ನಾನೂ ನನ್ನ ಕನಸು ಚಿತ್ರದ ನಂತರ ನನ್ನಲ್ಲೂ ಒಂದಿಷ್ಟು ಕನಸು......*


(ಸ್ವಲ್ಪ ಹಳೆಯದಾಗಿದೆ ಅಡ್ಜೆಸ್ಟ್ ಮಾಡ್ತೀರಲ್ವಾ....!)
ಕನ್ನಡ ಚಿತ್ರ ರಂಗಕ್ಕೊಂದು ಹೆಮ್ಮೆಯ ಚಿತ್ರ ನಾನು ನನ್ನ ಕನಸು, ಇಲ್ಲಿ ಭಾವನೆಗಳಿಗೊಂದು ಜಾಗವಿದೆ, ಇಂತಹ ಚಿತ್ರಗಳನ್ನು ಸ್ವತಹ ರೂಪಿಸುವುದು ಬಿಡಿ, ಪರಿವರ್ತಿಸುವುದರ ಕಡೆಗೂ ಯಾರೂ ಗಮನ ಹರಿಸುವುದಿಲ್ಲ, ಆದರೆ ಅಂತಹ ಒಂದು ಪ್ರಯತ್ನ ನಮ್ಮ ಪ್ರಕಾಶ್ ರೈ ಮಾಡಿದ್ದಾರೆ, ಜೀವನದ ಹಾದಿಯ ಕನಸುಗಳನ್ನು ಮತ್ತೊಮ್ಮೆ ಮಗದೊಮ್ಮೆ ಮೆಲುಕು ಹಾಕುವ ಪ್ರಯತ್ನವನ್ನು ಪ್ರತಿಯೊಬ್ಬ ತಂದೆಗೂ ಒಂದು ಚಿತ್ರದ ಮೂಲಕ ಮಾಡಿ ಕೊಟ್ಟಿದ್ದಾರೆ, ಪ್ರಕಾಶ್ ರೈ ಅವರ ಜೊತೆ ರಮೇಶ್ ಅರವಿಂದ್ ಕೂಡಾ ಉತ್ತಮ ಸಾತ್ ನೀಡಿದ್ದಾರೆ,
ಪ್ರಕಾಶ್ ರೈ ನಿರ್ಮಾಣದ ನಾನು ನನ್ನ ಕನಸು ಚಿತ್ರ ನೊಡಿದ ಬಳಿಕ ನನ್ನಲ್ಲೆ ಓಂದು ರೀತಿಯ ಕನಸು ಮನೆ ಮಾಡಿದೆ, ಸಾಮಾನ್ಯವಾಗಿ ಯಾವ ಚಿತ್ರವೂ ಅಷ್ಟು ಬೇಗ ಹಿಡಿಸುವುದಿಲ್ಲವಾದರೂ ಈ ಚಿತ್ರ ನನ್ನ ಮನದೊಳಗೆ ಏನೋ ಮುಂದಿನ ಜೀವನವನ್ನು ನೆನಪಿಸಿದಂತಾಗಿದೆ, , ಇತ್ತೀಚೆಗೆ ಮದುವೆಯಾದ ನನ್ನ ಸ್ನೆಹಿತನ ಮಾತಿಗೆ ಮರುಳಾಗಿ ಸನ್ಯಾಸಿಯಾಗೋಣ ಅಂದು ಕೊಂಡಿದ್ದೆ ನಾನು ನನ್ನ ಕನಸು ಚಿತ್ರದ ನಂತರ ಸಂಸಾರ ಜೀವನದ ಕಾಮನಬಿಲ್ಲನ್ನು ಕಾಯುತ್ತಿದ್ದೇನೆ, ಅಪ್ಪನಾಗೋದು, ಒಂದು ಪುಟ್ಟ ಮಗು ಅದರ ಪುಟ್ಟ ಪುಟ್ಟ ಕೈ ಪುಟ್ಟ ಪುಟ್ಟ ಕಾಲುಗಳನ್ನು ಗಲ್ಲಕ್ಕೆ ತಾಗಿಸಿಕೊಂಡು ಮುದ್ದಾಡೋದು, ಆ ಮಗುವಿನ ಹಾಲು ಹೆಜ್ಜೆಯಲ್ಲಿ ಅದರ ಮುಗ್ದ ನಗು ಅಪ್ಪನ ಎಲ್ಲಾ ನೋವನ್ನೊ ಗಾಳಿಯಲ್ಲಿ ತೂರುತ್ತದೆ, ಆದರೂ ಜೀವನದಲ್ಲಿ ಸಿಹಿಯೊಡನೆ ಸ್ವಲ್ಪ ಕಹಿ ಇಲ್ಲವಾದರೆ ಸಿಹಿ ರೋಗ ಬರಬಹುದು...ಇಲ್ಲೂ ಅಷ್ಟೆ ಕನಸು (ಮಗಳು) ಪುಟ್ಟ ಹೆಜ್ಜೆ ಇಡೋವಾಗ ಮುದ್ದಾಡುತ್ತಾ ಶಾಲೆಯ ಅಂಗಳದವರೆಗೆ ಬಿಟ್ಟು ಟಾ ಟಾ ಮಾಡಿದಾಗ ಆಕೆ ಪುನಹ ಮರಳಿ ಬರುವವರೆಗೆ ಆಕೆಯ ನೆನಪು ಕಾಡುತ್ತಿರುತ್ತದೆ, ಕನಸು ದೊಡ್ದವಳಾದಾಗ ಸೈಕಲ್ ತೆಗಿಸಿ ಕೊಡುವುದು ಸ್ವಲ್ಪ ಆಲೋಚಿಸುವ ಕಡೆಗೆ ಗಮನ ಕೊಡುತ್ತದೆ. ಸೈಕಲ್ ನ ನಂತರ ಆಕೆಯ ಜೊತೆ ಬೆರೆತು ಟಾ ಟಾ ಮಾಡುವುದು ಮೋಡ ಸರಿಯುವಂತೆ ದೂರಾಗುತ್ತದೆ , ಆದರೂ ಮಗಳ ತುಟಿಯು ಪ್ಲೀಸ್ ಪಾ..ಅಂದಾಗ ತೆಗಿಸಿ ಕೊಡಲೇ ಬೇಕು ಅನಿಸುವುದು ಅವಳ ಆಸೆಯ ಪೂರೈಸುವಿಕೆಯ ಹಿಂದೆ ನನಗೋ ಸ್ವಲ್ಪ ಮಟ್ಟಿಗಿರುವ ಸಮಾದಾನ! ಮಗಳು ನನ್ನ ತೋಳಲ್ಲಿ ಕಾಲುಗಳಿಂದ ಗಲ್ಲವನ್ನು ಒದೆಯುತ್ತಾ ಇದ್ದಾಗ, ಅಲ್ಪ ಸ್ವಲ್ಪ ಅತ್ತಾಗ, ಕೊಂಚ ನಡೆದಾಗ, ಹಟ ಮಾಡಿದಾಗ ತಂದೆ ಎಂಬ ಹೆಮ್ಮೆಯ ಸಮಾದಾನ ಇರುತ್ತದೆ "ನಾನು ನನ್ನಲ್ಲಿ ಅರಳಿದ ಸುಕವೆಂಬ ಕನಸು" ಪುಡಿಯಾಗುವುದು ಆಕೆಗೆ ಮತ್ತೊಬ್ಬನಲ್ಲಿ ಪ್ರೀತಿ ಹತ್ತಿರವಾದಾಗ,
ಸಂಪೂರ್ಣ ಚಿತ್ರ ನೋಡಿದ ಬಳಿಕ ನನಗೆ ಅನಿಸಿದ್ದು ನಮ್ಮ ತಂದೆ ತಾಯಿ ಕೊಡಾ ನಮ್ಮ ಬಗ್ಗೆ ಎಷ್ಟೊಂದು ಕನಸುಗಳನ್ನು ಕಂಡಿದ್ದರು ಅನ್ನುವುದರ ಬಗ್ಗೆ! ನನ್ನ ಮೇಲೆ ನಾನು ಟೀ ಚೆಲ್ಲಿಕೊಂಡಾಗ ಅವರು ಕೊಟ್ಟ ಏಟಿನ ಹಿಂದೆ ಪ್ರೀತಿ ಇತ್ತು ಎಂಬೋದು ನನಗೆ ಅರಿವಾಗಲೇ ಇಲ್ಲ, ಇಂದು ಪ್ರಕಾಶ್ ರೈ ರವರ ನಾನು ನನ್ನ ಕನಸು ಚಿತ್ರ ನೋಡುತ್ತಿದ್ದಂತೆಯೇ ನಾನೊಮ್ಮೆ ಅಪ್ಪನಾಗಿ ಕನಸು ಕಂಡೆ, ನಾನು ಆಡಿದ ಜಾರು ಬಂಡಿ ಆಟ, ಮರ ಹತ್ತಿ ಕಾಲು ಮುರಿದು ಕೊಂಡಾಗ ಅತ್ತಿದ್ದು, ಒಂದು ರುಪಾಯಿ ಪೆಪ್ಪರ್ ಮಿಂಟ್ ಗೆ ರಾದ್ದಾಂತ ಮಾಡಿದ್ದು ,ಮೊದ ಮೊದಲು ಮೀಸೆ ಬೋಳಿಸಿಕೊಂಡಾಗ ನಾಚಿಕೆಯಾಗಿದ್ದು, ಇವುಗಳ ಮುದ ನನ್ನನ್ನು ಈಗ ಕಾಡುತ್ತಿದೆ, ಈ ಎಲ್ಲಾ ಸುಂದರ ನೆನಪುಗಳನ್ನು ನನಗೆ ಮರು ಮೆಲುಕು ಹಾಕಿಸಿದ್ದು ನಾನು ನನ್ನ ಕನಸು ಚಿತ್ರ , ಅಲ್ಲದೆ ಪ್ರತಿಯೊಬ್ಬ ಅಪ್ಪನ ಜವಾಬ್ದಾರಿ,ಆಸೆಯ ಮಿತಿಗಳನ್ನು ಪುನಹ ವಿಮರ್ಶಿಸುವ ಆಸಕ್ತಿಗೆ ಎಡೆ ಮಾಡಿ ಕೊಟ್ಟ ಪ್ರಕಾಶ್ ರೈ ಅವರಿಗೆ ನನ್ನ ಪುಟ್ಟ ಪುಟ್ಟ ಸಲಾಮ್...
No comments:
Post a Comment