Wednesday, July 28, 2010

ಹೆಣ್ಣು ನೋಡಲು ಹೋದಾಗ !?

ಹೆಣ್ಣು ನೋಡಲು ಹೋದಾಗ ಏನಾಯ್ತು ಅಂತೀರಾ ? ಅಯ್ಯೋ ಅಲ್ಲೊ ಒಂದು ರೀತಿಯ ಮಜಾ ನಡೀತು!
ಒಂದು ದಿನದ ರಾತ್ರಿ ಸುಮಾರು ೮.೩೦ ಕ್ಕೆ ಅವಳಿಂದ ಫೋನ್ ಬಂತು ...ನಮ್ಮನೆನಲ್ಲೋ ಹೇಳ್ದೆ ..ವಿಷ್ಯ ಮೊದ್ಲೇ ಗೊತ್ತಿತ್ತಾದರೂ ಒಪ್ಪಿದ್ರು..
ನಾನೂ ನನ್ನ ಸಂಮಂದಿಕರು ಎಲ್ರೂ ..ಅವ್ರ ಮನೆಗೆ ಹೋದ್ವಿ ..ಬನ್ನಿ ಕೂತ್ಕೊಳ್ಳಿ ಅಂದ್ರು ..ನನ್ನ ಗೆಳೆಯನಿಗೆ ಅವ್ರ ಆದರಾತಿತ್ಯ ಬೋ ಇಷ್ಟ ಆಯ್ತು ಅಂತ ಹೇಳ್ದ ..ನಮ್ ಅತ್ತೆ ಅಂತೂ ..ಮಗಳಿಗಿಂತ ಮಿನ್ಚುತ್ತಿದ್ರು ..ನಂಗಂತೂ ಅವ್ರು ತಂದು ಕೊಟ್ಟಿದ್ದನ್ನು ತಿಂದು ತಿಂದು ಸಾಕಾಗೊಯ್ತು ..ಆಗ್ಲೇ ನಂ ಗೆಳೆಯರ್ಗೂ ಸಾಕಾಗೊಯ್ತು ..ಸಾಕ್ರಿ ಯಪ್ಪಾ ಹುಡುಗಿ ತೋರ್ಸರಿ ಬೀರ್ ಬಿರನೆ ನೋಡ್ಕೊಂಡು ಹೋಗ್ಬಿಡ್ತಿವಿ ಅಂದೇ ಬಿಟ್ಟ ..ಆಗ್ ಅವಳನ್ನ ನೋಡಿದಾಗ ನಾನು ಹಿಂದೆ ಯಾವತ್ತು ನೋಡಿದಾಗೆ ಇರ್ಲಿಲ್ಲ ...ಮುಖಾನೆ ಬದಲಾಗಿತ್ತು ..ಇದೇನಪ್ಪ ಹಿಂಗಾಗವ್ಲೇ ,,ಅಂತಾ ಅನ್ಕೊಂಡೆ ...ಕೇಳೇ ಬಿಡೋವ ಅಂತ ..ಇದೇನೇ ಹಿಂಗೆ ಸೋರ್ಗೊಗಿದೀಯ ಅಂತಾ ಕೇಳ್ದೆ..ಎಲ್ರೂ ಹಮ್ಮ ಅಂತಾ ನಕ್ಕಿದ್ರು ..ಅಳಿಯಂದ್ರೆ ..ಅವ್ಳು ನಿಮ್ ಹುಡುಗಿ ಅಲ್ರಿ ..ಅದು ನಮ್ ಎರಡನೇ ಮಗಳು ಅದಾಳ ..ಅಂದ್ರು ...ನಾನೂ ಮರಿಯಾದೆ ಬಿಟ್ಟು ಕೊಡಲಿಲ್ಲ ..ಅದ್ರೆನ್ರಿ ಅತ್ತೆ ಇಬ್ರನ್ನೋ ಕಟ್ಕೋತೀನಿ ,,ಅಂದೇ ..ನಾದ್ನಿ ಏನೂ ಕಂಮಿಯೋಳಲ್ಲ ಬಿಡ್ರಿ ..ಮತ್ತೆ ಮೂರನೆಯೋಳು ಅವಳೇ ಅವಳನ್ನೂ ಜೊತೆಗೆ ಕರಕೊಂಡು ಬರ್ಲಾ ಅಂದೇ ಬಿಟ್ಲು ನೋಡಿ ..!
ನನಾಕಿ ಬಂದೇ ಬಿಟ್ಲು ..ಚಂದನದ ಗೊಂಬೆ ಹಂಗ ಇದ್ಲು ..ನನಗಂತೂ ಆವಾಗಲೇ ತಾಳಿ ಕಟ್ಟಿ ಬಿಡೋಣ ಅನ್ನಿಸ್ತು ..ಹಂಗೆ ಒಂದು ಲೋಟ ಸರ್ಬಾತ್ ತಂದ್ ಕೊಟ್ಳು ...
ಅವಳಪ್ಪ ಕೇಳಿದ್ರು ..ಏನ್ ಅಳಿಯಂದ್ರೆ ನಿಮ್ಗೆ,,ನಮ್ಮ ಮಗಳು ಇಷ್ಟಾನೆ ಅಂತ ..ನಾನು ಟೆಂ ಮಿಸ್ ಮಾಡಾಕ ಹೋಗಿಲ್ಲ ..ಹೌದ್ರಿ ಮಾವೊರೆ ..ಇಷ್ಟು ತಿಂದು ನಾವು ಇವಾಗ ಇಷ್ಟ ಇಲ್ಲ ಅಂದ್ರೆ ನೀವು ಕೆರದಾಗ ಹೊಡಿಯಲ್ವ..ಅಂತ ಗಾಳಿಯಾಗ ಮಾತಾಡಿದೆ ..
ನಾನು ಆಕೇನ ಕೇಳ್ದೆ ..ನಿಮ್ಗೆ ನಾನು ಇಷ್ಟಾನ? ...ನಾನ್ ಕೇಳಿದ್ರೂ ಕೆಳಗಿದ್ದ ತಲೆ ಮೇಲೆ ಮಾಡ್ಲೇ ಇಲ್ಲ ಆಕಿ ..ಕಾಲಿನ್ ಬೆರಳಿಂದ ಆಗ್ಲೇ ರಂಗೋಲಿ ಹಾಕಾಕೆ ಶುರು ಮಾಡಿದ್ಲು ..
ಆಯ್ತು ಈಗೊಂದು ಸಮಾಚಾರ ಮಾಡೋಣ ...ಇದು ನನ್ನ ಹೊಸ ಮೊಬೈಲ್ ಐತಿ ..ಇದನ್ನ ನಾನೀಗ ಟೇಬಲ್ ಮೇಲೆ ಇಡಾಕ ಹತ್ತೀನಿ ..ನಾನು ಇಷ್ಟ ಆದ್ರ ಈ ಫೋನ್ನ ಎತ್ಕೊಂಡು ಒಳಗ ಹೋಗ್ಲಿ ..ಇಷ್ಟ ಇಲ್ಲ ಅಂದ್ರಾ ,,ಇಲ್ಲೇ ಬಿಟ್ ಹೋಗ್ಲಿ ಅಂದೇ ..
ಇಟ್ಟೇ ಬಿಟ್ಟೆ ನೋಡ್ರಿ ....
ಸಿಕ್ಕಿದ್ದೇ ಚಾನ್ಸು ಅಂತ ,,ಹಿಂದೆ ಮುಂದೆ ನೋಡ್ದೆ ..ಎತ್ಕೊಂಡು ಹೋಗೇ ಬಿಟ್ಲು ...
ನನ್ ನಾದಿನಿ ಆವಾಗಲೇ ಕೇಳಿದಳು ..ಬಾವ ..ನಂಗೂ ಒಂದು ಕೊಡ್ಸು ಅಂತ ..ಆಯ್ತು ಕೊಡ್ಸೋಣ ಅಂದೇ..
ಆವಾಗಲೇ ನನ್ನ ಚಂದನದ ಗೊಂಬೆ ನಾನ್ ಕೊಟ್ಟದ್ ಮೊಬೈಲ್ನ ಮುಕದ್ಮೇಲೆ ಬಿಸಾಕ್ಬಿಟ್ಟು ಹೋದಳು ..ನನ್ನ ಗೆಳೆಯ ಕೇಳ್ದ..ಯಾಕೋ ಅವ್ಳು ಹ್ಯಾಂಗ್ ಮಾಡ್ಯಾಳ ಅಂತ ! ಹೇ ಬಿಡೋ ಅದು ಮೊನ್ನೆ ಜಾತ್ರೆಗೆ ಹೋಗೋವಾಗ ಮೂವತ್ತು ರೂಪಾಯಿ ಕೊಟ್ಟು ತೊಕೊಂಡಿದ್ದು ಅಂದೆ..ನಾನ್ ಮದ್ವೆ ಆಗಕಿಂತ ಮುಂಚೆ ಅವಳಿಗೆ ಮೊಬೈಲ್ ತೆಗಿಸ್ ಕೊಟ್ರೆ ..ನನ್ ನಾದಿನಿನೇ ..ಕಟ್ಕೊ ಸಂದರ್ಬ ಬರ್ಬೊದು ಅಂದೆ ...
ಆ ದಿನ ...ಗಮ್ಮತ್ತೆ ಗಮ್ಮತ್ತು ...
ಎಲ್ರೂ ನಕ್ಕಿದ್ದೆ ನಕ್ಕಿದು ,,ನನ್ನ ನಾದಿನಿಯಂತೂ ..ಓಡಿಸ್ಕೊಂಡೆ ಬಂದ್ಲು.........

Tuesday, July 27, 2010

ನೆನಪಿನ ಕನಸಲ್ಲಿ ನನ್ನವಳ ಮೊದಲ ಭೇಟಿ..

ಕನಸಿನಲ್ಲಿ ನನ್ನವಳ ಮೊದಲ ಭೇಟಿ ಹೇಗಿತ್ತು ಅಂತೀರಾ? ಅಬ್ಭಾ ಹೇಗೆ ಮರೆಯಲಿ ಹೇಳಿ! ಅಂದ ಹಾಗೆ ಎಲ್ರೂ ಅವರಪ್ರೇಯಸಿಯನ್ನು ಫಿಲಂ ಟಾಕೀಸ್ನಲ್ಲೋ ,ಪಾರ್ಕಿನಲ್ಲೋ ,ಬಸ್ ಸ್ಟಾಪ್ ನಲ್ಲೋ ನೋಡಿರ್ಬೋದು ! ಆದ್ರಾ ನನ್ ಕತೆ ಹಂಗಲ್ಲನೋಡ್ರಿ ! ನಾನು ಆಕೆನಾ ನೋಡಿದ್ದು ಯಾವುದೋ ಒಂದು ಪ್ರಪಾತದಾಗ..ನಾನು ಸನ್ನೊನಿರೋವಾಗ ಒಂದ್ಸಲ ನನ್ ಅಜ್ಜಿ ಮನೆಗೆಹೋಗಿದ್ದೆ .. ಊರು ಭಯಂಕರ ಕಾಡು,ರಸ್ತೆ ಬದಿಗೆ ಎರಡೂ ಕಡೆ ಪ್ರಪಾತ ಐತಿ.. ನಾನೂ ಹಾಲು ತೊಕೊಂಡು ರಸ್ತೆ ಮದ್ಯಾನಡೀತಾ ಬರ್ತಾ ಇದ್ದೀನಿ...ಅಬ್ಭಾ ಒಂದೇ ಸಲ ನಂಗೆ ಎದೆ ನಡುಗೋ ತರ ಶಬ್ದ ಬಂತು ..ನೋಡಿದ್ರ ಒಂದು ಸ್ಕೂಟಿ ಪೆಪ್ ನಾಗಒಂದು ಸನ್ನ್ ಹಡುಗಿ.. ಗಾಳಿನಾಗ ಬರ್ತಾ ಅವ್ಳೇ...ಅಬ್ಬ ನಂಗೆ ಅವ್ಳು ಬಾರೋ ಸ್ಪೀಡ್ ನೋಡಿನೇ ಗೊತಾಗ್ ಬಿಡ್ತು ..ಇವತು ನಮ್ಪ್ರಪಾತ ಏನು ಅದೃಷ್ಟ ಮಾಡೈತೆ ಅಂತಾ..ನಾನ್ ಅನ್ಕೊಂಡಿದ್ದೆ ತಡಾ..ಬಿದ್ದೋಯ್ತು ಕಣ್ರೀ ಅವ್ಳ ಸ್ಪೀಡು ಪ್ರಪಾತದೊಳಗ.. ನಾನೂಮನ್ಸ ಅಲ್ವೇನ್ರಿ ..ಪಾಪ ಕಾಣಿಸ್ತು ಹೋಗಿ ಬಗ್ಗಿ ನೋಡ್ದೆ .. ಅಯ್ಯೋ ಮೈ ಎಲ್ಲ ನಡುಗಕ್ಕ ಶುರುವಾಯ್ತು.. ಮೊದ್ಲು ಅವ್ಳ ಮೈ ಕೈನೋಡ್ದೆ ..ಚರ್ಮ ಎಲ್ಲ ಎದ್ದ್ ಬಂದಿತ್ತು..ಅದೆಲ್ಲ ರಕ್ತದಾಗ ತುಂಬಿತ್ತು..ರಕ್ತಾನು ತರಾ ಇರ್ತೈತೆ ಅಂತ ನಂಗೆ ಅವತ್ತೇ ಮೊದ್ಲುಗೊತ್ತಾಗಿದ್ದು ..ಆಗ್ಲೇ ನನ್ನ ಕಣ್ಣು ಆಕೆ ಮುಖ ನೋಡ್ತು ..ಅದೇನೋ ಗೊತಾಗಿಲ್ಲ ಅಳ್ತಾ ಇದ್ಲು ..ಅವ್ಳ ಗಲ್ಲ ನೋಡ್ದಾಗ ನಂಗೆಏನೋ ಅನ್ನಿಸ್ತು ಆದ್ರ ಸ್ತಿತಿನಾಗ ಏನಂತಾನೆ ಗೊತ್ತಾಗಿಲ್ಲ ..ಆಕೆ ತುಟಿ ಒಣಗಿತ್ತು ..ಅದೇನೋ ಇಂಗಿಶ್ನಾಗ ಹೆಲ್ಪ್ ಹೆಲ್ಪ್ ಅಂತಾಅಂದ್ಲು ..ಅವ್ಳ ಕೈ ನಾನ್ ಹಿಡ್ಕೋಬೇಕು ಅನ್ನೋತರ ಅವ್ಳ ಮನದ ಭಾವನೆ ನಂಗೆ ಅರ್ತ ಆಯ್ತು ...ಹಂಗೆ ಕೈ ಕೊಟ್ಟೆ ನೋಡ್ರಿಇವತ್ತು ಅಡುಗೆ ಮನೆಯಾಗ ನಂಗೇ ಅಡುಗೆ ಕಲಿಸ್ತಾವ್ಲೆ....
ಇನ್ನೂ ಶಾನೆ ಕತೆ ಐತೆ ..ಮುಂದಿನ ಸಂಚಿಕೆಯಾಗ ಮಾತಾಡೋಣ ..ಏನಂತೀರ ?..ನನ್ ಸ್ಟೋರಿ ಕೇಳಿ ನಗ್ ಬೇಡ್ರಿ..ಸ್ವಲ್ಪ ಕರುಣೆಇರ್ಲಿ ...
ಇಂತಿ ನಿಮ್ಮ
ಲೋಕು ಕುಡ್ಲ ...

Monday, July 26, 2010

ಮನಸ್ಸು ಹಾಳಾದಾಗ ಎಲ್ಲಾ ಕಾಣಿಸಿತು ...ಪ್ರೀತಿ ಬದಲಾದಾಗ ಏನೂ ಕಾಣಿಸಲಿಲ್ಲ.....
ಗೊಂಬೆ ಎಂದಳು,ತೆಗಿಸಿಕೊಟ್ಟೆ ನನ್ನ ಪರ್ಸ್ ಕೊಡು ಎಂದಾಗ..ಬಡವ ನೋಡಲು ಚನ್ನಾಗಿದ್ದ ದಾನ ಮಾಡಿದೆ ಎಂದಳು! ಈಗ 2ರ ಮನದಲ್ಲಿ ನಾನು ಕೆಲಸದ ಆಳು!
ಅವಳಿಲ್ಲ ಎಂದು ಚಿಂತಿಸಿದೆ! ಅವಳು ಬಂದಮೇಲೆ ಅವಳಿದ್ದಾಳೆ ಎಂದು ಚಿಂತಿಸುತ್ತಿದ್ದೇನೆ......! ಬದುಕು ಮಾಯಾ ಜಿಂಕೆ...!
ಅವಳು miss call ಕೊಟ್ಟಾಗ ಪ್ರೀತಿ ಬಂತು.ನಾನು re call ಮಾಡಿದಾಗ.ನಿಮ್ಮ ಚಂದಾದಾರರು ಇನ್ನೊಬ್ಬರೊಂದಿಗೆ ನಿರತರಾಗಿದ್ದಾರೆ.ಪುನಹಾ ಪ್ರಯತ್ನಿಸಿ.ಎಂದಿತು.
ಮನದೊಳಗೆ ನೂರು ಭಾವನೆಗಳಿತ್ತು...ಅವಳೆದುರು ನಿಂತಾಗ 3 ನೆನಪಾಗಲಿಲ್ಲ ......

ಮರ ಹತ್ತು ಎಂದಳು ನನ್ನಾಕೆ...ಯಾಕೆ? ಎಂದು ಕೇಳಿದೆ .... ಬೈಕ್ ಕೀಯಲ್ಲಿ ಆಟವಾಡುತಿದ್ದೆ ಅದು ಈಗ ಮರದ ಕೊಂಬೆಯಲ್ಲಿದೆ ಎಂದಳು....
ಮನಸು ಮುದ್ದಾಡಿತು,,,ಎದೆಯು ಗುದ್ದಾಡಿತು... ನಾ ಕಣ್ಣು ತೆರೆದಾಗ ಮಂಚದ ಕೆಳಗಿದ್ದೆ....