Wednesday, June 20, 2012

ಇಹ-ಪರ-ಅಂತರ





ಯಾರ ಬೇಡಿದರೇನು
ಯಾರ ಕಾಡಿದರೇನು
ಆಯುಷ್ಯ ಅಂಕುಷಕೆ ಬಗ್ಗುವುದೇ,
ತುದಿಯು ಬುಡದೆಡೆ ಬಾಗುವವೇ?

ಮಣ್ಣ ತುಳಿದರೇನು
ಹೊನ್ನ ತೊಡಿದರೇನು
ಇಹದಿ ಪರಕೆ ಸುಖ ಸಾಗುವುದೇ,
ನಗದು ನಾಣ್ಯಕೆ ಪಾಪ ಕರಗುವದೇ?

ನೀರ ಎರೆದರೇನು
ಹಾಲು ಕುಡಿದರೇನು
ಅಂತರಂಗವು ಮಡಿ ಆಪುವುದೇ,
ಮಾಡಿದ ಪಾಪ ಬೆವರಲಿ ಜಾರುವದೇ?

ತಾಯಿ ತನ ತಿಳಿಯಾದರೇನು
ಸ್ತನ ಹಾಲು ಬಿಳಿಯಾದರೇನು
ಯೋನಿಲಿಳಿದ ಮಗು ಅಳದಿಹುದೇ,
ಬುದ್ದಿ ತಾಯ್ತನದಂತೆ ಬರೆದಿಹುದೇ.?

ದೈವ ಭಕ್ತನಾದರೇನು
ದೇಹದಿ ಶಕ್ತನಾದರೇನು
ಅಗ್ನಿ ಸೋಕಿದೊಡೆ ಸುಡದಿಹುದೇ,
ಕಪಟದ ಮಂತ್ರವು ಮುಕ್ತಿ ಈವುದೇ.?






ಪುಲ್ಯದ ಸುಪ್ರಭಾತ....




ಕೋರಿ ಕೆಲೆತಾಂಡ್
ಬೊಲ್ಪಾಂಡ್ ಭೂಮಿಗ್
ಇಲ್ಲ ಪೊಂಜೊವು ಜಾಲಡಿತ್
ತರೆ ಮೀದ್ ಮಡಿಯಾದ್
ತುಳಸಿ ಸುತ್ತುದು ಪುಲ್ಯದ ಸುಪ್ರಭಾತ.!

ನೀರೊಯ್ತಾಂಡ್ ಗುವೆಲ್ ಡ್
ರಂಗೋಲಿ ದೀಂಡ್ ತಡ್ಡೆದೆದುರು
ಪೂ ಸುರಿದಾಂಡ್ ದೇವೆರೆ ಅಲಂಕಾರೊಗು
ಪೇರ್ ಬೊರಿದಾಂಡ್ ಜಿಂಜಿ ಸಂಸಾರೊಗು
ದೈವ ಸುಗಿತೊಂದು ಭಕ್ತಿ ಬಿರ್ಕೊಂದು ಪುಲ್ಯದ ಸುಪ್ರಭಾತ.!

ಚಂದ್ರೆ ಮುರ್ಕುದಾಂಡ್
ಸೂರ್ಯೆ ಎರ್ಕ್ ದಾಂಡ್
ಪೂ ಪನಿ ರಾದ್ ಪಕ್ಕಿ ಬುಲ್ಪು ಕೈದಾಂಡ್
ಇಲ್ಲ ಪೊಂಜೊವು ದೀಪ ದೀದಾಂಡ್
ಇಲ್ಲ್ ಊದ್ಬತ್ತಿ ಕಮ್ಮೆನೊಡು ಪುಲ್ಯದ ಸುಪ್ರಭಾತ.!

ಅರ್ಲ್೦ಡ್ ಅಡ್ಪಿಲ್ಲ್ ಡ್
ನಡು ದಿಕ್ಕೆಲ್ ಡ್ ನುಂಗಿ ಪುದೆ
ಕೊದ್ಯೊಂದುಂಡು ಕರಟ್ಟ್ ಉರ್ಪೆಲರಿ ಗಂಜಿ
ಉರ್ಕೊ೦ದುಂಡು ಪೇರ್ ನುರೆ ಕೊದ್ದಿದ್
ಅಪ್ಪೆ ಜೈದಿ ಜೋಕ್ಲೆನ್ ಲಕ್ಕಾದ್ ಪುಲ್ಯದ ಸುಪ್ರಭಾತ.!

ಸೊಲ್ಮೆಲು










ಕಾವ್ಯ ಕಾಲಮಾನ... !





ಅರಳಿದಂತೊಮ್ಮೆ
ಮುದುಡಿದಂತೊಮ್ಮೆ
ಹಗಲು ಇರುಳ ಜಗಳದಲಿ
ಬಯಸಿ ಹಳಸಿ ಹಸಿ ಎನ್ನ ಭಾವ ಬಯಲು.!

ಏರುತಿಹುದೊಮ್ಮೆ
ಇಳಿಯುತಿಹುದೊಮ್ಮೆ
ಉಸಿರು ಎನ್ನೆದೆ ಅಂಗಳದಲಿ
ಗುರಿ ಸಾಹಸ ಹರುಷಕೆ ಈ ಹ್ರದಯ ಹೊನಲು.!

ಸೋಲುತಿಹುದೊಮ್ಮೆ
ಪುಟಿದೇಳುತಿಹುದೊಮ್ಮೆ
ಪಾದ ನಡೆದ ದೂರವ ಮರೆತು
ಹಂಬಲ ಹಿಗ್ಗಿ ಸುಗ್ಗಿಯಂತಿಂದೆನ್ನ ಬಾಳ ಮುಗಿಲು.!

ಬರಿದಾದಂತೊಮ್ಮೆ
ತುಂಬಿ ತುಳುಕಿದಂತೊಮ್ಮೆ
ಸಾಹಿತ್ಯ ಸಂಮ್ಮಂದದ ಬಿಂದಿಗೆ
ನೆರಳವಿತು ದೀಪದ ಬೆಳಕಲಿ ಈಗ ಕಾವ್ಯ ಕಡಲು.!








Saturday, May 5, 2012

ನಾ ಬರೆಯುವಾಗ .......




ಕುಂದಿತೇಕೆ ಛಲವೆನ್ನ ಎದೆಯಾಳದಿಂದ
ಹಸಿದ ಹಂಬಲ ಉಕ್ಕಿ ಹರಿದು ಹೋಯಿತೇ
ಯಶಸ್ಸಿನ ಏಣಿ ಕಾಲ ಬುಡದಲಿರುವಾಗ
ಭಾವುಕತೆ ಏಕೆ? ನಿರಾಳ ಮನ ಮುದುಡಿತೇಕೆ.!

ಒಂದರಂತಿಲ್ಲ ಮತ್ತೊಂದು ಕೈ ಬೆರಳು
ಮುಷ್ಟಿಯಲೇ ಸಾಧಿಪ ಸಂಪತ್ತು ಇಹುದು
ಇಂದಿನಂತಿಲ್ಲ ನಾಳೆಯ ದಿನ ಕ್ಷಣಗಳು
ನಂಬಿಕೆಯೇ ನಾಳೆಯ ಯಶಸ್ಸಿನ ನೆರಳು.!

ಅಂತರಾಳದಿ ಇಹುದಲ್ಲ ಜ್ನಾನ ಪುಸ್ತಕ
ಮಸ್ತಕಕೆ ಏಕೆ ಛಲದ ಮತ್ತು ಹತ್ತೇರುತಿಲ್ಲ
ದೇಹವೇ ದೇಗುಲ ಅಂಗಾಗಗಳೇ ದೈವ
ಮತ್ತೇಕೆ ಗುರಿಯ ಸೇರಲು ಹೊತ್ತಾಗುತಿಲ್ಲ.!

ಬೆಳಕಿಹುದು ಅಂತರಂಗದಿ ಕತ್ತಲ ಸುತ್ತಲು
ಹೊರ ಜಗವ ಬೆಳಗಲೇಕೆ ಬೆಳಕು ಸಾಲುತಿಲ್ಲ
ಹಣೆಬರಹ ವಿಧಿ ನಿಯಮಗಳೆಂಬ ಜಗಕೆ
ಆಸೆ ಜೊತೆ ನಿರುತ್ಸಾಹದ ಸಮ್ಮಂದ ಹೋಲುತಿಲ್ಲ.!

ಭೂಮಿ ಕಡಲು ಬೆಳಕು ಗಾಳಿ ಸುತ್ತಲೆಲ್ಲ
ಖಾಲಿ ಹಾಳೆಯಲಿ ಮಿಂಚುವ ಕವನವಾಯಿತೀಗ
ಮೌನ ಮನದ ದಂಡೆಯಲಿ ಕುಳಿತು
ಬದುಕ ಸಿಹಿ ಕಹಿ ಭಾವನೆಗಳನು ಬರೆಯುವಾಗ.!

Wednesday, November 23, 2011

ಪರಮಾತ್ಮ





ನಾದಸ್ವರವನ್ನು ಅಪಮಾನಿಸಿದ ಮೊತ್ತ ಮೊದಲ ಚಿತ್ರ ಪರಮಾತ್ಮ

ಕಲೆ ಏಕೆ ಕಾಲ ಕಸವಾಯಿತು ಯೋಗರಾಜ್ ಭಟ್ಟರಿಗೆ.? ಸುಂದರವಾದ ಚಿತ್ರ ನಿರ್ಮಿಸುವ ಮತ್ತು ವಿವಾದಗಳ ಮುಡಿ ಏರದ ಸಾಧಕ ಯೋಗರಾಜ್ ಭಟ್ ಎಂದರೆ ತಪ್ಪಾಗಲಾರದು. ಮುಂಗಾರು ಮಳೆ ಅಥವಾ ಪಂಚರಂಗಿ ಚಿತ್ರಗಳು ಯಾವುದೇ ವಿವಾದಗಳೀಗೆ ಮಣೆ ಇಡದೇ ಅಭಿಮಾನಿಗಳಲ್ಲಿ ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು, ಭಟ್ಟರ ಚಿತ್ರ ಎಂದರೆ ವಿಚಿತ್ರ ಡೈಲಾಗ್ ಸುರಿಮಳೆಗೇನೂ ಬರವಿಲ್ಲ, ಅಷ್ಟಲ್ಲದೆ ಅವರಿತ್ತ ಚಿತ್ರಗಳಲ್ಲಿ ಪ್ರತಿಬಂದಿಸುವಂತಹ ಅಪಚಾರಗಳೇನೂ ನಡೆದಿಲ್ಲ, ಯೋಗರಾಜ್ ಭಟ್ ಎಂದರೆ ನಯ ಸ್ವಭಾವದ ಸಾತ್ವಿ ಅವರ ಕಲಾಭಿರುಚಿಯನ್ನು ಯಾವ ಚಿತ್ರ ರಸಿಕರೂ, ನಟರೂ ತಳ್ಳಿಕಾಕಿಲ್ಲ. ಈಗ ಯೋಗರಾಜ್ ಭಟ್ ಚಿತ್ರವೆಂದರೆ ಜನ ಚಿತ್ರಮಂದಿರದಲ್ಲಿ ಟಿಕೇಟ್ ಗಾಗಿ ಮುಗಿಬೀಳುವುದು ಸುಳ್ಳಲ್ಲ, ಅದಕ್ಕೆಲ್ಲ ಅವರ ಚಿತ್ರದಲ್ಲಿನ ಶ್ರದ್ದೆಯ ಕೆಲಸ, ಡೈಲಾಗ್ ಝಲಕ್ ಕಾರಣವಾಗಿದೆ. ಆದರೂ ಕಲಾವಸ್ತುಗಳೀಗೆ ಪ್ರೋತ್ಸಾಹಿಸಬೇಕಾದ ಜವಾಬ್ದಾರಿ ಉಳ್ಳವರು ಅದನ್ನು ಕಡೆಗಣಿಸಿರುವುದು ವಿಷಾದನೀಯ.

ನಾದಸ್ವರವನ್ನು ಪರಮಾತ್ಮ ಚಿತ್ರ ಕಡಾಖಂಡಿತವಾಗಿ ಅವಮಾನಿಸಿದೆ, ನಾಯಕಿ ವೇದಿಕೆಯಲ್ಲಿ ನಾದಸ್ವರವನ್ನು ನುಡಿಸುವಾಗ ಆ ಸ್ವರದ ಬಗ್ಗೆ ನಾಯಕ ಅತ್ಯಂತ ಕಠೀಣವಾಗಿ ಅವಹೇಳನ ಮಾಡುತ್ತಾನೆ, ನಾಯಕಿ ನಾದಸ್ವರವನ್ನು ಹಿಡಿದುಕೊಂಡು ನಾಯಕನ ಬೆನ್ನಮೇಲೆ ಹತ್ತಿ ಕೂರುತ್ತಾಳೆ. ಇನ್ನೊಂದು ಕಡೆ ನಾಯಕ ನಾಯಕಿಯನ್ನು ತೆಪ್ಪದಲ್ಲಿ ಕರೆದೊಯ್ಯುವಾಗ ನಾಯಕ ಕಡೆಗೋಲಾಗಿಸಿ ನಾದಸ್ವರದಿಂದಲೆ ನೀರನ್ನು ಹಿಂದಕ್ಕೆ ತಳ್ಳುತ್ತಾನೆ. ಇಲ್ಲಿ ನಿರ್ದೇಶಕರ ದಾರಿತಪ್ಪಿದ ಮುತುವರ್ಜಿಯ ಕೆಲಸ ಎದ್ದು ಕಾಣುತ್ತಿದೆ. ಕಲಾವಿದನ ಕೈಯ್ಯಲ್ಲಿ ಇರುವ ವಸ್ತು ಆತನ ಕಲೆಗೆ ಒಂದು ಸ್ಪೂರ್ತಿ, ಆತ ಅದನ್ನು ಪೂಜಿಸುತ್ತಾನೆ, ಆದರೆ ಯೋಗರಾಜ್ ಭಟ್ ತಮ್ಮ ಚಿತ್ರದಲ್ಲಿ ನಾದಸ್ವರಕ್ಕೆ ಇರುವ ಮೌಲ್ಯವನ್ನು ಮರೆತು ನಿಂದಿಸಿದ್ದಾರೆ, ಚಿತ್ರದಲ್ಲಿ ನಾದಸ್ವರ ನಾಯಕ ನಾಯಕಿಯ ಕೈಯ್ಯಲ್ಲಿ ಅಡ್ಡಾದಿಡ್ಡಿಯಾಗಿ ಉಪಯೋಗಿಸಲ್ಪಡುತ್ತದೆ,

ಕಲಾ ವಸ್ತುಗಳನ್ನು ಕಲಾವಿದರೇ ನಿಂದಿಸಿದರೆ ಹೇಗೆ.! ದಿನದಿಂದ ದಿನಕ್ಕೆ ನಮ್ಮ ಸಂಸ್ಕ್ರತಿ,ಮೌಲ್ಯಗಳು ಬರಿದಾಗುತ್ತಿವೆ, ಇತ್ತೀಚೆಗೆ ಕನಿಷ್ಟ ಚಿತ್ರಗಳಲ್ಲಾದರೂ ಯಕ್ಷಗಾನ ಪಾತ್ರಧಾರಿಗಳು ಚಲನಚಿತ್ರದ ಹಾಡುಗಳಲ್ಲಿ ಮನಬಂದಂತೆ ನರ್ತಿಸುತ್ತಿದ್ದಾರೆ, ಇಲ್ಲಿ ಯಕ್ಷಗಾನದ ಬಗ್ಗೆ ಪಬ್ಲಿಸಿಟಿ ಸಿಗುತ್ತದೆ ಅನ್ನುವುದೊಂದು ಹುಚ್ಚು ಕಲ್ಪನೆಯಷ್ಟೆ.! ಒಂದು ಕಲೆಯನ್ನು ಪ್ರದರ್ಶಿಸಲು ಅದರದ್ದೇ ಆದಂತಹ ವೇದಿಕೆಗಳಿವೆ ಆ ವೇದಿಕೆಯಲ್ಲೇ ಅದನ್ನು ಪ್ರದರ್ಶಿಸಬೇಕು, ಸಂಸ್ಕ್ರತಿ ಅದಕ್ಕಿರುವ ವೇದಿಕೆಯಿಂದ ಕೆಳಗಿಳಿದರೆ ಮತ್ತೆ ಅದರ ಮೌಲ್ಯವನ್ನು ಗಳಿಸುವುದು ಸಾಧ್ಯವಿಲ್ಲದ ಮಾತು, ಹೆಚ್ಚಾಗಿ ದಕ್ಷಿಣ ಕನ್ನಡದ ಭಾಗಗಳಲ್ಲಿ ಭೂತಾರಾಧನೆ ಒಂದು ಶ್ರೇಷ್ಟವಾದ ಪರಂಪರೆ, ಆಚರಣೆ, ಅಲ್ಲಿ ಭೂತ,ದೈವಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ ಆದರೆ ಈಗ ಆ ಭೂತ ದೈವಗಳ ವೇಷಭೊಷಣಗಳನ್ನು ತೊಟ್ಟು ಬೀದಿಗಳಲ್ಲಿ ಮೆರವಣಿಗೆ ಹೊರಡುವ ಕಾಲ ಬಂದಿದೆ, ನಂಬಿಕೆಯಲ್ಲಿನ ಸಾಂಸ್ಕ್ರತಿಕತೆ ಕೇವಲ ಮನರಂಜನೆಯಾಗಿ ಬೀದಿಗಿಳಿಯುವ ಕಾಲ ದೂರವಿಲ್ಲ.

ಯೋಗರಾಜ್ ಭಟ್ ಅವರು ಚಿತ್ರದಲ್ಲಿ ನಾದಸ್ವರವನ್ನು ಈ ರೀತಿಯಾಗಿ ಕಡೆಗಾಣಿಸಿರುವುದು ಮುಗಿದುಹೋದ ಕಥೆ, ಆದರೆ ಇನ್ನು ಮುಂಬರುವ ಚಿತ್ರಗಳು ಆ ವಿಷಯವನ್ನು ಅನುಕರಿಸುತ್ತವೆ, ಮುತ್ತು ಒಡೆದರೆ ಮತ್ತೆ ಸರಿಪಡಿಸಲಾಗುವುದಿಲ್ಲ ,ಸಂಗೀತ ವಾದ್ಯಗಳಲ್ಲಿ ನಾದಸ್ವರ ಎಂಬುವುದು ಒಂದು ಮೇಲ್ಮಟ್ಟದ ವಾದ್ಯ, ಅದರ ಮೌಲ್ಯವನ್ನು ಹಿರಿಯರಿಂದ ಅಥವಾ ತಿಳಿದವರಿಂದ ಅರಿತರೆ ಮತ್ತೆ ಈ ತಪ್ಪುಗಳು ಮುಂದುವರಿಯುವುದು ಅಸಾಧ್ಯ, ಕಲೆಯನ್ನು ಪ್ರೀತಿಸಿ ನೋಡಿ, ಗೌರವ ಭಾವನೆ ತಾನಾಗಿಯೇ ಹುಟ್ಟುತ್ತದೆ. ನಾದವನ್ನು ನುಡಿಸಿದ ಮಾನವ ಕಲಾಕಾರ ನಿಜ ಆದರೆ ಆತ ನುಡಿಸಿದ ವಾದ್ಯವನ್ನೇ ಮರೆತರೆ ಹೇಗೆ....?

ಧನ್ಯವಾದಗಳೊಂದಿಗೆ..

ಲೋಕು ಕುಡ್ಲ,,,














Saturday, June 25, 2011

ಈ ಭುವಿಗೆ ಧನ್ಯವಾದ...

ಹಬ್ಬಿದ ಹುಬ್ಬು ನಯನಕೆ ಸೌಂದರ್ಯದ ಬೇಲಿ
ಮಾಧುರ್ಯದ ಚೈತನ್ಯ ಮನಕೆ ಪುಷ್ಪದ ಗಾಳಿ
ಪಚ್ಚೆ ಪಸಿರು ನಿಸರ್ಗ ಮಾನವ ಮನಕೆ ಸಾಂತ್ವನ
ಎತ್ತಣಿಂದೆತ್ತವೋ ಹಸಿರು-ಉಸಿರಿನ ಈ ಬಂದನ

ಕನಕಾಂಬರದಲಿ ಇಬ್ಬನಿಯ ಸೊಬಗು
ಅತ್ತಿಂದಿತ್ತ ತರಗೆಲೆಯ ನರ್ತನ
ತಿರುಗು ದಾರಿಗಳ ಸ್ನೇಹ ಅವಲಂಬನ
ಸೌಂದರ್ಯ ಚಿಲುಮೆಯೊಳಗಿನ ಈ ಚಂದನ ವನ

ಗಿರಿ ಶಿಖರಗಳ ಕಂಪು ತಂಪಿನ ಚುಂಬನದಲಿ
ಹಸಿರು ಚಟ ಪಟ ಸದ್ದಿಗೆ
ಹಕ್ಕಿ ಚಿಲಿ ಪಿಲಿ ಗಾನ ಸೇರಿದರೆ
ಮತ್ತೇರದೆ ಮತ್ತೇನು ಮನ ಬೇರಗಾಗುವಷ್ಟಿದೆ
ಪರಿ-ಸರದ ಸ್ವರ ಮಾಧುರ್ಯದ ಸೊಬಗು

ಪಚ್ಚೆ ಪರ್ವತ ಸ್ವಚ್ಚೆ ಭೂ ತಾಯಿ
ನಲ್ಮೆಯ ನಾವಿಕನಂತೆ ಈ ನಂದನ ವನ
ಕರವ ಜೋಡಿಸಿ ಬಂಧಿಸುವ ತವಕ
ಒಮ್ಮೆ ಮುತ್ತಿಸುವ ಪುಳಕ
ನಂದನದ ಧರೆಯನು ಚಂದನದ ಗಿರಿಯನು

ಹಾವು ಹೂವು ಹುಳು ಹುಪ್ಪಟೆಯ ರಂಗು
ಚೆಲ್ಲಿ ಚೆದುರಿದ ಚದುರಂಗದ ಬದುಕು
ಮನಬಂದೆಡೆಗೆ ಹರಿಯುವ ಹಳಿ ನೀರು
ಸರ್ವ ಪರ್ವಗಳ ಚಿತ್ತಾರದ ಮೆಲುಕು

ಬುವಿಯ ಆಂತರ್ಯಕೆ ಭಾರವಲ್ಲ
ಕತ್ತು ಕುಯ್ಯುವರೆಂಬ ಭಯವಿಲ್ಲ
ಮದ ಮಚ್ಚರವಿಲ್ಲದೆ ಹಸಿದ ನಾಲಗೆಗೆ ಸಿಹಿಯು
ಒಂದು ಮರದ ಕೊಂಬೆಯಷ್ಟೆ ಸಾಕೆಂಬ ಜೇನು ಗೋಡು

ಆಗಸ ಪ್ರಥ್ವಿಗೆ ಸಮ್ಮಂದವೆಲ್ಲಿಂದ
ತಣ್ಣನೆಯ ತಂಪಿಗೆ ವರ ಮೋಡ ಬಾನಿಗೆ
ಕಾಮನ ಬಿಲ್ಲಿನ ಕಾಮನೆಯ ಸೋಗಿಗೆ
ಭುವಿಯ ಪಚ್ಚೆ ಸೊಬಗಿಗೆ ಕರಗಿ
ಆ ಝರಿ ಮಳೆಯೇ ಬಾನಿಂದ
ಈ ಭುವಿಗೆ ಧನ್ಯವಾದ....
ಆ ಝರಿ ಮಳೆಯೇ ಬಾನಿಂದ
ಈ ಭುವಿಗೆ ಧನ್ಯವಾದ....




Wednesday, June 22, 2011

ತರಕಾರಿ ತಾರೆ.......



ಎನ್ನವಳು ಹಣ್ಣು ಹಂಪಲಿಗಿಂತ ಮಿಗಿಲಾದವಳು

ದುಂಡು ಮೊಗದ ತುಂಡು ಬದನೇ ಕಾಯಿ

ಬಾಳೇ ಹಣ್ಣಿನಂತೆ ಮಿಳ ಮಿಳಗಿನ ಮಿಂಚುಳ್ಳಿ

ನೇರಳೆಗೂ ನೆಂಟ ಸೌತೇ ಕಾಯಿ ಸೊಂಟ

ಹೀರೇ ಬಣ್ಣದ ಸೀರೆಯುಟ್ಟರೆ

ಮಂಡಕ್ಕಿ ಪಾಯಸವೂ ಬಿಸಿ ಆರುವುದು

ಕಪ್ಪು ದ್ರಾಕ್ಷಿಯ ಕಣ್ಣವಳು

ಬೆಂಡೇ ಕಾಯಿ ಕಾಲವಳು

ಜಿಲೇಬಿ ಸಿಹಿಯಂತ ತುಟಿಯವಳು

ಅವಳೇ ಎನ್ನ ಕಂಗಳು ಬಾಳ ಬೆಳದಿಂಗಳು

ನವಿಲು ಕೋಸಿನಂತೆ ನಲ್ಮೆಯ ಗೆಳತಿ

ಕೊತ್ತಂಬರಿ ಸೊಪ್ಪಿನಂತೆ ಸ್ವಾದದ ಸುಂದರಿ

ತರ ತರದ ತರಕಾರಿ ಎನ್ನವಳ ಉಸಬಾರಿ

ಕರಿಬೇವಿನಂತೆ ರುಚಿಗೆ ರಂಬೆಯೊ ಸಾಟಿಯಿಲ್ಲ

ಬೆಳ್ಳುಳ್ಳಿಯಂತೆ ಬೆಳ್ಳಗಿನ ಮನಸವಳು

ಸಾಸಿವೆಯಂತೆ ಪಟ ಪಟನೆ ಪುಟಿಯುವಳು

ಸಕ್ಕರೆಯ ಸಿಹಿಯವಳು ಅಕ್ಕರೆಯ ಗೆಳತಿ,