Thursday, January 13, 2011

ಮೌನ ಮನಸ್ಸು........

ಬಾಲ್ಯದ ಬಾಳು....ಕುಡ್ಲನ ಗೋಳು...
ಮೊರು ನಿಮಿಷಗಳ ಕವನ...........ಎರ್ರಾ ಬಿರ್ರಿ ಮೌನ ಮನಸ್ಸಿನ ಚುಂಬನ..

ಕನಸ್ಸೆಂಬ ಹಳ್ಳದಲ್ಲಿ...ಹೊಲಸ್ಸೆಂಬ ಕೆಸರಿನಲಿ..
ಕುಸುರಿ ಕುಮಿರಿದ್ದ ಬಾಲ್ಯದ ಬುಗ್ಗೆಯಲಿ..
ನಾರಿ ನಾರುತ್ತಿತ್ತು... ಮನದ ಬುಗರಿ ಗರಗರಿದಿತ್ತು..
ಅದಾಗ ವಯಸ್ಸಿಗೆ ತಕ್ಕ ಕನಸ್ಸು... ಅರ್ಥವಿಲ್ಲ ಪರ್ಥವಿಲ್ಲ
ಸಿಂಬಳ ಜಾರುತ್ತಿತ್ತು... ನಾಲಗೆ ನೇವರಿಸಿತ್ತು..
ಗಾದೆಯಲ್ಲ,,,ಬಾದೆಯಿಲ್ಲ..ಬಾಲ್ಯವೊಂದು ಮೌನಮನಸ್ಸು...

ಮುಂಜಾನೆ ಕಾಟಾಚಾರಕ್ಕೆ ಹಲ್ಲುಜ್ಜಿ ಅರೇಬರೆ ಸ್ನಾನ..
ಬೆತ್ತಲೆ ಇದ್ದರೊ ಹೆದರಲಿಲ್ಲ..
ನೋಡಿ ನಗುವರೆಂಬ ಬಯವಿಲ್ಲ..
ಒತ್ತಾಯಕ್ಕೆ ಎರಡು ದೋಸೆ,,,
ಹಸಿವಿಲ್ಲದಿದ್ದರೊ ಹಟಕ್ಕೆ ಇನ್ನೊಂದು ಬೇಕಿತ್ತು..
ಗೆದ್ದು ತಿನ್ನುವ ಬದಲು ಕದ್ದು ತಿಂದರೆ ಹೊಟ್ಟೆ ತುಂಬಿದ ಅನುಭವ..

ಅಂಗನವಾಡಿಗೆ ಹರಿದ ಜೋಳಿಗೆ ಒಡೆದ ಸ್ಲೇಟು...
ಚಡ್ಡಿಯಲ್ಲಿ ಮುರಿದು ನೊರಾಗಿದ್ದ ಕಡ್ಡಿ....
ಬೆಲ್ಲದ ಮುಚ್ಚಳದಲ್ಲಿ ಈಚಲ ಗರಿಯಿಂದ
ಕಿರಕಿರನೆ ತಿರುಗುವ ಗಾಡಿಯಲ್ಲೇ
ಅಂಗನವಾಡಿಗೆ ಮೌನ ಮನಸ್ಸಿನ ಪಯಣ

ಅದು ಬರೆಯಲೂ ತೋಚದ ಅಶ್ವತ್ಥಪುರದ ಅಂಗನವಾಡಿ..
ಸುತ್ತಲೂ ಕಮಿನಿಸ್ಟ್ ಪೊದೆ..
ಗಂಟೆ ಹತ್ತಾದರೆ ಪೊದೆಗೆದೆ ಕೊಟ್ಟು ಸಾರ್ವಜನಿಕ ಸೂ...ಸೂ
ಎತ್ತಿ ಏರಿಸಿದರೆ .... ನೆತ್ತಿ ಬೇರುತ್ತಿತ್ತು...
ಮೌನ ಮನಸ್ಸಿನ ಜೋಳಿಗೆಯಲ್ಲಿ ಮರಿಯಾದೆಯ ಬಣ್ಣವೇ ಇರಲಿಲ್ಲ..

ಬೆತ್ತಕ್ಕೆ ಹೆದರಿ.... ೧..೨..೩...೪... ಅ ಆ ಇ ಈ ಗೆ ಗಂಟೆ ಹನ್ನೆರಡಾಗಿತ್ತು..
ಸಜ್ಜಿಗೆ ಉಂಡೆಗೆ ಕಾದರೊ ಸುಮ್ಮನೆ ತಿಂದರೆ ಸಾಕಿಲ್ಲ..
ಮೊತಿಗೆ ಮೆತ್ತಿ ಪೋಸುಕೊಡಬೇಕಿತ್ತು...
ಒಂದೇ ಅಂಗಿ.... ನೋರೆಂಟು ಹೊಲಿಗೆ...
ಹುಕ್ಕಿಲ್ಲದ ಚಡ್ಡಿ ಸದಾ ಕೈಯ್ಯ ದಾಸತನದಲ್ಲಿತ್ತು...

ಗಂಟಲು ಒಣಗಿದರೆ ಸುಮ್ಮನೆ ನೀರು ಕುಡಿಯಲಿಲ್ಲ
ಬಟ್ಟೆ ಒದ್ದೆಯಾಗದಿದ್ದರೆ ಮನಸ್ಸಿಗೆ ಸಮ್ಮತಿ ಇಲ್ಲ...
ಉರಿವ ಬಿಸಿಲಿನಲ್ಲೇ ಕುಣಿದಾಡುತ್ತಿದ್ದೆ...
ಬೆವರು ಕಿತ್ತು ಘಂದವಾಗಿತ್ತು..!
ಮಧ್ಯೆ ಹೆಬ್ಬೆರಳಲ್ಲಿ ಎಳೆಯೊದರಲ್ಲೂ ಒಂದು ಗತ್ತು..!

ವಯಸ್ಸು ಐದಾದಾಗ ದೊಡ್ಡ ಶಾಲೆಗೆ ಹೋಗೊ ಹುಮ್ಮಸ್ಸು...
ಅದು ಶ್ರೀ ವಾಣಿ ವಿಲಾಸ ಹಿರಿಯ ಪ್ರಾಥಮಿಕ ಶಾಲೆ ಅಶ್ವತ್ಥಪುರ...
ಗೇಟಿನ ಎರಡೊ ಇಕ್ಕೆಲದಲ್ಲಿ ಗಾಳೀ ಮರ..
ಪಕ್ಕದಲ್ಲಿ ಬಾವಿ.... ಈಚಲ ತೋಪು...

ಕಾಣುವಂತೆ ಕಾಣದಂತೆ ಒಂದು ಜೋಪಡಿ
ಅದು ಅಣ್ಣಿ ಶೆಟ್ಟರ ಗೂಡಂಗಡಿ...
ಗ್ಲಾಸಿನ ತುಂಬ ಅನ್ನಾರಕಲ್ಲಿ... ನೀರೊರಿಸುವ ಪೆಪ್ಪರ ಮಿಠಾಯಿ..
ಬಾಳೇ ಗೊನೆಯಂತೆ ಹಳದಿ ಬೋಟಿ
ಕೈಯಲ್ಲಿ ಸಿಕ್ಕಿಸಿದರೆ ಅದರ ರುಚಿಗಿಲ್ಲ ಸಾಟಿ....

ಗಂಟೆ ಬಡಿಯಲು ಒಂದು ತುಂಡು ರೈಲು ಕಂಬಿ
ನಾನು ಬಡಿಯುತ್ತೇನೆಂದು ಹಟ ಹಿಡಿದಿದ್ದೆ..
ಎಟುಕಿಸಿದರೆ ಬಡಿ ಎಂದು ಟೀಚರ್ ನಕ್ಕಿದ್ದರು
ನಗು ನೋಡಿ ಸ್ನೇಹಿತನ ಹೆಗಲು ಹತ್ತಿ ಹೊಡೆದೆ
ಗಂಟೆ ತಂತಿ ಸಡಿಲಾಗಿ ತಲೆಗೆ ಉರುಳಿತ್ತು.....

ಪಿಜಿನ ಎಂಬವನು ನಮ್ಮ ಊರಿನ ಬುಟ್ಟಿ ನೇಯುವಾತ
ಶಾಲಾ ಅಂಗಳದಲ್ಲೇ ಅವನ ಬಹುದಿನಗಳ ವಾಸ
ವಿದಿಗೆ ಶರಣಾಗಿ ಅಂಗಳದಲ್ಲೇ ಪ್ರಾಣ ಬಿಟ್ಟಿದ್ದ..
ದೆವ್ವವಾಗಿದ್ದಾನೆಂದು ಭಯದ ಆಯುದ ಹಿಡಿದೆ
ನಂತರ ಹುಡುಗಿಯರ ಬುತ್ತಿಯೊ ನನ್ನದೆ...!

ಮೊದಲ ತರಗತಿ ಕನ್ನಡವಾಗಿತ್ತು...
ಮೌನಮನಸ್ಸು ಮೌನವಾಗಿತ್ತು..ತುಂಟಾಟಿಕೆ ಮೊಕವಾಗಿತ್ತು..
ನಗು ನಗುತ್ತಾ ಬಂದರು ಪ್ರಮಿಳಾ ಟೀಚರ್...
ಅಂಗಿ ಗುಂಡಿ ಮೇಲೆ ಕೆಳಗಿದ್ದರೊ......
ದೇಹ ಮಣ್ಣು ಮೆತ್ತಿದ್ದರೊ... ಅಲ್ಲಿಲ್ಲಿ ಗಾಯದ ಅಚ್ಚಿದ್ದರೊ..
ಎತ್ತಿ ಮುದ್ದಾಡಿದ್ದು...ಮರೆಯಲಾಗದ ಕ್ಷಣ...
ಅಂದು ಹಾಡಿಸಿದ್ದು..
ನನ್ನ ನವಿಲೆ ನನ್ನ ನವಿಲೆ ಬಾರೆ ಇಲ್ಲಿಗೆ...
ಅಂಕು ಡೊಂಕು ಹೆಜ್ಜೆ ಹಾಕಿ ಹೊರಟೆ ಎಲ್ಲಿಗೆ..

ಗಡಿಯಾರದಲ್ಲಿ ಎರಡೇ ಸಮಯ ಇಷ್ಟವಾಗಿದ್ದು
ಮದ್ಯಾಹ್ನ ಒಂದು...ಸಂಜೆ ನಾಲ್ಕು..
ಒಂದು ಊಟ... ನಾಲ್ಕು ಆಟ...
ಹೊಸ ನೀಳಿ ಬಿಳಿ ಬಟ್ಟೆ ತೆಗಿಸಿದ್ದರು...
ಜಾರು ಬಂಡಿ ಜಾರಿದೆ... ಮೊದಲ ದಿನವೇ ಹಳೆಯದಾಯಿತು
ಚಡ್ಡಿಯಲ್ಲಿ ತೂತಿಲ್ಲದಿದ್ದರೆ ಕನ್ ಫರ್ ಟೇಬಲೇ ಇಲ್ಲ...

ನಾಲ್ಕನೇ ತರಗತಿಯಲ್ಲೊಮ್ಮೆ
ಇನ್ಸ್ ಪೆಕ್ಟರ್ ಬಂದಿದ್ರು...
ಬಡ್ದಿಮಗ ನಾಕ ನಾಕ ಎಷ್ಟು ಅಂತ ಕೇಳಿದ್ದ
ಕನಕ ಇವತ್ತು ರಜಾ ಅಂದಿದ್ದೆ....
ಟೀಚರ್ ಕ್ಲಾಸ್ ತೊಕೊಂಡಾಗ್ಲೆ ಗೊತ್ತಾಗಿದ್ದು ಅವ್ನು ಮಗ್ಗಿ ಕೇಳಿದ್ದು ಅಂತ..

ಐದನೇ ತರಗತಿಯಲ್ಲಿ ಇಂಗ್ಲಿಷ್ ಶುರುವಾಯ್ತು
ಸಂಜೆ ಅಜ್ಜಿಹತ್ರ ಟಸ್ಕ್ ಪುಸ್ಕ್ ಅಂದಾಗ ಮಂಕಾಗಿದ್ದರು..
ಮತ್ತೆ ಆರನೇ ತರಗತಿಯಲ್ಲಿ ಶುಚಿತ್ವ ಮಂತ್ರಿಯಾಗಿದ್ದೆ,,,
ತರಗತಿಯೊಳಗೇ ಉಗಿದಾಗ ಕಂತ್ರಿಯಾಗೋದೆ...

ಬಂತು ಮೊದಲ ಸಾರಿ ಸ್ಕೂಲ್ ಡೇ..
ಹೇಗೊ ಕಾಡಿ ಬೇಡಿ ಅವಕಾಶ ಗಿಟ್ಟಿಸಿಕೊಂಡಿದ್ದೆ
ಅಂದು ಸಡಗರವೋ ಸಡಗರ
ನನ್ನ ಕಾಕ ಪೂಕ ನ್ರತ್ಯಕ್ಕೆ ಟೀಚರ್ ಶಬಾಶ್ ಅಂದಿದ್ರು
ಅಂದು ರಾತ್ರಿ ಟೀಚರ್ ಏನೋ ಒಂತರಾ.. ಕನಸಲ್ಲೇ ಕಾಡಿದ್ರು..

ಏಳನೇ ತರಗತಿ ದೊಡ್ಡ ಶಾಲೆಯ ಅಂತ್ಯ ಘಟ್ಟವಾಗಿತ್ತು..
ಪ್ರೇಮ ಪತ್ರ ಬರೆಯುವ ಧೈರ್ಯ ಮಾಡಿದೆ...
ಆದರೆ ಬರೆದ ಪತ್ರಗಳೀಗೆ ಕಸ್ಟಮರೇ ಇರಲಿಲ್ಲ
ಅಂತಹ ಬಾಗ್ಯ ಯಾರೊ ಪಡೆದು ಬಂದಿಲ್ಲ ಎಂದು ಗೊಣಗುತ್ತಾ
ಸ್ವ ಸಮಾದಾನದೊಡನೆ ಸುಮ್ಮನಾದೆ..

ಅದು ಕೊನೇಯ ದಿನ
ನನ್ನ ಕನಸಿನ ರಾಣಿ ಕೆನ್ನೆ ಮುಟ್ಟಿದ್ದಳು
ರಾಣಿ ಜೊತೆಗೆ ಶಾಲೆ ಬಿಟ್ಟು ಹೋಗಲು ಅಳು ಬಂದಿತ್ತು..
ಅಳು ನೋಡಲಾಗದೆ ನನ್ನವಳು ಅಣ್ಣಾ ಅಂದಳು...!
ಮತ್ತೆ ಶಾಲೆ ಬಿಡಲು ಬೇಸರವಾಗಲಿಲ್ಲ..

ಪೊಟೋ ತೆಗೆಯಲು ಕರೆದಿದ್ದರು
ಈ ವರೆಗೆ ತಲೆ ಬಾಚದಿದ್ದರೊ ಆಗ ಮನಸ್ಸು ಮಾಡಿದ್ದೆ..
ಒಂದರ ಮೇಲೊಂದು ಬೆಂಚು ಪೇರಿಸಿ
ಮೊರು ನಾಲ್ಕು ಬಾರಿ ಕ್ಲಿಕ್ಕಿಸಿದರು..
ಚಿತ್ರದಲ್ಲಿ ನನ್ನ ಕೈ ಟೀಚರ್ ಹೆಗಲಲ್ಲಿತ್ತು..
ಮಾಸ್ಟರ್ ಬೆತ್ತದೊಡನೆ ಬಂದಾಗ...
ಟೇಚರ್ ಕಾಲು ಹಿಡಿದು ಅಮ್ಮಾ ಆಶೀರ್ವದಿಸಿ ಎಂದು ಅಂತ್ಯ ನೀಡಿದೆ..!

ಬೀಳ್ಕೊಡುಗೆಯ ನಂತರ ಗೇಟು ದಾಟುತ್ತಾ
ಒಮ್ಮೆ ಹಿಂತಿರುಗಿದಾಗ ಎಲ್ಲಾ ನೆನಪುಗಳು ಎದೆಗೆ ಚುಚ್ಚಿತ್ತು..
ಮೊಕವಾಗಿತ್ತು ಕನಸ್ಸಿನೊಡಗಿನ ಮೌನ ಮನಸ್ಸಿನ ಗೋಳು
ಮುಗಿದು ಹೋಗಿತ್ತು ನೆನಪಿನೊಳಗಿನ ಬಾಲ್ಯದ ಬಾಳು.....