Wednesday, June 20, 2012

ಇಹ-ಪರ-ಅಂತರ





ಯಾರ ಬೇಡಿದರೇನು
ಯಾರ ಕಾಡಿದರೇನು
ಆಯುಷ್ಯ ಅಂಕುಷಕೆ ಬಗ್ಗುವುದೇ,
ತುದಿಯು ಬುಡದೆಡೆ ಬಾಗುವವೇ?

ಮಣ್ಣ ತುಳಿದರೇನು
ಹೊನ್ನ ತೊಡಿದರೇನು
ಇಹದಿ ಪರಕೆ ಸುಖ ಸಾಗುವುದೇ,
ನಗದು ನಾಣ್ಯಕೆ ಪಾಪ ಕರಗುವದೇ?

ನೀರ ಎರೆದರೇನು
ಹಾಲು ಕುಡಿದರೇನು
ಅಂತರಂಗವು ಮಡಿ ಆಪುವುದೇ,
ಮಾಡಿದ ಪಾಪ ಬೆವರಲಿ ಜಾರುವದೇ?

ತಾಯಿ ತನ ತಿಳಿಯಾದರೇನು
ಸ್ತನ ಹಾಲು ಬಿಳಿಯಾದರೇನು
ಯೋನಿಲಿಳಿದ ಮಗು ಅಳದಿಹುದೇ,
ಬುದ್ದಿ ತಾಯ್ತನದಂತೆ ಬರೆದಿಹುದೇ.?

ದೈವ ಭಕ್ತನಾದರೇನು
ದೇಹದಿ ಶಕ್ತನಾದರೇನು
ಅಗ್ನಿ ಸೋಕಿದೊಡೆ ಸುಡದಿಹುದೇ,
ಕಪಟದ ಮಂತ್ರವು ಮುಕ್ತಿ ಈವುದೇ.?






No comments:

Post a Comment