Wednesday, November 23, 2011

ಪರಮಾತ್ಮ





ನಾದಸ್ವರವನ್ನು ಅಪಮಾನಿಸಿದ ಮೊತ್ತ ಮೊದಲ ಚಿತ್ರ ಪರಮಾತ್ಮ

ಕಲೆ ಏಕೆ ಕಾಲ ಕಸವಾಯಿತು ಯೋಗರಾಜ್ ಭಟ್ಟರಿಗೆ.? ಸುಂದರವಾದ ಚಿತ್ರ ನಿರ್ಮಿಸುವ ಮತ್ತು ವಿವಾದಗಳ ಮುಡಿ ಏರದ ಸಾಧಕ ಯೋಗರಾಜ್ ಭಟ್ ಎಂದರೆ ತಪ್ಪಾಗಲಾರದು. ಮುಂಗಾರು ಮಳೆ ಅಥವಾ ಪಂಚರಂಗಿ ಚಿತ್ರಗಳು ಯಾವುದೇ ವಿವಾದಗಳೀಗೆ ಮಣೆ ಇಡದೇ ಅಭಿಮಾನಿಗಳಲ್ಲಿ ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು, ಭಟ್ಟರ ಚಿತ್ರ ಎಂದರೆ ವಿಚಿತ್ರ ಡೈಲಾಗ್ ಸುರಿಮಳೆಗೇನೂ ಬರವಿಲ್ಲ, ಅಷ್ಟಲ್ಲದೆ ಅವರಿತ್ತ ಚಿತ್ರಗಳಲ್ಲಿ ಪ್ರತಿಬಂದಿಸುವಂತಹ ಅಪಚಾರಗಳೇನೂ ನಡೆದಿಲ್ಲ, ಯೋಗರಾಜ್ ಭಟ್ ಎಂದರೆ ನಯ ಸ್ವಭಾವದ ಸಾತ್ವಿ ಅವರ ಕಲಾಭಿರುಚಿಯನ್ನು ಯಾವ ಚಿತ್ರ ರಸಿಕರೂ, ನಟರೂ ತಳ್ಳಿಕಾಕಿಲ್ಲ. ಈಗ ಯೋಗರಾಜ್ ಭಟ್ ಚಿತ್ರವೆಂದರೆ ಜನ ಚಿತ್ರಮಂದಿರದಲ್ಲಿ ಟಿಕೇಟ್ ಗಾಗಿ ಮುಗಿಬೀಳುವುದು ಸುಳ್ಳಲ್ಲ, ಅದಕ್ಕೆಲ್ಲ ಅವರ ಚಿತ್ರದಲ್ಲಿನ ಶ್ರದ್ದೆಯ ಕೆಲಸ, ಡೈಲಾಗ್ ಝಲಕ್ ಕಾರಣವಾಗಿದೆ. ಆದರೂ ಕಲಾವಸ್ತುಗಳೀಗೆ ಪ್ರೋತ್ಸಾಹಿಸಬೇಕಾದ ಜವಾಬ್ದಾರಿ ಉಳ್ಳವರು ಅದನ್ನು ಕಡೆಗಣಿಸಿರುವುದು ವಿಷಾದನೀಯ.

ನಾದಸ್ವರವನ್ನು ಪರಮಾತ್ಮ ಚಿತ್ರ ಕಡಾಖಂಡಿತವಾಗಿ ಅವಮಾನಿಸಿದೆ, ನಾಯಕಿ ವೇದಿಕೆಯಲ್ಲಿ ನಾದಸ್ವರವನ್ನು ನುಡಿಸುವಾಗ ಆ ಸ್ವರದ ಬಗ್ಗೆ ನಾಯಕ ಅತ್ಯಂತ ಕಠೀಣವಾಗಿ ಅವಹೇಳನ ಮಾಡುತ್ತಾನೆ, ನಾಯಕಿ ನಾದಸ್ವರವನ್ನು ಹಿಡಿದುಕೊಂಡು ನಾಯಕನ ಬೆನ್ನಮೇಲೆ ಹತ್ತಿ ಕೂರುತ್ತಾಳೆ. ಇನ್ನೊಂದು ಕಡೆ ನಾಯಕ ನಾಯಕಿಯನ್ನು ತೆಪ್ಪದಲ್ಲಿ ಕರೆದೊಯ್ಯುವಾಗ ನಾಯಕ ಕಡೆಗೋಲಾಗಿಸಿ ನಾದಸ್ವರದಿಂದಲೆ ನೀರನ್ನು ಹಿಂದಕ್ಕೆ ತಳ್ಳುತ್ತಾನೆ. ಇಲ್ಲಿ ನಿರ್ದೇಶಕರ ದಾರಿತಪ್ಪಿದ ಮುತುವರ್ಜಿಯ ಕೆಲಸ ಎದ್ದು ಕಾಣುತ್ತಿದೆ. ಕಲಾವಿದನ ಕೈಯ್ಯಲ್ಲಿ ಇರುವ ವಸ್ತು ಆತನ ಕಲೆಗೆ ಒಂದು ಸ್ಪೂರ್ತಿ, ಆತ ಅದನ್ನು ಪೂಜಿಸುತ್ತಾನೆ, ಆದರೆ ಯೋಗರಾಜ್ ಭಟ್ ತಮ್ಮ ಚಿತ್ರದಲ್ಲಿ ನಾದಸ್ವರಕ್ಕೆ ಇರುವ ಮೌಲ್ಯವನ್ನು ಮರೆತು ನಿಂದಿಸಿದ್ದಾರೆ, ಚಿತ್ರದಲ್ಲಿ ನಾದಸ್ವರ ನಾಯಕ ನಾಯಕಿಯ ಕೈಯ್ಯಲ್ಲಿ ಅಡ್ಡಾದಿಡ್ಡಿಯಾಗಿ ಉಪಯೋಗಿಸಲ್ಪಡುತ್ತದೆ,

ಕಲಾ ವಸ್ತುಗಳನ್ನು ಕಲಾವಿದರೇ ನಿಂದಿಸಿದರೆ ಹೇಗೆ.! ದಿನದಿಂದ ದಿನಕ್ಕೆ ನಮ್ಮ ಸಂಸ್ಕ್ರತಿ,ಮೌಲ್ಯಗಳು ಬರಿದಾಗುತ್ತಿವೆ, ಇತ್ತೀಚೆಗೆ ಕನಿಷ್ಟ ಚಿತ್ರಗಳಲ್ಲಾದರೂ ಯಕ್ಷಗಾನ ಪಾತ್ರಧಾರಿಗಳು ಚಲನಚಿತ್ರದ ಹಾಡುಗಳಲ್ಲಿ ಮನಬಂದಂತೆ ನರ್ತಿಸುತ್ತಿದ್ದಾರೆ, ಇಲ್ಲಿ ಯಕ್ಷಗಾನದ ಬಗ್ಗೆ ಪಬ್ಲಿಸಿಟಿ ಸಿಗುತ್ತದೆ ಅನ್ನುವುದೊಂದು ಹುಚ್ಚು ಕಲ್ಪನೆಯಷ್ಟೆ.! ಒಂದು ಕಲೆಯನ್ನು ಪ್ರದರ್ಶಿಸಲು ಅದರದ್ದೇ ಆದಂತಹ ವೇದಿಕೆಗಳಿವೆ ಆ ವೇದಿಕೆಯಲ್ಲೇ ಅದನ್ನು ಪ್ರದರ್ಶಿಸಬೇಕು, ಸಂಸ್ಕ್ರತಿ ಅದಕ್ಕಿರುವ ವೇದಿಕೆಯಿಂದ ಕೆಳಗಿಳಿದರೆ ಮತ್ತೆ ಅದರ ಮೌಲ್ಯವನ್ನು ಗಳಿಸುವುದು ಸಾಧ್ಯವಿಲ್ಲದ ಮಾತು, ಹೆಚ್ಚಾಗಿ ದಕ್ಷಿಣ ಕನ್ನಡದ ಭಾಗಗಳಲ್ಲಿ ಭೂತಾರಾಧನೆ ಒಂದು ಶ್ರೇಷ್ಟವಾದ ಪರಂಪರೆ, ಆಚರಣೆ, ಅಲ್ಲಿ ಭೂತ,ದೈವಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ ಆದರೆ ಈಗ ಆ ಭೂತ ದೈವಗಳ ವೇಷಭೊಷಣಗಳನ್ನು ತೊಟ್ಟು ಬೀದಿಗಳಲ್ಲಿ ಮೆರವಣಿಗೆ ಹೊರಡುವ ಕಾಲ ಬಂದಿದೆ, ನಂಬಿಕೆಯಲ್ಲಿನ ಸಾಂಸ್ಕ್ರತಿಕತೆ ಕೇವಲ ಮನರಂಜನೆಯಾಗಿ ಬೀದಿಗಿಳಿಯುವ ಕಾಲ ದೂರವಿಲ್ಲ.

ಯೋಗರಾಜ್ ಭಟ್ ಅವರು ಚಿತ್ರದಲ್ಲಿ ನಾದಸ್ವರವನ್ನು ಈ ರೀತಿಯಾಗಿ ಕಡೆಗಾಣಿಸಿರುವುದು ಮುಗಿದುಹೋದ ಕಥೆ, ಆದರೆ ಇನ್ನು ಮುಂಬರುವ ಚಿತ್ರಗಳು ಆ ವಿಷಯವನ್ನು ಅನುಕರಿಸುತ್ತವೆ, ಮುತ್ತು ಒಡೆದರೆ ಮತ್ತೆ ಸರಿಪಡಿಸಲಾಗುವುದಿಲ್ಲ ,ಸಂಗೀತ ವಾದ್ಯಗಳಲ್ಲಿ ನಾದಸ್ವರ ಎಂಬುವುದು ಒಂದು ಮೇಲ್ಮಟ್ಟದ ವಾದ್ಯ, ಅದರ ಮೌಲ್ಯವನ್ನು ಹಿರಿಯರಿಂದ ಅಥವಾ ತಿಳಿದವರಿಂದ ಅರಿತರೆ ಮತ್ತೆ ಈ ತಪ್ಪುಗಳು ಮುಂದುವರಿಯುವುದು ಅಸಾಧ್ಯ, ಕಲೆಯನ್ನು ಪ್ರೀತಿಸಿ ನೋಡಿ, ಗೌರವ ಭಾವನೆ ತಾನಾಗಿಯೇ ಹುಟ್ಟುತ್ತದೆ. ನಾದವನ್ನು ನುಡಿಸಿದ ಮಾನವ ಕಲಾಕಾರ ನಿಜ ಆದರೆ ಆತ ನುಡಿಸಿದ ವಾದ್ಯವನ್ನೇ ಮರೆತರೆ ಹೇಗೆ....?

ಧನ್ಯವಾದಗಳೊಂದಿಗೆ..

ಲೋಕು ಕುಡ್ಲ,,,














6 comments:

  1. what an observation!!!! yes you are right.houdu kalaavida mattondu kalege gourava kodabeku.

    ReplyDelete
  2. ಸ್ಯಾಕ್ಸೋಫೋನ್ ಪಾಶ್ಚಿಮಾತ್ಯ ಸಂಗೀತ ಉಪಕರಣ ನಾದಸ್ವರದ ಜೆರಾಕ್ಸ್ ಕಾಪಿ. ಅವಮಾನವಾದರೆ ತಡೆದುಕೊಳ್ಳಲಾಗದ ನೋವಿನ ಸತ್ಯ.

    ReplyDelete
  3. ಮುತ್ತಿನಂತಾ ಮಾತು

    ReplyDelete
  4. ಪ್ರೋತ್ಸಾಹಕ್ಕಾಗಿ ಸರ್ವರಿಗೂ ಧನ್ಯವಾದಗಳು...

    ReplyDelete
  5. ಕಾರಣವಿಲ್ಲದೆ ಭಟ್ಟರು ಎನೂ ಮಾಡಿದವರಲ್ಲ.....ಇಡೀ ಕನ್ನಡ ಚಿತ್ರರಂಗ ಅರಿಯದ ಒಬ್ಬ ವಿಚಿತ್ರ ನಿರದೇಶಕ....!!!

    ReplyDelete