Thursday, April 21, 2011








ಗೊಂದಲದೊಳಗೊಂದು ಹಂಬಲ

ಬರೆಯಲೇಬೇಕೆಂದು ಹೊರಟೆ
ಏನು ಬರೆಯಲಿ ಯಾರ ಬರೆಯಲಿ?
ಸ್ವಲ್ಪ ಹೊಸದು ಬೇಕಿತ್ತು,ಕಾಣುವುದೆಲ್ಲಾ ಹಳೆಯದಾಗಿತ್ತು
ಹೆಣ್ಣು,ಹೊಣ್ಣು,ಮಣ್ಣು ಮನ ಗೊಂದಲದಲ್ಲಿತ್ತು..


ಮೊದಲ ಕವನ ಚಿಗುರಿದಾಗ
ಕಾಲ ಬುಡದಲ್ಲಿ ಗೀಚಿ ಹರಿದು ಎಸೆದ ಕಸವಿತ್ತು
ಚಿಗುರಿದ ಕವನ ಅರಳುವ ಹೊತ್ತು
ಮನ ಸುಂದರ ಪದಗಳ ಹೊಂದಿಸುವ ಗೊಂದಲದಲ್ಲಿತ್ತು


ಚುಕ್ಕೆ ಚಿತ್ತಾರಗಳ ವರ್ಣಿಸಲೇ
ಹಕ್ಕಿ ಆಗಸವನೊ ಬೆರೆಸಲೇ
ಸುತ್ತ ಮುತ್ತ ಕಾಡು ಕಡಲು ಕೇವಲ ಚಿತ್ರವೇ?
ವಿಚಿತ್ರ ನಾಡಿನ ಹಗಲು - ಇರುಳಿನಲಿ
ಕಪ್ಪು ಬಿಳುಪಿನ ಬಾಳೊಂದು ಬಣ್ಣವೇ?


ಜೀವಿಗಳಿಗಿರುವ ಕಿಚ್ಚು ಮತ್ಸರ?
ಗಾಳಿ-ನೀರಿಗೇಕಿಲ್ಲ?
ಜೀವಿಗಳನು ಚುಚ್ಚುವ ಕುಸುಮದ ಮುಳ್ಳು
ದುಂಬಿಯನೇಕೆ ಚುಚ್ಚಲಿಲ್ಲ?
ನಿನ್ನೆಯ ಪುಠಗಳು ತುಂಬಿತ್ತು
ನಾಳೆಯದೇಕೆ ಖಾಲಿ ಖಾಲಿ.............?