅಲ್ಲಿ ಸೊಸೆಯ ಮುಂದೆ ಅತ್ತೆ ಏನೂ ಗೂಣಗದಿದ್ದರೂ ಮರೆಯಲ್ಲಿ ಸಂತಸ ತುಂಬಿದ ಎರಡು ಕಣ್ಣೀರನ್ನು ಸುರಿಸಿರುತ್ತಾಳೆ. ಮನೆ ಕೆಲಸಗಳಲ್ಲಿ ತಾನೂ ಪಾಲು ವಹಿಸಿ ಅತ್ತೆಗೆ ಸಾತ್ ನೀಡುವುದರಿಂದ ಆಕೆಯ ಮನದಲ್ಲಿ ಇನ್ನೂ ಹೆಚ್ಚಿನ ಜಾಗವನ್ನು ಪಡೆದುಕೊಳ್ಳಬಹುದು. ಇಲ್ಲಿ ಅತ್ತೆಯೊಬ್ಬಳ ಮನಗೆದ್ದರೆ ಮಾವನ ಮನವೂ ಗೆದ್ದಂತೆ ಹೇಗಂತೀರಾ ನೀವು ಅತ್ತೆಯ ಪರವಾಗಿ ವಹಿಸಿದ ಎಲ್ಲಾ ಕೆಲಸಗಳೂ ಸಂಜೆ ಮಾವನ ಗಮನಕ್ಕೆ ಚಾಚೂ ತಪ್ಪದೆ ಅಪ್ ಡೇಟ್ ಆಗಿರುತ್ತದೆ ಅಷ್ಟೇ ಅಲ್ಲದೆ ಅಲ್ಲಿ ನಡೆಯದ ಕೆಲವೂಂದು ವಿಷಯಗಳೂ ರೈಸ್ ಆಗಿದ್ದರೂ ಆಶ್ಚರ್ಯವೇನಿಲ್ಲ. ಸೊಸೆಯೊ ಕೆಲಸಕ್ಕೆ ಹೋಗಬೇಕೆಂದಿದ್ದರೆ ಮೊದಲು ಗಂಡನ ಅನುಮತಿ ನಂತರ ಅತ್ತೆ ಮಾವರ ಇಷ್ಟದ ಮೇರೆಗೆ ಹೋಗಬೇಕು. ಕೆಲಸಕ್ಕೆ ಹೋಗಿ ಬಂದು ಸುಸ್ತಾಗಿದೆ ಎಂದು ಸೋಫಾದಲ್ಲಿ ಟಿ ವಿ ರಿಮೋಟ್ ಹಿಡ್ಕೊಂಡು ಕೂತರೆ ಮತ್ತೆ ಕೆಲವೊಂದು ಪ್ರೀತಿ ತುಂಬಿದ ಅನುಮತಿಗಳೀಗೆ ಹರಸಾಹಸ ಪಡಬೇಕಾಗುತ್ತದೆ. ಸಂಜೆ ಕೆಲಸ ಮುಗಿದು ಬಂದು ಅತ್ತೆಗೆ ಸ್ವಲ್ಪ ಸಹಾಯ ಮಾಡಿ ನಂತರ ನಿಮ್ಮ ಕೆಲಸಗಳನ್ನು ಮಾಡಿಕೊಂಡರೆ ಮತ್ತೊಂದು ದಿನ ಸೊಸೆ ಕೆಲಸದಿಂದ ಬಂದಾಗ ಅತ್ತೆಯ ಬಿಸಿ ಬಿಸಿ ಟೀ ರೆಡಿಯಾಗಿರುತ್ತದೆ.
ಗಂಡನಾದವನೂ ಹೆಂಡತಿಯಿಂದ ಮೊದಲು ಬಯಸುವುದು ವ್ಯವಧಾನವಾದ ಮಾತು. ಗಂಡನ ಕೆಲವೂಂದು ನಿರ್ಧಾರಗಳೀಗೆ ಮಾತಿಗೆ ಮಾತು ಬೆಳೆಸಿ ರಂಪ ಮಾಡಿದರೆ ಅದೇ ಸಂಧರ್ಬ ಜೀವನದ ಯಾವುದೋ ಸುಖಕ್ಕೆ ಕಪ್ಪು ಚುಕ್ಕೆಯಾಗಿಬಿಡುತ್ತದೆ, ಆದರೆ ಆ ನಿರ್ಧಾರಕ್ಕೆ ಹೆಂಡತಿಯೊ ಕೆಲವೊಂದು ಅನ್ನಿಸಿಕೆಗಳನ್ನು ಸಮರ್ಪಿಸಬೇಕು ಆ ಸಮರ್ಪಣೆ ಆತನೀಗೆ ಜಾಣ್ಮೆಯಿಂದ ಅರ್ಥವಾಗುವ ರೀತಿಯಲ್ಲಿ ಪ್ರೀತಿಯಿಂದ ಪೌಣಿಸಿದಾಗ ಗಂಡನ ಪ್ರೀತಿ ತುಂಬಿದ ಒಂದು ಮುತ್ತು ಹೆಂಡತಿಯ ಕೆನ್ನೆಯನ್ನು ಅಲಂಕರಿಸುತ್ತದೆ. ಹೆಂಡತಿಯು ಗಂಡನನ್ನು ಗೌರವಿಸುವುದರಿಂದ ಆ ಗೌರವ ಭಾವನೆ ಸಂಬಂದಗಳ ಸುದೀರ್ಗ ಸಂತ್ರುಪ್ತಿಯನ್ನು ಕಲೆ ಹಾಕುತ್ತದೆ. ಆದರೆ ಹೆಂಡತಿ ಗಂಡನನ್ನು ಏಕೆ ಗೌರವಿಸಬೇಕು ಅನ್ನುವ ಭಾವನೆ ಅವಳಲ್ಲಿದ್ದರೆ ಅದು ಮೊರ್ಖತನ. ಗೌರವ ನಾವು ಸಂಪಾದಿಸಬೇಕು ಹೊರತು ನಮ್ಮನ್ನೇ ಗೌರವ ಗೌರವಿಸುತ್ತದೆ ಎಂದು ಕುಳಿತರೆ ತಲೆ ಕೂದಲು ಬಿಳಿಯಾಗುತ್ತದೆ ಅಷ್ಟೇ ಬಿಟ್ಟರೆ ಕತ್ತಲೆಯಲ್ಲಿ ಕಾಣುವುದುದೆಲ್ಲಾ ಮಂಜು ಆನ್ನುವುದನ್ನು ಪಾಲಿಸಿದಂತಾಗುತ್ತದೆ.. ಹೆಂಡತಿ ಗಂಡನನ್ನು ಗೌರವಿಸುವುದು ಅದು ಅವಳ ಜಾಣತನ ಮತ್ತು ಜವಾಬ್ದಾರಿ ನಂತರ ಗಂಡ ಹೆಂಡತಿಯನ್ನು ಗೌರವಿಸುವುದು ಆಕೆಯ ವಿವೇಚನೆಗೆ ಸಿಕ್ಕ ಪ್ರತಿಫಲ. ಅಷ್ಟೇ ಅಲ್ಲದೆ ಆತ ಹೆಂಡತಿಯ ಗೌರವಕ್ಕೆ ಪ್ರೀತಿಯಿಂದ ಮಣಿದು ಆಕೆಯನ್ನೊ ಗೌರವಿಸುತ್ತಾನೆ.
ಸೊಸೆಗೆ ಬದುಕಿನಲ್ಲಿನ ಮತ್ತೊಂದು ಶತ್ರು ಎಂದರೆ ಪಕ್ಕದ ಮನೆಯವರ ಮನೆಯೊಡೆಯುವ ಮಾತು, ಸಾಮಾನ್ಯವಾಗಿ ಪಕ್ಕದ ಮನೆಯ ದೇವಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬೇಕು, ಅಲ್ಲದೆ ಅವರು ತುಂಬುವ ಕೆಲವೊಂದು ಆಸೆಗಳೀಗೆ ಕಿವಿಕೊಡಬಾರದು. ಮಾತು ಮಾತಿನಲ್ಲೇ ಇರಬೇಕು ಜೀವನದ ಕಷ್ಟಗಳನ್ನು ನೀವು ನಿಮ್ಮ ಅನುಭವಕ್ಕೆ ತಕ್ಕಂತೆ ನಿಭಾಯಿಸಬೇಕು ಹೊರತಾಗಿ ಮತ್ತೊಬ್ಬರೊಡಗಿನ ಚರ್ಚೆಯಿಂದಲ್ಲ. ಎಲ್ಲರ ಜೊತೆಗೂ ಬೆರೆಯುವುದು ಅದು ನಿಮ್ಮ ದೊಡ್ಡಗುಣ ಆದರೆ ಅವರೊಡನೆ ಬೆರೆಯುವ ವಿಚಾರ ನಿಮ್ಮ ಮನೆಯವರೀಗೆ ಸರಿ ಎನಿಸಿತ್ತೋ ಅಥವಾ ಬೇಸರ ತರಿಸಿತ್ತೋ ಅನ್ನುವುದನ್ನು ಜಾಣ್ಮೆಯಿಂದ ಪರಿಶೀಲಿಸಿ ಸಂಸ್ಕರಿಸಬೇಕು. ಮತ್ತು ಆ ದಿನದ ರುಚಿ ಅಥವಾ ಕಹಿ ಅನುಭವದ ಎಲ್ಲಾ ವಿಚಾರಗಳನ್ನು ಪಕ್ಕದ ಮನೆಯವರ ಜೊತೆ ಬಡಾಯಿಸುವುದರ ಬದಲು ಅತ್ತೆ ಮಾವ ಗಂಡನೊಡನೆ ವಿವರಿಸಿದಾಗ ನಿಮ್ಮ ಬಗ್ಗೆ ಎಲ್ಲರೀಗೂ ಉತ್ತಮ ಅಭಿಪ್ರಾಯ ಬರುವುದರಲ್ಲಿ ಸಂಶಯವೇ ಇಲ್ಲ. ಗಂಡ ಕೆಲಸದಿಂದ ಬಂದಾಗ, ಅತ್ತೆ ಮಾವರ ಮದ್ಯೆ ತೊಡಕಾದಾಗ ಎಲ್ಲಾ ನೋವುಗಳನ್ನು ಮರೆಸಿ ಸದಾ ನಗುನಗುತ್ತಾ ಓಡಾಡುವುದೇ ಮನೆಯ ಸೊಸೆಗೆ ಮನೆ ಬೆಳಗಿಸಲು ಇರುವ ಅತ್ಯಮೊಲ್ಯವಾದ ಸೂತ್ರ.. ತಾನು ಸೋತಿಲ್ಲ, ತಪ್ಪಿಲ್ಲವಾದರೂ ತನ್ನದೇ ತಪ್ಪು ಎಂದು ಒಪ್ಪಿಕೊಂಡ ನಂತರ ಆ ತಪ್ಪಿನ ನಿಜವಾದ ಮೊಲ ಅತ್ತೆಗೆ ತಿಳಿದಾಗ ನಿಮ್ಮ ಸೊಸೆ ಎಂಬ ಸ್ಥಾನ ಸೊಸೆ ಎಂಬ ದೇವತೆ ಎಂಬ ಮಾತಿನೆಡೆಗೆ ಸಾಗುವುದರಲ್ಲಿ ಸಂಶಯವೇ ಬೇಡ. ಅತ್ತೆ, ಮಾವ, ಮನೆಯವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ವಿಚಾರಿಸುವುದು ಗಂಡನ ಜವಾಬ್ದಾರಿಗಳನ್ನು ಮೆಲುಕು ಹಾಕಿ ನಿಭಾಯಿಸುವುದು ಮನೆ,ಮನದ ಸೌಂದರ್ಯವನ್ನು ಇನ್ನೂ ಹೆಚ್ಚಿಸುತ್ತದೆ.
ಹೆಣ್ಣಿಗೆ ಗಂಡನಿಗಿಂತಲೂ ಹೆಚ್ಚಿನ ಮೋಹವಿರುವುದು ಚಿನ್ನಾಭರಣಗಳಲ್ಲಿ, ಅದನ್ನು ಗಂಡನ ಜೊತೆಗೆ ಜಗಳ ಮಾಡಿಕೊಂಡು ಮನೆಯ ಇತರ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳದೆ ಎರ್ರಾ ಬಿರ್ರಿ ಗದ್ದಲ ಸ್ರುಷ್ಟಿಸಿ ತನ್ನ ಆಸೆಗಳನ್ನು ತೀರಿಸಿಕೊಳ್ಳುವುದರ ಬದಲು ಗಂಡನ ಅಥವಾ ಅತ್ತೆ ಮಾವರ ಜೊತೆಗೆ ಪ್ರೀತಿಯ ಮಾತುಗಳಿಂದ ತನ್ನ ಮನದ ಆಸೆಗಳನ್ನು ತೋಡಿಕೊಳ್ಳುವುದರಲ್ಲಿ ಹೆಚ್ಚಿನ ಸುಖವಿದೆ. ನೀವೇ ನಿಮಗೆ ಬೇಕಿರುವ ಚಿನ್ನವನ್ನು ಕೊಂಡು ಕೊಳ್ಳಲು ಮನೆಯವರಿಗೆಲ್ಲರಿಗೂ ತಿಳಿಯುವ ರೂಪದಲ್ಲಿ ಹಣವನ್ನು ಒಟ್ಟುಗೂಡಿಸಿಕೊಳ್ಳಿ, ನಿಮ್ಮ ಆಸೆ ಮತ್ತು ತೊಳಲಾಟವನ್ನು ನೋಡಿ ನಿಮ್ಮತ್ತೆ ಪ್ರೀತಿಯಿಂದ ನಕ್ಕು ಆಕೆ ಬೆಲ್ಲದ ಡಬ್ಬದಲ್ಲಿ ಅವಿತಿಟ್ಟ ಚಿಲ್ಲರೆ-ಪಲ್ಲರೆ ದುಡ್ಡನ್ನು ನಿಮ್ಮ ಮಡಿಲಿಗೆ ಸುರಿಯುತ್ತಾರೆ, ಆದರೆ ಅದರ ಹಿಂದೆ ಪ್ರೀತಿ ಇರುವುದಂತೂ ಕಂಡಿತಾ ಆ ಬಗ್ಗೆ ವಿಚಾರ ತಿಳಿದ ಬಳಿಕ ಮಾವನೂ ನನ್ನ ಮುದ್ದಿನ ಸೊಸೆಗೆ ಕೊಡುವುದರಲ್ಲಿ ನಾನೇನು ಕಡಿಮೆ ಎಂದು ಜಂಬಕ್ಕೆ ನಿಮಗೆ ಸಹಾಯ ಮಾಡಬಹುದು, ಇನ್ನು ಗಂಡ ಸುಮ್ಮನಿರುತ್ತಾನೆಯೇ ಅವನೂ ತನ್ನ ಕೈಯ್ಯಲ್ಲಾದಷ್ಟನ್ನು ಹೆಂಡತಿಯ ಇಚ್ಚೆಯನ್ನು ಪೂರೈಸುತ್ತಾನೆ. ಇದೀಗ ಚಿನ್ನ ನಿಮಗೆ ಪುಕ್ಕಟೆ ಸಿಕ್ಕಿದ್ದಲ್ಲ ನೀವು ಮನೆಯವರ ಮನ ಗೆದ್ದ ಸಾಧನೆಗೆ ಪ್ರಶಸ್ತಿ. ಅದೇ ಹಟ ಮಾಡಿಕೊಂಡು ಗಲಾಟೆ ಗದ್ದಲದಿಂದ ಗಳಿಸಿದ ಚಿನ್ನದಿಂದ ಈ ರೀತಿಯ ಸುಖವಿರುತ್ತಿತ್ತೇ....?
ಮನೆಗೆ ಮಗು ಬಂದ ಮೇಲೆ ಸೊಸೆಗೆ ಮನೆಯವರ ಮೇಲೆ ಪ್ರೀತಿ ಕಡಿಮೆಯಾಗಬಾರದು. ಎಲ್ಲಾ ಸಮಯದಲ್ಲೂ ಮಗುವನ್ನೇ ಮುದ್ದಿಸುತ್ತಾ ಕುಳಿತರೆ ಮತ್ತೆ ಎಲ್ಲೋ ಎಡವಿದ ಅನುಭವ ನಿಮ್ಮ ಗಮನಕ್ಕೆ ಬಾರದಿರುವುದಿಲ್ಲ. ಮಗುವನ್ನು ಅತ್ತೆ ಮಾವನಿಗೂ ಮುದ್ದಿಸಲು ಎಡೆಮಾಡಬೇಕು ಮತ್ತು ಪ್ರೋತ್ಸಾಹಿಸಬೇಕು. ಆ ಮಗು ಮನೆಯವರೆಲ್ಲರನ್ನೂ ಪ್ರೀತಿಸುವಂತೆ ಮಾಡಬೇಕು ಮಕ್ಕಳಾದಮೇಲೆ ಸ್ವಲ್ಪ ಮಟ್ಟಿಗೆ ಜವಾಬ್ದಾರಿ ಹೆಚ್ಚಿದರೂ ಗಂಡನ ಜೊತೆ ಈ ಹಿಂದೆ ಕಳೆದ ದಿನಗಳನ್ನು ಮರೆಯಬಾರದು ಪ್ರೀತಿ ಕಡಿಮೆಯಾಗಬಾರದು.
ಇಂದು ನೀವು ಸೊಸೆಯಾಗಿ ಮನೆಬೆಳಗಿಸಿದರೆ ನಾಳೆ ನಿಮಗೆ ಸಿಗುವ ಸೊಸೆ ಮುತ್ತಿನಂತವಳಾಗಿರುತ್ತಾಳೆ.
ಹೆಣ್ಣು ಮನೆತನಕೆ ಹೊನ್ನು... ಹೆಣ್ಣು ಸಂಸಾರದ ಕಣ್ಣು,..
Tuesday, June 7, 2011
ಮನ ಮಾಧುರ್ಯ ...

ಅಂದ ತುಳುಕುತಿಹುದು ಗಿಣಿಯು ಪಂಜರದೊಳೇಕೆ... ?
ಆಸೆ ಇಲ್ಲವೇ ಗಗನಕೆ ಹಾರಿ ಕುಣಿಯಲು.......!
ಅಂದ ಸೋರಿಹುದು ಕಾಗೆ ಗಗನವ ಬಾಚಿಹುದು
ಕಪ್ಪು ವರ್ಣವೇ ಕಾ ಕಾ ಹಾಡಿಗೆ ಸೌಂದರ್ಯದ ಹೊನಲು..!
ಸೋಲಿನ ಬದುಕು ಸಾಲು ಸಾಲಾಗಿ ಎಲ್ಲೆ ಮೀರಿದರೊ
ಒಂದು ಗೆಲುವಿನ ಏಣಿ ಏರಲು ಕಾಲಿಗೇಕೆ ದಣಿವಾಯಿತು....?
ಮನವು ಮುನಿದಾಗ ಕ್ಷಣದೊಳು ಹರಿದ ಕಣ್ಣೀರು
ಉಸಿರು ನಿಂತಾಗ ಏಕೆ ಬರಿದಾಯಿತು.......!
ಬಂದು ಬಳಗಗಗಳು ಮನೆತನದ ಕವಲುಗಳು
ಮಾತಿನ ಸೋಗೆಗೇಕೆ ಹರಿದು ಚೊರಾಗುವುದು.......?
ನಿನ್ನೆಗಳಲಿ ಪ್ರೀತಿ ಸ್ನೇಹ ಮಧುರ ಬಾಂದವ್ಯದೊಳು ನಗುವಿತ್ತು..!
ನಾಳೆಗಳ ನಾಲಗೆಯಲಿ ನಿನ್ನೆಗಳ ಮೆಲುಕುಗಳೇಕೆ ಶೊನ್ಯ.....?
ಜೋಕಾಲಿಯಂತೆ ಬದುಕು ತೊಗಿದರೆ ಮುಂದೆ ಹಿಂದೆ ಎರಡರ ಅರಿವು
ತೊಗಿದ ದಾರ ಕೊರಿದ ಆಸನ ಕೇವಲ ನೆಪವಷ್ಟೆ...!
ಅಂದು ಅಮ್ಮನ ತುತ್ತು...ಇಂದು ಹೆಂಡ ’ತಿ’ ಯ ಮುತ್ತು
ಪ್ರೀತಿ ಮರೆತು ಸುಕದ ಆಲಿಂಗನವಷ್ಟೆ....!
ಕಮಲಕೆ ನಗುವಿತ್ತು ಬೇರಿಗೆ ನೀರಿತ್ತು...
ಬೇರು ನೀರಿನ ರುಣಕೆ ಕಮಲಕೆ ಕಾಲವಿಲ್ಲ...!
ಸುಖ ಶಾಂತಿ ನೆಮ್ಮದಿ ಕಾಲಕ್ಕೆ ತಾಳಗಳು...
ಪ್ರೀತಿ ಸ್ನೇಹ ನಂಬಿಕೆ ಬದುಕಿನ ಮೌಲ್ಯಗಳು..
ಕಣ್ಣ ಕನಸು ಮನ ಮಾಧುರ್ಯ
ಗಾನದೊಳೇಕೆ ಮಧುರ... ಬಾಳಿನಲೇಕೆ ನಗ್ನ.....?
Thursday, June 2, 2011
ಹಿಜಡಾ ಎಂಬ ದುಗುಡ..

ಒಂದು ನೆನಪಿನ ಜೊತೆಗೆ ನೂರು ಕಂಬನಿಯ ಬಿಂದು,
ಇದು ಅವನು ಅವಳಾದ ಬದುಕು ಬಾಲ್ಯ ಹೀಗಿತ್ತು,
ಅವನ ಬಾಲ್ಯದಲ್ಲೊ ಕನಸುಗಳ ಸೌಂದರ್ಯದ ಸ್ವಾದ.
ಬದುಕೊಂದು ಪುಟ್ಟ ಸಾಲು, ಪುಟ್ಟ ಪುಟ್ಟ ಆಸೆಗಳ ಮೆಟ್ಟಿಲೇರಿ ಆಗಸವನ್ನೇ ಗಿಟ್ಟಿಸುವ ಬಯಕೆ, ಅವನೂ ಒಬ್ಬ ಪುಟ್ಟ ಕಂದಮ್ಮ ಎಲ್ಲರಂತೆಯೇ ಅವನಮ್ಮನೂ ಅಕ್ಕರೆಯಿಂದ ಓಲೈಸುತ್ತಿದ್ದಳಂತೆ, ಆಕೆಯ ಎದೆಹಾಲನ್ನು ಅವನೂ ಚುಂಬಿಸಿದ ಮಮತೆ, ಅವನಿಗೂ ಅವನಮ್ಮ ಗಲ್ಲದ ಮೇಲೆ ಕಾಡಿಗೆಯ ಬೊಟ್ಟು ಉಂಗುರಬೆರಳಿಂದ ಹಚ್ಚುತ್ತಿದ್ದ ನೆನಪು, ಎತ್ತಿ ಮುದ್ದಾಡಿದ್ದಳು, ನೆರೆಮನೆಯ ಪುಟಾಣಿಗಳೊಡನೆ ಚೆಂಡಾಟ ಆಡುತ್ತಿದ್ದ, ಹಠವಿತ್ತು ಅಳುತ್ತಿದ್ದ, ಅಮ್ಮ ಬುತ್ತಿ ಕಟ್ಟಿದ್ದಳು, ಅಪ್ಪ ಬೆನ್ನಿಗೆ ಬ್ಯಾಗ್ ಹಾಕಿ ಎತ್ತಿಕೊಂಡು ಸ್ಕೂಟರ್ ನಲ್ಲಿ ಕುಳ್ಳಿರಿಸಿ ಸೈಲೆಂಸರ್ ನ ಕಪ್ಪು ಹೊಗೆಯ ಜೊತೆಗೆ ಅವನ ಹಾಲು ಗಲ್ಲದ ತುಂಟಾಟ ಸಹಿಸಿಕೊಂಡು ಶಾಲೆಯ ಮುಂದಿನ ರಸ್ತೆಯಲ್ಲಿ ನಿಲ್ಲಿಸಿ ಟಾ ಟಾ ಮಾಡಿ ಹೋಗುತ್ತಿದ್ದರು, ಅವನಿಗೂ ಅಪ್ಪ ಅಮ್ಮ ಸಹೋದರ ಸಹೋದರಿ ಸ್ನೇಹಿತರು ಎಲ್ಲಾ ಇದ್ದರು.ಆದರೆ ಅವನ ಮನದಲ್ಲಿ ಇದೆಲ್ಲಾ ಮುಗಿದು ಹೋದ ಕಥೆಯಷ್ಟೆ.
ಹರೆಯ ಹಿರಿದಾಗುತ್ತಾ ಅವನಲ್ಲಿನ ಬದಲಾವನೆ ಕೊಂಚ ತಿಳಿದಿದ್ದರೊ ಏಳನೇ ತರಗತಿ ಮುಗಿದೊಡನೆ ಮನಸ್ಸು ಹಿಡಿತ ತಪ್ಪಿತ್ತು ಭಾವನೆಗಳಲ್ಲಿ ಏನೋ ವ್ಯತ್ಯಾಸ ಅವನೆಂಬ ಬದುಕು ಅವಳೆಂಬಂತೆ ಕಾಡುತ್ತಿತ್ತು, ಮನ ಒಂಟಿ ತನವನ್ನು ಬಯಸಿತ್ತು ಸತ್ಯವೇನೆಂಬುದು ಅದಾಗ ಆ ಮುಗ್ದ ಮನಸ್ಸಿಗೆ ಹೊಳೆಯಲೇ ಇಲ್ಲ, ತನ್ನ ತೊಳಳನ್ನು ಸ್ನೇಹಿತರೊಂದಿಗೆ ತೋಡಿಕೊಂಡ. ಈ ವರೆಗೂ ಆಟದ ಬಗ್ಗೆ ಆಡಿಕೊಂಡ ಸ್ನೇಹಿತರು ಇದೀಗ ಬದುಕಿನ ಬಗ್ಗೆಯೇ ಆಡಿಕೊಳ್ಳುವಂತಾಯಿತು, ಇದೇಕೆ ಬದುಕು ಹೀಗೆ? ನನಗೂ ಹೆಣ್ಣಾಗುವಾಸೆ, ಅವಳ ಜೊತೆ ಕೂರುವ ಆಸೆ,ಮುಡಿಗೆ ಮಲ್ಲಿಗೆ ಮುಡಿಯುವಾಸೆ,ಸೊಂಟ ಬಳುಕಿಸಿ ನಡೆದಾಡುವಾಸೆ ಆದರೆ ನಾಲ್ವರು ಹುಡುಗರೊಡನೆ ಕೊರುವಾಗ ಮನದಲ್ಲೊಂದು ತುಮುಲ ಎಲ್ಲದರ ಜೊತೆಗೆ ಬದುಕೇ ಗೊಂದಲದ ಅಲೆಯ ಜೊತೆ ಅಪ್ಪಳಿಸುತ್ತಿದೆ.
ಎಲ್ಲವನ್ನೊ ತಿಳಿದುಕೊಂಡು ಗಂಡಾಗಿ ಮುನ್ನಡೆಯುವ ಬಯಕೆ ದೂರಾಗಿ ಹೆಣ್ಣಾಗುವ ಬಯಕೆ ನೂರಾಯಿತು ಈ ನಿರ್ಧಾರದೊಡನೆ ಸಂಮ್ಮಂದಗಳೇ ದೂರಾಯಿತು. ಅಂದಿದ್ದ ಅಪ್ಪ ಅಮ್ಮನ ಪ್ರೀತಿ ಇಂದಿಲ್ಲ ಬೇನೆ ಹಂಚಿಕೊಳ್ಳಲು ಸೋದರಿ ಸೋದರರಿಲ್ಲ ಸ್ನೇಹಿತರಿಂದ ಕ್ಷಣ ಕ್ಷಣವೊ ಚುಚ್ಚು ಮಾತು, ಅವನು ಅವನಾಳವನ್ನು ಹಂಚಿಕೊಳ್ಳದಿದ್ದರೂ ವರ್ತನೆಯಿಂದಲೇ ಎಲ್ಲವೂ ಸ್ಪಷ್ಟವಾಗುತ್ತಿತ್ತು.
ಲಿಂಗ ಪರಿವರ್ತನೆಯಿಂದ ಹೆಣ್ಣಾಗಿ ಬದಲಾಗಲು ಆಪರೇಷನ್ ಮಾಡಿಸಿ ಕೊಳ್ಳುತ್ತಾರೆ ಆದರೆ ಚಿಕಿತ್ಸೆಯ ನಂತರ ಸ್ತನ ಮತ್ತು ಕೂದಲ ಬೆಳವಣಿಗೆಗಾಗಿ ವಿವಿದ ರೀತಿಯ ಹಾರ್ಮೋನುಗಳನ್ನು ದೀರ್ಘ ಕಾಲದವರೆಗೆ ತೆಗೆದುಕೊಳ್ಳಬೇಕಾಗಿರುವುದರಿಂದ ಅಂತಹ ಹಾರ್ಮೋನು ಚಿಕಿತ್ಸೆಯ ಸಂಧರ್ಬದಲ್ಲಿ ಮಾನಸಿಕ ಒತ್ತಡಗಳು ಸಹಜ ಅಲ್ಲಿ ಪರಿವರ್ತನೆಯಿಂದ ಬಯಕೆಗಳು ತೀರಿತಷ್ಟೆ ಬೇನೆ ಇನ್ನೂ ಹೆಚ್ಚಾಗಿತ್ತು. ಆತನೀಗೆ ಪ್ರಪಂಚದಲ್ಲಿ ನಾನೂಬ್ಬನೇ ಹೀಗೆ ನನಗೊಬ್ಬನೀಗೆ ಲಿಂಗ ಅಪವಾದ ಎಂಬ ತೊಳಲಿತ್ತು, ಅದೆಷ್ಟೋ ಬಾರಿ ಬದುಕೇ ಸಾಕು ಸತ್ತರೆ ಒಂದೇ ಬಾರಿ, ಬದುಕಿದ್ದರೆ ನೋವಿನೊಡನೆ ಚಿಂತೆಗಳ ಕಂತೆ ಅಷ್ಟೆ ಎಂದು ಸಾಯುವ ಸುಲಭ ದಾರಿಯನ್ನು ಹುಡುಕಲು ಹೋಗಿ ಎಡವಿದ್ದ ಮತ್ತೆ ಅಮ್ಮನ ಕೈ ತುತ್ತು ಸಿಗುವುದೋ ಎಂದು ಹೋದರೆ ಮನೆಯ ಬಾಗಿಲೇ ಮುಚ್ಚಿತ್ತು. ಆದರೆ ಅವರಲ್ಲೂ ಸಂಗವಿದೆ ಅವರಿಗೂ ಕನಸುಗಳನ್ನು ಕಟ್ಟುವ ದಾರಿಗಳಿವೆ ಎಂದು ಪ್ರತ್ಯಕ್ಷವಾಗಿ ತಿಳಿದಾಗ ಅವರ ಜೊತೆಗೇ ಸೇರಿಕೊಂಡ ಎಲ್ಲರಂತೇ ತಾನೂ ಕಣ್ಣಿಗೆ ಕಾಡಿಗೆ ತುಟಿಗೆ ಲಿಪ್ ಸ್ಟಿಕ್ ಕೆನ್ನೆಗಷ್ಟು ಪೌಡರ್ ಬಳಿದುಕೊಂಡು ಅಂಗಡಿ,ಸಿಗ್ನಲ್ ಗಳಲ್ಲಿ ಮತ್ತೊಬ್ಬರೆದುರು ಕೈ ಚಾಚುತ್ತಾ ಬದುಕಿನ ಚಕ್ರ ತಿರುಗುತ್ತಿತ್ತು ಆದರೆ ಒಂಟಿಯಾಗಿ ಕುಳಿತರೆ,ಕಣ್ಣು ಮುಚ್ಚಿದರೆ ಆ ಒಂದು ನೆನಪಿನ ಜೊತೆಗೆ ನೂರು ಕಂಬನಿಯ ಬಿಂದು ಕೆನ್ನೆಯ ಮೇಲೆ ಹರಿದಾಡುತ್ತಿತ್ತು.
ಯಾರದೋ ಮುಂದೆ ನಿಂತು ಹಣಕ್ಕೆ ಕೈ ಚಾಚಿದಾಗ ಅವರ ಕೈಯನ್ನೇ ಹಿಡಿದುಕೊಂಡು ತಮಾಶೆಯ ತಿಮಿರಿಗೆ ಕಾಮದ ಕಣ್ಣಿನಿಂದ ಅವರನ್ನು ಟೀಕಿಸುವುದುಂಟು, ಲಾಡ್ಜ್ ಗಳೀಗೆ ಕರೆತಂದು ಅವರಿಂದ ಎಣ್ಣೆ ಮಸಾಜು, ಸ್ವಲ್ಪ ಅಂದವಿದ್ದರೆ ಗೊಡ್ಡು ದೇಹದ ಸುಖವನ್ನು ಒತ್ತಾಯಪೂರ್ವಕವಾಗಿ ಅವರಿಂದಲೇ ತೀರಿಸಿಕೊಂಡು ರಾಜ ಗಾಂಭೀರ್ಯದಿಂದ ರೂಪಾಯಿಗಳನ್ನು ಮುಖಕ್ಕೆ ಚೆಲ್ಲುತ್ತಾರೆ ಎಂತಹಾ ಅಮಾನವೀಯ ಮನಸ್ಸು,
ಶೇಕಡಾ ೮೦ರಷ್ಟು ಮಂದಿ ನೊಂದುಕೊಂಡೇ ಬದುಕು ಸಾಕು ಅನ್ನೋದನ್ನ ನಿರ್ಧರಿಸುತ್ತಾರೆ, ಕೆಲವೊಬ್ಬರು ಮಂದಿ ಏನಂದರೂ ಪರವಾಗಿಲ್ಲ ಅವರ ಮಾತನ್ನು ಭೇದಿಸುತ್ತೇವೆ ಎಂಬ ದಿಟ್ಟ ನಿಲುವನ್ನು ಹೊಂದುತ್ತಾರೆ.
ಯಾಕೆ ಹಿಜಿಡಾ ಎಂದರೆ ಬದುಕಲು ಅನರ್ಹರೆನ್ನಬೇಕು ಅವರಲ್ಲೂ ಎಷ್ಟೋ ಮಂದಿ ದೇಶವನ್ನೇ ಹುರಿದುಂಬಿಸಿದ ಭರತನಾಟ್ಯ ಕಲಾವಿದರಿದ್ದಾರೆ, ಅವರಲ್ಲೂ ಕಲೆ ಇದೆ,ಅವರಿಗೂ ಸಂಸ್ಕ್ರುತಿ ಇದೆ, ಕಾನೂನು ಕಟ್ಟು ಕಟ್ಟಲೆಗಳಿವೆ ಜನಗಣತಿ ಜಾತಿಗಣತಿಗಳಲ್ಲಿ ಅವರಿಗೂ ಒಂದು ಸರಿಯಾದ ಸ್ಥಾನಮಾನ ನೀಡೋಣ,ಸರಕಾರೀ ನೌಕರಿಗಳನ್ನೂ ಹಂಚೋಣ ಅವರೂ ಕಾಮನ ಬಿಲ್ಲಿನ ಬಣ್ಣದ ಸೊಬಗನ್ನು ಸವಿಯುತ್ತಾರೆ, ಹೆಣ್ಣು ಗಂಡು ಎಂಬ ಮಾನವ ಜಾತಿಯಲ್ಲಿ ಅವರೂ ಒಬ್ಬರು, ಸುಂದರ ಬದುಕಿನಲ್ಲಿ ನೋವಿನ ಸುಳಿಯೊಳಗೆ ಅವರ ಕಣ್ಣೀರೇಕೆ ಕೆನ್ನೆಯಿಂದ ಹರಿದು ನೆಲವನ್ನು ಸೋಕುವುದು.......................?
Tuesday, May 31, 2011
ಅಪ್ಪಿ V/s ಅಪ್ಪು
ತುಳು ಭಾಷೆಯಲ್ಲೊಂದು ಪ್ರೀತಿಯ ಮಿಲನದ ಕವನ...ಸ್ವಲ್ಪ ವಯಸ್ಸಾಗಿದೆ ನೀವೇನೂ ವರಿ ಮಾಡ್ಕೋಬೇಡಿ ಅವ್ರೇ ಅಡ್ಜೆಸ್ಟ್ ಮಾಡ್ಕೋತಾರೆ

ಅಪ್ಪಿ ನಿನ್ನ ತೆಲಿಕೆಗ್ ಮರ್ಲಾಯೆ ಈ ಎನ್ನ ಸಂಗಾತಿ
ಬಲ ಪೋಯಿ ಬಾಕ್ಯಾರ್ ಕಂಡೊಗು
ಅಪ್ಪಿ ದಿನ ನಿಲಿಕೆ ತೆಲಿಪಾವೆ ಜಿವ ನಿಲಿಕೆ ನಲಿಪಾವೆ
ಬಲ ಪಿದಡ್ ಪೊಸ ದಿನತ ಪಾಡಿಗ್...
ಈ ಮಸ್ತ್ ಪೊರ್ಲುಲ್ಲ ಯಾನೂಂತೆ ಕಪ್ಪು
ಬಣ್ಣ ದಾಯೆ ಪನ್ ಮೋಕೆದ ಕಡಲ್ ಗ್
ಈ ಆಲ ರಾಗ ಯಾನಾಪೆ ಲಯ
ಸೇರ್ ಗ ಮೋಕೆ ಪಾರ್ದನದ ಉಡಲ್ ಗ್
ಬಲ ಅಪ್ಪಿ ಸುಗ್ಗಿದ ಕೆಸರ್ ಗ್ ನೇಜಿ ಊರುಗ
ಉರುವಾಂಡ ಗೋಲಿದ ಬೂರುಡು ಅಂಚಿಂಚಿ ನೇಲ್ ಗ
ನೀಲಿ ಕುಂಟಲುಂಡು ಮಂಜಲ್ ತಾರೂಲುಂಡು
ತಡ ಬೊರ್ಚಿ ಬೇಗ ಬಲ ಪೂರ್ತಾಪುಂಡು
ಈ ಎನ್ನ ತಿಗಲೆಡ್ ಮೋಕೆ ಜಿಂಜಿ ಕಡಲ್
ಅಪ್ಪಿ ನಿನನೇ ಎನ್ನೂಂದುಲ್ಲೆ ದಿನ ರಾತ್ರೆ ಪಗೆಲ್
ಯಾನೂಂಜಿ ಪೂವಾಪೆ ಈ ಐಟ್ಟ್ ಅರಲ್
ನಿನ್ನ ದೊಂಬುದ ಬದ್ ಕ್ ಗ್ ಯಾನಾಪೆ ನಿರೆಲ್...
ಬೂತಾಯಿ ಮರ್ವಾಯಿ ಕರಾವಳಿಗ್ ಸೊಬಗತ್ತ
ಕೋಲ ಕೋರ್ದಟ್ಟ ತುಳು ನೆಲತ ಪೂರ್ಲತ್ತ
ನಿನ್ನ ಮೋನೆಡು ತೂಯೆ ತುಳು ನೆಲತ ತೆಲಿಕೆ
ಪರ್ಬ ಗೌಜಿಡ್ ತೆರಿಯೆ ತುಳು ನಾಡ ನಲಿಕೆ
ನಿನ್ನ ಸೆರಂಗ್ ಗ್ ನೆರಿಯಾಪೆ ಯಾನ್
ಮಟ್ಟೆಲ್ ಡ್ ತರೆ ದೀದ್ ಜಿವ ಬುಡೊಡ ಪನ್
ಅಪ್ಪಿ ಪಪ್ಪಿ ಕೊರ್ಪನ ಎಂಕೂಂಜಿ ಈ ದಿನೂನು ಮದಪಾಯೆ
ಈ ಇಜ್ಜಂದಿ ಬದ್ ಕ್ ನನ ಎಂಕ್ ದಾಯೆ...... ನನ ಎಂಕ್ ದಾಯೆ...........?
(ಹಾ ಅಪ್ಪಿ ಅಪ್ಪುಗು ಪಪ್ಪಿ ಕೂರೊಂದು ಉಲ್ಲಲ್ ಮಾತೆರ್ಲಾ ಕಣ್ಣ್ ಮುಚ್ಚಿಲೆ...ರಡ್ಡ್ ಅರಿ ದಕ್ಕ್ ಲೆ..)
ಫೋಟೋ ಕ್ರಪೆ: ರಾಜೇಶ್ ದೇವಾಡಿಗ
Wednesday, May 25, 2011
ಕನಸು**
ನಾನೂ ನನ್ನ ಕನಸು ಚಿತ್ರದ ನಂತರ ನನ್ನಲ್ಲೂ ಒಂದಿಷ್ಟು ಕನಸು......*


(ಸ್ವಲ್ಪ ಹಳೆಯದಾಗಿದೆ ಅಡ್ಜೆಸ್ಟ್ ಮಾಡ್ತೀರಲ್ವಾ....!)
ಕನ್ನಡ ಚಿತ್ರ ರಂಗಕ್ಕೊಂದು ಹೆಮ್ಮೆಯ ಚಿತ್ರ ನಾನು ನನ್ನ ಕನಸು, ಇಲ್ಲಿ ಭಾವನೆಗಳಿಗೊಂದು ಜಾಗವಿದೆ, ಇಂತಹ ಚಿತ್ರಗಳನ್ನು ಸ್ವತಹ ರೂಪಿಸುವುದು ಬಿಡಿ, ಪರಿವರ್ತಿಸುವುದರ ಕಡೆಗೂ ಯಾರೂ ಗಮನ ಹರಿಸುವುದಿಲ್ಲ, ಆದರೆ ಅಂತಹ ಒಂದು ಪ್ರಯತ್ನ ನಮ್ಮ ಪ್ರಕಾಶ್ ರೈ ಮಾಡಿದ್ದಾರೆ, ಜೀವನದ ಹಾದಿಯ ಕನಸುಗಳನ್ನು ಮತ್ತೊಮ್ಮೆ ಮಗದೊಮ್ಮೆ ಮೆಲುಕು ಹಾಕುವ ಪ್ರಯತ್ನವನ್ನು ಪ್ರತಿಯೊಬ್ಬ ತಂದೆಗೂ ಒಂದು ಚಿತ್ರದ ಮೂಲಕ ಮಾಡಿ ಕೊಟ್ಟಿದ್ದಾರೆ, ಪ್ರಕಾಶ್ ರೈ ಅವರ ಜೊತೆ ರಮೇಶ್ ಅರವಿಂದ್ ಕೂಡಾ ಉತ್ತಮ ಸಾತ್ ನೀಡಿದ್ದಾರೆ,
ಪ್ರಕಾಶ್ ರೈ ನಿರ್ಮಾಣದ ನಾನು ನನ್ನ ಕನಸು ಚಿತ್ರ ನೊಡಿದ ಬಳಿಕ ನನ್ನಲ್ಲೆ ಓಂದು ರೀತಿಯ ಕನಸು ಮನೆ ಮಾಡಿದೆ, ಸಾಮಾನ್ಯವಾಗಿ ಯಾವ ಚಿತ್ರವೂ ಅಷ್ಟು ಬೇಗ ಹಿಡಿಸುವುದಿಲ್ಲವಾದರೂ ಈ ಚಿತ್ರ ನನ್ನ ಮನದೊಳಗೆ ಏನೋ ಮುಂದಿನ ಜೀವನವನ್ನು ನೆನಪಿಸಿದಂತಾಗಿದೆ, , ಇತ್ತೀಚೆಗೆ ಮದುವೆಯಾದ ನನ್ನ ಸ್ನೆಹಿತನ ಮಾತಿಗೆ ಮರುಳಾಗಿ ಸನ್ಯಾಸಿಯಾಗೋಣ ಅಂದು ಕೊಂಡಿದ್ದೆ ನಾನು ನನ್ನ ಕನಸು ಚಿತ್ರದ ನಂತರ ಸಂಸಾರ ಜೀವನದ ಕಾಮನಬಿಲ್ಲನ್ನು ಕಾಯುತ್ತಿದ್ದೇನೆ, ಅಪ್ಪನಾಗೋದು, ಒಂದು ಪುಟ್ಟ ಮಗು ಅದರ ಪುಟ್ಟ ಪುಟ್ಟ ಕೈ ಪುಟ್ಟ ಪುಟ್ಟ ಕಾಲುಗಳನ್ನು ಗಲ್ಲಕ್ಕೆ ತಾಗಿಸಿಕೊಂಡು ಮುದ್ದಾಡೋದು, ಆ ಮಗುವಿನ ಹಾಲು ಹೆಜ್ಜೆಯಲ್ಲಿ ಅದರ ಮುಗ್ದ ನಗು ಅಪ್ಪನ ಎಲ್ಲಾ ನೋವನ್ನೊ ಗಾಳಿಯಲ್ಲಿ ತೂರುತ್ತದೆ, ಆದರೂ ಜೀವನದಲ್ಲಿ ಸಿಹಿಯೊಡನೆ ಸ್ವಲ್ಪ ಕಹಿ ಇಲ್ಲವಾದರೆ ಸಿಹಿ ರೋಗ ಬರಬಹುದು...ಇಲ್ಲೂ ಅಷ್ಟೆ ಕನಸು (ಮಗಳು) ಪುಟ್ಟ ಹೆಜ್ಜೆ ಇಡೋವಾಗ ಮುದ್ದಾಡುತ್ತಾ ಶಾಲೆಯ ಅಂಗಳದವರೆಗೆ ಬಿಟ್ಟು ಟಾ ಟಾ ಮಾಡಿದಾಗ ಆಕೆ ಪುನಹ ಮರಳಿ ಬರುವವರೆಗೆ ಆಕೆಯ ನೆನಪು ಕಾಡುತ್ತಿರುತ್ತದೆ, ಕನಸು ದೊಡ್ದವಳಾದಾಗ ಸೈಕಲ್ ತೆಗಿಸಿ ಕೊಡುವುದು ಸ್ವಲ್ಪ ಆಲೋಚಿಸುವ ಕಡೆಗೆ ಗಮನ ಕೊಡುತ್ತದೆ. ಸೈಕಲ್ ನ ನಂತರ ಆಕೆಯ ಜೊತೆ ಬೆರೆತು ಟಾ ಟಾ ಮಾಡುವುದು ಮೋಡ ಸರಿಯುವಂತೆ ದೂರಾಗುತ್ತದೆ , ಆದರೂ ಮಗಳ ತುಟಿಯು ಪ್ಲೀಸ್ ಪಾ..ಅಂದಾಗ ತೆಗಿಸಿ ಕೊಡಲೇ ಬೇಕು ಅನಿಸುವುದು ಅವಳ ಆಸೆಯ ಪೂರೈಸುವಿಕೆಯ ಹಿಂದೆ ನನಗೋ ಸ್ವಲ್ಪ ಮಟ್ಟಿಗಿರುವ ಸಮಾದಾನ! ಮಗಳು ನನ್ನ ತೋಳಲ್ಲಿ ಕಾಲುಗಳಿಂದ ಗಲ್ಲವನ್ನು ಒದೆಯುತ್ತಾ ಇದ್ದಾಗ, ಅಲ್ಪ ಸ್ವಲ್ಪ ಅತ್ತಾಗ, ಕೊಂಚ ನಡೆದಾಗ, ಹಟ ಮಾಡಿದಾಗ ತಂದೆ ಎಂಬ ಹೆಮ್ಮೆಯ ಸಮಾದಾನ ಇರುತ್ತದೆ "ನಾನು ನನ್ನಲ್ಲಿ ಅರಳಿದ ಸುಕವೆಂಬ ಕನಸು" ಪುಡಿಯಾಗುವುದು ಆಕೆಗೆ ಮತ್ತೊಬ್ಬನಲ್ಲಿ ಪ್ರೀತಿ ಹತ್ತಿರವಾದಾಗ,
ಸಂಪೂರ್ಣ ಚಿತ್ರ ನೋಡಿದ ಬಳಿಕ ನನಗೆ ಅನಿಸಿದ್ದು ನಮ್ಮ ತಂದೆ ತಾಯಿ ಕೊಡಾ ನಮ್ಮ ಬಗ್ಗೆ ಎಷ್ಟೊಂದು ಕನಸುಗಳನ್ನು ಕಂಡಿದ್ದರು ಅನ್ನುವುದರ ಬಗ್ಗೆ! ನನ್ನ ಮೇಲೆ ನಾನು ಟೀ ಚೆಲ್ಲಿಕೊಂಡಾಗ ಅವರು ಕೊಟ್ಟ ಏಟಿನ ಹಿಂದೆ ಪ್ರೀತಿ ಇತ್ತು ಎಂಬೋದು ನನಗೆ ಅರಿವಾಗಲೇ ಇಲ್ಲ, ಇಂದು ಪ್ರಕಾಶ್ ರೈ ರವರ ನಾನು ನನ್ನ ಕನಸು ಚಿತ್ರ ನೋಡುತ್ತಿದ್ದಂತೆಯೇ ನಾನೊಮ್ಮೆ ಅಪ್ಪನಾಗಿ ಕನಸು ಕಂಡೆ, ನಾನು ಆಡಿದ ಜಾರು ಬಂಡಿ ಆಟ, ಮರ ಹತ್ತಿ ಕಾಲು ಮುರಿದು ಕೊಂಡಾಗ ಅತ್ತಿದ್ದು, ಒಂದು ರುಪಾಯಿ ಪೆಪ್ಪರ್ ಮಿಂಟ್ ಗೆ ರಾದ್ದಾಂತ ಮಾಡಿದ್ದು ,ಮೊದ ಮೊದಲು ಮೀಸೆ ಬೋಳಿಸಿಕೊಂಡಾಗ ನಾಚಿಕೆಯಾಗಿದ್ದು, ಇವುಗಳ ಮುದ ನನ್ನನ್ನು ಈಗ ಕಾಡುತ್ತಿದೆ, ಈ ಎಲ್ಲಾ ಸುಂದರ ನೆನಪುಗಳನ್ನು ನನಗೆ ಮರು ಮೆಲುಕು ಹಾಕಿಸಿದ್ದು ನಾನು ನನ್ನ ಕನಸು ಚಿತ್ರ , ಅಲ್ಲದೆ ಪ್ರತಿಯೊಬ್ಬ ಅಪ್ಪನ ಜವಾಬ್ದಾರಿ,ಆಸೆಯ ಮಿತಿಗಳನ್ನು ಪುನಹ ವಿಮರ್ಶಿಸುವ ಆಸಕ್ತಿಗೆ ಎಡೆ ಮಾಡಿ ಕೊಟ್ಟ ಪ್ರಕಾಶ್ ರೈ ಅವರಿಗೆ ನನ್ನ ಪುಟ್ಟ ಪುಟ್ಟ ಸಲಾಮ್...
Friday, May 20, 2011
ಕಣ್ಣೀರೇ ಕನಸಾಯಿತು.......

ಅಂದಕೆ ಕರಗಲಿಲ್ಲ ಚಂದಕೆ ಮಣಿಯಲಿಲ್ಲ ಏನೊ ಬಯಸದೆ ಅದು ಹೇಗೆ ಬಂತೋ ಪ್ರೀತಿ
ನೆಟ್ಟ ತೋರಣದ ಮಡಿಲಲ್ಲಿ ದಿಟ್ಟ ಹಸಿರಿನ ಸೊಬಗು ಮರುಳು ಮಾಡಿತೇ ಮನವನು
ಪ್ರೀತಿ ವರ್ಣಿಸಲಾಗದು ಅವಳಂದ ಬಣ್ಣಿಸಲಾಗದು ಕನಸಿನ ಕಣ್ಣಿನ ರೆಪ್ಪೆ ಮುಚ್ಚುವುದೆಂತು
ಮುಂದವಳ ವರ್ಣಿಸಲು ಹೋಲಿಕೆಗಳೇ ಇರಲಿಲ್ಲ ಎಲ್ಲವೂ ಮುಗಿದಿತ್ತು ಪುಟದೊಳಗಿನ ಕವನದೊಳು
ಯಾರದೊ ಪ್ರೀತಿ ಕಂಡು ಹುಚ್ಚೆಂದ ಈ ಮನವು ಎನ್ನುದರದ ಪ್ರೀತಿಗೆ ಶರಣಾಯಿತು
ಆಕೆ ನಗುವಿನ ಗಾಳಿ ಎಸೆದಾಗ ಮೊದಲು ಸ್ನೇಹದೊಳಿದ್ದ ನಂಟು ಎಂಟಾಯಿತು
ನಾನೇನೂ ಮೊದಲಿಗನಲ್ಲ ಅವಳೇ ಮೊದಲಿಗಳು ನೀರ ಹಾರಿ ಹೊವೆತ್ತಿದಷ್ಟಕ್ಕೆ ಪೆಚ್ಚಾದಳು
ಹೆಸರೇನು ಸೌಖ್ಯವೇನು ಕೊನೆಗೆ ಖಾಲಿ ಇದೆಯೇ ಪ್ರೀತಿಯ ಮನೆ ಅಂದಾಗ ನಾ ಪೆಚ್ಚಾದೆ
ಇರುಳೆಲ್ಲಾ ರೆಪ್ಪೆ ಮುಚ್ಚಿ ಕಾಣುವ ಕನಸು ನಿದ್ದೆ ಬಾರದೆ ಕಾಡ ತೊಡಗಿತು
ಮುಂಜಾನೆ ದೇವರ ನೋಡುವ ಹೊರತು ಎನ್ನೀ ನಯನ ಎನ್ನವಳ ಬಿಂಬವನು ತುಂಬಿಸಿತ್ತು
ಬಡತನವ ಹೇಳಿದ್ದೆ ಮನದ ಸಿರಿತನವ ವರ್ಣಿಸಿದ್ದೆ ಗಳ್ಳನೆ ಸುರಿದ ಕಣ್ಣೀರಲ್ಲೇ ಉತ್ತರದ ಚಾಪಿತ್ತು
ಎದೆಗೆ ಮುಡಿ ಇಟ್ಟು ರೆಪ್ಪೆ ಮುಚ್ಚಿದಳು ಉಸಿರು ನಿಂತರೊ ಭಯವಿಲ್ಲ ಸುಂದರ ಸಾವ ಗೊಣಗಿದಳು
ಮುಳ್ಳ ಲೆಕ್ಕಿಸದೆ ಒಡೆಯ ಹೂವ ಕೀಳುವ ಕನವು! ಕಣ್ಣ ತುಂಬಿಸಿ ಎನ್ನವಳ ಬಿಗಿದು ಬಾಚಿತ್ತು
ಬಡತನಕೆ ಹೆದರಿದರೊ ಪ್ರೀತಿ ದೂಕಿತ್ತು ಇತ್ತಿಂದತ್ತ ಅತ್ತೆ ಮಾವನ ಮನೆಗೆ ಹೆಣ್ಣು ಕೇಳಲು
ಕುಳ್ಳಿರಿಸಿದರು ಪಾನೀಯ ಉಪಚರಿಸಿದರು ಪ್ರೀತಿ ವಿವರಿಸಲು ಎದೆ ಬಡಿತ ಉಸಿರ ಹಿಡಿದಿತ್ತು
ಎನ್ನವಳನೊ ಮುಂದಿರಿಸಿ ಬಗೆ ಬಗೆಯಾಗಿ ಮಗಳ ಮೇಲಿರುವ ಸಂಮ್ಮಂದದ ಸ್ವಚ್ಚತೆಯನು ಬಿಡಿಸಿದೆ
ಎನ್ನ ಬದುಕ ಹಿಂದೆಗಳೀಗೆ ಸಮ್ಮತಿ ಇಲ್ಲವಾದರೊ ಮಗಳ ಸುಖವೇ ನಮ್ಮ ಸುಖ ಎಂಬ ಮಾತು ಎನ್ನುಸಿರ ಸ್ಠಿರವಾಗಿಸಿತ್ತು
ಹರೆಯದಲ್ಲೇ ಪ್ರೇಮದ ಕನಸು ನನಸಾಯಿತು ಎನ್ನ ಹೆಜ್ಜೆಯಲಿ ಅವಳ ಹೆಜ್ಜೆ ಬೆರೆತಾಯಿತು
ಮಧುಮಂಚಕೆ ಬೀರಿತು ಬಿಡಿ ಕುಸುಮದ ಇಂಚರ ಗಿರಿ ಗಗನವೇ ಹಾಡಿದು ನಾದ ಸಪ್ತಸ್ವರ
ಮಲೆನಾಡಿಗೆ ಬಂದೆ ಸೌಂದರ್ಯ ಸವೆಯಲು ಪ್ರೇಮದ ಕವಿತೆಗೆ ನಾದವನು ಬೆರೆಸಲು
ದಿನ ಕಳೆದಂತೆ ಎನ್ನವಳ ಹಠ ಕಂಡು ಸುಕಿಸಿದ್ದೆ ನಗು ಕಂಡು ಸೋತಿದ್ದೆ
ವರ್ಷಗಳು ಮೊರಾಯಿತು, ಅತ್ತೆ ಮಾವ ಮಗಳ ಕಾಣಲು ತುಂಬಿದ ಗಾಡಿಯಿಂದಿಳಿದಾಯಿತು
ಆಸೆಯೇ ಇಲ್ಲದ ಅತ್ತೆಗೆ ಮೊಮ್ಮಗನ ತೊಗಿ ಮುದ್ದಾಡುವ ಹಂಬಲವಂತೆ
ಕನಸುಗಳೇ ಇರದ ಮಾವನಿಗೆ ಮೊಮ್ಮಗಳ ಕೊಂಡಾಡುವ ಬಯಕೆಯಂತೆ
ಒಂದಿರುಳ ಮಂದ ಬೆಳಕಿನೊಳು ಸೊಜಿಯು ಎನ್ನವಳ ಬೆರಳ ರಕ್ತವನು ಹೊರ ಕರೆದಿತ್ತು
ಕೈಯ್ಯ ಗಾಜನು ಬಿಟ್ಟು ಎನ್ನವಳ ಬೆರಳ ಬಾಯಲಿಟ್ಟು ಚುಂಬಿಸಿದೆ
ಜೋಡಿ ಪ್ರೀತಿಗೆ ಕರಗಿ ಅತ್ತೆ ಮಾವರ ಕಣ್ಣೀರು ನೆಲವ ಸೋಕಿ ಆಶೀರ್ವದಿಸಿತ್ತು
ಮಗಳ ನೊವನು ಅರಿತು ಎನ್ನೊಳು ಮಾತಿಗಿಳಿದ ಅತ್ತೆ ಮೊಮ್ಮಗನ ಅಳುವಿಗೆ ದಿನ ಕೇಳಿದಳು
ಎಳೆದೇ ಹೋದರು ದವಾಖಾನೆಗೆ ಕಣ್ಣೀರೊಳು ಅವಿತಿಟ್ಟೆ ಕೆಲವೊಂದು ಸತ್ಯಗಳ ಎನ್ನ ಉದರದೊಳಗೆ
ಮನೆಯವರೆಲ್ಲ ಸೇರಿ ಬಗೆಬಗೆಯಾಗಿ ನೋಯಿಸಿದರು ಛಲಕೆ ಶರಣಾಗಿ ಎನ್ನುದರ ಬಿಚ್ಚಿದೆ
ನಾವಿಬ್ಬರೊ ಪ್ರೇಮಿಗಳಷ್ಟೆ ಪ್ರೀತಿ ಹಂಚಿದೆವು ದೇಹ ಹಂಚಲಿಲ್ಲ
ಮುತ್ತಿ ಮುದ್ದಾಡಿದ್ದರೊ ಪ್ರೀತಿ ಕಂಪಿಸಿತ್ತು ದೇಹ ಕಂಪಿಸಲಿಲ್ಲ
ಮಗು ಬೇಕೆಂಬ ಹಂಬಲ ನಮಗೆ ನಿಮಗಿದ್ದರೊ ಆ ವಿದಿಗೆ ಇರಬೇಕಲ್ಲ
ನಾ ಮುಚ್ಚಿಟ್ಟ ಸತ್ಯವಿಷ್ಟೆ ಎನ್ನವಳು ಇನ್ನಿರುವುದು ಎರಡು ಮಾಸಗಳ ಕಾಲ
ಈ ಎರಡು ಮಾಸಗಳು ಎನಗೆ ನೊರು ವರ್ಷಗಳು ನಾ ಇನ್ನೊ ಪ್ರೀತಿಸಬೆಕು ಕಾಲ ಬೆರಗಾಗುವಷ್ಟು
ಎನ್ನವಳ ಕೊನೆಯು ಅವಳ ಮನಕೆ ತಿಳಿದಿಲ್ಲ ಬಿತ್ತದಿರಿ ಆಸೆಗಳ ಬಿಳಿ ಮಂಜನು
ಇನ್ನೊ ಮುಂದೆ ಎನಗೆ ವಿವರಿಸಲು ನಾಲಗೆ ತೆವಳುತಿಲ್ಲ ತುಟಿಗಳು ತೇವವಿಲ್ಲ
ನಾ ನತದ್ರುಷ್ಟನೊ ಬದುಕು ಬಣ್ಣದ ಖಡ್ಗವೋ ಅದರ ಹರಿತಕೆ ನಾ ಚೊರು ಚೊರಾದೆ
ನೆನಪುಗಳ ಕಹಿಯಲಿ ದೇಹ ಕಲ್ಲಾದಾಗ ಅತ್ತೆ ಮಾವರ ಹಣೆಯು ಎನ್ನ ಪಾದವ ಮುದ್ದಿಸಿತ್ತು
ಹುಚ್ಚುತನಕೆ ಆಡಿ ಅವರಿಬ್ಬರ ದೇಹವ ಎನ್ನ ಕರಗಳು ಅಪ್ಪಿ ಬೆಚ್ಚಗೆ ಬಂದಿಸಿತ್ತು
ಅದು ಕೊನೆಯ ದಿನ ಎನ್ನವಳೀಗೆ ಎನ್ನ ಬಾಚಿ ಮುದ್ದಾಡುವ ತುಮುಲವಂತೆ
ಮತ್ತೆ ಮುಡಿಯ ಎನ್ನೆದೆಗೆ ಒರಗಿಸಿ ರೆಪ್ಪೆ ಮುಚ್ಚಿದಳು
ಕಾದೇ ಕುಳಿತೆ ಮತ್ತೆ ರೆಪ್ಪೆ ಕಂಪಿಸುವುದೆ ಪ್ರೀತಿ ಎನ್ನರಸುವುದೇ................................................
Subscribe to:
Posts (Atom)








