
ಎನ್ನವಳು ಹಣ್ಣು ಹಂಪಲಿಗಿಂತ ಮಿಗಿಲಾದವಳು
ದುಂಡು ಮೊಗದ ತುಂಡು ಬದನೇ ಕಾಯಿ
ಬಾಳೇ ಹಣ್ಣಿನಂತೆ ಮಿಳ ಮಿಳಗಿನ ಮಿಂಚುಳ್ಳಿ
ನೇರಳೆಗೂ ನೆಂಟ ಸೌತೇ ಕಾಯಿ ಸೊಂಟ
ಹೀರೇ ಬಣ್ಣದ ಸೀರೆಯುಟ್ಟರೆ
ಮಂಡಕ್ಕಿ ಪಾಯಸವೂ ಬಿಸಿ ಆರುವುದು
ಕಪ್ಪು ದ್ರಾಕ್ಷಿಯ ಕಣ್ಣವಳು
ಬೆಂಡೇ ಕಾಯಿ ಕಾಲವಳು
ಜಿಲೇಬಿ ಸಿಹಿಯಂತ ತುಟಿಯವಳು
ಅವಳೇ ಎನ್ನ ಕಂಗಳು ಬಾಳ ಬೆಳದಿಂಗಳು
ನವಿಲು ಕೋಸಿನಂತೆ ನಲ್ಮೆಯ ಗೆಳತಿ
ಕೊತ್ತಂಬರಿ ಸೊಪ್ಪಿನಂತೆ ಸ್ವಾದದ ಸುಂದರಿ
ತರ ತರದ ತರಕಾರಿ ಎನ್ನವಳ ಉಸಬಾರಿ
ಕರಿಬೇವಿನಂತೆ ರುಚಿಗೆ ರಂಬೆಯೊ ಸಾಟಿಯಿಲ್ಲ
ಬೆಳ್ಳುಳ್ಳಿಯಂತೆ ಬೆಳ್ಳಗಿನ ಮನಸವಳು
ಸಾಸಿವೆಯಂತೆ ಪಟ ಪಟನೆ ಪುಟಿಯುವಳು
ಸಕ್ಕರೆಯ ಸಿಹಿಯವಳು ಅಕ್ಕರೆಯ ಗೆಳತಿ,
ನಿನ್ನವಳೊಳಗೆ ಫುಲ್ ತರಕಾರಿ ಮಾರ್ಕೇಟೇ ಇದ್ಯಲ್ರೀ.....
ReplyDeletefull veg fruit ಅನ್ನಿ...
(ತಮಾಶೆಗಂದೆ...)
ಚನ್ನಾಗಿ ಬರೆದಿದ್ದೀರಾ.....
ಬೀಚಿ ಯವರೂ ಒಂದು ಕಡೆ ಇದೇ ರೀತಿ ಸಾಲುಗಳಲ್ಲಿ ಅವರವಳನ್ನು
ಹೊಗಳಿದ್ದಾರೆ.....
supper....
ಖುಷಿಯಾಯ್ತು..
ಲೋಕು ದಾನೇ ಮಾರಾಯ್ರೆ ? ಈರ್ನ ಡಿಸ್ಕ್ರಿಪ್ಶನ್ ತೂತ್ ...ಈರ್ನೆ ಬುಡೆದಿ ಚಲ್ತಾ ಫಿರ್ತಾ ತರಕಾರಿ ಮಾರ್ಕೆಟ್ಟಾ ಅನ್ನಿಸ್ತು...ಹಹಹ ಬಹಳ ರಸವತ್ತಾಗಿ ಮಜವಾಗಿದೆ ವರ್ಣನೆ..
ReplyDeleteನಿಮ್ಮ ಕಲ್ಪನಾ ಲಹರಿಗೆ...ಹ್ಯಾಟ್ಸ್ ಆಫ್ಹ್... ಅಭಿನ೦ದನೆಗಳು
ReplyDeleteಅನ೦ತ್
ವ್ಹಾ ವ್ಹಾ ಒಳ್ಳೆ ಕಲ್ಪನೆ ....
ReplyDeleteಎಂಥಾ ಕಲ್ಪನೆ ಮಾರಾಯರೆ...!!
ReplyDeleteಜೈ ಜೈ ಜೈ ಹೋ.. !!
ಚೆನ್ನಾಗಿದೆ, ಆದರೆ ಬೆಂಡೆಕಾಯಿಯನ್ನು ಆಂಗ್ಲರು ಲೇಡೀಸ್ ಫಿಂಗರ್ ಎಂದೇ ಕರೆಯುತ್ತಾರಲ್ಲಾ ಹೀಗಾಗಿ ಬೆರಳಿಗೆ ಹೋಲಿಸಿದ್ದರೆ ಅನುಕೂಲವೇನೋ! ಶುಭಮಸ್ತು.
ReplyDeleteಧನ್ಯವಾದದೊಂದಿಗೆ ತೆರೆ ಹಾಕಲೇ
ReplyDeleteನಿಮ್ಮೆಲ್ಲರ ಪ್ರೀತಿಯ ನೈವೇದ್ಯಕ್ಕೆ...?
ಒಮ್ಮೆ ಮುಗುಳು ನಕ್ಕು ಮುಗಿಸಲೇ
ಈ ಒಂದು ಕ್ಷಣದ ಸೌಂದರ್ಯಕ್ಕೆ..!
ಒಮ್ಮೆ ಜಿಗಿದು ಗಗನವ ಮುತ್ತಿಕ್ಕಲೇ
ಮರೆಯಲಾಗದ ಸ್ನೇಹ ಪರ್ವಕ್ಕೆ
ನವಿಲಂತೆ ಕುಣಿದು ಸಂತಸದ ಗರಿ ಬಿಚ್ಚುವುದು ಹೇಗೆ..?
ಉಸಿರು ಬಿಗಿ ಹಿಡಿದು ಒಂದು ಥ್ಯಾಂಕ್ಸ್ ಹೇಳಿದರೆ ಸಾಕೆ...?
ಕೈ ಮುಗಿದು ತಲೆ ಬಾಗಿ ನಮಸ್ಕರಿಸಿದರೆ ಸಾಕೆ..?
ಹೇಗೆ...ಅದು ಹೇಗೆ... ನಿಮ್ಮೆಲ್ಲರಿಗೂ ಧನ್ಯವಾದ ತಿಳಿಸುವುದು ಹೇಗೆ..?
ಇಂದು ಮೊತ್ತ ಮೊದಲ ಬಾರಿಗೆ ಬ್ಲಾಗ್ ಲೋಕದ ದಿಗ್ಗಜರು ನನ್ನ ಮನೆಗೂ ಬಲಗಾಲಿಟ್ಟಂತೆ ಭಾಸವಗುತ್ತಿದ್ದೆ...
ವಿ ಆರ್ ಭಟ್ ಸರ್ ನಿಮ್ಮ ಅಭಿಪ್ರಾಯವೂ ನನಗೆ ಇಷ್ಟವಾಯಿತು. ಆಂಗ್ಲತನದಲ್ಲಿ ಬೆಂಡೇ ಕಾಯಿ ಲೇಡೀಸ್ ಫಿಂಗರ್ ಆದ್ದರಿಂದ....ಬೆರಳಿಗೆ ಹೋಲಿಸಬಹುದಾಗಿತ್ತು...
ಆದರೂ ನನ್ನವಳ ಬೆರಳು ಬೆಂಡೇಕಾಯಿಯಂತೆ ಎಂದು ನಾನು ಹೋಲಿಸಿದರೆ...ಹ ಹ ಹ ಹ..
ನಿಮ್ಮೆಲ್ಲರ ಪ್ರೀತಿಗೆ ಅಭಿವಂಧನೆಗಳು...
tumba chennagide....
ReplyDelete