Friday, September 3, 2010

ಕನಸಿನಲೊಮ್ಮೆ ನೆನಪಿನ ಗೋಪುರ ಕಟ್ಟಿದಾಗ..

ಕನಸಿನಲೊಮ್ಮೆ ನೆನಪಿನ ಗೋಪುರ ಕಟ್ಟಿದಾಗ ಪ್ರೀತಿಯ ಭಾವನೆಗಳು ಕವನದೊಡನೆ ಬೆರೆತು ಹೀಗಾಯಿತು!

ಒಮ್ಮೆ ನೋಡಿದಳು ಮತ್ತೊಮ್ಮೆ ನೊಡಿದಳು
ಮಗದೊಮ್ಮೆ ನನ್ನಿಂದ ತಡೆಯಲಾಗಲಿಲ್ಲ
ಮನಸು ಮಾಡಿದೆ ಹತ್ತಿರ ಹೋಗಲು
ಮುಜುಗರದ ಮನಸು ಧೈರ್ಯಕಿಳಿಯಲಿಲ್ಲ

ಕಮಲಾ ಟೀಚರ್ ಮಗ್ಗಿ ಬೋಧಿಸಿದೊಡನೆ
ಹತ್ತರ ವರೆಗೆ ಉಸಿರು ಕಟ್ಟಿ ಹೇಳಿದೆ
ನನ್ನ ಕನಸಿನ ಗೆಳತಿ ಇಪ್ಪತ್ತರವರೆಗೆ ಹೇಳಿದಾಗ
ನನ್ನ ಹತ್ತೊ ಮರೆತು ಹೋಯಿತು

ಪದೇ ಪದೇ ಕಣ್ಣು ಮುಚ್ಚಿ ತೆರೆದಾಗ
ತೆರೆದ ಅಂಕಣದೊಳು ಸ್ವಲ್ಪ ಪ್ರಿಯವಾಯಿತು
ಪ್ರಿಯ ಹೋಗಿ ಹುಚ್ಚು ಪ್ರೀತಿಯಾದಾಗ
ನನ್ನ ಕನಸಿನ ಕವಲುಗಳು ಇಮ್ಮಡಿಯಾಯಿತು

ಹೆಜ್ಜೆಯ ಗಳಿಗೆಯಲೊಮ್ಮೆ ಗೆಜ್ಜೆ ಮುಟ್ಟಲೆಂದು ಬಗ್ಗಿದಳು
ಗೆಜ್ಜೆಯ ನೆಪದಲ್ಲಿ ನುನುಪಾದ ಪಾದ ನೋಡಿದೆ
ದಾವಣಿಯಲೊಮ್ಮೆ ಸೊಳ್ಳೆ ಕುಂತಾಗ
ಹತ್ತಿಕ್ಕಲೆಂದು ಸೊಳ್ಳೆಯ ಹಿಂದೆ ಓಡಿದೆ

ಪುಟ್ಟ ಕವನ ಬರೆದೆ ನಿನ್ನಲ್ಲಿ ಪ್ರೀತಿಯಿದೆ ಎಂದು
ಕನ್ನಡಿಯಲ್ಲಿ ಮುಖ ನೋಡಿಕೋ ಎಂದಳು
ನೇರವಾಗಿ ಹೇಳಿದೆ ನೀನಿಲ್ಲದೆ ನಾನಿಲ್ಲ ಎಂದು
ಕೆನ್ನೆಯ ಮೇಲೆ ಕೈ ಇರಿಸಿ ಹೆಳಿದಳು ಮತ್ತೊಮ್ಮೆ ಚಪ್ಪಲಿ ಇರುವುದೆಂದು

ಅಂದೊಂದು ದಿನ ಶಾರದೆಯ ಪೂಜೆಯಂದು ಅಭಿನಯ ಮಾಡಿದೆ
ನನ್ನ ಅಭಿನಯಕ್ಕಿಂತ ಅವಳ ಭರತ ನಾಟ್ಯ ಹುಬ್ಬೇರಿಸಿತು
ಅಭಿನಯ ನಾಟ್ಯಗಳ ಸ್ಪರ್ದೆಯ ಮಧ್ಯೆ ಕೂಚುಪುಡಿ ಮಿಗಿಲಾದಾಗ
ನನ್ನ ಅವಳ ಮಿಲನಕ್ಕೊಂದು ಕಾರಣ ಒಕ್ಕರಿಸಿತು

ನಾನು ನಿನ್ನ ಗೆಳತಿಯಷ್ಟೆ ಪ್ರೇಯಸಿಯಲ್ಲ ಅನ್ನೊದು ಅವಳ ಮಾತು
ನಾನು ನಿನ್ನ ಗೆಳೆಯನಲ್ಲ ಪ್ರಿಯಕರ ಅನ್ನೋದು ನನ್ನ ಮಾತು
ಸ್ನೆಹಿತರ 1 ಕಡೆ ಲವ್ ವಾ 2 ಕಡೆ ಲವ್ ವಾ ಅನ್ನೋ ಪ್ರಶ್ನೆಗೆ 2 ಡೂ ಕಡೆ ಎಂದು ಉತ್ತರಿಸಿದೆ
ಒಂದು ಅವಳ ಕಡೆ ಇನ್ನೊಂದು ಅವಳ ಭಾವನೆಗಳ ಕಡೆ ಅಂದಾಗ ಬಾಯಿ ಮುಚ್ಹಿ ಕುಳಿತರು

ಅವಳು ಮುಂದೆ ಓಡುವಾಗ ಹಿಂದೆ ಓಡಿದೆ
ಅವಳು ಹಿಂದೆ ಬಂದಾಗ ಬಚ್ಹಿ ಕುಳಿತೆ
ಗ್ರಂತಾಲಯಕ್ಕೆ ಹೋದಾಗ ಏನೋ ಹುಡುಕುವ ನೆಪ ಮಾಡಿದೆ
ನೆಪದಲ್ಲಿ ನನ್ನೊಳಗೆ ನನ್ನವಳ ಕನಸಾದೆ

ಎಲ್ಲರ ಮಧ್ಯೆ ಓಟದಲೊಮ್ಮೆ ಕಾಲು ಎಡವಿ ಬಿದ್ದಳು
ಬಿದ್ದ ಕಾರಣವೇ ಸ್ನೆಹಿತರಿಗೆ ನಗುವಾಯಿತು
ಯಾವುದನ್ನೊ ಲೆಕ್ಕಿಸದೆ ರಕ್ತ ಸುರಿಯುವ ಕಾಲನ್ನು ಎತ್ತಿ ಬಿಳಿ ಬಟ್ಟೆ ಕಟ್ಟಿದಾಗ
ಅವಳ ಕಣ್ಣುಗಳಲ್ಲಿ ನನ್ನ ಮೊದಲ ಕಾದಲ್ ಕಾಣಿಸಿತು

ಆಟದ ಸಮಯದಲ್ಲಿ ಓದುತ್ತಾ ಕುಳಿತಿದ್ದೆ
ಆಡಲು ಹೋಗೋದಿಲ್ವೊ ಎಂದಳು
ಆಡಲು ಸ್ನೆಹಿತರಿಲ್ಲ ನೀನು ಬರುವೆಯಾ ಎಂದಾಗ
ಟೀಚರ್ ಬರುವರಂತೆ ಕರೆದುಕೊಂಡು ಹೋಗು ಎಂದಳು

ಮೆಲ್ಲನೆ ಗಲ್ಲದ ಮೇಲೆ ನಗು ಪುಟಿಯುತ್ತಾ ಬಂತು
ಹೆಜ್ಜೆಯ ವೆಗದ ಗತಿಯಲ್ಲಿ ಯೇನೋ ವಿರಳತೆ
ನೋಟದ ನೇರಿಯಲ್ಲಿ ತುಮುಲಗಳ ಕಂತು
ನಡತೆಯಲ್ಲಿ ಬಿಗುವಾಗಿ ಹೆಚ್ಚಿತ್ತು ಸರಳತೆ

ಲೇಡೀಸ್ ಸೀಟಿನಲ್ಲಿ ನಾನು ಕುಳಿತಿದ್ದೆ
ಆಕೆ ಕೂರುವಳೆಂದು ಎದ್ದು ನಿಂತೆ
ಯಾವಳೊ ಬೊಜ್ಜು ಮೊದೇವಿ ಒಕ್ಕರಿಸಿ ಹಾರಿದಳು
ನನ್ನವಳೂ ಗೊಳ್ ಎಂದು ನಕ್ಕಾಗ ರೋಮ ಲಂಬವಾಯಿತು

ಆಕೆ ಬಹುಮಾನ ಗೆದ್ದಾಗ ಕೈ ಕುಲುಕಿ ಶ್ಲಾಘಿಸಿದೆ
ಮತ್ತೊ ಕುಲುಕಿದೆ ಕೈ ಮತ್ತೊಮ್ಮೆ ಕುಲುಕಿದೆ
ಸಂತಸದ ಪರಮ ಹಂತಗಳನ್ನು ಮಾತೊಡನೆ ಚೆಲ್ಲಿದೆ
ಕೈ ಬಿಟ್ಟರೆ ಮುಂದುವರಿಯುತ್ತೇನೆ ಎಂದಳು

ಗಟ್ಟಿ ಮನಸನ್ನು ಅರಿಯಲಾಗಲಿಲ್ಲ ನನ್ನಿಂದ
ಏನು ಎಲ್ಲಿ ಹೇಗೆ ಮಾಡಿದರೂ ಮನದೊಳಗಿದನು ಬಿಚ್ಹಲಿಲ್ಲ ನನ್ನವಳು
ಕಾಯುತ್ತಿರುವುದು ಬೇಸರವಾದಾಗ ಭಯವೇಕೆ ಎಂದೆ
ನನ್ನ ಅಪ್ಪ ಪೋಲೀಸ್ ಎಂದಳು

ಒಂದು ದಿನದ ಆಶಾಡದಂದು ಮನೆಯೊಳಗೆ ನುಗ್ಗಿದೆ
ಮಾವನ ಮನಒಲಿಸಲು ನೊಡಿದೆ
ನಿಮ್ಮ ಮಗಳ ಮೇಲೆ ಲವ್ ಇದೆ ಎಂದಾಗ
ನನ್ನ ಕೈಯಲ್ಲಿ ಲಾಟಿ ಎಂದರು

ಫೊನ್ ನಂಬರ್ ಕೇಳಿದೆ ಒಲ್ಲದ ಮನಸ್ಸಿಂದ ಕೊಟ್ಟಳು
ಪ್ರಯತ್ನಿಸಿದಾಗ ಚಂದಾದಾರರು ಬೇರೆ ಕರೆಯಲ್ಲಿದ್ದಾರೆ ಎಂದು ಯಾರೋ ಅಂದಳು
ಮನೆಯಲ್ಲಿ ಎಲ್ಲರೂ ಒಂದೇ ದೂರವಾಣಿ ಉಪಯೋಗಿಸೋದು ಅಂದಾಗ
ಮುಂಜಾನೆ ಹೊಟ್ಟೆ ತುಂಬಾ ಊಟ ಮಾಡಿದೆ

ಸ್ಕೂಲಿನಲೊಮ್ಮೆ ಪ್ರವಾಸ ಹೊರಡಲು ನಿರಾಕರಿಸಿದೆ
ಅವಳೊ ಬರುವುದು ಕಚಿತವಾದಾಗ ಮೊದಲ ಹೆಸರು ನನ್ನದೆ
ಅವಳಿಗಾಗಿ ಸ್ಥಳ ನಿಗದಿಸಿದ್ದೆ ಯಾರನ್ನೊ ಕೂರಲು ಬಿಡಲಿಲ್ಲ
ಕಮಲಾ ಟೀಚರ್ ಬಂದು ಕೂತಾಗ ಹೊಂ ಎನ್ನುವ ಧೈರ್ಯ ನನಗಿಲ್ಲ

ಅಂತೂ ಇಂತೂ ಪರೀಕ್ಷೆ ಬರೆದೆ ಅವಳೂ ಎಡದಲ್ಲಿ ಇದ್ದಳು
ತಲೆ ತುರಿಸುತ್ತಿರುವಾಗ ನನ್ನ ಉತ್ತರ ಪತ್ರಿಕೆ ತೊರಿಸಿದೆ
ಕಣ್ಣು ಮಿಟುಕಿಸುತ್ತಾ ಗಬ ಗಬನೆ ಅಚ್ಚು ಹಾಕಿದಳು
ನಾನೂ ಪೇಲಾದೆ ಅವಳೊ ಪೇಲಾದಳು

ಅಂದಿಗೆ ಮುಗಿಯಿತು ಶೈಕ್ಷಣಿಕ ಜೀವನ
ನಾನೊಂದು ಕಡೆ ಅವಳೊಂದು ಕಡೆ
ಎಲ್ಲೋ ಸಿಕ್ಕಿದಳು ಮುಂದೊಂದು ದಿನ
ಎಲ್ಲವನ್ನೊ ಉರುಳಿಸಿತ್ತು ಕಾಲವೆಂಬ ಕವಡೆ

ನನ್ನವಳಲ್ಲವಾದರೂ ಚಿಂತಿಸಲಿಲ್ಲ
ದೇವರಂತ ಪತಿ ನನ್ನವನು ಅಂದಳು
ಪರರ ಪಾಲಾದರೂ ಪಾರವಾಗಿಲ್ಲ
ಸುಕವಾಗಿ ನನ್ನ ಆತ್ಮದಲ್ಲಿ ಸದಾ ಸತಿ ಅವಳು

ಮನವೆಂಬ ಮಂದಿರದಲ್ಲಿ ಮಂದಾರವಾಗಿದ್ದಳು
ಕ್ಷಣ ಕಾಲ ಸುಖದಲ್ಲಿ ಸುಂದರಿಯಾಗಿದ್ದಳು
ಈಗ ಎರಡು ಮಕ್ಕಳ ತಾಯಿ
ಅವಳೇ ನನ್ನವಳು,


ಪ್ರೀತಿಯಲ್ಲಿ ಕೊಂಚ ನೊಂದ......ಲೋಕು ಕುಡ್ಲ