Thursday, June 2, 2011

ಹಿಜಡಾ ಎಂಬ ದುಗುಡ..


ಒಂದು ನೆನಪಿನ ಜೊತೆಗೆ ನೂರು ಕಂಬನಿಯ ಬಿಂದು,
ಇದು ಅವನು ಅವಳಾದ ಬದುಕು ಬಾಲ್ಯ ಹೀಗಿತ್ತು,
ಅವನ ಬಾಲ್ಯದಲ್ಲೊ ಕನಸುಗಳ ಸೌಂದರ್ಯದ ಸ್ವಾದ.

ಬದುಕೊಂದು ಪುಟ್ಟ ಸಾಲು, ಪುಟ್ಟ ಪುಟ್ಟ ಆಸೆಗಳ ಮೆಟ್ಟಿಲೇರಿ ಆಗಸವನ್ನೇ ಗಿಟ್ಟಿಸುವ ಬಯಕೆ, ಅವನೂ ಒಬ್ಬ ಪುಟ್ಟ ಕಂದಮ್ಮ ಎಲ್ಲರಂತೆಯೇ ಅವನಮ್ಮನೂ ಅಕ್ಕರೆಯಿಂದ ಓಲೈಸುತ್ತಿದ್ದಳಂತೆ, ಆಕೆಯ ಎದೆಹಾಲನ್ನು ಅವನೂ ಚುಂಬಿಸಿದ ಮಮತೆ, ಅವನಿಗೂ ಅವನಮ್ಮ ಗಲ್ಲದ ಮೇಲೆ ಕಾಡಿಗೆಯ ಬೊಟ್ಟು ಉಂಗುರಬೆರಳಿಂದ ಹಚ್ಚುತ್ತಿದ್ದ ನೆನಪು, ಎತ್ತಿ ಮುದ್ದಾಡಿದ್ದಳು, ನೆರೆಮನೆಯ ಪುಟಾಣಿಗಳೊಡನೆ ಚೆಂಡಾಟ ಆಡುತ್ತಿದ್ದ, ಹಠವಿತ್ತು ಅಳುತ್ತಿದ್ದ, ಅಮ್ಮ ಬುತ್ತಿ ಕಟ್ಟಿದ್ದಳು, ಅಪ್ಪ ಬೆನ್ನಿಗೆ ಬ್ಯಾಗ್ ಹಾಕಿ ಎತ್ತಿಕೊಂಡು ಸ್ಕೂಟರ್ ನಲ್ಲಿ ಕುಳ್ಳಿರಿಸಿ ಸೈಲೆಂಸರ್ ನ ಕಪ್ಪು ಹೊಗೆಯ ಜೊತೆಗೆ ಅವನ ಹಾಲು ಗಲ್ಲದ ತುಂಟಾಟ ಸಹಿಸಿಕೊಂಡು ಶಾಲೆಯ ಮುಂದಿನ ರಸ್ತೆಯಲ್ಲಿ ನಿಲ್ಲಿಸಿ ಟಾ ಟಾ ಮಾಡಿ ಹೋಗುತ್ತಿದ್ದರು, ಅವನಿಗೂ ಅಪ್ಪ ಅಮ್ಮ ಸಹೋದರ ಸಹೋದರಿ ಸ್ನೇಹಿತರು ಎಲ್ಲಾ ಇದ್ದರು.ಆದರೆ ಅವನ ಮನದಲ್ಲಿ ಇದೆಲ್ಲಾ ಮುಗಿದು ಹೋದ ಕಥೆಯಷ್ಟೆ.


ಹರೆಯ ಹಿರಿದಾಗುತ್ತಾ ಅವನಲ್ಲಿನ ಬದಲಾವನೆ ಕೊಂಚ ತಿಳಿದಿದ್ದರೊ ಏಳನೇ ತರಗತಿ ಮುಗಿದೊಡನೆ ಮನಸ್ಸು ಹಿಡಿತ ತಪ್ಪಿತ್ತು ಭಾವನೆಗಳಲ್ಲಿ ಏನೋ ವ್ಯತ್ಯಾಸ ಅವನೆಂಬ ಬದುಕು ಅವಳೆಂಬಂತೆ ಕಾಡುತ್ತಿತ್ತು, ಮನ ಒಂಟಿ ತನವನ್ನು ಬಯಸಿತ್ತು ಸತ್ಯವೇನೆಂಬುದು ಅದಾಗ ಆ ಮುಗ್ದ ಮನಸ್ಸಿಗೆ ಹೊಳೆಯಲೇ ಇಲ್ಲ, ತನ್ನ ತೊಳಳನ್ನು ಸ್ನೇಹಿತರೊಂದಿಗೆ ತೋಡಿಕೊಂಡ. ಈ ವರೆಗೂ ಆಟದ ಬಗ್ಗೆ ಆಡಿಕೊಂಡ ಸ್ನೇಹಿತರು ಇದೀಗ ಬದುಕಿನ ಬಗ್ಗೆಯೇ ಆಡಿಕೊಳ್ಳುವಂತಾಯಿತು, ಇದೇಕೆ ಬದುಕು ಹೀಗೆ? ನನಗೂ ಹೆಣ್ಣಾಗುವಾಸೆ, ಅವಳ ಜೊತೆ ಕೂರುವ ಆಸೆ,ಮುಡಿಗೆ ಮಲ್ಲಿಗೆ ಮುಡಿಯುವಾಸೆ,ಸೊಂಟ ಬಳುಕಿಸಿ ನಡೆದಾಡುವಾಸೆ ಆದರೆ ನಾಲ್ವರು ಹುಡುಗರೊಡನೆ ಕೊರುವಾಗ ಮನದಲ್ಲೊಂದು ತುಮುಲ ಎಲ್ಲದರ ಜೊತೆಗೆ ಬದುಕೇ ಗೊಂದಲದ ಅಲೆಯ ಜೊತೆ ಅಪ್ಪಳಿಸುತ್ತಿದೆ.

ಎಲ್ಲವನ್ನೊ ತಿಳಿದುಕೊಂಡು ಗಂಡಾಗಿ ಮುನ್ನಡೆಯುವ ಬಯಕೆ ದೂರಾಗಿ ಹೆಣ್ಣಾಗುವ ಬಯಕೆ ನೂರಾಯಿತು ಈ ನಿರ್ಧಾರದೊಡನೆ ಸಂಮ್ಮಂದಗಳೇ ದೂರಾಯಿತು. ಅಂದಿದ್ದ ಅಪ್ಪ ಅಮ್ಮನ ಪ್ರೀತಿ ಇಂದಿಲ್ಲ ಬೇನೆ ಹಂಚಿಕೊಳ್ಳಲು ಸೋದರಿ ಸೋದರರಿಲ್ಲ ಸ್ನೇಹಿತರಿಂದ ಕ್ಷಣ ಕ್ಷಣವೊ ಚುಚ್ಚು ಮಾತು, ಅವನು ಅವನಾಳವನ್ನು ಹಂಚಿಕೊಳ್ಳದಿದ್ದರೂ ವರ್ತನೆಯಿಂದಲೇ ಎಲ್ಲವೂ ಸ್ಪಷ್ಟವಾಗುತ್ತಿತ್ತು.

ಲಿಂಗ ಪರಿವರ್ತನೆಯಿಂದ ಹೆಣ್ಣಾಗಿ ಬದಲಾಗಲು ಆಪರೇಷನ್ ಮಾಡಿಸಿ ಕೊಳ್ಳುತ್ತಾರೆ ಆದರೆ ಚಿಕಿತ್ಸೆಯ ನಂತರ ಸ್ತನ ಮತ್ತು ಕೂದಲ ಬೆಳವಣಿಗೆಗಾಗಿ ವಿವಿದ ರೀತಿಯ ಹಾರ್ಮೋನುಗಳನ್ನು ದೀರ್ಘ ಕಾಲದವರೆಗೆ ತೆಗೆದುಕೊಳ್ಳಬೇಕಾಗಿರುವುದರಿಂದ ಅಂತಹ ಹಾರ್ಮೋನು ಚಿಕಿತ್ಸೆಯ ಸಂಧರ್ಬದಲ್ಲಿ ಮಾನಸಿಕ ಒತ್ತಡಗಳು ಸಹಜ ಅಲ್ಲಿ ಪರಿವರ್ತನೆಯಿಂದ ಬಯಕೆಗಳು ತೀರಿತಷ್ಟೆ ಬೇನೆ ಇನ್ನೂ ಹೆಚ್ಚಾಗಿತ್ತು. ಆತನೀಗೆ ಪ್ರಪಂಚದಲ್ಲಿ ನಾನೂಬ್ಬನೇ ಹೀಗೆ ನನಗೊಬ್ಬನೀಗೆ ಲಿಂಗ ಅಪವಾದ ಎಂಬ ತೊಳಲಿತ್ತು, ಅದೆಷ್ಟೋ ಬಾರಿ ಬದುಕೇ ಸಾಕು ಸತ್ತರೆ ಒಂದೇ ಬಾರಿ, ಬದುಕಿದ್ದರೆ ನೋವಿನೊಡನೆ ಚಿಂತೆಗಳ ಕಂತೆ ಅಷ್ಟೆ ಎಂದು ಸಾಯುವ ಸುಲಭ ದಾರಿಯನ್ನು ಹುಡುಕಲು ಹೋಗಿ ಎಡವಿದ್ದ ಮತ್ತೆ ಅಮ್ಮನ ಕೈ ತುತ್ತು ಸಿಗುವುದೋ ಎಂದು ಹೋದರೆ ಮನೆಯ ಬಾಗಿಲೇ ಮುಚ್ಚಿತ್ತು. ಆದರೆ ಅವರಲ್ಲೂ ಸಂಗವಿದೆ ಅವರಿಗೂ ಕನಸುಗಳನ್ನು ಕಟ್ಟುವ ದಾರಿಗಳಿವೆ ಎಂದು ಪ್ರತ್ಯಕ್ಷವಾಗಿ ತಿಳಿದಾಗ ಅವರ ಜೊತೆಗೇ ಸೇರಿಕೊಂಡ ಎಲ್ಲರಂತೇ ತಾನೂ ಕಣ್ಣಿಗೆ ಕಾಡಿಗೆ ತುಟಿಗೆ ಲಿಪ್ ಸ್ಟಿಕ್ ಕೆನ್ನೆಗಷ್ಟು ಪೌಡರ್ ಬಳಿದುಕೊಂಡು ಅಂಗಡಿ,ಸಿಗ್ನಲ್ ಗಳಲ್ಲಿ ಮತ್ತೊಬ್ಬರೆದುರು ಕೈ ಚಾಚುತ್ತಾ ಬದುಕಿನ ಚಕ್ರ ತಿರುಗುತ್ತಿತ್ತು ಆದರೆ ಒಂಟಿಯಾಗಿ ಕುಳಿತರೆ,ಕಣ್ಣು ಮುಚ್ಚಿದರೆ ಆ ಒಂದು ನೆನಪಿನ ಜೊತೆಗೆ ನೂರು ಕಂಬನಿಯ ಬಿಂದು ಕೆನ್ನೆಯ ಮೇಲೆ ಹರಿದಾಡುತ್ತಿತ್ತು.

ಯಾರದೋ ಮುಂದೆ ನಿಂತು ಹಣಕ್ಕೆ ಕೈ ಚಾಚಿದಾಗ ಅವರ ಕೈಯನ್ನೇ ಹಿಡಿದುಕೊಂಡು ತಮಾಶೆಯ ತಿಮಿರಿಗೆ ಕಾಮದ ಕಣ್ಣಿನಿಂದ ಅವರನ್ನು ಟೀಕಿಸುವುದುಂಟು, ಲಾಡ್ಜ್ ಗಳೀಗೆ ಕರೆತಂದು ಅವರಿಂದ ಎಣ್ಣೆ ಮಸಾಜು, ಸ್ವಲ್ಪ ಅಂದವಿದ್ದರೆ ಗೊಡ್ಡು ದೇಹದ ಸುಖವನ್ನು ಒತ್ತಾಯಪೂರ್ವಕವಾಗಿ ಅವರಿಂದಲೇ ತೀರಿಸಿಕೊಂಡು ರಾಜ ಗಾಂಭೀರ್ಯದಿಂದ ರೂಪಾಯಿಗಳನ್ನು ಮುಖಕ್ಕೆ ಚೆಲ್ಲುತ್ತಾರೆ ಎಂತಹಾ ಅಮಾನವೀಯ ಮನಸ್ಸು,
ಶೇಕಡಾ ೮೦ರಷ್ಟು ಮಂದಿ ನೊಂದುಕೊಂಡೇ ಬದುಕು ಸಾಕು ಅನ್ನೋದನ್ನ ನಿರ್ಧರಿಸುತ್ತಾರೆ, ಕೆಲವೊಬ್ಬರು ಮಂದಿ ಏನಂದರೂ ಪರವಾಗಿಲ್ಲ ಅವರ ಮಾತನ್ನು ಭೇದಿಸುತ್ತೇವೆ ಎಂಬ ದಿಟ್ಟ ನಿಲುವನ್ನು ಹೊಂದುತ್ತಾರೆ.

ಯಾಕೆ ಹಿಜಿಡಾ ಎಂದರೆ ಬದುಕಲು ಅನರ್ಹರೆನ್ನಬೇಕು ಅವರಲ್ಲೂ ಎಷ್ಟೋ ಮಂದಿ ದೇಶವನ್ನೇ ಹುರಿದುಂಬಿಸಿದ ಭರತನಾಟ್ಯ ಕಲಾವಿದರಿದ್ದಾರೆ, ಅವರಲ್ಲೂ ಕಲೆ ಇದೆ,ಅವರಿಗೂ ಸಂಸ್ಕ್ರುತಿ ಇದೆ, ಕಾನೂನು ಕಟ್ಟು ಕಟ್ಟಲೆಗಳಿವೆ ಜನಗಣತಿ ಜಾತಿಗಣತಿಗಳಲ್ಲಿ ಅವರಿಗೂ ಒಂದು ಸರಿಯಾದ ಸ್ಥಾನಮಾನ ನೀಡೋಣ,ಸರಕಾರೀ ನೌಕರಿಗಳನ್ನೂ ಹಂಚೋಣ ಅವರೂ ಕಾಮನ ಬಿಲ್ಲಿನ ಬಣ್ಣದ ಸೊಬಗನ್ನು ಸವಿಯುತ್ತಾರೆ, ಹೆಣ್ಣು ಗಂಡು ಎಂಬ ಮಾನವ ಜಾತಿಯಲ್ಲಿ ಅವರೂ ಒಬ್ಬರು, ಸುಂದರ ಬದುಕಿನಲ್ಲಿ ನೋವಿನ ಸುಳಿಯೊಳಗೆ ಅವರ ಕಣ್ಣೀರೇಕೆ ಕೆನ್ನೆಯಿಂದ ಹರಿದು ನೆಲವನ್ನು ಸೋಕುವುದು.......................?1 comment: