Tuesday, May 31, 2011

ಅಪ್ಪಿ V/s ಅಪ್ಪು

ತುಳು ಭಾಷೆಯಲ್ಲೊಂದು ಪ್ರೀತಿಯ ಮಿಲನದ ಕವನ...ಸ್ವಲ್ಪ ವಯಸ್ಸಾಗಿದೆ ನೀವೇನೂ ವರಿ ಮಾಡ್ಕೋಬೇಡಿ ಅವ್ರೇ ಅಡ್ಜೆಸ್ಟ್ ಮಾಡ್ಕೋತಾರೆ


ಅಪ್ಪಿ ನಿನ್ನ ತೆಲಿಕೆಗ್ ಮರ್ಲಾಯೆ ಈ ಎನ್ನ ಸಂಗಾತಿ
ಬಲ ಪೋಯಿ ಬಾಕ್ಯಾರ್ ಕಂಡೊಗು
ಅಪ್ಪಿ ದಿನ ನಿಲಿಕೆ ತೆಲಿಪಾವೆ ಜಿವ ನಿಲಿಕೆ ನಲಿಪಾವೆ
ಬಲ ಪಿದಡ್ ಪೊಸ ದಿನತ ಪಾಡಿಗ್...

ಈ ಮಸ್ತ್ ಪೊರ್ಲುಲ್ಲ ಯಾನೂಂತೆ ಕಪ್ಪು
ಬಣ್ಣ ದಾಯೆ ಪನ್ ಮೋಕೆದ ಕಡಲ್ ಗ್
ಈ ಆಲ ರಾಗ ಯಾನಾಪೆ ಲಯ
ಸೇರ್ ಗ ಮೋಕೆ ಪಾರ್ದನದ ಉಡಲ್ ಗ್

ಬಲ ಅಪ್ಪಿ ಸುಗ್ಗಿದ ಕೆಸರ್ ಗ್ ನೇಜಿ ಊರುಗ
ಉರುವಾಂಡ ಗೋಲಿದ ಬೂರುಡು ಅಂಚಿಂಚಿ ನೇಲ್ ಗ
ನೀಲಿ ಕುಂಟಲುಂಡು ಮಂಜಲ್ ತಾರೂಲುಂಡು
ತಡ ಬೊರ್ಚಿ ಬೇಗ ಬಲ ಪೂರ್ತಾಪುಂಡು

ಈ ಎನ್ನ ತಿಗಲೆಡ್ ಮೋಕೆ ಜಿಂಜಿ ಕಡಲ್
ಅಪ್ಪಿ ನಿನನೇ ಎನ್ನೂಂದುಲ್ಲೆ ದಿನ ರಾತ್ರೆ ಪಗೆಲ್
ಯಾನೂಂಜಿ ಪೂವಾಪೆ ಈ ಐಟ್ಟ್ ಅರಲ್
ನಿನ್ನ ದೊಂಬುದ ಬದ್ ಕ್ ಗ್ ಯಾನಾಪೆ ನಿರೆಲ್...

ಬೂತಾಯಿ ಮರ್ವಾಯಿ ಕರಾವಳಿಗ್ ಸೊಬಗತ್ತ
ಕೋಲ ಕೋರ್ದಟ್ಟ ತುಳು ನೆಲತ ಪೂರ್ಲತ್ತ
ನಿನ್ನ ಮೋನೆಡು ತೂಯೆ ತುಳು ನೆಲತ ತೆಲಿಕೆ
ಪರ್ಬ ಗೌಜಿಡ್ ತೆರಿಯೆ ತುಳು ನಾಡ ನಲಿಕೆ

ನಿನ್ನ ಸೆರಂಗ್ ಗ್ ನೆರಿಯಾಪೆ ಯಾನ್
ಮಟ್ಟೆಲ್ ಡ್ ತರೆ ದೀದ್ ಜಿವ ಬುಡೊಡ ಪನ್
ಅಪ್ಪಿ ಪಪ್ಪಿ ಕೊರ್ಪನ ಎಂಕೂಂಜಿ ಈ ದಿನೂನು ಮದಪಾಯೆ
ಈ ಇಜ್ಜಂದಿ ಬದ್ ಕ್ ನನ ಎಂಕ್ ದಾಯೆ...... ನನ ಎಂಕ್ ದಾಯೆ...........?


(ಹಾ ಅಪ್ಪಿ ಅಪ್ಪುಗು ಪಪ್ಪಿ ಕೂರೊಂದು ಉಲ್ಲಲ್ ಮಾತೆರ್ಲಾ ಕಣ್ಣ್ ಮುಚ್ಚಿಲೆ...ರಡ್ಡ್ ಅರಿ ದಕ್ಕ್ ಲೆ..)





ಫೋಟೋ ಕ್ರಪೆ: ರಾಜೇಶ್ ದೇವಾಡಿಗ

Wednesday, May 25, 2011

ಕನಸು**

ನಾನೂ ನನ್ನ ಕನಸು ಚಿತ್ರದ ನಂತರ ನನ್ನಲ್ಲೂ ಒಂದಿಷ್ಟು ಕನಸು......*

(ಸ್ವಲ್ಪ ಹಳೆಯದಾಗಿದೆ ಅಡ್ಜೆಸ್ಟ್ ಮಾಡ್ತೀರಲ್ವಾ....!)

ಕನ್ನಡ ಚಿತ್ರ ರಂಗಕ್ಕೊಂದು ಹೆಮ್ಮೆಯ ಚಿತ್ರ ನಾನು ನನ್ನ ಕನಸು, ಇಲ್ಲಿ ಭಾವನೆಗಳಿಗೊಂದು ಜಾಗವಿದೆ, ಇಂತಹ ಚಿತ್ರಗಳನ್ನು ಸ್ವತಹ ರೂಪಿಸುವುದು ಬಿಡಿ, ಪರಿವರ್ತಿಸುವುದರ ಕಡೆಗೂ ಯಾರೂ ಗಮನ ಹರಿಸುವುದಿಲ್ಲ, ಆದರೆ ಅಂತಹ ಒಂದು ಪ್ರಯತ್ನ ನಮ್ಮ ಪ್ರಕಾಶ್ ರೈ ಮಾಡಿದ್ದಾರೆ, ಜೀವನದ ಹಾದಿಯ ಕನಸುಗಳನ್ನು ಮತ್ತೊಮ್ಮೆ ಮಗದೊಮ್ಮೆ ಮೆಲುಕು ಹಾಕುವ ಪ್ರಯತ್ನವನ್ನು ಪ್ರತಿಯೊಬ್ಬ ತಂದೆಗೂ ಒಂದು ಚಿತ್ರದ ಮೂಲಕ ಮಾಡಿ ಕೊಟ್ಟಿದ್ದಾರೆ, ಪ್ರಕಾಶ್ ರೈ ಅವರ ಜೊತೆ ರಮೇಶ್ ಅರವಿಂದ್ ಕೂಡಾ ಉತ್ತಮ ಸಾತ್ ನೀಡಿದ್ದಾರೆ,

ಪ್ರಕಾಶ್ ರೈ ನಿರ್ಮಾಣದ ನಾನು ನನ್ನ ಕನಸು ಚಿತ್ರ ನೊಡಿದ ಬಳಿಕ ನನ್ನಲ್ಲೆ ಓಂದು ರೀತಿಯ ಕನಸು ಮನೆ ಮಾಡಿದೆ, ಸಾಮಾನ್ಯವಾಗಿ ಯಾವ ಚಿತ್ರವೂ ಅಷ್ಟು ಬೇಗ ಹಿಡಿಸುವುದಿಲ್ಲವಾದರೂ ಈ ಚಿತ್ರ ನನ್ನ ಮನದೊಳಗೆ ಏನೋ ಮುಂದಿನ ಜೀವನವನ್ನು ನೆನಪಿಸಿದಂತಾಗಿದೆ, , ಇತ್ತೀಚೆಗೆ ಮದುವೆಯಾದ ನನ್ನ ಸ್ನೆಹಿತನ ಮಾತಿಗೆ ಮರುಳಾಗಿ ಸನ್ಯಾಸಿಯಾಗೋಣ ಅಂದು ಕೊಂಡಿದ್ದೆ ನಾನು ನನ್ನ ಕನಸು ಚಿತ್ರದ ನಂತರ ಸಂಸಾರ ಜೀವನದ ಕಾಮನಬಿಲ್ಲನ್ನು ಕಾಯುತ್ತಿದ್ದೇನೆ, ಅಪ್ಪನಾಗೋದು, ಒಂದು ಪುಟ್ಟ ಮಗು ಅದರ ಪುಟ್ಟ ಪುಟ್ಟ ಕೈ ಪುಟ್ಟ ಪುಟ್ಟ ಕಾಲುಗಳನ್ನು ಗಲ್ಲಕ್ಕೆ ತಾಗಿಸಿಕೊಂಡು ಮುದ್ದಾಡೋದು, ಆ ಮಗುವಿನ ಹಾಲು ಹೆಜ್ಜೆಯಲ್ಲಿ ಅದರ ಮುಗ್ದ ನಗು ಅಪ್ಪನ ಎಲ್ಲಾ ನೋವನ್ನೊ ಗಾಳಿಯಲ್ಲಿ ತೂರುತ್ತದೆ, ಆದರೂ ಜೀವನದಲ್ಲಿ ಸಿಹಿಯೊಡನೆ ಸ್ವಲ್ಪ ಕಹಿ ಇಲ್ಲವಾದರೆ ಸಿಹಿ ರೋಗ ಬರಬಹುದು...ಇಲ್ಲೂ ಅಷ್ಟೆ ಕನಸು (ಮಗಳು) ಪುಟ್ಟ ಹೆಜ್ಜೆ ಇಡೋವಾಗ ಮುದ್ದಾಡುತ್ತಾ ಶಾಲೆಯ ಅಂಗಳದವರೆಗೆ ಬಿಟ್ಟು ಟಾ ಟಾ ಮಾಡಿದಾಗ ಆಕೆ ಪುನಹ ಮರಳಿ ಬರುವವರೆಗೆ ಆಕೆಯ ನೆನಪು ಕಾಡುತ್ತಿರುತ್ತದೆ, ಕನಸು ದೊಡ್ದವಳಾದಾಗ ಸೈಕಲ್ ತೆಗಿಸಿ ಕೊಡುವುದು ಸ್ವಲ್ಪ ಆಲೋಚಿಸುವ ಕಡೆಗೆ ಗಮನ ಕೊಡುತ್ತದೆ. ಸೈಕಲ್ ನ ನಂತರ ಆಕೆಯ ಜೊತೆ ಬೆರೆತು ಟಾ ಟಾ ಮಾಡುವುದು ಮೋಡ ಸರಿಯುವಂತೆ ದೂರಾಗುತ್ತದೆ , ಆದರೂ ಮಗಳ ತುಟಿಯು ಪ್ಲೀಸ್ ಪಾ..ಅಂದಾಗ ತೆಗಿಸಿ ಕೊಡಲೇ ಬೇಕು ಅನಿಸುವುದು ಅವಳ ಆಸೆಯ ಪೂರೈಸುವಿಕೆಯ ಹಿಂದೆ ನನಗೋ ಸ್ವಲ್ಪ ಮಟ್ಟಿಗಿರುವ ಸಮಾದಾನ! ಮಗಳು ನನ್ನ ತೋಳಲ್ಲಿ ಕಾಲುಗಳಿಂದ ಗಲ್ಲವನ್ನು ಒದೆಯುತ್ತಾ ಇದ್ದಾಗ, ಅಲ್ಪ ಸ್ವಲ್ಪ ಅತ್ತಾಗ, ಕೊಂಚ ನಡೆದಾಗ, ಹಟ ಮಾಡಿದಾಗ ತಂದೆ ಎಂಬ ಹೆಮ್ಮೆಯ ಸಮಾದಾನ ಇರುತ್ತದೆ "ನಾನು ನನ್ನಲ್ಲಿ ಅರಳಿದ ಸುಕವೆಂಬ ಕನಸು" ಪುಡಿಯಾಗುವುದು ಆಕೆಗೆ ಮತ್ತೊಬ್ಬನಲ್ಲಿ ಪ್ರೀತಿ ಹತ್ತಿರವಾದಾಗ,

ಸಂಪೂರ್ಣ ಚಿತ್ರ ನೋಡಿದ ಬಳಿಕ ನನಗೆ ಅನಿಸಿದ್ದು ನಮ್ಮ ತಂದೆ ತಾಯಿ ಕೊಡಾ ನಮ್ಮ ಬಗ್ಗೆ ಎಷ್ಟೊಂದು ಕನಸುಗಳನ್ನು ಕಂಡಿದ್ದರು ಅನ್ನುವುದರ ಬಗ್ಗೆ! ನನ್ನ ಮೇಲೆ ನಾನು ಟೀ ಚೆಲ್ಲಿಕೊಂಡಾಗ ಅವರು ಕೊಟ್ಟ ಏಟಿನ ಹಿಂದೆ ಪ್ರೀತಿ ಇತ್ತು ಎಂಬೋದು ನನಗೆ ಅರಿವಾಗಲೇ ಇಲ್ಲ, ಇಂದು ಪ್ರಕಾಶ್ ರೈ ರವರ ನಾನು ನನ್ನ ಕನಸು ಚಿತ್ರ ನೋಡುತ್ತಿದ್ದಂತೆಯೇ ನಾನೊಮ್ಮೆ ಅಪ್ಪನಾಗಿ ಕನಸು ಕಂಡೆ, ನಾನು ಆಡಿದ ಜಾರು ಬಂಡಿ ಆಟ, ಮರ ಹತ್ತಿ ಕಾಲು ಮುರಿದು ಕೊಂಡಾಗ ಅತ್ತಿದ್ದು, ಒಂದು ರುಪಾಯಿ ಪೆಪ್ಪರ್ ಮಿಂಟ್ ಗೆ ರಾದ್ದಾಂತ ಮಾಡಿದ್ದು ,ಮೊದ ಮೊದಲು ಮೀಸೆ ಬೋಳಿಸಿಕೊಂಡಾಗ ನಾಚಿಕೆಯಾಗಿದ್ದು, ಇವುಗಳ ಮುದ ನನ್ನನ್ನು ಈಗ ಕಾಡುತ್ತಿದೆ, ಈ ಎಲ್ಲಾ ಸುಂದರ ನೆನಪುಗಳನ್ನು ನನಗೆ ಮರು ಮೆಲುಕು ಹಾಕಿಸಿದ್ದು ನಾನು ನನ್ನ ಕನಸು ಚಿತ್ರ , ಅಲ್ಲದೆ ಪ್ರತಿಯೊಬ್ಬ ಅಪ್ಪನ ಜವಾಬ್ದಾರಿ,ಆಸೆಯ ಮಿತಿಗಳನ್ನು ಪುನಹ ವಿಮರ್ಶಿಸುವ ಆಸಕ್ತಿಗೆ ಎಡೆ ಮಾಡಿ ಕೊಟ್ಟ ಪ್ರಕಾಶ್ ರೈ ಅವರಿಗೆ ನನ್ನ ಪುಟ್ಟ ಪುಟ್ಟ ಸಲಾಮ್...





Friday, May 20, 2011

ಕಣ್ಣೀರೇ ಕನಸಾಯಿತು.......
















ಅಂದಕೆ ಕರಗಲಿಲ್ಲ ಚಂದಕೆ ಮಣಿಯಲಿಲ್ಲ ಏನೊ ಬಯಸದೆ ಅದು ಹೇಗೆ ಬಂತೋ ಪ್ರೀತಿ

ನೆಟ್ಟ ತೋರಣದ ಮಡಿಲಲ್ಲಿ ದಿಟ್ಟ ಹಸಿರಿನ ಸೊಬಗು ಮರುಳು ಮಾಡಿತೇ ಮನವನು

ಪ್ರೀತಿ ವರ್ಣಿಸಲಾಗದು ಅವಳಂದ ಬಣ್ಣಿಸಲಾಗದು ಕನಸಿನ ಕಣ್ಣಿನ ರೆಪ್ಪೆ ಮುಚ್ಚುವುದೆಂತು

ಮುಂದವಳ ವರ್ಣಿಸಲು ಹೋಲಿಕೆಗಳೇ ಇರಲಿಲ್ಲ ಎಲ್ಲವೂ ಮುಗಿದಿತ್ತು ಪುಟದೊಳಗಿನ ಕವನದೊಳು

ಯಾರದೊ ಪ್ರೀತಿ ಕಂಡು ಹುಚ್ಚೆಂದ ಈ ಮನವು ಎನ್ನುದರದ ಪ್ರೀತಿಗೆ ಶರಣಾಯಿತು

ಆಕೆ ನಗುವಿನ ಗಾಳಿ ಎಸೆದಾಗ ಮೊದಲು ಸ್ನೇಹದೊಳಿದ್ದ ನಂಟು ಎಂಟಾಯಿತು

ನಾನೇನೂ ಮೊದಲಿಗನಲ್ಲ ಅವಳೇ ಮೊದಲಿಗಳು ನೀರ ಹಾರಿ ಹೊವೆತ್ತಿದಷ್ಟಕ್ಕೆ ಪೆಚ್ಚಾದಳು

ಹೆಸರೇನು ಸೌಖ್ಯವೇನು ಕೊನೆಗೆ ಖಾಲಿ ಇದೆಯೇ ಪ್ರೀತಿಯ ಮನೆ ಅಂದಾಗ ನಾ ಪೆಚ್ಚಾದೆ

ಇರುಳೆಲ್ಲಾ ರೆಪ್ಪೆ ಮುಚ್ಚಿ ಕಾಣುವ ಕನಸು ನಿದ್ದೆ ಬಾರದೆ ಕಾಡ ತೊಡಗಿತು

ಮುಂಜಾನೆ ದೇವರ ನೋಡುವ ಹೊರತು ಎನ್ನೀ ನಯನ ಎನ್ನವಳ ಬಿಂಬವನು ತುಂಬಿಸಿತ್ತು

ಬಡತನವ ಹೇಳಿದ್ದೆ ಮನದ ಸಿರಿತನವ ವರ್ಣಿಸಿದ್ದೆ ಗಳ್ಳನೆ ಸುರಿದ ಕಣ್ಣೀರಲ್ಲೇ ಉತ್ತರದ ಚಾಪಿತ್ತು

ಎದೆಗೆ ಮುಡಿ ಇಟ್ಟು ರೆಪ್ಪೆ ಮುಚ್ಚಿದಳು ಉಸಿರು ನಿಂತರೊ ಭಯವಿಲ್ಲ ಸುಂದರ ಸಾವ ಗೊಣಗಿದಳು

ಮುಳ್ಳ ಲೆಕ್ಕಿಸದೆ ಒಡೆಯ ಹೂವ ಕೀಳುವ ಕನವು! ಕಣ್ಣ ತುಂಬಿಸಿ ಎನ್ನವಳ ಬಿಗಿದು ಬಾಚಿತ್ತು

ಬಡತನಕೆ ಹೆದರಿದರೊ ಪ್ರೀತಿ ದೂಕಿತ್ತು ಇತ್ತಿಂದತ್ತ ಅತ್ತೆ ಮಾವನ ಮನೆಗೆ ಹೆಣ್ಣು ಕೇಳಲು

ಕುಳ್ಳಿರಿಸಿದರು ಪಾನೀಯ ಉಪಚರಿಸಿದರು ಪ್ರೀತಿ ವಿವರಿಸಲು ಎದೆ ಬಡಿತ ಉಸಿರ ಹಿಡಿದಿತ್ತು

ಎನ್ನವಳನೊ ಮುಂದಿರಿಸಿ ಬಗೆ ಬಗೆಯಾಗಿ ಮಗಳ ಮೇಲಿರುವ ಸಂಮ್ಮಂದದ ಸ್ವಚ್ಚತೆಯನು ಬಿಡಿಸಿದೆ

ಎನ್ನ ಬದುಕ ಹಿಂದೆಗಳೀಗೆ ಸಮ್ಮತಿ ಇಲ್ಲವಾದರೊ ಮಗಳ ಸುಖವೇ ನಮ್ಮ ಸುಖ ಎಂಬ ಮಾತು ಎನ್ನುಸಿರ ಸ್ಠಿರವಾಗಿಸಿತ್ತು

ಹರೆಯದಲ್ಲೇ ಪ್ರೇಮದ ಕನಸು ನನಸಾಯಿತು ಎನ್ನ ಹೆಜ್ಜೆಯಲಿ ಅವಳ ಹೆಜ್ಜೆ ಬೆರೆತಾಯಿತು

ಮಧುಮಂಚಕೆ ಬೀರಿತು ಬಿಡಿ ಕುಸುಮದ ಇಂಚರ ಗಿರಿ ಗಗನವೇ ಹಾಡಿದು ನಾದ ಸಪ್ತಸ್ವರ

ಮಲೆನಾಡಿಗೆ ಬಂದೆ ಸೌಂದರ್ಯ ಸವೆಯಲು ಪ್ರೇಮದ ಕವಿತೆಗೆ ನಾದವನು ಬೆರೆಸಲು

ದಿನ ಕಳೆದಂತೆ ಎನ್ನವಳ ಹಠ ಕಂಡು ಸುಕಿಸಿದ್ದೆ ನಗು ಕಂಡು ಸೋತಿದ್ದೆ

ವರ್ಷಗಳು ಮೊರಾಯಿತು, ಅತ್ತೆ ಮಾವ ಮಗಳ ಕಾಣಲು ತುಂಬಿದ ಗಾಡಿಯಿಂದಿಳಿದಾಯಿತು

ಆಸೆಯೇ ಇಲ್ಲದ ಅತ್ತೆಗೆ ಮೊಮ್ಮಗನ ತೊಗಿ ಮುದ್ದಾಡುವ ಹಂಬಲವಂತೆ

ಕನಸುಗಳೇ ಇರದ ಮಾವನಿಗೆ ಮೊಮ್ಮಗಳ ಕೊಂಡಾಡುವ ಬಯಕೆಯಂತೆ

ಒಂದಿರುಳ ಮಂದ ಬೆಳಕಿನೊಳು ಸೊಜಿಯು ಎನ್ನವಳ ಬೆರಳ ರಕ್ತವನು ಹೊರ ಕರೆದಿತ್ತು

ಕೈಯ್ಯ ಗಾಜನು ಬಿಟ್ಟು ಎನ್ನವಳ ಬೆರಳ ಬಾಯಲಿಟ್ಟು ಚುಂಬಿಸಿದೆ

ಜೋಡಿ ಪ್ರೀತಿಗೆ ಕರಗಿ ಅತ್ತೆ ಮಾವರ ಕಣ್ಣೀರು ನೆಲವ ಸೋಕಿ ಆಶೀರ್ವದಿಸಿತ್ತು

ಮಗಳ ನೊವನು ಅರಿತು ಎನ್ನೊಳು ಮಾತಿಗಿಳಿದ ಅತ್ತೆ ಮೊಮ್ಮಗನ ಅಳುವಿಗೆ ದಿನ ಕೇಳಿದಳು

ಎಳೆದೇ ಹೋದರು ದವಾಖಾನೆಗೆ ಕಣ್ಣೀರೊಳು ಅವಿತಿಟ್ಟೆ ಕೆಲವೊಂದು ಸತ್ಯಗಳ ಎನ್ನ ಉದರದೊಳಗೆ

ಮನೆಯವರೆಲ್ಲ ಸೇರಿ ಬಗೆಬಗೆಯಾಗಿ ನೋಯಿಸಿದರು ಛಲಕೆ ಶರಣಾಗಿ ಎನ್ನುದರ ಬಿಚ್ಚಿದೆ

ನಾವಿಬ್ಬರೊ ಪ್ರೇಮಿಗಳಷ್ಟೆ ಪ್ರೀತಿ ಹಂಚಿದೆವು ದೇಹ ಹಂಚಲಿಲ್ಲ

ಮುತ್ತಿ ಮುದ್ದಾಡಿದ್ದರೊ ಪ್ರೀತಿ ಕಂಪಿಸಿತ್ತು ದೇಹ ಕಂಪಿಸಲಿಲ್ಲ

ಮಗು ಬೇಕೆಂಬ ಹಂಬಲ ನಮಗೆ ನಿಮಗಿದ್ದರೊ ಆ ವಿದಿಗೆ ಇರಬೇಕಲ್ಲ

ನಾ ಮುಚ್ಚಿಟ್ಟ ಸತ್ಯವಿಷ್ಟೆ ಎನ್ನವಳು ಇನ್ನಿರುವುದು ಎರಡು ಮಾಸಗಳ ಕಾಲ

ಈ ಎರಡು ಮಾಸಗಳು ಎನಗೆ ನೊರು ವರ್ಷಗಳು ನಾ ಇನ್ನೊ ಪ್ರೀತಿಸಬೆಕು ಕಾಲ ಬೆರಗಾಗುವಷ್ಟು

ಎನ್ನವಳ ಕೊನೆಯು ಅವಳ ಮನಕೆ ತಿಳಿದಿಲ್ಲ ಬಿತ್ತದಿರಿ ಆಸೆಗಳ ಬಿಳಿ ಮಂಜನು

ಇನ್ನೊ ಮುಂದೆ ಎನಗೆ ವಿವರಿಸಲು ನಾಲಗೆ ತೆವಳುತಿಲ್ಲ ತುಟಿಗಳು ತೇವವಿಲ್ಲ

ನಾ ನತದ್ರುಷ್ಟನೊ ಬದುಕು ಬಣ್ಣದ ಖಡ್ಗವೋ ಅದರ ಹರಿತಕೆ ನಾ ಚೊರು ಚೊರಾದೆ

ನೆನಪುಗಳ ಕಹಿಯಲಿ ದೇಹ ಕಲ್ಲಾದಾಗ ಅತ್ತೆ ಮಾವರ ಹಣೆಯು ಎನ್ನ ಪಾದವ ಮುದ್ದಿಸಿತ್ತು

ಹುಚ್ಚುತನಕೆ ಆಡಿ ಅವರಿಬ್ಬರ ದೇಹವ ಎನ್ನ ಕರಗಳು ಅಪ್ಪಿ ಬೆಚ್ಚಗೆ ಬಂದಿಸಿತ್ತು

ಅದು ಕೊನೆಯ ದಿನ ಎನ್ನವಳೀಗೆ ಎನ್ನ ಬಾಚಿ ಮುದ್ದಾಡುವ ತುಮುಲವಂತೆ

ಮತ್ತೆ ಮುಡಿಯ ಎನ್ನೆದೆಗೆ ಒರಗಿಸಿ ರೆಪ್ಪೆ ಮುಚ್ಚಿದಳು

ಕಾದೇ ಕುಳಿತೆ ಮತ್ತೆ ರೆಪ್ಪೆ ಕಂಪಿಸುವುದೆ ಪ್ರೀತಿ ಎನ್ನರಸುವುದೇ................................................