Tuesday, December 17, 2013

The First International Tulu Movie "NIREL"





ಈ ಚಿತ್ರದಲ್ಲಿ ಇರುವವರು ಯಾರು ಗೊತ್ತೇ..?? ಮತ್ತಾರೂ ಅಲ್ಲ ಮೊತ್ತ ಮೊದಲು ದುಬೈನಲ್ಲಿ ನಿರ್ಮಾಣವಾಗಿರುವ "ನಿರೆಲ್" ತುಳು ಚಿತ್ರದ ಮುಖ್ಯ ಹಾಸ್ಯ ಕಲಾವಿದರು ದೀಪಕ್ ಪಾಲಡ್ಕ ಮತ್ತು ಶುಭಾಶ್ ಬಂಗೇರ.. ಹೀಗೇ ದೀಪಕ್ ಕರೆ ಮಾಡಿ ನಾನೂ ಬೆಂಗಳೂರಿನಲ್ಲಿ ಇರುವೆ ಭೇಟಿ ಮಾಡಿ ಮಾರ್ರೆ ಸಿಗೋಣ ಅಂದಾಗ ಖುಷಿ ಆಯಿತು, ಆದರೂ ಮೈಸೂರಿನಲ್ಲಿದ್ದ ನಾನೂ ಓಡೋಡಿ ಬಂದೆ, ಅದ್ಯಾವುದೋ ವಿಜಯನಗರದ ಸ್ಕೂಲ್ ಅಂತೆ ಅದರ ಹತ್ತಿರ ಬಂದು ಫೋನ್ ಮಾಡಿ ಸಿಗುವೆ ಅಂದರು. ನಾನೂ ಬಸ್ ಹತ್ತಿಕೊಂಡು ವಿಜಯನಗರ ಕಡೆ ಹೊರಟೆ, ದೀಪಕ್ ಅಣ್ಣಾ.. ನಾ ಕ್ಯಾಮ್ ಬ್ರಿಡ್ಜ್ ಹೈ ಸ್ಕೂಲ್ ಹತ್ತಿರ ಇರುವೆ ಬನ್ನಿ ಎಂದಾಗ. ಅವರು ಪಕ್ಕದವರಲ್ಲಿ ಹೆಲ್ಲೊ ಎಕ್ಸ್ ಕ್ಯೂಸ್ ಮೀ.. ವೇರ್ ಇಸ್ ಕ್ಯಾಮ್ ಬ್ರಿಡ್ಜ್ ಹೈ ಸ್ಕೂಲ್ ಹಿಯರ್ ಅಂದ್ರು. ಯಾಕ್ರೀ ದೀಪಕಣ್ಣ ಬೆಂಗ್ಳೂರ್ ನಲ್ಲೂ ಇಂಗ್ಲೀಷ್ ನಲ್ಲಿ ಮಾತಾಡ್ತಾ ಇದ್ದೀರಿ ಅಂದಾಗ ಅವರು.. ಮಕ್ಳು ಎಲ್ರೂ ಇಲ್ಲಿ ಇಂಗ್ಲಿಷ್ ನಲ್ಲೇ ಮಾತಾಡ್ತಾ ಅವ್ರೆ, ನಾವೇನಾದ್ರೂ ತುಳು ಕನ್ನಡದಾಗ ಮಾತಾಡಿದ್ರೆ.. ಅಷ್ಟೇ.. ಅಂದ್ಬಿಟ್ರು... ಏನೋ ಸ್ಕೂಲ್ ಹತ್ರ ಸಿಕ್ಕಿದ್ರು, ನಗುಮೊಗದ ಇಬ್ಬರು ಹಾಸ್ಯ ಕಲಾವಿದರ ಚಂದ ನೋಟದ ಆ ಹಾಸ್ಯ ಚಹರೆ ನಿರೆಲ್ ಸಿನೆಮಾದ್ದೇ ಅಂತನ್ನಿಸ್ತು.. ಅಪ್ಪಿಕೊಳ್ಳುತ್ತಾ..ಲೋಕು ನಾವು ಇಲ್ಲೇ ಸ್ವಲ್ಪ ತಿರ್ಗಾಡೋಣ, ಹಾಗೇ ಕಾಫಿ ಕುಡಿಯೋಣ ಅಂದ್ರು, ಹಾಗೇ ಕಾಫಿ ಶಾಪ್ ಹುಡುಕ್ತಾ ಹೊರಟ್ವಿ.. ದೀಪಕ್ ಬೇಕ್ರಿಗಳಲ್ಲೂ.. ಅಣ್ಣಾ.. ಇಲ್ಲಿ ಕೂತು ಕುಡಿವಂತಾ ಒಳ್ಳೆ ಕಾಫಿ ಶಾಫ್ ಎಲ್ಲಿದೆ ಅಂದಾಗ ಪಾಪ ಅವ್ನೂ ಕಾಫಿ ಮಾರೋನು ಇಲ್ಲೆಲ್ಲ್ಲೂ ಇಲ್ಲ ತುಂಬಾ ದೂರ ಹೋಗ್ಬೇಕು ಅಂದಾಗ... ಒಂದು ಒಳ್ಳೆ ಕಾಫಿ ಶಾಪ್ ಗೆ ಕರ್ಕೊಂಡು ಹೋಗಿ ಅಂತ ಆಟೋ ಹತ್ತಿ ಕೂತ್ವಿ, ದೀಪಕ್.. ಅಯ್ಯೋ ಇವ್ನೆಲ್ಲಿ ನಮ್ಮ ಮಂಗ್ಳೂರ್ ಗೇ ಕರ್ಕೊಂಡ್ ಹೋಗ್ತಾವ್ನಾ ಅಂತಿದ್ರು, ಎಲ್ಲೋ ಏನೋ ಕಾಫಿ ಶಾಪ್ ಸಿಕ್ತು.. ಮೇಲೆ ಹತ್ತೋವಾಗ.. ಸರ್ ಸಾರಿ ಟೈಮ್ ಆಯ್ತು.. ಕೆಳಗೇ ಕೂತ್ಕೊಳ್ಳಿ ಅಂದ್ರು.. ಅಣ್ಣ ಐದು ನಿಮಿಷ ಅಷ್ಟೆ ಸುಮ್ನೆ ಕಾಫಿ ಕುಡಿಯೋಣ ಅಂತ ಬಂದ್ವಿ.. ಅಂತ ದೀಪಕ್ ಅವ್ರ ಹತ್ರ ಪ್ರೀತಿಯಿಂದ ಅವಕಾಶ ಗಿಟ್ಟಿಸ್ಕೊಂಡ್ರು.. ಮೂರೂ ಜನ ಕಾಫಿ ಸವಿಯುವ ಸಿಹಿ ಸಂಭಾಷಣೆಯ ಸಂಧರ್ಬ ಕಾಫಿ ಕೊಟ್ಟವನ ಕೈಗೆ ಕ್ಯಾಮರಾ ಕೊಟ್ಟು ಒಂದು ಫೋಟೋ ತೆಗಿಸ್ಕೊಂಡ್ರು .. ಮತ್ತೆ ನಾನೂ ದೀಪಕ್ ಸುಭಾಶ್ ಅವರನ್ನು ಬೀಳ್ಕೊಟ್ಟಾಗಲೇ ಶುರುವಾಗಿದ್ದು ಮಜಾ... ವಿಜಯನಗರಕ್ಕೆ ಮತ್ತೆ ನಡೆದುಕೊಂಡೇ ಹೋದ ನಾವು.. ಆಟೋ ಹತ್ತಿದೆವು..ದೀಪಕ್....... ಅಣ್ಣಾ.. ಯಶವಂತಪುರಕ್ಕೆ ಬರ್ತೀರ ಅಂತ ಕೇಳಿದಾಗ. ಒನ್ ಆಂಡ್ ಆಫ್ ಆಗತ್ತೆ ಅಂದ ಆಟೋದವ್ನೊ... ದೀಪಕ್ ಕೇಳಿದ್ರು ಹಂಗಂದ್ರೆ..????? ಅಯ್ಯೋ ಸ್ವಾಮೀ ನಾನು ಕರ್ಕೊಂಡು ಹೋಗ್ತೀನಿ ಆದ್ರೆ ಮೀಟರ್ ಚಾರ್ಜ್ ನಲ್ಲಿ ಅರ್ದ ಎಕ್ಸ್ಟಾ ಕೊಡ್ಬೇಕು ಅಂದ.. ಅಷ್ಟ್ರಲ್ಲೇ ದೀಪಕ್ ಅವ್ರ ಫ್ರೆಂಡ್ ಗೆ ಕಾಲ್ ಮಾಡಿ..... ಸಂಗ್ ಸಂಗ್ ಸಂಗ್ ಕತ್ಲೆರೆ ಕುತ್ಲೆರೇ ಅಂತ ಕೊಂಕಣಿಯಲ್ಲಿ ಮಾತಾಡಿದ್ರು... ಅವ್ನು ಜಾಲಹಳ್ಳಿ ದೇವಸ್ಥಾನದ ಹತ್ರ ಬಾ ಅಂದ ಅಷ್ಟಕ್ಕೆ ಆಟೋದವ್ನು ..ಆಗ ಯಶವಂತಪುರ ಅಂದ್ರಿ ಈಗ ಜಾಲಹಳ್ಳಿ ಅಂತಿರಾ... ಆದ್ರೂ.. ನೀವು ಮೀಟರ್ ಚಾರ್ಜ್ ಒನ್ ಟು ಡಬಲ್ ಕೊಡ್ಬೇಕು ಅಂದಾಗ ದೀಪಕ್ ಮತ್ತೆ ಫ್ರೆಂಡ್ ಗೆ ಕಾಲ್ ಮಾಡಿ.... ನೋಡಿ ಅಷ್ಟು ಕೊಡುದಿಲ್ಲ.. ನೀವು ಬರ್ತೀರ ಇಲ್ವಾ..?? (ಲೋಕು ಯಾನ್ ದುಬೈರ್ದ್ ಬೆಂಗ್ಳೂರುಗು ಬೈದೆ ಇಂಬೆ ಎನಡ ಡಬಲ್ ರೇಟ್ ಕೇನುವೆ) ಎಂತ ಮಾರಾಯ್ರೆ ನಿಮ್ಮದು... ! ನೀವು ನಮ್ಮ ಮಂಗಳೂರಿಗೆ ಬನ್ನಿ.. ನಿಮ್ಮನ್ನು ನಾನು ಕಂಪ್ಲೀಟ್ ಮಂಗಳೂರು ತಿರುಗಿಸುತ್ತೇನೆ.. ನೀವು ಹತ್ತು ಪೈಸ ಕೊಡುವುದು ಬೇಡ ಬೇಕಾದ್ರೆ ನನ್ನ ನಂಬರನ್ನು ಈಗಲೇ ತೊಗೊಳ್ಳಿ ಅಂತ ನಮ್ಮ ದೀಪಕಣ್ಣ ಆಟೋದವನ ಹತ್ತಿರ.. ಎರ್ರಾ ಬಿರ್ರಿ ಹಿತ ಮಿತ ಸಹಿತ ಮಾತಾಡೋಕೆ ಶುರು ಹಚ್ಚಿದ್ರು.. ಇವರ ಮಾತುಗಳಲ್ಲಿ ಹಾಸ್ಯ ಲೇಪನಕ್ಕೆ ಸ್ನೇಹ ಮೂಡಿ ಆಟೋದವನು ಎಲ್ಲೂ ಅಡ್ಡಾಡಿಸದೇ ನೇರವಾಗಿ ಕ್ಷೇಮವಾಗಿ ತಲುಪಿಸಿದ.. ನಮ್ಮ ಬೆಂಗಳೂರಿನ ಆಟೋ ಚಾಲಕನ ಮನಸ್ಸಲ್ಲೂ ಹಾಸ್ಯ ತುಂಬಿಸಿ ಸ್ನೇಹ ಗಿಟ್ಟಿಸಿಕೊಂಡ ಕಲಾವಿದ ದೀಪಕ್ ಪಾಲಡ್ಕ.. ಬನ್ನಿ ಮತ್ತೆ ನೋಡೋಣ ಅವರನ್ನು ನಿರೆಲ್ ತುಳು ಚಿತ್ರದಲ್ಲಿ ಹಾಸ್ಯ ಕಲಾವಿದನಾಗಿ...

No comments:

Post a Comment